ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು; ಚೆಪಾಕ್​ನಲ್ಲಿ ಆರ್​​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಅಜೇಯ ಓಟ-shivam dube and ravindra jadeja help chennai beat bengaluru by six wickets in ipl opener csk vs rcb ipl 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು; ಚೆಪಾಕ್​ನಲ್ಲಿ ಆರ್​​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಅಜೇಯ ಓಟ

ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು; ಚೆಪಾಕ್​ನಲ್ಲಿ ಆರ್​​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಅಜೇಯ ಓಟ

RCB vs CSK : 17ನೇ ಆವೃತ್ತಿಯ ಐಪಿಎಲ್​​ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​​ 6 ವಿಕೆಟ್​​ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು
ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು (PTI)

ಮುಸ್ತಫಿಜುರ್ ರೆಹಮಾನ್ ಅವರ ಮಾರಕ ಬೌಲಿಂಗ್ ದಾಳಿ (29ಕ್ಕೆ4) ಮತ್ತು ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದ 17ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಸಿಎಸ್​ಕೆ ವಿರುದ್ಧ ಸತತ 8ನೇ ಸೋಲು ಕಂಡಿದೆ. 6 ವಿಕೆಟ್​​ಗಳಿಂದ ಗೆದ್ದ ಚೆನ್ನೈ ನೂತನ ಕ್ಯಾಪ್ಟನ್​ ಋತುರಾಜ್​ ಗಾಯಕ್ವಾಡ್​ಗೆ ಗೆಲುವಿನ ನೀಡಿದೆ.

174 ರನ್​ಗಳ ಗುರಿ ಪಡೆದ ಸಿಎಸ್​ಕೆ ಸ್ಫೋಟಕ ಆರಂಭ ಪಡೆಯಿತು. ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಜೋಡಿ 38 ರನ್ ಕಲೆ ಹಾಕಿತು. ಆದರೆ ನಾಯಕ ಋತುರಾಜ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ರವೀಂದ್ರ ತನ್ನ ಸ್ಫೋಟಕ ಆಟವನ್ನು ಅಜಿಂಕ್ಯ ರಹಾನೆ ಜೊತೆಗೂಡಿ ಮುಂದುವರೆಸಿದರು. ಮತ್ತೊಂದೆಡೆ ರಹಾನೆ ಕೂಡ ಆರ್​ಸಿಬಿ ಬೌಲರ್​​​ಗಳಿಗೆ ಬೆಂಡೆತ್ತಿದರು.

ವೇಗವಾಗಿ ಸ್ಕೋರ್ ಮಾಡಿದ ಈ ಜೋಡಿ, ಟಾರ್ಗೆಟ್ ಅಂತರ ಕಡಿಮೆಗೊಳಿಸಿದರು. 15 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ ಸಿಡಿಸಿದ ರಚಿನ್, ಕರಣ್ ಶರ್ಮಾ ಬೌಲಿಂಗ್​ನಲ್ಲಿ ಹೊರ ನಡೆದರು. ಅಲ್ಲದೆ, ರಹಾನೆ 19 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 27 ರನ್ ಚಚ್ಚಿ ಔಟಾದರು. ಅದಾಗಲೇ ಚೆನ್ನೈ ತಂಡದ ಮೊತ್ತ 10.2 ಓವರ್​ಗಳಲ್ಲಿ 99 ರನ್ ಆಗಿತ್ತು. ಬಳಿಕ ಡೇರಿಲ್ ಮಿಚೆಲ್ 22 ರನ್ ಗಳಿಸಿ ಔಟಾದರು. ಕ್ಯಾಮರೂನ್ ಗ್ರೀನ್​ ಈ ಇಬ್ಬರನ್ನೂ ಔಟ್ ಮಾಡಿದರು.

