ಕನ್ನಡ ಸುದ್ದಿ  /  Cricket  /  Sachin Tendulkar Hits The Ball With Bats Grip While Playing Gully Cricket On Street In Kashmir Gulmarg Bat Factory Prs

ಕ್ರಿಕೆಟ್ ಮತ್ತು ಕಾಶ್ಮೀರ - ಸ್ವರ್ಗದಲ್ಲಿ ಒಂದು ಪಂದ್ಯ; ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್, ವಿಡಿಯೋ

Sachin Tendulkar : ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಇಲ್ಲಿನ ಗುಲ್ಮಾರ್ಗ್ ಪ್ರದೇಶದ​ ಹಳ್ಳಿಯೊಂದರ ರಸ್ತೆಯಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ

ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್, ವಿಡಿಯೋ
ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್, ವಿಡಿಯೋ

ನವದೆಹಲಿ: ಇತ್ತೀಚೆಗೆ ’ಭೂಮಿಯ ಮೇಲಿನ ಸ್ವರ್ಗ’ ಎಂದು ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರ (jammu and kashmir) ಪ್ರವಾಸವನ್ನು ಸಖತ್ ಎಂಜಾಯ್ ಮಾಡಿರುವ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಅಲ್ಲಿನ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಗಲ್ಲಿ ಕ್ರಿಕೆಟ್ ಆಡಿದ್ದಲ್ಲದೆ, ಸ್ವರ್ಗದಲ್ಲಿ ಒಂದು ಪಂದ್ಯ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಚುರ್ಸೂದ ಪಹಲ್ಗಾಮ್ ಮತ್ತು ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದ ಸಚಿನ್, ಇಲ್ಲಿನ ಗುಲ್ಮಾರ್ಗ್ ಪ್ರದೇಶದ​ ಹಳ್ಳಿಯೊಂದರ ರಸ್ತೆಯಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸಚಿನ್ ತೆಂಡೂಲ್ಕರ್ ತಮ್ಮ ಇನ್​ಸ್ಟಾಗ್ರಾಂ ಮತ್ತು ಎಕ್ಸ್ ಹ್ಯಾಂಡಲ್​​ಗಳಲ್ಲಿ ಅಪ್ಲೋಡ್ ಮಾಡಿದ ಇತ್ತೀಚಿನ ವಿಡಿಯೋದಲ್ಲಿ ತಮ್ಮ ಕಾರನ್ನು ರಸ್ತೆ ಬದಿ ನಿಲ್ಲಿಸಿ ಕ್ರಿಕೆಟ್ ಆಟದಲ್ಲಿ ತೊಡಗಿದ್ದ ಸ್ಥಳೀಯರನ್ನು ವಿನಂತಿಸಿದರು. ಹಮ್ ಖೇಲೀನ್?" (ನಾನು ಆಡಬಹುದೇ) ಎಂದು ಸಚಿನ್ ಮನವಿ ಮಾಡಿದರು. ಭಾರತದ ಐಕಾನ್​ನನ್ನು ನೋಡಿದ ಬೆನ್ನಲ್ಲೇ ಸಂತಸಗೊಂಡ ಸ್ಥಳೀಯರು ಸ್ಪಷ್ಟವಾಗಿ ಒಪ್ಪಿದರು.

ಬ್ಯಾಟ್​ ಹಿಡಿದು ಆಡಲಿಳಿದ ಟೆನ್ನಿಸ್ ಚೆಂಡನ್ನು ಎದುರಿಸಿದ ಮಾಸ್ಟರ್ ಬ್ಲಾಸ್ಟರ್ ತಮ್ಮ ಆರಂಭಿಕ ದಿನಗಳಿಗೆ ಮರಳಿದರು. ಕವರ್ ಡ್ರೈವ್​ ಸೇರಿದಂತೆ ಹಲವು ಶಾಟ್​ಗಳನ್ನು ಆಡಿದರು. ತಲೆಕೆಳಗಾಗಿ ಬ್ಯಾಟ್ ಹಿಡಿದು ಚೆಂಡನ್ನು ಹಿಟ್ ಮಾಡಿದರು. ಇದೇ ವೇಳೆ ಸಚಿನ್ ಕೊನೆಯ ಎಸೆತದಲ್ಲಿ ಸ್ಟ್ರೈಕ್ ಮಾಡಿದಾಗ ಬೌಲರ್​​​ಗೆ "ಔಟ್ ಕರ್ನಾ ಪಡೇಗಾ" (ನೀವು ನನ್ನನ್ನು ಔಟ್ ಮಾಡಬೇಕು) ಎಂದು ದಿಗ್ಗಜ ಹೇಳಿದರು.

