ಕನ್ನಡ ಸುದ್ದಿ  /  ಕ್ರಿಕೆಟ್  /  Ipl Orange Cap: ಶಾನ್ ಮಾರ್ಷ್‌ರಿಂದ ವಿರಾಟ್ ಕೊಹ್ಲಿವರೆಗೆ; ಐಪಿಎಲ್‌ನಲ್ಲಿ 2024ರವರೆಗೆ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ

IPL Orange Cap: ಶಾನ್ ಮಾರ್ಷ್‌ರಿಂದ ವಿರಾಟ್ ಕೊಹ್ಲಿವರೆಗೆ; ಐಪಿಎಲ್‌ನಲ್ಲಿ 2024ರವರೆಗೆ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ

2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಹೋಗಲು ವಿಫಲರಾಗಿದ್ದರೂ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. 2008 ರಿಂದ 2024ರ ವರೆಗೆ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಶಾನ್ ಮಾರ್ಷ್‌ರಿಂದ ವಿರಾಟ್ ಕೊಹ್ಲಿವರೆಗೆ; ಐಪಿಎಲ್‌ನಲ್ಲಿ 2024ರವರೆಗೆ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ
ಶಾನ್ ಮಾರ್ಷ್‌ರಿಂದ ವಿರಾಟ್ ಕೊಹ್ಲಿವರೆಗೆ; ಐಪಿಎಲ್‌ನಲ್ಲಿ 2024ರವರೆಗೆ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ

ಬೆಂಗಳೂರು: ಚೆನ್ನೈನ (Chennai ) ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ನಡೆಯದ 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ (IPL 2024 Final) ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು (SRH) 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡ 3ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಮ್ಮಿದೆ. ಕೆಕೆಆರ್ 2014ರಲ್ಲಿ ಕಡೆಯ ಭಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು, ಭಾನುವಾರ (ಮೇ 26) ನಡೆದ ಎಸ್‌ಆರ್‌ಎಚ್‌ ವಿರುದ್ಧ ಫೈನಲ್ ಕದನದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ನೈಟ್ ರೈಡರ್ಸ್ ಮತ್ತೊಮ್ಮೆ ಟ್ರೋಫಿಯನ್ನು ಎತ್ತ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2024ರ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿಗೆ ಆರೆಂಜ್ ಕ್ಯಾಪ್, ಹರ್ಷಲ್ ಪಟೇಲ್‌ಗೆ ಪರ್ಪಲ್ ಕ್ಯಾಪ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ ಅವರು ಒಟ್ಟು ಎರಡು ಬಾರಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತೀಯ ಏಕೈಕ ಕ್ರಿಕೆಟ್ ಆಗಿದ್ದಾರೆ. ವಿರಾಟ್ 2024ರ ಐಪಿಎಲ್‌ನಲ್ಲಿ 15 ಪಂದ್ಯಗಳಿಂದ 741 ರನ್ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕ ಹಾಗೂ 1 ಶತಕ ಸೇರಿದೆ. ಪ್ಲೇ-ಆಫ್‌ಗೆ ಬಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವುದರೊಂದಿಗೆ ಆರ್‌ಸಿಬಿ ಟೂರ್ನಿಯವನ್ನು ಮುಗಿಸಿತ್ತು. ಅದೇ ರೀತಿ ಬೌಲಿಂಗ್ ವಿಭಾಗದಲ್ಲಿ 24 ವಿಕೆಟ್ ಕಬಳಿಸಿದ್ದ ಹರ್ಷಲ್ ಪಟೇಲ್ ಪರ್ಪೆಲ್ ಕ್ಯಾಪ್ ಗೆದ್ದಿದ್ದಾರೆ. ಹರ್ಷಲ್ ಪ್ರತಿನಿಧಿಸಿದ್ದ ಪಂಜಾಬ್ ಕಿಂಗ್ಸ್ ತಂಡ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

2008 ರಿಂದ 2024 ರವರೆಗೆ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಪಡೆದವರ ಪಟ್ಟಿ ಇಲ್ಲಿದೆ

2008 - ಶಾನ್ ಮಾರ್ಷ್ (616 ರನ್, ಪಂಜಾಬ್ ಕಿಂಗ್ಸ್)

2009 - ಮ್ಯಾಥ್ಯೂ ಹೇಡನ್ (572 ರನ್, ಚೆನ್ನೈ ಸೂಪರ್ ಕಿಂಗ್ಸ್)

2010 - ಸಚಿನ್ ತೆಂಡೂಲ್ಕರ್ (618 ರನ್, ಮುಂಬೈ ಇಂಡಿಯನ್ಸ್)

2011 - ಕ್ರಿಸ್ ಗೇಲ್ (608, ರಾಯಲ್ ಚಾಲೆಂಜರ್ಸ್ ಬೆಂಗಳೂರು)

2012 - ಕ್ರಿಸ್ ಗೇಲ್ (733, ರಾಯಲ್ ಚಾಲೆಂಜರ್ಸ್ ಬೆಂಗಳೂರು)

2013 - ಮೈಕೆಲ್ ಹಸ್ಸಿ (733, ಚೆನ್ನೈ ಸೂಪರ್ ಕಿಂಗ್ಸ್)

2014 - ರಾಬಿನ್ ಉತ್ತಪ್ಪ (660, ಕೋಲ್ಕತ್ತ ನೈಟ್ ರೈಡರ್ಸ್)

2015 - ಡೇವಿಡ್ ವಾರ್ನರ್ (562, ಸನ್ ರೈಸರ್ಸ್ ಹೈದರಾಬಾದ್)

2016 - ವಿರಾಟ್ ಕೊಹ್ಲಿ (973, ರಾಯಲ್ ಚಾಲೆಂಜರ್ಸ್ ಬೆಂಗಳೂರು)

2017 - ಡೇವಿಡ್ ವಾರ್ನರ್ (641, ಸನ್‌ರೈಸರ್ಸ್ ಹೈದರಾಬಾದ್)

2018 - ಕೇನ್ ವಿಲಿಯಮ್ಸನ್ (735, ಸನ್‌ರೈಸರ್ಸ್ ಹೈದರಾಬಾದ್)

2019 - ಡೇವಿಡ್ ವಾರ್ನರ್ (692, ಸನ್ ರೈಸರ್ಸ್ ಹೈದರಾಬಾದ್)

2020 - ಕೆಎಲ್ ರಾಹುಲ್ (670, ಪಂಜಾಬ್ ಕಿಂಗ್ಸ್)

2021 - ರುತುರಾಜ್ ಗಾಯಕ್ವಾಡ್ (635, ಚೆನ್ನೈ ಸೂಪರ್ ಕಿಂಗ್ಸ್)

2022 - ಜೋಸ್ ಬಟ್ಲರ್ (863, ರಾಜಸ್ಥಾನ್ ರಾಯಲ್ಸ್)

2023 - ಶುಭ್ಮನ್ ಗಿಲ್ (890, ಗುಜರಾತ್ ಟೈಟಾನ್ಸ್)

2024 - ವಿರಾಟ್ ಕೊಹ್ಲಿ (741, ರಾಯಲ್ ಚಾಲೆಂಜರ್ಸ್ ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