ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್​; ತಮಾಷೆಯ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್​; ತಮಾಷೆಯ ವಿಡಿಯೋ ವೈರಲ್

ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್​; ತಮಾಷೆಯ ವಿಡಿಯೋ ವೈರಲ್

ಸಚಿನ್ ತೆಂಡೂಲ್ಕರ್ ಮತ್ತು ಅವರ ತಂಡದ ಸದಸ್ಯರು ಶುಕ್ರವಾರ ರಾಯ್ಪುರದ ತಂಡದ ಹೋಟೆಲ್ನಲ್ಲಿ ಹೋಳಿ ಆಚರಿಸಿದರು. ಈ ವೇಳೆ ಸಚಿನ್ ಯುವರಾಜ್ ಸಿಂಗ್ ಜೊತೆ ತಮಾಷೆ ಮಾಡಿ ರೂಮ್ ಪ್ರವೇಶಿಸಿ ಬಣ್ಣ ಹಚ್ಚಿದ್ದಾರೆ.

ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್​; ತಮಾಷೆಯ ವಿಡಿಯೋ ವೈರಲ್
ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್​; ತಮಾಷೆಯ ವಿಡಿಯೋ ವೈರಲ್

ಪ್ರಸ್ತುತ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗರು ಹೋಳಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಶುಕ್ರವಾರ ತಮ್ಮ ತಂಡದ ಸಹ ಆಟಗಾರರೊಂದಿಗೆ ಹೋಳಿ ಆಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಯುವರಾಜ್ ಸಿಂಗ್ ಅವರೊಂದಿಗೆ ತಮಾಷೆ ಮಾಡುತ್ತಿರುವುದನ್ನು ಕಾಣಬಹುದು.

ಭಾರತದ ಮಾಜಿ ಕ್ರಿಕೆಟಿಗರು ಪ್ರಸ್ತುತ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದಾರೆ. ಇಂಡಿಯಾ ಮಾಸ್ಟರ್ಸ್​ ತಂಡವು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್​ಗೇರಿದೆ. ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ನಾಯಕತ್ವ ವಹಿಸಿದ್ದಾರೆ. ಫೈನಲ್ ಪ್ರವೇಶಿಸಿದ ಖುಷಿಯಲ್ಲಿರುವ ಸಚಿನ್​ ಹೋಳಿ ದಿನದಂದು ವಿಶ್ರಾಂತಿ ಪಡೆಯುತ್ತಿದ್ದ ಯುವರಾಜ್​ಗೆ ಹೋಳಿ ಸುರಿದಿದ್ದಾರೆ.

ಮಲಗಿದ್ದ ಯುವಿಯನ್ನು ಎಬ್ಬಿಸಿ ಹೋಳಿ ಸಂಭ್ರಮ

ಅಂಬಟಿ ರಾಯುಡು, ಯೂಸುಫ್ ಫಠಾಣ್‌, ಸಚಿನ್ ತೆಂಡೂಲ್ಕರ್ ಸೇರಿದಂತೆ ತಂಡದ ಆಟಗಾರರು ಒಟ್ಟಾಗಿ ಪರಸ್ಪರ ಬಣ್ಣ ಎರಚಿ ಹೋಳಿ ಆಚರಿಸಿದ್ದಾರೆ. ಆದರೆ ವಿಶ್ರಾಂತಿ ಪಡೆಯುತ್ತಿದ್ದ ಯುವರಾಜ್ ಕೊಠಡಿಗೆ ಸಚಿನ್ ಮತ್ತು ಸಹ ಆಟಗಾರರು ಹೋದರು. ಬಾಗಿಲು ಬಡಿದು ಮಲಗಿದ್ದ ಯುವರಾಜ್​ನನ್ನು ಎಬ್ಬಿಸಿದರು. ಯುವರಾಜ್ ಎದ್ದು ತಮ್ಮ ಕೋಣೆಯ ಬಾಗಿಲು ತೆರೆದಾಗ, ಎಲ್ಲರೂ ಅವರ ಮೇಲೆ ಬಿದ್ದು ಬಣ್ಣ ಹಚ್ಚಿದರು.

