ನಮಗೆ ಸಚಿನ್ ಅಂದರೆ ಆಟಗಾರನಲ್ಲ, ದೈವ ಸಮಾನ; ಹರ್ಷಾ ಭೋಗ್ಲೆ ಜೊತೆಗಿನ ಕುಟ್ಟಿ ಸ್ಟೋರಿಯಲ್ಲಿ ಅಶ್ವಿನ್ ಮನದ ಮಾತು
ಕನ್ನಡ ಸುದ್ದಿ  /  ಕ್ರಿಕೆಟ್  /  ನಮಗೆ ಸಚಿನ್ ಅಂದರೆ ಆಟಗಾರನಲ್ಲ, ದೈವ ಸಮಾನ; ಹರ್ಷಾ ಭೋಗ್ಲೆ ಜೊತೆಗಿನ ಕುಟ್ಟಿ ಸ್ಟೋರಿಯಲ್ಲಿ ಅಶ್ವಿನ್ ಮನದ ಮಾತು

ನಮಗೆ ಸಚಿನ್ ಅಂದರೆ ಆಟಗಾರನಲ್ಲ, ದೈವ ಸಮಾನ; ಹರ್ಷಾ ಭೋಗ್ಲೆ ಜೊತೆಗಿನ ಕುಟ್ಟಿ ಸ್ಟೋರಿಯಲ್ಲಿ ಅಶ್ವಿನ್ ಮನದ ಮಾತು

Ravichandran Ashwin-Sachin Tendulkar: ಸಚಿನ್ ಕೇವಲ ಪೋಸ್ಟರ್ ಬಾಯ್ ಆಗಿರಲಿಲ್ಲ. ಅವರು ಭರವಸೆಯಾಗಿರಲಿಲ್ಲ. ಸರ್ವಸ್ವವಾಗಿದ್ದರು. ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಜೀವನದಲ್ಲಿ ಮೇಲೇಳುತ್ತಿರುವ ಪ್ರತಿಯೊಬ್ಬ ಯುವ ಭಾರತೀಯನಿಗೂ ಅವರೇ ಸರ್ವಸ್ವ ಎಂದು ಆರ್​​ ಅಶ್ವಿನ್ ಹಾಡಿಹೊಗಳಿದ್ದಾರೆ.

ಹರ್ಷಾ ಭೋಗ್ಲೆ ಜೊತೆಗಿನ ಕುಟ್ಟಿ ಸ್ಟೋರಿಯಲ್ಲಿ ಸಚಿನ್ ಕುರಿತು ಅಶ್ವಿನ್ ಮನದ ಮಾತು.
ಹರ್ಷಾ ಭೋಗ್ಲೆ ಜೊತೆಗಿನ ಕುಟ್ಟಿ ಸ್ಟೋರಿಯಲ್ಲಿ ಸಚಿನ್ ಕುರಿತು ಅಶ್ವಿನ್ ಮನದ ಮಾತು.

90ರ ದಶಕದಲ್ಲಿ ಜನಿಸಿದವರಿಗೆ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಕೇಳಿದರೆ, ಅವರು ಹೇಳುವ ಉತ್ತರ ಸಚಿನ್ ತೆಂಡೂಲ್ಕರ್ (Sachin Tendulkar) ಒಂದೇ. ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ಅವರಿಗೆ ಕ್ರೇಜ್​ ಇದ್ದರೂ ಸಚಿನ್ ಮುಂದೆ ಅವರ ಕ್ರೇಜ್ ಜುಜುಬಿ ಎಂದರೆ ತಪ್ಪಾಗಲ್ಲ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಸೇರಿ ಹಲವು ಯುವಕರು ಸಚಿನ್​ರನ್ನು ನೋಡಿಯೇ ಬ್ಯಾಟ್ ಹಿಡಿದವರು.

