ಎದೆ ಮೇಲೆ ಕೈಯಿಟ್ಟು ಸರ್ಫರಾಜ್ ಜಾಗ್ರತೆ ಎಂದು ನೌಶಾದ್ ವಿನಮ್ರ ಮನವಿ; ರೋಹಿತ್​ ಉತ್ತರ ಹೀಗಿತ್ತು
ಕನ್ನಡ ಸುದ್ದಿ  /  ಕ್ರಿಕೆಟ್  /  ಎದೆ ಮೇಲೆ ಕೈಯಿಟ್ಟು ಸರ್ಫರಾಜ್ ಜಾಗ್ರತೆ ಎಂದು ನೌಶಾದ್ ವಿನಮ್ರ ಮನವಿ; ರೋಹಿತ್​ ಉತ್ತರ ಹೀಗಿತ್ತು

ಎದೆ ಮೇಲೆ ಕೈಯಿಟ್ಟು ಸರ್ಫರಾಜ್ ಜಾಗ್ರತೆ ಎಂದು ನೌಶಾದ್ ವಿನಮ್ರ ಮನವಿ; ರೋಹಿತ್​ ಉತ್ತರ ಹೀಗಿತ್ತು

Sarfaraz Khan father : ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಕುಟುಂಬದೊಂದಿಗೆ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಎದೆ ಮೇಲೆ ಕೈಯಿಟ್ಟು ಸರ್ಫರಾಜ್ ಜಾಗ್ರತೆ ಎಂದು ನೌಶಾದ್ ವಿನಮ್ರ ಮನವಿ
ಎದೆ ಮೇಲೆ ಕೈಯಿಟ್ಟು ಸರ್ಫರಾಜ್ ಜಾಗ್ರತೆ ಎಂದು ನೌಶಾದ್ ವಿನಮ್ರ ಮನವಿ

ರಾಜ್​​ಕೋಟ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ (India vs England 3rd Test) ಪ್ರಾರಂಭಕ್ಕೂ ಮೊದಲು ತಮ್ಮ ಮಗ ಲೆಜೆಂಡರಿ ಅನಿಲ್ ಕುಂಬ್ಳೆ (Anil Kuble) ಅವರಿಂದ ಟೆಸ್ಟ್ ಕ್ಯಾಪ್ ಪಡೆದಾಗ ಸರ್ಫರಾಜ್ ಖಾನ್ (Sarfaraz Khan) ಅವರ ತಂದೆ ನೌಶಾದ್ ಖಾನ್ ಭಾವುಕರಾಗಿದ್ದರು. ಅವರೊಂದಿಗೆ ಅವರ ಸೊಸೆ ರೊಮಾನಾ ಸಹ ಇದ್ದರು.

ನಿರಂಜನ್ ಶಾ ಮೈದಾನದಲ್ಲಿ ಟಾಸ್​​ಗೂ ಮುನ್ನ ಕ್ಯಾಪ್ ಪ್ರಸ್ತುತಿ ಸಮಾರಂಭ ನಡೆಯುತ್ತಿದ್ದಾಗ ಇಬ್ಬರು ಕೂಡ ಪಕ್ಕದಲ್ಲೇ ನಿಂತು ಅಮೂಲ್ಯ ಕ್ಷಣವನ್ನು ಕಣ್ತುಂಬಿಕೊಂಡರು. ತಕ್ಷಣವೇ ಡೆಬ್ಯು ಕ್ಯಾಪ್​ ಅನ್ನು ತನ್ನ ತಂದೆ ಮತ್ತು ಪತ್ನಿ ಬಳಿಗೆ ಬಂದ ಸರ್ಫರಾಜ್ ಅತ್ಯಮೂಲ್ಯವಾದ ಆಸ್ತಿಯನ್ನು ತೋರಿಸಿ ಖುಷಿಪಟ್ಟರು.

ಅಭಿನಂದಿಸಿದ ರೋಹಿತ್​ ಶರ್ಮಾ

ಆದರೆ ಈ ವೇಳೆ ತಂದೆ ಮತ್ತು ಪತ್ನಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಕಣ್ಣೀರು ಹಾಕಿದರು. ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡ ತಂದೆ ಆನಂದಭಾಷ್ಪ ಹರಿಸಿದರು. ಇದರ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಸರ್ಫರಾಜ್ ಕುಟುಂಬವನ್ನು ಭೇಟಿಯಾದರು.

ತಂದೆ ಮತ್ತು ಪತ್ನಿಯನ್ನು ಮಾತಾಡಿಸಿದ ರೋಹಿತ್​, ಅಭಿನಂದನೆ ಸಲ್ಲಿಸಿದರು. ಸರ್ಫರಾಜ್​ ಖಾನ್ ಅವರನ್ನು ಕ್ರಿಕೆಟರ್​ ಮಾಡಲು ಏನೆಲ್ಲಾ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹಿಟ್​ಮ್ಯಾನ್, ಯುವ ಆಟಗಾರನ ತಂದೆ ನೌಶಾದ್​ಗೆ ಹೇಳಿದರು. ಸರ್ಫರಾಜ್ ಪತ್ನಿ ರೊಮಾನಾ ಅವರಿಗೂ ಅಭಿನಂದನೆ ಸಲ್ಲಿಸಿದರು.

