ಕನ್ನಡ ಸುದ್ದಿ  /  Cricket  /  Sarfaraz Khan And Dhruv Jurel Added Into Group C Of Bcci Central Contract With Fee Of 1 Crore Ind Vs Eng Test Series Jra

ಬಿಸಿಸಿಐ ಮಾನದಂಡ ಪೂರೈಸಿ ಕೇಂದ್ರೀಯ ಒಪ್ಪಂದಕ್ಕೆ ಸೇರ್ಪಡೆಗೊಂಡ ಸರ್ಫರಾಜ್ ಖಾನ್, ಧ್ರುವ್ ಜುರೆಲ್

BCCI Central Contract: ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಬಿಸಿಸಿಐನ ಕೇಂದ್ರೀಯ ಒಪ್ಪಂದ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಸಿ ಗುಂಪಿಗೆ ಸೇರಿಸಲಾಗಿದ್ದು, ಮುಂದೆ ಅವರು ವಾರ್ಷಿಕ 1 ಕೋಟಿ ರೂಪಾಯಿ ಶುಲ್ಕ ಪಡೆಯಲಿದ್ದಾರೆ.

ಬಿಸಿಸಿಐ ಕೇಂದ್ರೀಯ ಒಪ್ಪಂದಕ್ಕೆ ಸೇರ್ಪಡೆಗೊಂಡ ಸರ್ಫರಾಜ್ ಖಾನ್, ಧ್ರುವ್ ಜುರೆಲ್
ಬಿಸಿಸಿಐ ಕೇಂದ್ರೀಯ ಒಪ್ಪಂದಕ್ಕೆ ಸೇರ್ಪಡೆಗೊಂಡ ಸರ್ಫರಾಜ್ ಖಾನ್, ಧ್ರುವ್ ಜುರೆಲ್

ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್ (Sarfaraz Khan) ಮತ್ತು ಧ್ರುವ್ ಜುರೆಲ್‌ಗೆ (Dhruv Jurel) ಬಿಸಿಸಿಐ ಶುಭಸುದ್ದಿ ನೀಡಿದೆ. ಆಂಗ್ಲರ ವಿರುದ್ಧದ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಬ್ಯಾಟರ್‌ ಸರ್ಫರಾಜ್ ಖಾನ್ ಮತ್ತು ವಿಕೆಟ್ ಕೀಪರ್ ಆಗಿ ಜುರೆಲ್ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಸಕ್ತ ಋತುವಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡುವ ಬಿಸಿಸಿಐ ಮಾನದಂಡಗಳನ್ನು ಪೂರೈಸಿದ ಬೆನ್ನಲ್ಲೇ, ಇಬ್ಬರು ಆಟಗಾರರಿಗೆ ಭರ್ಜರಿ ಬಡ್ತಿ ಸಿಕ್ಕಿದೆ. ಮಾರ್ಚ್‌ 18ರ ಸೋಮವಾರ ಉಭಯ ಆಟಗಾರರನ್ನು ಬಿಸಿಸಿಐನ ಕೇಂದ್ರೀಯ ಒಪ್ಪಂದಕ್ಕೆ ಸೇರ್ಪಡೆಗೊಳಿಸಲಾಗಿದೆ.

ಕಳೆದ ತಿಂಗಳು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಕೇಂದ್ರೀಯ ಒಪ್ಪಂದ ಪಟ್ಟಿಯನ್ನು ಘೋಷಿಸಿತು. ಟೀಮ್‌ ಇಂಡಿಯಾದ ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಪಟ್ಟಿಯಿಂದ ಕೈಬಿಟ್ಟು ಅಚ್ಚರಿ ಮೂಡಿಸಿತ್ತು. ಅದು ಭಾರತೀಯ ಕ್ರಿಕೆಟ್‌ ರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯ್ತು. ಇದೀಗ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಅಪ್ಡೇಟ್‌ ಮಾಡಿರುವ ಬಿಸಿಸಿಐ, ಇಬ್ಬರು ಆಟಗಾರರನ್ನು ಪಟ್ಟಿಗೆ ಸೇರಿಸಿಕೊಂಡಿದೆ.