ಈ ಹಂತದಲ್ಲಿ 110ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಗೆಲುವಿಗೆ 45 ಎಸೆತಗಳಲ್ಲಿ 64 ರನ್ ಬೇಕಿತ್ತು. ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಒತ್ತಡ ಹಾಕಿಕೊಳ್ಳದೆ ಬ್ಯಾಟ್ ಬೀಸಿದರು. ಐದನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಶಿವಂ ದುಬೆ 28 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 34 ರನ್, ಜಡೇಜಾ ಅಜೇಯ 25 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆರ್​​ಸಿಬಿ ಅಗ್ರ ಕ್ರಮಾಂಕ ವೈಫಲ್ಯ

ಚೆನ್ನೈನ ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿ, ಭರ್ಜರಿ ಆರಂಭ ಪಡೆಯಿತು. ಈ ಆಟ ಹೆಚ್ಚು ಹೊರ ನಡೆಯಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿನ 35 ರನ್​ ಸಿಡಿಸಿ ಔಟಾದರು. ಮೊದಲ ವಿಕೆಟ್​ ಆಘಾತದ ನಡುವೆ ರಜತ್​ ಪಾಟೀದಾರ್​, ಗ್ಲೆನ್ ಮ್ಯಾಕ್ಸ್​​ವೆಲ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. 42 ರನ್​ಗೆ 3 ವಿಕೆಟ್​ ಕಳೆದುಕೊಂಡು ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತು.

ಎರಡು ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ ವಿರಾಟ್​ ಕೊಹ್ಲಿ ಮತ್ತು 17.50 ಕೋಟಿ ಒಡೆಯ ಕ್ಯಾಮರೂನ್ ಗ್ರೀನ್​ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಆದರೆ, ಈ ಜೋಡಿ 35 ರನ್ ಕಲೆ ಹಾಕಿತು. ಆದರೆ ಮುಸ್ತಫಿಜುರ್ ರೆಹಮಾನ್ ಮಾಡಿದ 12ನೇ ಓವರ್​​ನಲ್ಲಿ ಇಬ್ಬರು ಸಹ ಔಟಾಗಿ ಹೊರ ನಡೆದರು. ಇದರೊಂದಿಗೆ ರೆಹಮಾನ್ 4 ವಿಕೆಟ್ ಪಡೆದು ಮಿಂಚಿದರು. 78ಕ್ಕೆ 5 ವಿಕೆಟ್ ಕಳೆದುಕೊಂಡ ಆರ್​ಸಿಬಿ, ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.

ಡಿಕೆ-ಅನುಜ್ 95 ರನ್ ಜೊತೆಯಾಟ

ಟಾಪ್​-5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​ಸಿಬಿ 100 ರನ್ ಗಳಿಸುತ್ತಾ ಎಂಬ ಅನುಮಾನ ಮೂಡಿತ್ತು. ಆದರೆ ದಿನೇಶ್​ ಕಾರ್ತಿಕ್​ ಮತ್ತು ಅನುಜ್​ ರಾವತ್​ ಅವರು ಭರ್ಜರಿ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾರು ಮಾಡಿದರು. 6ನೇ ವಿಕೆಟ್​ಗೆ ಈ ಜೋಡಿ 95 ರನ್​​​ಗಳ ಪಾಲುದಾರಿಕೆ ನೀಡಿದರು. ಹಾಗಾಗಿ ಆರ್​ಸಿಬಿ 150ರ ಗಡಿ ದಾಟಿ ಕಾಂಪಿಟೇಟಿವ್ ಸ್ಕೋರ್ ಮಾಡಿತು. ಅನುಜ್ 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಹಿತ 48 ರನ್ ಸಿಡಿಸಿದರು.

ಮತ್ತೊಂದೆಡೆ ಯುವ ಆಟಗಾರನಿಗೆ ಸಖತ್ ಸಾಥ್ ನೀಡಿದ ದಿನೇಶ್​ ಕಾರ್ತಿಕ್​ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 38 ರನ್​ ಬಾರಿಸಿ ಅಜೇಯರಾಗಿ ಉಳಿದರು. ಸ್ಪಿನ್​ ಸ್ನೇಹಿ ಪಿಚ್​ ಆಗಿದ್ದರೂ ಶ್ರೀಲಂಕಾದ ಸ್ಪಿನ್ನರ್​ ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಡೇಜಾ ಅವರು ವಿಕೆಟ್ ತಮ್ಮ 4 ಓವರ್ ಮುಗಿಸಿದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮುಸ್ತಫಿಜುರ್​ 4 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಆರ್​​ಸಿಬಿ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.

mysore-dasara_Entry_Point