ಏಕೆಂದರೆ ಸಚಿನ್ ಕ್ರಿಕೆಟ್ ಲೋಕದಲ್ಲಿ ಹೊಸ ಛಾಪು ಮೂಡಿಸಿದವರು. ಅಧಿಕ ರನ್​, ಅಧಿಕ ಶತಕ, ಅಧಿಕ ಅರ್ಧಶತಕ, ಫೋರ್​ಗಳು ಇಂತಹ ಹಲವು ವಿಶ್ವ ದಾಖಲೆಗಳು ಸಚಿನ್ ಹೆಸರಿನಲ್ಲಿವೆ ಎಂಬುದು ವಿಶೇಷ. ಅಸಾಧಾರಣ ಸಾಧನೆಗಳನ್ನೂ ನೀರು ಕುಡಿದಂತೆ ಸಾಧಿಸಿದರು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ವಿಶೇಷ ಅಧ್ಯಾಯಗಳನ್ನು ತೆರೆದಿರುವ ಮಹಾಶೂರ. ಒಂದೇ ಒಂದು ವಿವಾದವನ್ನೂ ಮೈಗಂಟಿಸಿಕೊಳ್ಳದೆ ಸರಳ ಜೀವಿ.

ಅಚ್ಚರಿ ಸಂಗತಿ ಬಹಿರಂಗಪಡಿಸಿದ ಅಶ್ವಿನ್

ವಿಶ್ವದಾದ್ಯಂತ ಅಸಂಖ್ಯಾತ ಕ್ರಿಕೆಟಿಗರಿಗೆ, ತೆಂಡೂಲ್ಕರ್ ಸ್ಫೂರ್ತಿಯ ದಾರಿದೀಪ. ಕ್ರಿಕೆಟ್‌ನ ಸಾರವನ್ನು ಸಾಕಾರಗೊಳಿಸಿದ ಸಾಕಾರಮೂರ್ತಿ ಎಂದು ಕುಟ್ಟಿ ಸ್ಟೋರೀಸ್ ಸರಣಿಯ ಇತ್ತೀಚಿನ ಸಂಚಿಕೆಯಲ್ಲಿ ರವಿಚಂದ್ರನ್ ಅಶ್ವಿನ್ (Ravichanndran Ashwin), ತೆಂಡೂಲ್ಕರ್​​ರನ್ನು ಕೊಂಡಾಡಿದ್ದಾರೆ. ಪ್ರತಿದಿನ ಬೆಳಿಗ್ಗೆ ಸಚಿನ್​ ಅವರ ಫೋಟೋ ನೋಡಿಯೇ ಮುಂದಿನ ಕೆಲಸಕ್ಕೆ ಹಾಜರಿ ಹಾಕುತ್ತಿದ್ದೆ ಎಂದು ಅಶ್ವಿನ್, ಅಚ್ಚರಿಯ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ದೈವ ಸಮಾನ ಎಂದ ಆಫ್ ಸ್ಪಿನ್ನರ್

ಕುಟ್ಟಿ ಸ್ಟೋರೀಸ್‌ ವಿತ್‌ ಆ್ಯಶ್​ನ ಮೂರನೇ ಸಂಚಿಕೆಯಲ್ಲಿ ಕ್ರೀಡಾ ವಿಶ್ಲೇಷಕ ಹರ್ಷಾ ಭೋಗ್ಲೆ (Harsha Bhogle) ಅವರೊಂದಿಗೆ ಮಾತನಾಡುತ್ತಾ, 90 ದಶಕದಲ್ಲಿ ಹುಟ್ಟಿದ ಎಲ್ಲರಿಗೂ ಸಚಿನ್ ತೆಂಡೂಲ್ಕರ್​ ಕೇವಲ ಆಟಗಾರನಲ್ಲ. ಅವರು ಒಂದು ಎಮೋಷನ್ (ಭಾವನೆ). ನಮಗೆಲ್ಲಾ ದೈವ ಸಮಾನ ಎಂದು ಬಣ್ಣಿಸಿದರು. ಇದೇ ವೇಳೆ ಅಶ್ವಿನ್ ಭಾರತೀಯ ಕ್ರಿಕೆಟ್​ನ ಪೋಸ್ಟರ್​​ ಎಂದು ಹರ್ಷಾ ಭೋಗ್ಲೆ ಎನ್ನುತ್ತಿದ್ದಂತೆ ಅಶ್ವಿನ್ ಹೌದು, ನಿಜ ಎಂದರು.

ಸಚಿನ್ ಔಟಾದರೆ ಹೊಟ್ಟೆ ಚುರುಕು ಎನ್ನುತ್ತಿತ್ತು!