ಪ್ರಸಕ್ತ ಋತುವಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡುವ ಮಾನದಂಡಗಳನ್ನು ಪೂರೈಸಿದರೆ ಮಾತ್ರ, ಸರ್ಫರಾಜ್ ಮತ್ತು ಧ್ರುವ್‌ ಜುರೆಲ್ ಅವರಿಗೆ ಕೇಂದ್ರ ಗುತ್ತಿಗೆ ನೀಡಲಾಗುವುದು ಎಂದು ಬಿಸಿಸಿಐ ಬಹಿರಂಗಪಡಿಸಿತು. ಆಂಗ್ಲರ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಂದ ಉಭಯ ಆಟಗಾರರು ಹೊರಗುಳಿದಿದ್ದರು. ಆದರೆ, ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಈ ಇಬ್ಬರೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಧರ್ಮಶಾಲಾದಲ್ಲಿ ನಡೆದ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಆಡುವ ಮೂಲಕ ಬಿಸಿಸಿಐ ಮಾನದಂಡಗಳನ್ನು ಪೂರೈಸಿದರು. ಒಂದೇ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡುವ ಮೂಲಕ ಇಬ್ಬರು ಯುವ ಆಟಗಾರರು ಬಿಸಿಸಿಐ ಗುತ್ತಿಗೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ತಿಂಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ; ನೆಟ್ಟಿಗರ ಗಮನ ಸೆಳೆದ ಡ್ಯಾಡ್‌ ಬರಹದ ಟಿಶರ್ಟ್‌

ಸ್ಫೋಟಕ ಆಟಗಾರ ಸರ್ಫರಾಜ್ ಖಾನ್‌ ಮತ್ತು ಜುರೆಲ್ ಅವರನ್ನು ಬಿಸಿಸಿಐನ ಕೇಂದ್ರೀಯ ಒಪ್ಪಂದದ ಸಿ ಗುಂಪಿಗೆ ಸೇರಿಸಲಾಗಿದೆ. ಇವರ ವಾರ್ಷಿಕ ಸಂಭಾವನೆ 1 ಕೋಟಿ ರೂಪಾಯಿ ಆಗಿರಲಿದೆ. ಮಾರ್ಚ್‌ 18ರ ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಉಭಯ ಆಟಗಾರರ ಹೆಸರುಗಳನ್ನು ಅನುಮೋದಿಸಲಾಗಿದೆ.

ಈ ಇಬ್ಬರು ಆಟಗಾರರು ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಸರ್ಫರಾಜ್ ಮೂರು ಅರ್ಧಶತಕಗಳನ್ನು ಸಿಡಿಸಿದರು. ಅದರಲ್ಲಿ ಎರಡು ಅರ್ಧಶತಕ ಪದಾರ್ಪಣೆ ಪಂದ್ಯದಲ್ಲೇ ಬಂದಿದ್ದು ವಿಶೇಷ. ಮತ್ತೊಂದೆಡೆ, ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಗೆಲುವಿನಲ್ಲಿ ಜುರೆಲ್ ಗಳಿಸಿದ 90 ರನ್‌ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊನೆಗೆ ಸರಣಿಯನ್ನು ಭಾರತವು 4-1

ಇದನ್ನೂ ಓದಿ | Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು, ಅರ್ಹತೆ ಏನು; ಆಟಗಾರರಿಗೆ ಸಂಬಳದ ಜತೆಗೆ ಸಿಗುವ ಹೆಚ್ಚುವರಿ ಸೌಲಭ್ಯಗಳೇನು?

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada. To read more Cricket stories like this please logon to kannada.hindustantimes.com)

IPL_Entry_Point