ರೋಹಿತ್​ಗೆ ನೌಶಾದ್ ವಿನಮ್ರ ಮನವಿ

ಇಬ್ಬರಿಗೂ ಅಭಿನಂದನೆ ಸಲ್ಲಿಸಿ ಹೊರ ಹೋಗುವ ಮುನ್ನ ರೋಹಿತ್​ ಬಳಿ ನೌಶಾದ್​ ಮನವಿಯೊಂದನ್ನು ಮಾಡುತ್ತಾರೆ. ಸರ್​​ ದಯವಿಟ್ಟು ಸರ್ಫರಾಜ್​ ಖಾನ್​ನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಎದೆಯ ಮೇಲೆ ಕೈಯಿಟ್ಟು ವಿನಮ್ರವಾಗಿ ವಿನಂತಿಸಿದರು. ಇದಕ್ಕೆ ಉತ್ತರಿಸಿದ ರೋಹಿಯ್​ ಖಂಡಿತ ಖಂಡಿತವಾಗಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಸರ್ಫರಾಜ್ ಖಾನ್ ತಂದೆಯೊಂದಿಗೆ ಹೃದಯಸ್ಪರ್ಶಿ ಕ್ಷಣ ಹಂಚಿಕೊಂಡ ರೋಹಿತ್ ಶರ್ಮಾ

ಸರ್ಫರಾಜ್ ಅಬ್ಬರದ ಅರ್ಧಶತಕ

ಮೂರನೇ ಟೆಸ್ಟ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸರ್ಫರಾಜ್, ಚೊಚ್ಚಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದರು. ಆಡಿದ್ದು ಕೆಲವೇ ಹೊತ್ತಾದರೂ 62 ರನ್ ಚಚ್ಚಿ ಗಮನ ಸೆಳೆದರು. 66 ಎಸೆತಗಳನ್ನು ಎದುರಿಸಿ 9 ಬೌಂಡರಿ, 1 ಸಿಕ್ಸರ್​ ಸಹಿತ 62 ಬಾರಿಸಿ ರನೌಟ್​ ಆದರು.

ಮೊದಲ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಫರಾಜ್, "ನನಗೆ ನಿಜವಾಗಿಯೂ ಸಂತೋಷವಾಯಿತು. ನನ್ನ ತಂದೆಯ ಮುಂದೆ ಟೆಸ್ಟ್ ಕ್ಯಾಪ್ ಪಡೆದಿದ್ದು ನಿಜಕ್ಕೂ ಖುಷಿ ಹೆಚ್ಚಿಸಿದೆ ಎಂದು 26 ವರ್ಷದ ಆಟಗಾರ ಹೇಳಿದರು. ಉತ್ತಮ ಇನ್ನಿಂಗ್ಸ್​ ಕಟ್ಟುತ್ತಿದ್ದ ಸರ್ಫರಾಜ್​ರನ್ನು ಜಡೇಜಾ ರನೌಟ್​ ಮಾಡಿದರು.

ಈ ಕುರಿತು ಮಾತಾಡಿದ ಸರ್ಫರಾಜ್, ಔಟಾದ ಬಳಿಕ ನಾನು ನಾಲ್ಕು ಗಂಟೆಗಳ ಕಾಲ ರೂಮ್​ನಲ್ಲೇ ಇದ್ದೆ. ನಾನು ಜೀವನದಲ್ಲಿ ತುಂಬಾ ತಾಳ್ಮೆಯನ್ನು ಇಟ್ಟುಕೊಂಡಿದ್ದೇನೆ. ಇನ್ನೂ ಸ್ವಲ್ಪ ತಾಳ್ಮೆಯನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ಹಾನಿಯಿಲ್ಲ ಎಂದು ಯೋಚಿಸುತ್ತಲೇ ಇದ್ದೆ ಎಂದು ಅವರು ಹೇಳಿದರು.

ಬ್ಯಾಟಿಂಗ್​ ನಡೆಸಲು ಕ್ರೀಸ್​ಗೆ ತೆರಳಿದ ನಂತರ ಆರಂಭದಲ್ಲಿ ಕೆಲವು ಎಸೆತಗಳವರೆಗೆ ಹೆದರುತ್ತಿದ್ದೆ. ಆದರೆ, ನಾನು ಅಭ್ಯಾಸ ಮಾಡಿದ್ದು ಮತ್ತು ತುಂಬಾ ಶ್ರಮಿಸಿದ್ದರಿಂದ ಎಲ್ಲವೂ ಚೆನ್ನಾಗಿ ಆಯಿತು ಎಂದರು. ರೋಹಿತ್ ನಿರ್ಗಮನದ ನಂತರ ಬ್ಯಾಟಿಂಗ್ ಮಾಡಲು ಹೊರಬಂದ ಸರ್ಫರಾಜ್, ಪ್ರೇಕ್ಷಕರನ್ನು ರಂಜಿಸಿದರು. ಕೇವಲ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Whats_app_banner