ಮತ್ತೊಬ್ಬ ನಟಿ ಮೇಲೆ ಕಣ್ಣಾಕಿದ ಶೋಯೆಬ್ ಮಲಿಕ್; ಹೆಂಡ್ತಿನಾ ಬಟ್ಟೆ ಚೇಂಜ್ ಮಾಡ್ದಂಗೆ ಮಾಡ್ತೀಯಲ್ಲ ಗುರು ಎಂದ ನೆಟ್ಟಿಗರು
Shoaib Malik : ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾದ ಎರಡನೇ ತಿಂಗಳಲ್ಲಿ ಮತ್ತೊಬ್ಬ ನಟಿ ಮೇಲೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯೆಬ್ ಮಲಿಕ್ ಕಣ್ಣು ಹಾಕಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಇತ್ತೀಚೆಗೆ ಭಾರತದ ಸ್ಟಾರ್ ಟೆನಿಸ್ ಪಟು ಸಾನಿಯಾ ಮಿರ್ಜಾ (Sania Mirza) ಅವರಿಗೆ ವಿಚ್ಛೇದನ ನೀಡಿ ನಟಿ ಸನಾ ಜಾವೆದ್ (sana javed) ಅವರನ್ನು ಮೂರನೇ ಮದುವೆಯಾಗಿದ್ದರು. ಇದೇ ವರ್ಷ ಜನವರಿ 20ರಂದು ಮಲಿಕ್-ಸನಾ ಜೋಡಿ ಮದುವೆಯಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು. ಅದಾಗಿ ಎರಡು ತಿಂಗಳಲ್ಲಿ ಮತ್ತೊಬ್ಬ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪಕ್ಕೆ ಮಲಿಕ್ ಒಳಗಾಗಿದ್ದಾರೆ.
ಪಾಕಿಸ್ತಾನಿ ಸ್ಟಾರ್ ಕ್ರಿಕೆಟಿಗನೊಬ್ಬ ವಿರುದ್ಧ ಸ್ಟಾರ್ ನಟಿ ನವಾಲ್ ಸಯೀದ್ (Nawal Saeed) ಅವರು ಗಂಭೀರ ಆರೋಪ ಮಾಡಿದ್ದಾರೆ. ತನಗೆ ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾರೆ ಎಂದು ನಟಿ ಬಹಿರಂಗವಾಗಿಯೇ ಹೇಳಿದ್ದಾರೆ. ಈ ನಟಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದು ಸಾನಿಯಾ ಮಿರ್ಜಾ ಅವರ ವಿಚ್ಛೇದಿತ ಪತಿ ಶೋಯೆಬ್ ಮಲಿಕ್ ಎಂದು ಪಾಕಿಸ್ತಾನ ಮೀಡಿಯಾಗಳಲ್ಲಿ ವರದಿಯಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನಟಿ ಸವಾಲ್ ನಯೀದ್ ಹೇಳಿದ್ದೇನು?
'ಲೈಫ್ ಗ್ರೀನ್ ಹೈ' ಎಂಬ ಪಾಕಿಸ್ತಾನಿ ಚಾಟ್ ಶೋನಲ್ಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ನಟಿ ನವಾಲ್ ಸಯೀದ್ ಅವರು ಪಾಕಿಸ್ತಾನಿ ಕ್ರಿಕೆಟಿಗರ ಬಗ್ಗೆ ಆಘಾತಕಾರಿ ಬಹಿರಂಗಪಡಿಸಿದ್ದರು. ಅದು ಶೋಯೆಬ್ ಅವರೇ ಎಂದು ಊಹಾಪೋಹಗಳು ಎದ್ದಿವೆ. ಆತಿಥೇಯರಾದ ಐಜಾಜ್ ಅಸ್ಲಾಮ್ ಮತ್ತು ನಾಡಿಯಾ ಖಾನ್ ಅವರೊಂದಿಗಿನ ಸಂದರ್ಶನದಲ್ಲಿ ನವಾಲ್, ಹಲವಾರು ಕ್ರಿಕೆಟಿಗರು ಮೆಸೇಜ್ ಮಾಡುತ್ತಾರೆ ಎಂದಿದ್ದಾರೆ.
