ಸನಾ ಜಾವೇದ್ ಮಾಜಿ ಪತಿ ಉಮೈರ್ ಜೈಸ್ವಾಲ್ ಮತ್ತು ಶೋಯೆಬ್ ಮಲಿಕ್ ಸ್ನೇಹಿತರಾಗಿದ್ದರೇ; ಗೂಗಲ್ ಹುಡುಕಿತು ಸಾಕ್ಷಿ
Shoaib Malik: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಸನಾ ಜಾವೇದ್ ಮಾತ್ರವಲ್ಲದೆ ಆಕೆಯ ಮಾಜಿ ಪತಿ ಉಮೈರ್ ಜೈಸ್ವಾಲ್ ಅವರೊಂದಿಗೆ ಸ್ನೇಹಿತರಾಗಿದ್ದರು ಎಂದು ವರದಿಯಾಗಿದೆ.
ನವದೆಹಲಿ: ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಪಾಕಿಸ್ತಾನದ ನಟಿ ಸನಾ ಜಾವೇದ್ ಅವರ ವಿವಾಹದ ಘೋಷಣೆ ಅನೇಕರನ್ನು ಅಚ್ಚರಿಗೆ ದೂಡಿದ್ದಂತೂ ಸುಳ್ಳಲ್ಲ. ಶೋಯೆಬ್ಗೆ ಇದು ಮೂರನೇ ವಿವಾಹವಾದರೆ, ಸನಾ ಜಾವೇದ್ಗೆ ಎರಡನೇ ಮದುವೆ. ಹಿರಿಯ ಆಟಗಾರ ಮೊದಲ ಮದುವೆಯನ್ನು ಆಯೇಶಾ ಸಿದ್ದಿಕಿ ಅವರೊಂದಿಗೆ ಆಗಿತ್ತು. ತದನಂತರ ಸಾನಿಯಾ ಮಿರ್ಜಾ ಅವರನ್ನು ವರಿಸಿದ್ದರು.
ಮತ್ತೊಂದೆಡೆ ಸನಾ ಅವರು ಪಾಕಿಸ್ತಾನದ ಗಾಯಕ ಉಮೈರ್ ಜೈಸ್ವಾಲ್ ಅವರನ್ನು 2020ರಲ್ಲಿ ಮದುವೆಯಾಗಿದ್ದರು. ಆದರೀಗ ಹೊಸ ವಿಷಯವೊಂದಿಗೆ ಬೆಳಕಿಗೆ ಬಂದಿದೆ. ಸನಾ ಮತ್ತು ಉಮೈರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದ್ದೇ ಶೋಯೆಬ್ ಮಲಿಕ್ ಎನ್ನುವ ಸುದ್ದಿಗಳು ವರದಿಯಾಗುತ್ತಿವೆ. ಅಂದರೆ ಶೋಯೆಬ್, ಉಮೈರ್ ಅವರ ಬೆಸ್ಟ್ ಫ್ರೆಂಡ್ ಎಂಬ ವಿಷಯ ಇದೀಗ ಹೊರ ಬಿದ್ದಿದೆ.
ಉಮೈರ್ ಮತ್ತು ಶೋಯೆಬ್ ಸ್ನೇಹಿತರು
ಸನಾ ಮತ್ತು ಮಲಿಕ್ ಇಬ್ಬರ ಸಂಬಂಧ ನಾವು ಯೋಚಿಸಿದ್ದಕ್ಕಿಂತ ಆಳವಾಗಿದೆ ಎಂಬುದು ಇದೀಗ ಗೊತ್ತಾಗಿದೆ. ಮಲಿಕ್ ಪೋಸ್ಟ್ ಮಾಡಿದ ಹಳೆಯ ಇನ್‌ಸ್ಟಾಗ್ರಾಮ್ ಸ್ಟೋರಿ ಹೊರಬಿದ್ದಿದ್ದು, ಜಾವೇದ್ ಅವರ ಹಿಂದಿನ ಮದುವೆಗೂ ಮುನ್ನವೇ ಇಬ್ಬರ ನಡುವೆ ಸಂಪರ್ಕವನ್ನು ಬಹಿರಂಗಪಡಿಸುತ್ತದೆ. ಮತ್ತೊಂದೆಡೆ ಸನಾ ಜಾವೇದ್ ಮದುವೆಯಾಗಿದ್ದ ಉಮೈರ್ ಅವರ ಸ್ನೇಹಿತರೂ ಆಗಿದ್ದ ಶೋಯೆಬ್ ಮಲಿಕ್.
