ಕನ್ನಡ ಸುದ್ದಿ  /  ಕ್ರಿಕೆಟ್  /  ಮಿಥಾಲಿ ರಾಜ್ ಜೊತೆ 2ನೇ ಮದುವೆ ವದಂತಿ ಮತ್ತು ಕ್ರಿಕೆಟ್ ನಿವೃತ್ತಿ ಕುರಿತು ಕ್ಲಾರಿಟಿ ಕೊಟ್ಟ ಶಿಖರ್ ಧವನ್

ಮಿಥಾಲಿ ರಾಜ್ ಜೊತೆ 2ನೇ ಮದುವೆ ವದಂತಿ ಮತ್ತು ಕ್ರಿಕೆಟ್ ನಿವೃತ್ತಿ ಕುರಿತು ಕ್ಲಾರಿಟಿ ಕೊಟ್ಟ ಶಿಖರ್ ಧವನ್

Shikhar Dhawan : ಟೀಮ್ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಎರಡನೇ ಮದುವೆ ವದಂತಿ ಮತ್ತು ತನ್ನ ಕ್ರಿಕೆಟ್ ನಿವೃತ್ತಿಯ ಊಹಾಪೋಹ ಸುದ್ದಿಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮಿಥಾಲಿ ರಾಜ್ ಜೊತೆ 2ನೇ ಮದುವೆ ವದಂತಿ ಮತ್ತು ಕ್ರಿಕೆಟ್ ನಿವೃತ್ತಿ ಕುರಿತು ಕ್ಲಾರಿಟಿ ಕೊಟ್ಟ ಶಿಖರ್ ಧವನ್
ಮಿಥಾಲಿ ರಾಜ್ ಜೊತೆ 2ನೇ ಮದುವೆ ವದಂತಿ ಮತ್ತು ಕ್ರಿಕೆಟ್ ನಿವೃತ್ತಿ ಕುರಿತು ಕ್ಲಾರಿಟಿ ಕೊಟ್ಟ ಶಿಖರ್ ಧವನ್

2024ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಗಾಯಗೊಂಡು ಐದು ಪಂದ್ಯಗಳಲ್ಲಷ್ಟೇ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ (Shikhar Dhawan), ತನ್ನ ನಿವೃತ್ತಿಯ ಕುರಿತು ಮತ್ತು ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ಮಿಥಾಲಿ ರಾಜ್ (Mithali Raj) ಅವರನ್ನು ಮದುವೆಯಾಗುವ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆಡಿದ 5 ಪಂದ್ಯಗಳಲ್ಲಿ 30.40ರ ಬ್ಯಾಟಿಂಗ್ ಸರಾಸರಿಯಲ್ಲಿ 152 ರನ್ ಗಳಿಸಿರುವ ಧವನ್, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿದ್ದಾರೆ.

ಟ್ರೆಂಡಿಂಗ್​ ಸುದ್ದಿ

38 ವರ್ಷದ ಶಿಖರ್ ಧವನ್, ಭಾರತ ತಂಡದ ಪರ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದು 2022ರ ಡಿಸೆಂಬರ್​ 10ರಂದು ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಕೇವಲ 3 ರನ್ ಸಿಡಿಸಿದ್ದರು. ಔಟ್ ಆಫ್ ಫಾರ್ಮ್​ನಿಂದಾಗಿ ತಂಡದಲ್ಲಿ ಸ್ಥಾನ ಪಡೆಯದ ಶಿಖರ್​, ಯುವ ಆಟಗಾರರಿಗೆ ತಮ್ಮ ಜಾಗ ಬಿಟ್ಟುಕೊಟ್ಟರು. ತದನಂತರ ಐಪಿಎಲ್​ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಪದೇ ಪದೇ ಇಂಜುರಿಯಾಗುತ್ತಿರುವ ಧವನ್​ಗೆ​ ಫಿಟ್​ನೆಸ್ ಸಮಸ್ಯೆಯೂ ಕಾಡುತ್ತಿದೆ.

ಹೀಗಾಗಿ, ಧವನ್ 2024ರ ಐಪಿಎಲ್ ಬಳಿಕ ನಿವೃತ್ತಿಯಾಗುತ್ತಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಫಿಟ್ನೆಸ್ ಮತ್ತು ವಯಸ್ಸನ್ನು ಉಲ್ಲೇಖಿಸಿದ ಕೆಲ ವರದಿಗಳು ಎಡಗೈ ಬ್ಯಾಟರ್ ನಿವೃತ್ತಿ ಘೋಷಿಸುವುದು ಬಹುತೇಕ ಖಚಿತ ಎಂದು ಹೇಳಿವೆ. ಹಿರಿಯ ಆಟಗಾರ ಭಾರತ ತಂಡದಲ್ಲಿ ಮತ್ತೆ ಅವಕಾಶ ಪಡೆಯುವುದು ಬಹುತೇಕ ಅನುಮಾನ. ಯುವಕರು ದಂಡು ಭಾರತೀಯ ಕ್ರಿಕೆಟ್​ನಲ್ಲಿ ಹೆಚ್ಚಾಗಿದ್ದು, ಮತ್ತೆ ಸೆಲೆಕ್ಟರ್​ಗಳು ಧವನ್​ ಆಯ್ಕೆಗೆ ಒಲವು ತೋರುತ್ತಿಲ್ಲ. ಹೀಗಾಗಿ ನಿವೃತ್ತಿಯಂಚಿನಲ್ಲಿದ್ದಾರೆ.

