ಪಾಕಿಸ್ತಾನ ಮತ್ತು ಫೀಲ್ಡಿಂಗ್, ಎಂದೂ ಮುಗಿಯದ ಲವ್ ಸ್ಟೋರಿ; ಪಾಕ್ ಆಟಗಾರರ ಕಾಲೆಳೆದ ಧವನ್
ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಮತ್ತೆ ಕಳಪೆ ಫೀಲ್ಡಿಂಗ್ ಮಾಡಿದ್ದಾರೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಶಿಖರ್ ಧವನ್ ಕಿಚಾಯಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡವು, ಫಿಲ್ಡಿಂಗ್ ವಿಚಾರವಾಗಿ ಆಗಾಗ ಟ್ರೋಲ್‌ಗೆ ಆಹಾರವಾಗುತ್ತದೆ. ಇತ್ತೀಚೆಗೆ ಏಷ್ಯಾಕಪ್‌ನಲ್ಲೂ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರ ಕಳಪೆ ಫೀಲ್ಡಿಂಗ್ ಭಾರಿ ಟ್ರೋಲ್ ಆಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಪಾಕ್ ತಂಡದ ಆಟಗಾರರ ಕಳಪೆ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದೆ. ಈ ಬಾರಿ ಇದನ್ನು ಟ್ರೋಲ್ ಮಾಡಿರುವವರು ಭಾರತ ಪ್ರಮುಖ ಕ್ರಿಕೆಟಿಗ.
ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಮತ್ತೆ ಕಳಪೆ ಫೀಲ್ಡಿಂಗ್ ಮಾಡಿದ್ದಾರೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಶಿಖರ್ ಧವನ್ ಕಿಚಾಯಿಸಿದ್ದಾರೆ. ಎಕ್ಸ್ (ಟ್ವಿಟರ್)ನಲ್ಲಿ ಪಾಕ್ ತಂಡದ ಫೀಲ್ಡಿಂಗ್ ವಿಡಿಯೋ ಹಂಚಿಕೊಂಡಿರುವ ಅವರು, ಆಟಗಾರರ ಕಾಲೆಳೆದಿದ್ದಾರೆ. ಇದು ಈಗ ಎಲ್ಲೆಡೆ ವೈರಲ್ ಆಗಿದೆ.
ಪಾಕಿಸ್ತಾನದ ಇಬ್ಬರು ಫೀಲ್ಡರ್‌ಗಳು ಒಂದೇ ಚೆಂಡನ್ನು ಹಿಡಿಯಲು ಹೋಗಿದ್ದಾರೆ. ಆದರೆ, ಒಬ್ಬರೂ ಚೆಂಡು ಮಾತ್ರ ಹಿಡಿದಿಲ್ಲ. ಇಬ್ಬರು ಕೂಡಾ ಮತ್ತೊಬ್ಬ ಫೀಲ್ಡರ್ ಚೆಂಡು ಹಿಡಿಯುತ್ತಾರೆ ಎಂದು ಕಾದಿದ್ದಾರೆ. ಹೀಗಾಗಿ ಇಬ್ಬರ ಕೈಯಿಂದಲೂ ಚೆಂಡು ತಪ್ಪಿಸಿಕೊಂಡು ಬೌಂಡರಿ ಗೆರೆಯತ್ತ ಹೋಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಧವನ್, ಪಾಕ್ ಆಟಗಾರರ ಕಾಲೆಳೆದಿದ್ದಾರೆ.
“ಪಾಕಿಸ್ತಾನ ಮತ್ತು ಫೀಲ್ಡಿಂಗ್. ಎಂದಿಗೂ ಮುಗಿಯದ ಪ್ರೇಮಕಥೆ” ಎಂದು ಧವನ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳ ಕಾಮೆಂಟ್‌ಗಳ ಸುರಿಮಳೆಯೇ ಹರಿದು ಬರುತ್ತಿದೆ.
ಪಾಕಿಸ್ತಾನ ಅಭಿಮಾನಿಗಳು ತಮ್ಮ ದೇಶದ ತಂಡವನ್ನು ಸಮರ್ಥಿಸುವ ಭರದಲ್ಲಿ, ಭಾರತ ತಂಡದ ಕೆಲವೊಂದು ಹಳೆಯ ಕಳಪೆ ಫಿಲ್ಡಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅತ್ತ ಭಾರತದ ಅಭಿಮಾನಿಗಳು ಪಾಕಿಸ್ತಾನ ತಂಡದ ಹಳೆಯ ಮಿಸ್‌ಫೀಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