ತಾನು ಯುವರಾಜ್ ಸಿಂಗ್ ಅವರ ಕೋಣೆಗೆ ಹೋಗುತ್ತಿದ್ದೇನೆ. ಅವರೊಂದಿಗೆ ಆಡುತ್ತೇನೆ ಎಂದು ಸಚಿನ್ ವಿಡಿಯೋದ ಆರಂಭದಲ್ಲಿ ಹೇಳುತ್ತಾರೆ. ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್, 'ವಾಟರ್ ಗನ್ ಸಂಪೂರ್ಣವಾಗಿ ಲೋಡ್ ಆಗಿದೆ. ಯುವರಾಜ್ ಸಿಂಗ್ ಸಾಹೇಬ್ ಅವರ ಕೋಣೆಗೆ ಹೋಗುತ್ತೇನೆ. ಕಳೆದ ರಾತ್ರಿ ಸಾಕಷ್ಟು ಸಿಕ್ಸರ್ ಹೊಡೆದರು. ಈಗ ನಾವು ಸಿಕ್ಸರ್​ ಬಾರಿಸಲಿದ್ದೇವೆ ಎಂದಿದ್ದಾರೆ. ಮತ್ತೊಂದೆಡೆ ಐಪಿಎಲ್ 2025 ಗಾಗಿ ತಯಾರಿ ನಡೆಸುತ್ತಿರುವ ಭಾರತೀಯ ಕ್ರಿಕೆಟಿಗರು ಹೋಳಿ ಆಚರಿಸಿದ್ದಾರೆ.

ಫೈನಲ್​ಗೆ ಇಂಡಿಯಾ ಮಾಸ್ಟರ್ಸ್​

ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಮಾಸ್ಟರ್ಸ್​ ಸೆಮಿಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 220 ರನ್ ಪೇರಿಸಿತು. ಸಚಿನ್ ತೆಂಡೂಲ್ಕರ್ 42 ರನ್, ಯುವರಾಜ್ ಸಿಂಗ್ 59 ರನ್, ಸ್ಟುವರ್ಟ್ ಬಿನ್ನಿ 36, ಯೂಸಫ್ ಪಠಾಣ್ 23 ರನ್ ಸಿಡಿಸಿ ಮಿಂಚಿದರು.

ಈ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 18.1 ಓವರ್​​ಗಳಲ್ಲಿ 126 ರನ್​ಗೆ ಆಲೌಟ್ ಆಯಿತು. ಭಾರತದ ಬೌಲರ್​​ಗಳ ದಾಳಿಗೆ ತತ್ತರಿಸಿತು. ಶಹಬಾಜ್ ನದೀಮ್ 4 ವಿಕೆಟ್ ಕಿತ್ತು ಮಿಂಚಿದರೆ, ಇರ್ಫಾನ್ ಪಠಾಣ್, ವಿನಯ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ಆಸೀಸ್ ಬೆನ್ ಕಟಿಂಗ್ 39 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. 94 ರನ್​ಗಳಿಂದ ಮಣಿಸಿದ ಭಾರತ ಫೈನಲ್​ಗೆ ಅರ್ಹತೆ ಪಡೆಯಿತು.

ಯುವರಾಜ್ ಸಿಂಗ್ ಬೆಂಕಿ ಬ್ಯಾಟಿಂಗ್

2007ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲೂ ಸೋಲಿಸಿ ಆಸ್ಟ್ರೇಲಿಯಾ ತಂಡವನ್ನು ಹೊರದಬ್ಬಿದ್ದ ಯುವಿ, ಈಗ ಐಎಂಎಲ್​ನಲ್ಲೂ ಅದೇ ತಂಡವನ್ನು ಟೂರ್ನಿಯಿಂದ ಹೊರಹಾಕಿದ್ದಾರೆ. ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸೆಮೀಸ್​ನಲ್ಲಿ ಇಂಡಿಯಾ 6.3 ಓವರ್​ಗಳಲ್ಲಿ 64 ರನ್​ಗೆ 2 ವಿಕೆಟ್ ಕಳೆದುಕೊಂಡ ಅವಧಿಯಲ್ಲಿ ಕಣಕ್ಕಿಳಿದ ಯುವರಾಜ್, 30 ಎಸೆತಗಳಲ್ಲಿ 7 ಸಿಕ್ಸರ್​, 1 ಬೌಂಡರಿ ಸಹಿತ 59 ರನ್ ಗಳಿಸಿದರು. ಅದರಲ್ಲೂ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್​ ಮೆಕ್​ಗೈನ್ ಅವರ ಒಂದೇ ಓವರ್​ನಲ್ಲಿ ಭರ್ಜರಿ 3 ಸಿಕ್ಸರ್​ ಚಚ್ಚಿದ್ದು ಅವರ ಹಳೆಯ ಬ್ಯಾಟಿಂಗ್ ಖದರ್ ಮರುಕಳಿಸಿತು.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.