ಮದುವೆಯಾಗಿರುವವರು, ಈಗಾಗಲೇ ಪ್ರೀತಿಯಲ್ಲಿ ಬಿದ್ದ ಕ್ರಿಕೆಟರ್ಗಳು ಫ್ಲರ್ಟ್ ಮೆಸೇಜ್ಗಳು ನನಗೆ ಬರುತ್ತಿವೆ ಎಂದು ನವಾಲ್ ಹೇಳಿದ್ದರು. ಹೀಗೆ ಹೇಳಿದ ತಕ್ಷಣವೇ ಸಂದರ್ಶಕರು ಆ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ದಾರೆ. ಶೋಯಿಬ್ ಮಲಿಕ್ ಕೂಡ ಇದ್ದಾರೆಯೇ ಎಂದು ಮತ್ತೋರ್ವ ಸಂದರ್ಶಕಿ ಇದೇ ವೇಳೆ ಕೇಳಿದ್ದಾರೆ. ಈ ವೇಳೆ ನಟಿ ಜೋರಾಗಿ ನಕ್ಕಿದ್ದಾರೆ. ಸದ್ಯ ಆ ನಗುವನ್ನು ನೆಟ್ಟಿಗರು ಬೇರೆ ರೀತಿ ಕಲ್ಪಿಸಿದ್ದು, ಬಗೆಬಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೂ ಮೂರನೇ ವಿವಾಹವಾದರೂ ಪೋಲಿ ಬುದ್ದಿ ಬಿಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಸಂದರ್ಶಕರು ಮುಂದುವರೆದು ಮತ್ತೆ ಪ್ರಶ್ನೆ ಕೇಳಿದ್ದರು. ಆದರೆ ನವಾಲ್ ಅವರು ಇದನ್ನು ಮುಂದೆ ಚರ್ಚಿಸದಿರಲು ನಾನು ಬಯಸುತ್ತೇನೆ. ಈ ಪ್ರತಿಕ್ರಿಯೆಯು ಶೋಯೆಬ್ ನಿಜವಾಗಿಯೂ ಆಕೆಗೆ ಸಂದೇಶಗಳನ್ನು ಕಳುಹಿಸಿದ್ದಾರೆಯೇ ಎಂಬ ಬಗ್ಗೆ ಕೆಲವು ಆನ್‌ಲೈನ್ ಬಳಕೆದಾರರಲ್ಲಿ ಊಹಾಪೋಹ ಹುಟ್ಟುಹಾಕಿತು. ಇತ್ತೀಚೆಗೆ ಶೋಯೆಬ್ ಮಲಿಕ್ ಅವರು ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದರು. ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಿ ವಿವಾಹವಾಗಿದ್ದರು.
ಇತ್ತೀಚೆಗೆ ಬರ್ತ್ಡೇ ಸೆಲೆಬ್ರೇಷನ್
ಶೋಯೆಬ್ ತನ್ನ ಹೊಸ ಪತ್ನಿ ಸನಾ ಜಾವೇದ್ ಅವರ 31ನೇ ಹುಟ್ಟು ಹಬ್ಬವನ್ನು ಇತ್ತೀಚೆಗೆ ಆಚರಿಸಿದ್ದರು. ಅವರೊಂದಿಗಿನ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದು, ಸುಂದರ ಹುಟ್ಟು ಹಬ್ಬಕ್ಕಾಗಿ ಧನ್ಯವಾದಗಳು ಪತಿ (ಹೃದಯ ಎಮೋಜಿ) @realshoaibmalik ಎಂದು ಬರೆದಿದ್ದಾರೆ. ಆದಾಗ್ಯೂ, ಈ ಫೋಟೋಗಳು ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅವರು ಕಾಮೆಂಟ್ ವಿಭಾಗದಲ್ಲಿ ನಟಿಯನ್ನು ಟ್ರೋಲ್ ಮಾಡಿದ್ದಾರೆ. ಒಬ್ಬ ಅಭಿಮಾನಿಯಾಗಿ ನಾವು ನಿಮ್ಮನ್ನು ದ್ವೇಷಿಸುತ್ತೇವೆ ಎಂದು ಬರೆದಿದ್ದಾರೆ.
2010ರಲ್ಲಿ ಹೈದರಾಬಾದ್‌ನಲ್ಲಿ ಸಾನಿಯಾ ಅವರು ಶೋಯೆಬ್ ಅವರೊಂದಿಗೆ ಮದುವೆಯಾಗಿದ್ದರು. ಅವರ ವಲೀಮಾ ಸಮಾರಂಭವು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ನಡೆಯಿತು. ಈ ದಂಪತಿ 2018ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ.