ಸಂಜು ಸ್ಯಾಮ್ಸನ್ ಓಪನರ್, ಧ್ರುಲ್ ಜುರೆಲ್‌ಗೆ ಬಡ್ತಿ; SRH ವಿರುದ್ಧದ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಬಳಗ
ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಐಪಿಎಲ್ 2025ರ ಅಭಿಯಾನ ಪ್ರಾರಂಭಿಸಲಿದೆ. ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳನ್ನು ಒಳಗೊಂಡಂತೆ ಆರ್‌ಆರ್ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ.

ಐಪಿಎಲ್ ಗೆದ್ದ ಮೊದಲ ತಂಡ ರಾಜಸ್ಥಾನ್ ರಾಯಲ್ಸ್. ಆದರೆ ಅಂದಿನಿಂದ ಯಾವುದೇ ಗಮನಾರ್ಹ ಸಾಧನೆ ಮಾಡಿಲ್ಲ. 2022ರಲ್ಲಿ ಫೈನಲ್ ತಲುಪಿದ್ದೇ 2008ರ ನಂತರದ ದೊಡ್ಡ ಸಾಧನೆಯಾಗಿದೆ. ಅದು ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. 2023ರಲ್ಲಿ 5ನೇ ಮತ್ತು 2024 ರಲ್ಲಿ 3ನೇ ಸ್ಥಾನಕ್ಕೆ ತೃಪ್ತಿ ಪಡೆದ ಆರ್‌ಆರ್, ಪರಿಷ್ಕೃತ ತಂಡದೊಂದಿಗೆ 2ನೇ ಪ್ರಶಸ್ತಿ ಬೆನ್ನಟ್ಟಲು ಮತ್ತೊಂದು ಐಪಿಎಲ್ ಆವೃತ್ತಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಐಪಿಎಲ್ 2025 ಅಭಿಯಾನವನ್ನು ಪ್ರಾರಂಭಿಸಲಿದೆ.
ಉಳಿದ ತಂಡಗಳಿಂತ ಆರ್‌ಆರ್ ಹೊಂದಿರುವ ದೊಡ್ಡ ಪ್ರಯೋಜನ ಏನೆಂದರೆ ಅದು ಸ್ಥಿರ ನಾಯಕ. 2021ರ ಆವೃತ್ತಿಯಿಂದ ಇಲ್ಲಿಯ ತನಕ ಎಲ್ಲಾ ಐಪಿಎಲ್ ತಂಡಗಳ ನಾಯಕತ್ವ ಬದಲಾವಣೆಯಾಗಿದೆ. ಆದರೆ 2025ರಲ್ಲೂ ಅದೇ ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ಏಕೈಕ ನಾಯಕನಾಗಿದ್ದಾರೆ ಸಂಜು. 2024ರ ಐಪಿಎಲ್ ನಂತರ ಭಾರತದ ಟಿ20ಐ ಪ್ಲೇಯಿಂಗ್ XI ನಲ್ಲಿ ಆರಂಭಿಕ ಆಟಗಾರನಾಗಿ ತನ್ನ ಸ್ಥಾನ ಭದ್ರಪಡಿಸಿರುವ ಸಂಜು, ಆರ್‌ಆರ್ ಪರವೂ ಆರಂಭಿಕನಾಗಿ ಆಡುವ ಸಾಧ್ಯತೆ ಇದೆ.
ಹೆಟ್ಮೆಯರ್ ಮತ್ತು ದ್ರುವ್ ಪಾತ್ರವೇ ನಿರ್ಣಾಯಕ
ಹೀಗಾಗಿ, ಸ್ಯಾಮ್ಸನ್ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ಬ್ಯಾಟಿಂಗ್‌ಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ಉಳಿದಂತೆ 3ನೇ ಸ್ಥಾನಕ್ಕೆ ಅನುಭವಿ ನಿತೀಶ್ ರಾಣಾ ಅವರನ್ನು ಆಡಿಸಬಹುದು. ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ರಿಯಾನ್ ಪರಾಗ್ ಎಂದಿನಂತೆ ತಮ್ಮ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ ಇಲ್ಲಿ ಧ್ರುವ್ ಜುರೆಲ್ ಬಡ್ತಿ ಸಿಗಬಹುದು. ಜುರೆಲ್‌ಗೆ 5ನೇ ಸ್ಥಾನ ಫಿಕ್ಸ್ ಆಗಬಹುದು. ಅವರು ಫಿನಿಷಿಂಗ್ ಜವಾಬ್ದಾರಿಯನ್ನೂ ನಿಭಾಯಿಸಬೇಕು. ಈ ಹಿಂದೆ ಜುರೆಲ್‌ಗೆ ಇಂತಹದ್ದೇ ಸ್ಥಾನವೆಂದು ಖಚಿತವಾಗಿರಲಿಲ್ಲ.
ಕೊನೆಯಲ್ಲಿ ಇರುವ ದೊಡ್ಡ ಹೆಸರು ಅಂದರೆ ಅದು ಶಿಮ್ರಾನ್ ಹೆಟ್ಮೆಯರ್ ಮಾತ್ರ. ಜುರೆಲ್ ಮತ್ತು ಹೆಟ್ಮೆಯರ್ ಪಾತ್ರಗಳು ತಂಡದ ಗೆಲುವಿನಲ್ಲಿ ಪ್ರಮುಖ ನಿರ್ಣಾಯಕವಾಗಿರಲಿವೆ. ಕಳೆದ ಆವೃತ್ತಿಯಲ್ಲಿ ಬೌಲಿಂಗ್ ಅಸ್ತ್ರಗಳಾಗಿದ್ದ ಅಶ್ವಿನ್, ಟ್ರೆಂಟ್ ಬೋಲ್ಟ್, ಚಹಲ್ ಈ ಬಾರಿ ಇಲ್ಲ. ಅವರ ಕೊರತೆಯನ್ನು ಸರಿದೂಗಿಸಲು ಹೆಟ್ಮೆಯರ್ ಜೊತೆಗೆ ಮೂವರು ವಿದೇಶಿ ಬೌಲರ್‌ಗಳನ್ನು ಆಯ್ಕೆ ಮಾಡಬಹುದು. ವನಿಂದು ಹಸರಂಗ ಮತ್ತು ಜೋಫ್ರಾ ಆರ್ಚರ್ 2025 ರಲ್ಲಿ ರಾಜಸ್ಥಾನದ ಇಬ್ಬರು ಪ್ರಮುಖ ಆಟಗಾರರಾಗಲಿದ್ದಾರೆ.
ಪರಿಸ್ಥಿತಿಗಳಿಗೆ ಅನುಗುಣವಾಗಿ ನಾಲ್ಕನೇ ವಿದೇಶಿ ಆಟಗಾರ ಫಜಲ್ಹಕ್ ಫಾರೂಕಿ ಮತ್ತು ಮಹೇಶ್ ತೀಕ್ಷಣಾ (ಕ್ವೇನಾ ಮಾಫಕಾ ಅವರಿಗೆ ಅವಕಾಶ ಸಿಗದ ಹೊರತು) ಇರುತ್ತಾರೆ. ಇತರ ಎರಡು ಸ್ಥಾನಗಳು ಭಾರತೀಯ ಬೌಲರ್‌ಗಳಿಗೆ ಹೋಗಲಿದ್ದು, ಆಕಾಶ್ ಮಧ್ವಾಲ್ ಅಥವಾ ಶುಭಂ ದುಬೆ ಮತ್ತು ಸಂದೀಪ್ ಶರ್ಮಾ ಆಯ್ಕೆಯಾಗುವ ಸಾಧ್ಯತೆಯಿದೆ. ತಂಡವು ಮೊದಲು ಬ್ಯಾಟ್ ಮಾಡಿದರೆ, ಆರ್‌ಆರ್ ಹೆಚ್ಚುವರಿ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುತ್ತದೆ. ಆಗ ಸಂದೀಪ್ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರಬಹುದು. ಅದಕ್ಕಾಗಿ, 13 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಆಯ್ಕೆ ಮಾಡುತ್ತಾ ಎಂದು ಕಾದು ನೋಡಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ XI
ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ/ಆಕಾಶ್ ಮಧ್ವಲ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ಮಹೀಶ್ ತೀಕ್ಷಣ*/ಫಜಲ್ಹಕ್
ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳು (ಆದ್ಯತೆಯ ಕ್ರಮದಲ್ಲಿ): ವೈಭವ್ ಸೂರ್ಯವಂಶಿ, ಯುಧ್ವೀರ್ ಸಿಂಗ್ ಚರಕ್, ಕುಮಾರ್ ಕಾರ್ತಿಕೇಯ.
