ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ಗೆ 52; ಹುಟ್ಟುಹಬ್ಬದ ಶುಭಾಶಯ ಕೋರಿದ ಯುವರಾಜ್‌, ರೈನಾ ಸೇರಿ ಗಣ್ಯಾತಿಗಣ್ಯರು
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ಗೆ 52; ಹುಟ್ಟುಹಬ್ಬದ ಶುಭಾಶಯ ಕೋರಿದ ಯುವರಾಜ್‌, ರೈನಾ ಸೇರಿ ಗಣ್ಯಾತಿಗಣ್ಯರು

ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ಗೆ 52; ಹುಟ್ಟುಹಬ್ಬದ ಶುಭಾಶಯ ಕೋರಿದ ಯುವರಾಜ್‌, ರೈನಾ ಸೇರಿ ಗಣ್ಯಾತಿಗಣ್ಯರು

ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬ: ಕ್ರಿಕೆಟ್ ದೇವರು ಎಂದೇ ಕ್ರಿಕೆಟ್ ಪ್ರೇಮಿಗಳ ನಡುವೆ ಗುರುತಿಸಿಕೊಂಡಿರುವ ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಇಂದು (ಏಪ್ರಿಲ್ 24) 52ನೇ ಹುಟ್ಟುಹಬ್ಬದ ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯಗಳ ಪ್ರವಾಹವೇ ಹರಿದಿದೆ.

ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬ:  ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಇಂದು (ಏಪ್ರಿಲ್ 24) 52ನೇ ಹುಟ್ಟುಹಬ್ಬದ ಸಂಭ್ರಮ. (ಕಡತ ಚಿತ್ರ)
ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬ: ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಇಂದು (ಏಪ್ರಿಲ್ 24) 52ನೇ ಹುಟ್ಟುಹಬ್ಬದ ಸಂಭ್ರಮ. (ಕಡತ ಚಿತ್ರ) (Sachin Tendulkar)

ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬ: ಭಾರತದ ಕ್ರಿಕಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು 52ನೇ ಹುಟ್ಟುಹಬ್ಬದ ಸಂಭ್ರಮ. ಟೀಂ ಇಂಡಿಯಾದ ಮಾಜಿ ಆಲ್‌ ರೌಂಡ್‌ ಆಟಗಾರ ಯುವರಾಜ್ ಸಿಂಗ್‌, ಕ್ರಿಕೆಟಿಗ ಸುರೇಶ್ ರೈನಾ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್‌ ಸೇರಿ ಗಣ್ಯಾತಿಗಣ್ಯರೆಲ್ಲ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಕೂಡ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಸ್ಮರಿಸಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಸಚಿನ್ ತೆಂಡೂಲ್ಕರ್‌ಗೆ 52ರ ಸಂಭ್ರಮ

ಭಾರತೀಯ ಕ್ರಿಕೆಟ್‌ನ ದಂತಕಥೆ, ಕ್ರಿಕೆಟ್ ದೇವರು ಎಂದೇ ಗುರುತಿಸಲ್ಪಟ್ಟ ಸಚಿನ್ ತೆಂಡೂಲ್ಕರ್‌ ಇಂದು 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಈ ಸಂದರ್ಭದಲ್ಲಿ ಶುಭಕೋರಿದ್ದು ಸಚಿನ್ ಸಾಧನೆಯನ್ನು ನೆನಪಿಸಿಕೊಂಡಿದೆ. 664 ಅಂತಾರಾಷ್ಟ್ರೀಯ ಪಂದ್ಯಗಳು, 34,357 ಅಂತಾರಾಷ್ಟ್ರೀಯ ರನ್‌ಗಳು, 201 ಅಂತಾರಾಷ್ಟ್ರೀಯ ವಿಕೆಟ್‌, 2011ರ ವಿಶ್ವಕಪ್ ವಿಜೇತ, ಕರ್ನಲ್ ಸಿಕೆ ನಾಯ್ದು ಜೀವಮಾನದ ಸಾಧನೆ ಪ್ರಶಸ್ತಿ ವಿಜೇತ, 100 ಅಂತಾರಾಷ್ಟ್ರೀಯ ಶತಕ ಭಾರಿಸಿದ ಏಕೈಕ ಕ್ರಿಕೆಟಿಗ, ಸಾರ್ವಕಾಲಿಕ ಪ್ರೇರಣಾದಾಯಿ ವ್ಯಕ್ತಿತ್ವದ ಸಚಿನ್ ತೆಂಡೂಲ್ಕರ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಶುಭಕೋರಿದೆ.

