ಕನ್ನಡ ಸುದ್ದಿ  /  Cricket  /  Ruturaj Gaikwad Scripts Multiple Records With 3rd T20i Century Vs Australia Ind Vs Aus Rohit Sharma Virat Kohli Jra

ಶತಕದೊಂದಿಗೆ ಹಲವು ದಾಖಲೆ ಬರೆದ ಗಾಯಕ್ವಾಡ್;‌ ಆಸೀಸ್‌ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ

Ruturaj Gaikwad Records: ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಹಲವು ದಾಖಲೆಗಳನ್ನು ಮುರಿದರು.

ಮೂರನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರುತುರಾಜ್ ಗಾಯಕ್ವಾಡ್
ಮೂರನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರುತುರಾಜ್ ಗಾಯಕ್ವಾಡ್ (ANI)

ಗುವಾಹಟಿಯಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 (India vs Australia) ಪಂದ್ಯದಲ್ಲಿ ಭಾರತವು ಬೃಹತ್‌ ಮೊತ್ತ ಪೇರಿಸಿದ ಹೊರತಾಗಿಯೂ ಸೋಲೊಪ್ಪಿಕೊಂಡಿತು. ಟೀಮ್‌ ಇಂಡಿಯಾ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಚೊಚ್ಚಲ ಟಿ20 ಶತತಕದ ಹೊರತಾಗಿಯೂ, ಭಾರತ ಸೋಲಿಗೆ ಶರಣಾಯ್ತು. ಕಳೆದ ಪಂದ್ಯದಲ್ಲಿ ಅಮೂಲ್ಯ ಅರ್ಧಶತಕ ಸಿಡಿಸಿದ್ದ ಗಾಯಕ್ವಾಡ್, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ಸ್ಫೋಟಕ ಶತಕದೊಂದಿಗೆ ಗಾಯಕ್ವಾಡ್ ಹಲವು ದಾಖಲೆಗಳನ್ನು ನಿರ್ಮಿಸಿದರು.

ಚೊಚ್ಚಲ ಟಿ20 ಶತಕ

ಮೂರನೇ ಟಿ20 ಪಂದ್ಯ ಗೆದ್ದಿದ್ದರೆ ಭಾರತವು ಸರಣಿ ಜಯ ಸಾಧಿಸುತ್ತಿತ್ತು. ಇದಕ್ಕೆ ಸರಿಯಾಗಿ ಭಾರತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಗಾಯಕ್ವಾಡ್ ಮತ್ತು ನಾಯಕ ಸೂರ್ಯಕುಮಾರ್ ಮೊದಲ 10 ಓವರ್‌ಗಳಲ್ಲಿ ತಂಡವನ್ನು 80 ರನ್‌ಗಳತ್ತ ಕೊಂಡೊಯ್ದರು. ಸೂರ್ಯಕುಮಾರ್ ನಿರ್ಗಮನದ ನಂತರ ಗಾಯಕ್ವಾಡ್ ಭಾರತದ ಮೊತ್ತವನ್ನು ಹಿಗ್ಗಿಸಿದರು. 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು, ಡೆತ್ ಓವರ್‌ಗಳಲ್ಲಿ ಮತ್ತಷ್ಟು ವೇಗವಾಗಿ ಬ್ಯಾಟ್‌ ಬೀಸಿದರು. ಮುಂದಿನ 20 ಎಸೆತಗಳಲ್ಲಿ ಶತಕ ಪೂರೈಸಿದರು. 26ರ ಹರೆಯದ ಅವರು 57 ಎಸೆತಗಳಲ್ಲಿ 123 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ | ಸ್ಫೋಟಕ ಶತಕದೊಂದಿಗೆ ಭಾರತದ ಗೆಲುವು ಕಸಿದ ಮ್ಯಾಕ್ಸ್‌ವೆಲ್;‌ ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ

ವಿಶೇಷ ಪಟ್ಟಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಜೊತೆ ಸೇರಿದ ರುತು

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಗಾಯಕ್ವಾಡ್‌, 52 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಚುಟುಕು ಸ್ವರೂಪದಲ್ಲಿ ಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿರುವ ಭಾರತೀಯರ ವಿಶೇಷ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯಂಥ ಅನುಭವಿ ಆಟಗಾರರೊಂದಿಗೆ ಗಾಯಕ್ವಾಡ್‌ ಕೂಡಾ ಸೇರಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಒಂಬತ್ತನೇ ಬ್ಯಾಟರ್ ಎಂಬ ಹೆಗ್ಗಳಿಕೆ ಇವರದ್ದು.

ಇದನ್ನೂ ಓದಿ | ಟೀಮ್‌ ಇಂಡಿಯಾ ವೇಗಿಗೆ ಮದುವೆ, ಆಸೀಸ್‌ ಟಿ20 ಸರಣಿ ಮಧ್ಯದಲ್ಲೇ ತಂಡ ತೊರೆದ ಮುಕೇಶ್‌ ಕುಮಾರ್

ಟಿ20ಯಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್

  • ಶುಭ್ಮನ್ ಗಿಲ್ - 126*
  • ರುತುರಾಜ್ ಗಾಯಕ್ವಾಡ್ - 123*
  • ವಿರಾಟ್ ಕೊಹ್ಲಿ - 122*
  • ರೋಹಿತ್ ಶರ್ಮಾ -118
  • ಸೂರ್ಯಕುಮಾರ್ ಯಾದವ್ - 117

ಆಸ್ಟ್ರೇಲಿಯಾ ವಿರುದ್ಧ ಟಿ20 ಶತಕ ಸಿಡಿಸಿದ ಮೊದಲ ಭಾರತೀಯ

ಕಳೆದ 2 ವರ್ಷಗಳಲ್ಲಿ ಟಿ20ಯಲ್ಲಿ ಶತಕ ಸಿಡಿಸಿದ ಆರನೇ ಭಾರತೀಯ ಗಾಯಕ್ವಾಡ್. ಭಾರತೀಯ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಶುಭ್ಮನ್ ಗಿಲ್ ಅವರು ಈ ಹಿಂದೆ ಅಜೇಯ 126 ರನ್‌ ಗಳಿಸಿದ್ದರು. ವಿಶೇಷವೆಂದರೆ, ಆಸ್ಟ್ರೇಲಿಯಾ ವಿರುದ್ಧ ಚುಟುಕು ಮಾದರಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಶ್ರೇಯಸ್ಸಿಗೆ ಗಾಯಕ್ವಾಡ್ ಪಾತ್ರರಾಗಿದ್ದಾರೆ.