ಶಾರ್ದೂಲ್ ಇನ್, ಕಾನ್ವೆ-ಪತಿರಾಣ ಔಟ್; ಆರ್‌ಸಿಬಿ ವಿರುದ್ಧದ ಕದನಕ್ಕೆ ಸಿಎಸ್‌ಕೆ ಕಣಕ್ಕಿಳಿಸುವ 11 ಬೇಟೆಗಾರರು ಇವರೇ ನೋಡಿ
CSK playing xi vs RCB : ಮಾರ್ಚ್ 22ರಂದು ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಸಿಎಸ್‌ಕೆ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ವರದಿಯಲ್ಲಿ ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2024ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೆಣಸಾಟ ನಡೆಸಲಿದೆ. ಹಾಲಿ ಚಾಂಪಿಯನ್ ಸಿಎಸ್‌ಕೆ ತನ್ನ ತವರಿನ ಮೈದಾನ ಚೆಪಾಕ್ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಸಿದ್ಧವಾಗಿದೆ. 2023ರ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ಸೋಲಿಸಿ ಪ್ರಶಸ್ತಿ ಜಯಿಸಿದ್ದ ಚೆನ್ನೈ, ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದೆ.
2023ರ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಸಿಎಸ್‌ಕೆ, ಉತ್ತಮ ಆಟಗಾರರನ್ನು ಖರೀದಿಸಿತ್ತು. ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಶಾರ್ದೂಲ್ ಠಾಕೂರ್ ಸೇರಿದಂತೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವ ಆಟಗಾರರನ್ನೇ ಬುಟ್ಟಿಗೆ ಹಾಕಿಕೊಂಡಿದೆ. ಕೋಟಿ ಕೋಟಿ ಇನ್ವೆಸ್ಟ್ ಮಾಡಿ ಭವಿಷ್ಯದ ತಾರೆಗಳನ್ನೂ ತಂಡಕ್ಕೆ ಕರೆಸಿಕೊಂಡಿದೆ. ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಮಾರ್ಚ್ 22ರಂದು ಆರ್‌ಸಿಬಿ ವಿರುದ್ಧ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ XI ಹೇಗಿರಲಿದೆ?
ಯಾರಿಗೆಲ್ಲಾ ಅವಕಾಶ ಸಿಕ್ಕಿದೆ ನೋಡಿ
ಎಂಎಸ್ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಅವರಿಗೆ ಇದು ಕೊನೆಯ ಐಪಿಎಲ್ ಟೂರ್ನಿ ಎಂದು ಊಹಾಪೋಹಾ ಸುದ್ದಿಗಳು ಹರಡುತ್ತಿವೆ. 2008 ರಿಂದ ಈವರೆಗೂ ನಾನ್ಸ್ಟಾಫ್ ಐಪಿಎಲ್ ಆಡುತ್ತಿರುವ ಧೋನಿ, ಆಡುವುದು ಖಚಿತ. ಟೂರ್ನಿಗೆ ಮುನ್ನ ಸಿಎಸ್‌ಕೆ ಎರಡು ಭಾರಿ ಹೊಡೆತಗಳಿಂದ ತತ್ತರಿಸಿದೆ. ಏಸ್ ಬ್ಯಾಟರ್ ಡೆವೊನ್ ಕಾನ್ವೆ, ಮೊದಲಾರ್ಧ ಟೂರ್ನಿಗೆ ಅಲಭ್ಯ ಮತ್ತು ಗಾಯದಿಂದ ಬಳಲುತ್ತಿರುವ ವೇಗಿ ಮಥೀಶ ಪತಿರಾಣ ಲಭ್ಯತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗುತ್ತಿದೆ.
ಕಾನ್ವೆ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಜೊತೆಗೆ ಋತುರಾಜ್ ಗಾಯಕ್ವಾಡ್ ಓಪನಿಂಗ್ ಮಾಡುವ ಸಾಧ್ಯತೆಯಿದೆ. 2023ರ ಐಪಿಎಲ್ನಲ್ಲಿ 172 ಸ್ಟ್ರೈಕ್ ರೇಟ್‌ನಲ್ಲಿ 326 ರನ್ ಗಳಿಸಿದ್ದ ರಹಾನೆ, ಈ ಬಾರಿ ಕೂಡ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ರಚಿನ್ ರವೀಂದ್ರ ಅವರು ಒಡಿಐ ವಿಶ್ವಕಪ್‌ನಲ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿ ಅದ್ಭುತ ಯಶಸ್ಸನ್ನು ಹೊಂದಿದ್ದರು. ಐಪಿಎಲ್ಗೆ ಪದಾರ್ಪಣೆ ಮಾಡಲು ಸಜ್ಜಾದ ರಚಿನ್, ಚೆನ್ನೈ ಪರವೂ 3ನೇ ಸ್ಥಾನದಲ್ಲೇ ಬ್ಯಾಟ್ ಬೀಸುವ ನಿರೀಕ್ಷೆ ಇದೆ.
ರಚಿನ್ ಜೊತೆಗೆ ನ್ಯೂಜಿಲೆಂಡ್ ತಂಡದ ಸಹ ಆಟಗಾರ ಡ್ಯಾರಿಲ್ ಮಿಚೆಲ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ನಂತರ ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ ಬ್ಯಾಟಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಮುಸ್ತಫಿಜುರ್ ರೆಹಮಾನ್ ಅವರು ಸ್ಪೆಷಲಿಸ್ಟ್ ಬೌಲರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಆಡುವ ಪ್ಲೇಯಿಂಗ್ ಸಿಎಸ್ಕೆಗೆ ಪ್ರಚಂಡ ಬ್ಯಾಟಿಂಗ್ ಆಳ ಹೊಂದಿದೆ.
ಆರ್‌ಸಿಬಿ ಹೋರಾಟಕ್ಕೆ ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್
ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮುಸ್ತಾಫಿಜುರ್ ರೆಹಮಾನ್.
ಸಿಎಸ್‌ಕೆ ಸಂಪೂರ್ಣ ತಂಡ
ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.