ಹೌದು, ಸನಾ ಜಾವೇದ್ ಅವರ ಮಾಜಿ ಪತಿ ಉಮೈರ್ ಜೈಸ್ವಾಲ್ ಮತ್ತು ಮಲಿಕ್ ಉತ್ತಮ ಸ್ನೇಹಿತರು. ಸಾಮಾಜಿಕ ಜಾಲತಾಣವು ಒಂದು ವರ್ಷದ ಹಿಂದಿನ ಮಲಿಕ್ ಅವರ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಬಹಿರಂಗಪಡಿಸಿದಾಗ ಪುರಾವೆಗಳು ಬೆಳಕಿಗೆ ಬಂದವು. ಮಲಿಕ್, ಸನಾಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅಂದು ಸನಾ ಪತಿ ಉಮೈರ್ ಜೈಸ್ವಾಲ್ಗೂ ಟ್ಯಾಗ್ ಮಾಡಲಾಗಿತ್ತು.
ಈ ಫೋಟೋ ಹೇಳುವುದೇನೆಂದರೆ, ಒಂದು ವರ್ಷದ ಹಿಂದೆ ಮಲಿಕ್ ಸನಾ ಜಾವೇದ್ ಅವರೊಂದಿಗೆ ಮಾತ್ರವಲ್ಲ, ಅವರ ಪತಿಯೊಂದಿಗೂ ಸ್ನೇಹಿತರಾಗಿದ್ದರು ಎಂಬುದನ್ನು ಇದು ದೃಢಪಡಿಸುತ್ತದೆ. ಮಾರ್ಚ್ 25ರಂದು ಜಾವೇದ್ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. 'ಹ್ಯಾಪಿ ಬರ್ತ್ ಡೇ' ಸ್ಟಿಕ್ಕರ್ ನೊಂದಿಗೆ ಹಂಚಿಕೊಂಡಿದ್ದರು. ಉಮೈರ್ ಜೈಸ್ವಾಲ್ ಅವರನ್ನು ಟ್ಯಾಗ್ ಮಾಡಿದ್ದರು. , ಆ ಅವಧಿಯಲ್ಲಿ ಮೂವರ ನಡುವಿನ ನಿಕಟ ಸಂಪರ್ಕವನ್ನು ಬಹಿರಂಗಪಡಿಸಿದೆ.
ಶೋಯೆಬ್ ಮತ್ತು ಸನಾ ಅವರ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿಟ್ ಬಳಕೆದಾರರು, "ಸನಾ ಜಾವೇದ್ ನಿಜವಾಗಿಯೂ ವಿಚ್ಛೇದನ ಪಡೆದಿದ್ದಾರೆ ಎಂಬ ಅಂಶದಿಂದ ನನಗೆ ಆಘಾತವಾಗಿದೆ. ಏಕೆಂದರೆ ಉಮೈರ್ ಅವರಿಂದ ಬೇರ್ಪಡುವ ವದಂತಿಗಳಿವೆ. ಆದರೆ ಅಧಿಕೃತ ವಿಚ್ಛೇದನ ದೃಢೀಕರಣವಾಗಿಲ್ಲ. ಮಲಿಕ್ ಸಂಬಂಧ ಹೊಂದಿದ್ದರ ಪರಿಣಾಮವೇ ಸನಾ, ಉಮೈರ್ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಕಾರಣವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಆಕೆಯ ನನ್ನನ್ನು ನಿರಾಶೆಗೊಳಿಸಿದ್ದಾಳೆ. ನಾನು ಪಾಕಿಸ್ತಾನಿ ಅಲ್ಲ. ಆದರೆ, ಯುಕೆಯಿಂದ ಪಾಕಿಸ್ತಾನದ ನಾಟಕಗಳನ್ನು ನೋಡುತ್ತೇನೆ. ಆಕೆಯ ನಟಿಸಿದ್ದ ಕೆಲ ಪ್ರದರ್ಶನಗಳನ್ನು ನೋಡಿದ ನಂತರ ಸನಾ ಅವರನ್ನು ನಿಜವಾಗಿಯೂ ಇಷ್ಟಪಟ್ಟೆ. ಆದರೀಗ ಆಕೆಯ ನಡೆ ನಿರಾಸೆ ಮೂಡಿಸಿದೆ. ಇಬ್ಬರೂ ಮೋಸಗಾರರು ಎಂದು ಅಭಿಮಾನಿಯೊಬ್ಬರ ಬೇಸರ ಹೊರಹಾಕಿದ್ದಾರೆ.
ಶೋಯೆಬ್ ಮಲಿಕ್ ಮತ್ತು ಟೆನಿಸ್ ಚಾಂಪಿಯನ್ ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆ ಎಂಬುದರ ಕುರಿತು ಸ್ಪಷ್ಟವಾಗಿದೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದಿರುವುದನ್ನು ಟೆನಿಸ್ ಆಟಗಾರ್ತಿಯ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ. ಆದರೆ ಸನಾ ಜಾವೇದ್ ಮತ್ತು ಉಮೈರ್ ಜೈಸ್ವಾಲ್ ಯಾವಾಗ ವಿಚ್ಛೇದನ ಪಡೆದರು ಎಂಬುದು ಸ್ಪಷ್ಟವಾಗಿಲ್ಲ.