ಯುವರಾಜ್ ಸಿಂಗ್ ಶುಭಕೋರಿದ್ದು ಹೀಗೆ

ನನ್ನ ಹೆಸರು ಅವರಿಗೆ ತಿಳಿಯುವ ಮೊದಲೇ ಅವರು ನನಗೆ ಬಾಲ್ಯದ ಹೀರೋ. ಒಂದು ದಿನ ಡ್ರೆಸ್ಸಿಂಗ್‌ ರೂಮ್‌ಗೆ ಹೋಗಿ ಅವರನ್ನು ನೋಡಿದೆ. ಅವರಿಗೆ ಅವರೇ ಮಾಸ್ಟರ್‌. ನನ್ನ ಮನಸ್ಸಿನಲ್ಲಿ ಉಳಿದಿರುವುದು ಅವರ ಅನುಗ್ರಹ. ಎಲ್ಲ ಶತಕಗಳಿಗೆ ಅವರ ಶತಕೋಟಿ ಭರವಸೆಯೇ ಬುನಾದಿ. ಎಲ್ಲವನ್ನೂ ಸೌಮ್ಯವಾಗಿ ನಮ್ರತೆಯೊಂದಿಗೆ ಮುನ್ನಡೆಸಿದರು. ನೀವು ಆಟವನ್ನಷ್ಟೇ ಆಡಲಿಲ್ಲ. ಆಡುವುದನ್ನು ಕಲಿಸಿದಿರಿ. ನಿಮ್ಮ ಪ್ರೀತಿಗೆ ಆಭಾರಿ. ನಿಮಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಶುಭಹಾರೈಸಿದ್ದಾರೆ.

ಕ್ರಿಕೆಟಿಗರಷ್ಟೇ ಅಲ್ಲ, ಮಾನವೀಯತೆ ಕಣ್ಮಣಿಯೂ ಹೌದು: ಹರ್ಭಜನ್ ಸಿಂಗ್‌ ಶುಭಕೋರಿದ್ದು ಹೀಗೆ

ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಚಿನ್ ಪಾಜಿ ನೀವು ಕ್ರಿಕೆಟಿನ ಐಕಾನ್ ಅಷ್ಟೇ ಅಲ್ಲ, ಮಾನವೀಯತೆ, ಬದ್ಧತೆ ಮತ್ತು ಉತ್ಕೃಷ್ಟತೆಯ ಸಂಕೇತ. ನಿಮ್ಮ ಕ್ರಿಕೆಟ್ ಮಾತ್ರವೇ ಅಲ್ಲ ಬದುಕಿನ ಹಾದಿ ಕೂಡ ತಲೆಮಾರುಗಳವರೆಗೆ ಒಂದು ಪ್ರೇರಣೆಯೇ ಸರಿ ಎಂದು ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಶುಭಕೋರಿದ್ದಾರೆ.

ಮಾಸ್ಟರ್ ಬ್ಲಾಸ್ಟರ್‌ಗೆ ಹ್ಯಾಪಿ ಬರ್ತ್‌ಡೇ- ರೈನಾ ಶುಭ ಕೋರಿದ್ದು ಹೀಗೆ

ಕ್ರಿಕೆಟಿಗ ಸುರೇಶ್ ರೈನಾ ಅವರು ಸಚಿನ್ ತೆಂಡೂಲ್ಕರ್ ಅವರಿಗೆ ಶುಭ ಕೋರಿದ್ದು ಹೀಗೆ- ಹ್ಯಾಪಿ ಬರ್ತ್‌ಡೇ ಮಾಸ್ಟರ್ ಬ್ಲಾಸ್ಟರ್‌, ಕ್ರಿಕೆಟ್ ದಂತಕಥೆಯಾಗಿರುವ ನೀವು ಕೋಟ್ಯಂತರ ಜನರಿಗೆ ಪ್ರೇರಣೆ. ಕ್ರೀಡಾ ಜಗತ್ತಿನ ನೈಜ ಕಣ್ಮಣಿ. ನಿಮಗೆ ಶುಭವಾಗಲಿ.

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಬದುಕಿನ ಕಿರು ಪರಿಚಯ

ಸಚಿನ್ ತೆಂಡೂಲ್ಕರ್ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. 100 ಅಂತಾರಾಷ್ಟ್ರೀಯ ಶತಕದ ದಾಖಲೆಯೂ ಅವರ ಹೆಸರಿನಲ್ಲಿದೆ. 1983 ರಿಂದ 2013ರ ತನಕ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್‌ಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟಿಗ. 200 ಟೆಸ್ಟ್ ಪಂದ್ಯಗಳನ್ನು ಆಡಿದ ಕೀರ್ತಿಯೂ ಅವರದ್ದು.

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅವರು 44.83 ಸರಾಸರಿ ರನ್‌ ಲೆಕ್ಕದಲ್ಲಿ 18,426 ರನ್ ಕಲೆಹಾಕಿದ್ದರು. ಇದರಲ್ಲಿ 49 ಶತಕ, 96 ಅರ್ಧಶತಕಗಳು. ಇನ್ನು ಟೆಸ್ಟ್ ಪಂದ್ಯಗಳಲ್ಲಿ 53.78 ರನ್ ಸರಾಸರಿಯಲ್ಲಿ 15,921 ರನ್ ಕಲೆ ಹಾಕಿದ್ದರು. ಇದರಲ್ಲಿ 51 ಶತಕ, 68 ಅರ್ಧಶತಕಗಳಿವೆ. 1992ರಲ್ಲಿ ಮೊದಲ ವಿಶ್ವಕಪ್ ಆಡಿದ ಅವರು 2011ರ ವಿಶ್ವಕಪ್‌ ಆಡುವಾಗಲೂ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು. 2013ರಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ ಕಿರೀಟ ಮುಡಿಗೇರಿಸಿದಾಗ ಸಚಿನ್ ತೆಂಡೂಲ್ಕರ್ ತಂಡದ ಭಾಗವಾಗಿದ್ದರು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.