ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!
ಕನ್ನಡ ಸುದ್ದಿ  /  ಕ್ರಿಕೆಟ್  /  ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತು ಅವರ ಪತ್ನಿ ನಾದಿಯಾ ಅವರ ಪ್ರೇಮಕಥೆಯ ವಿಶಿಷ್ಟವಾಗಿದೆ. ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು 16 ವರ್ಷದ ಸೋದರಸಂಬಂಧಿಯನ್ನು ಎಂಬುದು ಹಲವರಿಗೆ ಗೊತ್ತಿಲ್ಲ!

ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!
ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಟೂರ್ನಿಯಲ್ಲೂ ಪಾಕಿಸ್ತಾನದ ಗೆಲುವಿನಲ್ಲಿ ಅವರ ನಿರ್ಣಾಯಕ ಪಾತ್ರವು ದೇಶಕ್ಕೆ ಹೆಮ್ಮೆ ತಂದಿದೆ. 2017ರಲ್ಲಿ ತಮ್ಮ 21 ವರ್ಷಗಳ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ಅಫ್ರಿದಿಯನ್ನು ಅವರ ಅಭಿಮಾನಿಗಳು 'ಬೂಮ್ ಬೂಮ್' ಮತ್ತು 'ಲಾಲಾ' ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ವಿಶ್ವಶ್ರೇಷ್ಠ ಆಟಗಾರನ ಪ್ರೀತಿ ವಿಚಾರ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಶಾಹಿದ್ ಅಫ್ರಿದಿ ಅವರ ಪ್ರೇಮ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಯಾರೂ ಆತನ ಪತ್ನಿಯ ಮುಖವನ್ನು ನೋಡಿಲ್ಲ. ಹಾಗಾಗಿ, ಶಾಹಿದ್ ಅಫ್ರಿದಿ ಪತ್ನಿ ನಾದಿಯಾ ಅವರೊಂದಿಗಿನ ಪ್ರೇಮಕಥೆ ಮತ್ತು 2 ದಶಕಗಳಿಗೂ ಹೆಚ್ಚು ಕಾಲ ಈ ಜೋಡಿಯ ಪ್ರೀತಿ ಹೇಗೆ ಗಟ್ಟಿಯಾಗಿದೆ ಎಂಬುದರ ಕುರಿತು ಲಭ್ಯವಿರುವ ಎಲ್ಲಾ ಮಾಹಿತಿ ಇಲ್ಲಿದೆ.

19ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಹಿದ್ ಅಫ್ರಿದಿ, ಅಲ್ಪಾವಧಿಯಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಚಿನ್ನದ ಹುಡುಗನಾದ. ಅಫ್ರಿದಿ ಟೂರ್ನಮೆಂಟ್‌ಗೆ ಮನೆಯಿಂದ ಹೊರಡುವಾಗ ತಮಾಷೆಯಾಗಿ ತಮ್ಮ ತಂದೆಗೆ ತನಗೆ ಹುಡುಗಿ ಹುಡುಕುವಂತೆ ಕೇಳಿದ್ದರಂತೆ. ಆದರೆ ಅವರ ತಂದೆ ಈ ಮಾತನ್ನು ಗಂಭೀರವಾಗಿ ಪರಿಗಣಿಸಿ, ಮಗ ಮನೆಗೆ ಬರುವಷ್ಟರಲ್ಲಿ ಹುಡುಗಿಯನ್ನೇ ಹುಡುಕಿ ಬಿಟ್ಟಿದ್ದರಂತೆ. ಟೂರ್ನಿ ಮುಗಿಸಿ ಮನೆಗೆ ಹಿಂದಿರುಗಿದಾಗ ನಿನಗೆ ಸುಂದರವಾದ ಹುಡುಗಿ ಹುಡುಕಿದ್ದೇನೆ ಎಂದು ತಂದೆ ಹೇಳಿದ್ದರಂತೆ.