ನನಗೆ ಸಚಿನ್ ತೆಂಡೂಲ್ಕರ್ ಅತ್ಯಂತ ನಂಬಿಕೆಯುಳ್ಳ ವ್ಯಕ್ತಿ. ಪ್ರತಿದಿನ ಬೆಳಿಗ್ಗೆ ನಾನು ಸಚಿನ್ ತೆಂಡೂಲ್ಕರ್ ಅವರನ್ನು ನೋಡಿ ಸಾಕಷ್ಟು ಸ್ಫೂರ್ತಿ ತೆಗೆದುಕೊಳ್ಳುತ್ತಿದ್ದೆ. ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದರೆ, ಟಿವಿಗೆ ಅಂಟಿಕೊಳ್ಳುತ್ತಿದ್ದೆವು. ಅವರ ಬ್ಯಾಟಿಂಗ್ ನೋಡುತ್ತಿದ್ದರೆ, ಹಸಿವೇ ಆಗುತ್ತಿರಲಿಲ್ಲ. ಬಾಯಾರಿಕೆಯೂ ಆಗುತ್ತಿರಲಿಲ್ಲ. ಒಂದು ವೇಳೆ ಅವರು ಔಟಾದರೆ ಹೊಟ್ಟೆ ಚುರುಕು ಎನ್ನುತ್ತಿತ್ತು ಎಂದರು ಅಶ್ವಿನ್.

ಪ್ರತಿಯೊಬ್ಬರಿಗೂ ಅವರೇ ಸರ್ವಸ್ವ

ಏಕೆಂದರೆ ಸಚಿನ್​ ಕ್ರೀಸ್​ನಲ್ಲಿ ಇರುವವರೆಗೂ ಭಾರತ ಗೆಲ್ಲುತ್ತದೆ ಎಂಬ ವಿಶ್ವಾಸ ಹಾಗೂ ಭರವಸೆ ಇತ್ತು. ಸಚಿನ್ ಔಟಾದರೆ, ತಂಡವನ್ನು ಮುನ್ನಡೆಸುವ ತಾಕತ್ತು ಹೊಂದಿರುವ ಆಟಗಾರನೇ ಇರಲಿಲ್ಲ. ಸಚಿನ್ ಕೇವಲ ಪೋಸ್ಟರ್ ಬಾಯ್ ಆಗಿರಲಿಲ್ಲ. ಅವರು ಭರವಸೆಯಾಗಿರಲಿಲ್ಲ. ಅವರು ಸರ್ವಸ್ವವಾಗಿದ್ದರು. ಕ್ರಿಕೆಟ್‌ನಲ್ಲಿ ಮಾತ್ರವಲ್ಲ. ಜೀವನದಲ್ಲಿ ಮೇಲಕ್ಕೆ ಬರುತ್ತಿರುವ ಪ್ರತಿಯೊಬ್ಬ ಯುವ ಭಾರತೀಯನಿಗೂ ಅವರೇ ಸರ್ವಸ್ವ ಎಂದು ಹಾಡಿಹೊಗಳಿದ್ದಾರೆ.

ಸಚಿನ್ ಕುರಿತು ಮಾತನಾಡುತ್ತಿದ್ದರೆ, ಮೈ ಕೂದಲು ರೋಮಾಂಚನ ಆಗುತ್ತದೆ. ಕ್ರಿಕೆಟ್ ದೇವರು ಎಂಬ ಮಾತು ಅವರಿಗೇ ಹೊರತುಪಡಿಸಿ ಬೇರೆ ಯಾರಿಗೂ ಸೂಕ್ತವಲ್ಲ ಎಂದು ಅಶ್ವಿನ್​ ಪ್ರತಿಕ್ರಿಯಿಸಿದ್ದಾರೆ. ಸದ್ಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಭಾಗವಾಗಿರುವ ರವಿಚಂದ್ರನ್ ಅಶ್ವಿನ್, 2015ರ ಏಕದಿನ ವಿಶ್ವಕಪ್ ಬಳಿಕ ಮತ್ತೊಮ್ಮೆ ವಿಶ್ವಕಪ್​ ಆಡುತ್ತಿದ್ದಾರೆ. ಅಶ್ವಿನ್​​ಗೂ ಮೊದಲು ಅಕ್ಷರ್​ ಪಟೇಲ್ ಆಯ್ಕೆ ಆಗಿದ್ದರು. ಆದರೆ ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ಅಶ್ವಿನ್​ಗೆ ಮಣೆ ಹಾಕಲಾಯಿತು.

Whats_app_banner