ವಿಡಿಯೋ ನೋಡಿ:

ಆದಾಗ್ಯೂ, ತಮ್ಮ ವೃತ್ತಿಜೀವನದುದ್ದಕ್ಕೂ ಎದುರಿಸಿದ ಹಲವಾರು ದಂತಕಥೆ ಬೌಲರ್​​ಗಳನ್ನೇ ಸುಸ್ತುಗೊಳಿಸಿರುವ ಮಾಸ್ಟರ್ ಬ್ಲಾಸ್ಟರ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಸಚಿನ್ ತೆಂಡೂಲ್ಕರ್ ಅವರು ಬ್ಯಾಟ್ ಅನ್ನು ತಲೆಕೆಳಗಾಗಿ ಹಿಡಿದುಕೊಂಡು ಕವರ್ ಡ್ರೈವ್ ಮಾಡಿದರು. ಅಲ್ಲಿದ್ದ ಸ್ಥಳೀಯರು ಚಪ್ಪಾಳೆ ತಟ್ಟಿದರು. ಅಲ್ಲಿಂದ ಹೊರಡುವ ಮುನ್ನ ಸಚಿನ್​ಗೆ ಎಲ್ಲರಿಗೂ ಸೆಲ್ಫಿ ನೀಡಿದರು. ಫೋಟೋಗೆ ಫೋಸ್ ಕೊಟ್ಟರು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಚಿನ್, ‘ಕ್ರಿಕೆಟ್ & ಕಾಶ್ಮೀರ: ಸ್ವರ್ಗದಲ್ಲಿ ಒಂದು ಪಂದ್ಯ ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವರು ಇತ್ತೀಚೆಗೆ ಕ್ರಿಕೆಟ್ ಬ್ಯಾಟ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಕಾಶ್ಮೀರದ ವಿಲೋ ಬ್ಯಾಟ್‌ಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿವೆ. ಅವರ ಸಹೋದರಿ ಕಾಶ್ಮೀರದ ವಿಲೋ ಬ್ಯಾಟ್ ಉಡುಗೊರೆಯಾಗಿ ನೀಡಿದ್ದನ್ನು ಅವರು ಈ ಭೇಟಿಯ ಸಮಯದಲ್ಲಿ ನೆನಪಿಸಿಕೊಂಡರು.

ಭಾರತದ ದಿಗ್ಗಜ ಕ್ರಿಕೆಟಿಗ ಅವರು ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಭಾರತವನ್ನು ಪಾಕಿಸ್ತಾನಕ್ಕೆ ಸಂಪರ್ಕಿಸುವ ಸೇತುವೆಯಾದ ಕಾಮನ್ ಅಮನ್ ಸೇತುಗೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಮಾಸ್ಟರ್ ಬ್ಲಾಸ್ಟರ್ ಭಾರತದ ಸಶಸ್ತ್ರ ಪಡೆ ಸದಸ್ಯರೊಂದಿಗೆ ಸಂವಾದದಲ್ಲಿ ಸಮಯ ಕಳೆದರು. ಅಲ್ಲದೆ, ಅವರು ಓಡಾಡಿದ ಕಡೆಯೆಲ್ಲಾ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ತೆಂಡೂಲ್ಕರ್ ಅವರ ಕೊನೆಯ ಪಂದ್ಯ

ಸಚಿನ್ ತೆಂಡೂಲ್ಕರ್ 2013ರ ನವೆಂಬರ್​​ನಲ್ಲಿ ವೃತ್ತಿಪರ ಕ್ರಿಕೆಟ್​​ನಿಂದ ವೃತ್ತರಾದರು. ಆದರೆ ಆಗಾಗ್ಗೆ ಸಾಂದರ್ಭಿಕ ಪ್ರದರ್ಶನ ಪಂದ್ಯಗಳಿಗೆ ಹಾಜರಾಗುತ್ತಾರೆ. ಅವರು 2014 ರಲ್ಲಿ ಎಂಸಿಸಿ ವರ್ಸಸ್ ರೆಸ್ಟ್ ಆಫ್ ದಿ ವಿಶ್ವಕಪ್ ಮತ್ತು ಕ್ರಿಕೆಟ್ ಆಲ್ ಸ್ಟಾರ್ಸ್ ಸರಣಿಯಲ್ಲಿ ಆಡಿದ್ದರು. ಅಲ್ಲಿ ಅವರು ದಿವಂಗತ ಶ್ರೇಷ್ಠ ಶೇನ್ ವಾರ್ನ್ ಅವರ 'ವಾರ್ನ್ಸ್ ವಾರಿಯರ್ಸ್' ವಿರುದ್ಧ 'ಸಚಿನ್ಸ್ ಮಾಸ್ಟರ್ಸ್' ತಂಡವನ್ನು ಮುನ್ನಡೆಸಿದರು. ರಸ್ತೆ ಸುರಕ್ಷತಾ ವಿಶ್ವ ಸರಣಿಯಲ್ಲಿ ತೆಂಡೂಲ್ಕರ್ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬುಷ್ಫೈರ್ ಸಂತ್ರಸ್ತರಿಗೆ ಸಹಾಯ ಮಾಡಲು ಆಯೋಜಿಸಿದ್ದ ಚಾರಿಟಿ ಪಂದ್ಯದಲ್ಲಿ ಸಂಕ್ಷಿಪ್ತವಾಗಿ ಕಾಣಿಸಿಕೊಂಡರು.