2000ರಲ್ಲಿ ಶಾಹೀದ್ ಅಫ್ರಿದಿ ಮದುವೆ

ಈ ಸುದ್ದಿ ಕೇಳಿ ಅಫ್ರಿದಿಗೆ ನಿಜವಾಗಲೂ ಶಾಕ್ ಆಗಿತ್ತು. ಅವರ ತಂದೆ ಹುಡುಕಿದ ಆ ಹುಡುಗಿ ಬೇರೆ ಯಾರೂ ಅಲ್ಲ, ಶಾಹಿದ್ ಅಫ್ರಿದಿಯ ಸೋದರಸಂಬಂಧಿ ನಾದಿಯಾ. ಮತ್ತೊಂದು ಅಚ್ಚರಿ ಏನೆಂದರೆ ಅಫ್ರಿದಿ-ನಾದಿಯಾ ಇಬ್ಬರೂ ಬಾಲ್ಯದಿಂದಲೂ ಪರಸ್ಪರ ಪರಿಚಿತರು. ಶಾಹಿದ್ ತಂದೆ ನಾದಿಯಾ ಜೊತೆಗಿನ ವಿವಾಹ ಅಂತಿಮಗೊಳಿಸಿದ ಕೂಡಲೇ ಕ್ರಿಕೆಟಿಗ ತನ್ನ ಪ್ರೇಯಸಿಯೊಂದಿಗೆ ವಿವಾಹವಾದರು. ಈ ಜೋಡಿ 2000ರಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾದರು. ಸಹ ಕ್ರಿಕೆಟಿಗರಾದ ವಾಸಿಮ್ ಅಕ್ರಮ್, ಅಬ್ದುಲ್ ರಜಾಕ್ ವಿವಾಹದಲ್ಲಿ ಭಾಗವಹಿಸಿದ್ದರು.

ನಾದಿಯಾ ಶಾಹಿದ್ ಪತ್ನಿ ಮಾತ್ರವಲ್ಲ, ಅವರ ತಾಯಿಯ ಸೋದರಸಂಬಂಧಿಯೂ ಹೌದು. 2000ರಲ್ಲಿ ವಿವಾಹವಾದ ಈ ದಂಪತಿಗಳು ಈಗ ನಾಲ್ಕು ಮುದ್ದಾದ ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗುವಿನ ಹೆಮ್ಮೆಯ ಪೋಷಕರಾಗಿದ್ದಾರೆ. ಮಕ್ಕಳ ಹೆಸರು ಅಕ್ಸಾ, ಅನ್ಶಾ, ಅಜ್ವಾ, ಅಸ್ಮಾರಾ. ನಾದಿಯಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದೇ ವಿರಳ. 25 ವರ್ಷವಾದರೂ ಅನ್ಯೋನ್ಯ ದಂಪತಿಗಳಾಗಿ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.

ಶಾಹೀದ್ ಅಫ್ರಿದಿ ವೃತ್ತಿಜೀವನ

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅಫ್ರಿದಿ, 2018ರಲ್ಲಿ ವಿದಾಯ ಘೋಷಿಸಿದ್ದರು. ಏಕದಿನ ಕ್ರಿಕೆಟ್​ನಲ್ಲಿ 398 ಪಂದ್ಯಗಳನ್ನಾಡಿರುವ ಅಫ್ರಿದಿ, 8064 ರನ್, 395 ವಿಕೆಟ್ ಕಬಳಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ 27 ಪಂದ್ಯಗಳನ್ನಾಡಿದ್ದು 1716 ರನ್, 48 ವಿಕೆಟ್ ಕಿತ್ತಿದ್ದಾರೆ. ಹಾಗೆಯೇ ಟಿ20ಐ ಕ್ರಿಕೆಟ್​ನಲ್ಲಿ 99 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 1416 ರನ್, 98 ವಿಕೆಟ್ ಉರುಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 11 ಶತಕ, 51 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.