ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ; ಎದ್ದು ನಿಂತು ಚಪ್ಪಾಳೆ ತಟ್ಟಿದ ಎಲ್‌ಎಸ್‌ಜಿ ಮಾಲೀಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ; ಎದ್ದು ನಿಂತು ಚಪ್ಪಾಳೆ ತಟ್ಟಿದ ಎಲ್‌ಎಸ್‌ಜಿ ಮಾಲೀಕ

ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ; ಎದ್ದು ನಿಂತು ಚಪ್ಪಾಳೆ ತಟ್ಟಿದ ಎಲ್‌ಎಸ್‌ಜಿ ಮಾಲೀಕ

ಎಲ್ಎಸ್‌ಜಿ ನಾಯಕ ಕೆಎಲ್ ರಾಹುಲ್ ಹಿಡಿದ ಅಮೋಘ ಕ್ಯಾಚ್‌ಗೆ ಮಾಲೀಕ ಸಂಜೀವ್ ಗೋಯೆಂಕಾ ಎದ್ದು ನಿಂತು ಶ್ಲಾಘಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಇಬ್ಬರ ನಡುವಿನ ಗಂಭೀರ ಮಾತಿನ ದೃಶ್ಯಗಳು ವೈರಲ್‌ ಆಗಿತ್ತು.

ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ
ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ (X Images)

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಆಡುತ್ತಿವೆ. ಪಂದ್ಯದಲ್ಲಿ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಅಮೋಘ ಕ್ಯಾಚ್‌ ಹಿಡಿದಿದ್ದಾರೆ. ಶಾಯ್ ಹೋಪ್ ಅವರು ಬಾರಿಸಿದ ಹೊಡೆತವನ್ನು ಕ್ಯಾಚ್ ಪಡೆದು ತಂಡಕ್ಕೆ ಪ್ರಮುಖ ವಿಕೆಟ್‌ ಬರುವಂತೆ ಮಾಡಿದ್ದಾರೆ. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸ್‌ ಮಾಲೀಕ ಸಂಜೀವ್‌ ಗೋಯೆಂಕಾ ಅವರು ರಾಹುಲ್‌ಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಚೇಸಿಂಗ್‌ ನಡೆಸಿದ ಲಕ್ನೋ, ಆತಿಥೇಯ ತಂಡವನ್ನು 208 ರನ್‌ಗಳಿಗೆ ಕಟ್ಟಿ ಹಾಕಿತು. ಮಹತ್ವದ ಪಂದ್ಯದಲ್ಲ ನಾಯಕ ಕೆಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ ಮಾಡಲಿಲ್ಲ. ಬದಲಿಗೆ ಕ್ವಿಂಟನ್ ಡಿ ಕಾಕ್‌ ಸ್ಟಂಪ್ಸ್‌ ಹಿಂದೆ ನಿಂತರು.

ಹೋಪ್ ಹೊಡೆದ ಚೆಂಡು ಗಾಳಿಯಲ್ಲಿ ಹಾರಿ ಬರುತ್ತಿದ್ದಂತೆ ಎಚ್ಚರಗೊಂಡ ರಾಹುಲ್, ಮೊದಲ ಪ್ರಯತ್ನದಲ್ಲಿ ಎಡವಿದರು. ಆದರೆ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಚೆಂಡನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ವಿಂಡೀಸ್ ಸ್ಫೋಟಕ ಬ್ಯಾಟರ್‌ ಪೆವಿಲಿಯನ್‌ ಸೇರಿಕೊಂಡರು.

ಎದ್ದು ನಿಂತು ಚಪ್ಪಾಳೆ ತಟ್ಟಿದ ಸಂಜೀವ್ ಗೋಯೆಂಕಾ

ತಂಡದ ನಾಯಕ ವಿಕೆಟ್ ಪಡೆಯುತ್ತಿದ್ದಂತೆಯೇ, ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಎದ್ದು ನಿಂತು ಚಪ್ಪಾಳೆ ತಟ್ಟಿದರು. ವಿಐಪಿ ಬಾಕ್ಸ್‌ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅವರು ಮೈದಾನದಲ್ಲಿ ನಾಯಕನ ಅಮೋಘ ಫೀಲ್ಡಿಂಗ್‌ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ದೃಶ್ಯ ಇಲ್ಲಿದೆ.

ಕೆಲವು ದಿನಗಳ ಹಿಂದಷ್ಟೇ ಎಸ್ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್‌ಜಿ 10 ವಿಕೆಟ್‌ಗಳಿಂದ ಸೋತಿತ್ತು. ಆ ಪಂದ್ಯದ ನಂತರ, ಹೈದರಾಬಾದ್‌ನಲ್ಲಿ ತಮ್ಮ ತಂಡ ಹೀನಾಯವಾಗಿ ಸೋಲು ಅನುಭವಿಸಿದ್ದಕ್ಕೆ ಗೋಯೆಂಕಾ ಅವರು ರಾಹುಲ್ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇವರಿಬ್ಬರು ಮೈದಾನದಲ್ಲಿ ಗಂಭೀರ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.‌ ಅದಾದ ಬಳಿಕ, ಔತಣ ಕೂಟಕ್ಕೆ ರಾಹುಲ್‌ ಅವರನ್ನು ಕರೆದಿದ್ದ ಗೋಯೆಂಕಾ ಅವರು ತಮ್ಮ ನಾಯಕನ್ನು ತಬ್ಬಿಕೊಂಡು ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ

ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್‌ ಕೀಪರ್), ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್ ಚರಕ್, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ

ಅಭಿಷೇಕ್ ಪೊರೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಗುಲ್ಬದಿನ್ ನೈಬ್, ರಾಸಿಖ್ ದಾರ್ ಸಲಾಂ, ಮುಖೇಶ್ ಕುಮಾರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್.

Whats_app_banner