ನಿವೃತ್ತಿ ಬಗ್ಗೆ ಧವನ್ ಕೊಟ್ರು ಸ್ಪಷ್ಟನೆ

ವದಂತಿಗಳು ಹಬ್ಬಿದ ಹಿನ್ನೆಲೆ ಧವನ್ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ದಿನೇಶ್ ಕಾರ್ತಿಕ್ ವಿದಾಯ ಹೇಳಿದ ನಂತರ ಅದರ ಸಾಲಿಗೆ ಗಬ್ಬರ್​ ಕೂಡ ಪ್ರವೇಶಿಸಿದ್ದಾರೆ. ನನ್ನ ವೃತ್ತಿಜೀವನ 'ಬದಲಾವಣೆ'ಯ ಹಂತದಲ್ಲಿ ಸಾಗುತ್ತಿದೆ. ನನ್ನ ಜೀವನದಲ್ಲಿ ಹೊಸ ಅಧ್ಯಾಯವು ಪ್ರಾರಂಭವಾಗುತ್ತದೆ. ನೀವು ಆಡಲು ಸಾಧ್ಯವಾಗುವವರೆಗೆ ನಿಮಗೆ ಒಂದು ನಿರ್ದಿಷ್ಟ ವಯಸ್ಸು ಇದೆ. ಇದು ಒಂದು ಅಥವಾ ಎರಡು ವರ್ಷಗಳು ಅಥವಾ ಎಕ್ಸ್​ವೈಜೆಡ್ (XYZ) ಎಂದು ಹೇಳಿದ್ದಾರೆ.

ಮುಂದಿನ ಐಪಿಎಲ್​ ಸೀಸನ್​​ನಲ್ಲೂ ಆಡುವ ಸುಳಿವು ಕೊಟ್ಟಿರುವ ಧವನ್, ತನ್ನ ಗಾಯದ ಕುರಿತು ಮಾತನಾಡಿದ್ದಾರೆ. ದುರದೃಷ್ಟವಶಾತ್, ನಾನು ಈ ಐಪಿಎಲ್​ನಲ್ಲಿ ಗಾಯಗೊಂಡಿದ್ದೇನೆ. 5 ಪಂದ್ಯಗಳನ್ನು ಹೊರತುಪಡಿಸಿ ಪಂಜಾಬ್ ಪರ ಆಡಲು ಸಾಧ್ಯವಾಗಲಿಲ್ಲ. ಇದು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಾನು ಇನ್ನೂ ಗುಣವಾಗಿದ್ದೇನೆ. ಆದರೆ ನಾನು ಇನ್ನೂ 100 ಪ್ರತಿಶತದಷ್ಟು ಚೇತರಿಸಿಕೊಂಡಿಲ್ಲ ಎಂದು ಧವನ್ ಸ್ಪಷ್ಟಪಡಿಸಿದ್ದಾರೆ.

ಮದುವೆ ವದಂತಿ ವಿಚಿತ್ರವಾಗಿದೆ ಎಂದ ಶಿಖರ್​

ಇದೇ ವೇಳೆ ಟೀಮ್ ಇಂಡಿಯಾ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಮದುವೆಯಾಗುವ ವದಂತಿ ಕುರಿತು ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಶಿಖರ್ ಧವನ್​ ಅವರಿಗೆ ಪತ್ನಿಆಯೇಷಾ ಮುಖರ್ಜಿ ಅವರೊಂದಿಗೆ ಡಿವೋರ್ಸ್ ಆಗಿರುವ ಕಾರಣ ಮತ್ತೊಂದು ಮದುವೆ ಆಗುತ್ತಾರೆ ಎಂದು ಈ ಹಿಂದಿನಿಂದಲೂ ವರದಿಗಳಾಗುತ್ತಿವೆ. ಇದೇ ವೇಳೆ ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಡದ ಮಿಥಾಲಿ ರಾಜ್ ಅವರನ್ನು ವರಿಸಲಿದ್ದಾರೆ ಎಂದು ಊಹಾಪೋಹಗಳು ಹುಟ್ಟಿಕೊಟ್ಟಿದ್ದವು.

ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಪ್ರಸ್ತುತ ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದಲ್ಲಿ ಮೆಂಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಜಿಯೋ ಸಿನಿಮಾದ 'ಧವನ್ ಕರೆಂಗೆ' ಶೋನಲ್ಲಿ ಶಿಖರ್ ಧವನ್ ಜೊತೆ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಧವನ್ ಮಿಥಾಲಿ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ, ಸ್ಪಷ್ಟನೆ ಕೊಟ್ಟಿದ್ದಾರೆ.

ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ ಎಂದು ಸುದ್ದಿ ಕೇಳಿದ್ದೆ ಎಂದು ಧವನ್ ಹೇಳುತ್ತಿದ್ದಂತೆ, ಮಿಥಾಲಿ ಜೋರಾಗಿ ನಗತೊಡಗಿದರು. ಇದೊಂದು ವಿಚಿತ್ರ ವದಂತಿ ಎಂದು ಹೇಳಿದ ಭಾರತ ತಂಡದ ಆರಂಭಿಕ ಆಟಗಾರ, ಮಿಥಾಲಿ ರಾಜ್ ಅವರನ್ನು ವಿವಾಹವಾಗುತ್ತೇನೆ ಎಂದು ಊಹಾಪೋಹ ಸುದ್ದಿ. ಸತ್ಯಕ್ಕೆ ದೂರವಾದದ್ದು ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ನಿವೃತ್ತಿ ಹೊಂದಿರುವ ಮಿಥಾಲಿ ರಾಜ್, ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದ್ದಾರೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