ಗಣರಾಜ್ಯೋತ್ಸವದಂದು ಅಭಿಮಾನಿಗಳಿಗೆ ಧೋನಿ ದರ್ಶನ; ತ್ರಿವರ್ಣಧ್ವಜ ನೋಡುತ್ತಿರುವ ಸಣ್ಣ ದೃಶ್ಯ ಕಂಡು ಫ್ಯಾನ್ಸ್ ಪುಳಕ
MS Dhoni: ಗಣರಾಜ್ಯೋತ್ಸವ ದಿನದಂದು ಎಂಎಸ್ ಧೋನಿ ಭಾರತದ ತ್ರಿವರ್ಣ ಧ್ವಜವನ್ನು ನೋಡುತ್ತಿರುವ ದೃಶ್ಯವನ್ನು ಸಾಕ್ಷಿ ಸಿಂಗ್ ಹಂಚಿಕೊಂಡಿದ್ದಾರೆ. ಈ ವೀಡಿಯೊಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni), ಭಿನ್ನ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದಾರೆ. ದಿಗ್ಗಜ ಕ್ರಿಕೆಟಿಗನ ಗಣರಾಜ್ಯ ಸಂಭ್ರಮದ ದೃಶ್ಯಗಳನ್ನು ಅವರ ಪತ್ನಿ ಸಾಕ್ಷಿ ಸಿಂಗ್ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಕ್ಷಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
2024ರ ಗಣರಾಜ್ಯೋತ್ಸ ದಿನದಂದು ಮಾಹಿ ಭಾರತದ ಧ್ವಜವನ್ನು ನೋಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಯಾವುದೇ ಶೀರ್ಷಿಕೆಗಳನು ಹಾಕದೆ ಸಾಕ್ಷಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಸುಂದರವಾದ ಗುಲಾಬಿ ಹೂವುಗಳಿಂದ ಆವೃತವಾದ ಪ್ರದೇಶದಲ್ಲಿ ಎಂಎಸ್ ಧೋನಿ ನಿಂತಿರುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳ ಸಣ್ಣ ಕ್ಲಿಪ್ ನೋಡಿದ ಮಾಹಿ ಅಭಿಮಾನಿಗಳು, ತಮ್ಮ ಆರಾಧ್ಯ ಕ್ರಿಕೆಟಿಗನನ್ನು ಕಂಡು ಪುಳಕಿರಾಗಿದ್ದಾರೆ. ವಿಡಿಯೋಗೆ ದೇಶಭಕ್ತಿ ಸಾರುವ ಸಾರೆ ಜಹಾನ್ ಸೆ ಅಚ್ಚಾ ಟೋನ್ ಹಾಕಲಾಗಿದೆ.
ವಿಡಿಯೋವನ್ನು ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ನೆಟ್ಟಿಗರು ವಿಡಿಯೋ ಲೈಕ್ ಮಾಡಿದ್ದಾರೆ. ಹಲವರು ಭಿನ್ನ ವಿಭಿನ್ನ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಸಕ್ರಿಯರಾಗಿದ್ದಾರೆ. ಪ್ರೀತಿಯಿಂದ ಮಾಹಿ ಮತ್ತು ತಲಾ ಎಂಬ ಹೆಸರಿನಿಂದಲೇ ಅಭಿಮಾನಿಗಳಿಗೆ ಹತ್ತಿರವಾಗಿರುವ ಧೋನಿ ನಾಯಕತ್ವದಲ್ಲಿ ಭಾರತವು 28 ವರ್ಷಗಳ ನಂತರ 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ತಮ್ಮ ನಾಯಕತ್ವದಲ್ಲಿ ಅನೇಕ ಮೈಲಿಗಲ್ಲ ತಲುಪಿದ ಖ್ಯಾತಿ ಮಾಹಿಯದ್ದು.
ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ಹೆಚ್ಚು ಸಕ್ರಿಯರಾಗಿಲ್ಲ. ಅವರ ಫೋಟೋ ಹಾಗೂ ದೃಶಯಗಳು ಕಾಣಸಿಗುವುದು ತೀರಾ ಅಪರೂಪ. ಹೀಗಾಗಿ ಅಪರೂಪಕ್ಕೊಮ್ಮೆ ಧೋನಿಯ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ | ಗಣರಾಜ್ಯೋತ್ಸವಕ್ಕೆ ದೆಹಲಿ ಕರ್ತವ್ಯಪಥದಲ್ಲಿ ಭಾರತದರ್ಶನ; ಫ್ರೆಂಚ್ ಅಧ್ಯಕ್ಷರಿಗೆ ಗೌರವ
ಭಾರತದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಗಣರಾಜೋತ್ಸವ ಪಥಸಂಚಲನ ನಡೆಯಿತು. ಈ ಬಾರಿ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಮುಖ್ಯ ಅತಿಥಿಯಾಗಿ ಭಾಗವಹಹಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮ್ಯಾಕ್ರಾನ್ ಅವರನ್ನು ವಿಶೇಷ ಸಾರೋಟಿನಲ್ಲಿ ಕರೆ ತಂದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಡಿಕೊಂಡರು.
ದೇಶದ ಹದಿನಾರು ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸ್ಥಬ್ದಚಿತ್ರಗಳು ಪಥಸಂಚಲನದಲ್ಲಿ ಭಾಗಿಯಾಗವು. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸಹಿತ ಹಲವು ರಾಜ್ಯಗಳು ಭಾಗಿಯಾದವು. ಈ ಬಾರಿ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ. ಬಾಲ ರಾಮನ ಮೂರ್ತಿ ಹೊತ್ತ ಉತ್ತರ ಪ್ರದೇಶದ ಸ್ಥಬ್ಧಚಿತ್ರವು ಗಮನ ಸೆಳೆಯಿತು.