ಕನ್ನಡ ಸುದ್ದಿ  /  Cricket  /  Sanju Samson Keeps Promise Plays Cricket With Specially Abled Kid On Return To Kerala Wicket Keeper Fulfil Fan Dream Prs

ವಿಶೇಷಚೇತನ ಅಭಿಮಾನಿಯ ಆಸೆ ಈಡೇರಿಸಿದ ಸಂಜು ಸ್ಯಾಮ್ಸನ್; ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ, ವಿಡಿಯೋ

Sanju Samson : ವಿಶೇಷಚೇತನ ಅಭಿಮಾನಿಯ ಆಸೆಯನ್ನು ಈಡೇರಿಸುವುದರ ಜೊತೆಗೆ ಕ್ರಿಕೆಟ್ ಆಡುವ ಮೂಲಕ ಸಂಜು ಸ್ಯಾಮ್ಸನ್​ ಆತನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷಚೇತನ ಅಭಿಮಾನಿಯ ಆಸೆ ಈಡೇರಿಸಿದ ಸಂಜು ಸ್ಯಾಮ್ಸನ್
ವಿಶೇಷಚೇತನ ಅಭಿಮಾನಿಯ ಆಸೆ ಈಡೇರಿಸಿದ ಸಂಜು ಸ್ಯಾಮ್ಸನ್

ಬ್ಯಾಟ್ ಹಿಡಿದು ಆಕ್ರಮಣಕಾರಿ ಆಟದ ಜೊತೆಗೆ ಮೃದು ಸ್ವಭಾವದ ಮೂಲಕ ಎಲ್ಲರ ಗಮನ ಸೆಳೆದಿರುವ ಭಾರತ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು, ತನ್ನ ವಿಶೇಷ ಚೇತನ ಪುಟ್ಟ ಅಭಿಮಾನಿ ಆಸೆಯನ್ನು ಈಡೇರಿಸಿದ್ದಾರೆ. ವಿಶೇಷ ಸಾಮರ್ಥ್ಯವುಳ್ಳ ಅಭಿಮಾನಿಯ ಕನಸು ಈಡೇರಿಸಿದ ಸ್ಯಾಮ್ಸನ್ ನಡೆ ಎಲ್ಲರ ಹೃದಯ ಗೆಲ್ಲುತ್ತಿದೆ. ವಿಕಲಚೇತನ ಅಭಿಮಾನಿಯ ಜೊತೆಗೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

ಮಗುವಿನ ಜೊತೆ ಕ್ರಿಕೆಟ್ ಆಡಿದ ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಅವರನ್ನು ಭೇಟಿಯಾಗಬೇಕು ಎನ್ನುವುದು ವಿಕಲ ಚೇತನ ಬಾಲಕನ ದೊಡ್ಡ ಕನಸ್ಸಾಗಿತ್ತು. ಈ ಬಗ್ಗೆ ತಿಳಿದ ಸಂಜು, ತಾನು ಕೇರಳಕ್ಕೆ ಬಂತ ನಂತರವೇ ಭೇಟಿಯಾಗುವುದಾಗಿ ಮಾತು ಕೊಟ್ಟಿದ್ದರು. ಇದೀಗ ಆ ಮಾತನ್ನು ಉಳಿಸಿಕೊಂಡಿದ್ದಾರೆ ಕ್ರಿಕೆಟಿಗ. ವಿಕಲಚೇತನ ಅಭಿಮಾನಿಯ ಭೇಟಿಯ ಜತೆಗೆ ಆತನೊಂದಿಗೆ ಕ್ರಿಕೆಟ್​ ಸಹ ಆಡಿದ್ದಾರೆ. ಬಾಲಕ ಬೌಲಿಂಗ್​ ಮಾಡಿದರೆ, ಸಂಜು ಬ್ಯಾಟಿಂಗ್ ನಡೆಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಂಜು ಸ್ಯಾಮ್ಸನ್ ದೇಶದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ, ಅವರಿಗೆ ಭಾರತ ತಂಡಕ್ಕಾಗಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ ಎಂಬ ಆರೋಪ ಈಗಲೂ ಇದೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಯಾಮ್ಸನ್ ಅವಕಾಶ ಪಡೆದಿದ್ದರು. 3ನೇ ಏಕದಿನದಲ್ಲಿ ಅದ್ಭುತ ಶತಕ ಸಿಡಿಸಿದ್ದರು. ಆ ಬಳಿಕ ಸ್ವದೇಶದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗೂ ಆಯ್ಕೆಯಾದರು.

ಏಕದಿನ ಕ್ರಿಕೆಟ್​​ನಲ್ಲಿ ಸಂಜು ಸ್ಯಾಮ್ಸನ್ ಅವರು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದರೂ ಅವರಿಗೆ 2023ರ ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಇದೇ ವರ್ಷ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲೂ ಅವರನ್ನು ಬಿಸಿಸಿಐ ಉಳಿಸಿಕೊಂಡಿದೆ. ಸಂಜು ಸಿ ಗ್ರೇಡ್​ನಲ್ಲಿ ಅವಕಾಶ ಪಡೆದಿದ್ದಾರೆ.

2023-2024ರ ವಾರ್ಷಿಕ ಒಪ್ಪಂದ

ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ: ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ: ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್.