ಕನ್ನಡ ಸುದ್ದಿ  /  Cricket  /  Shoaib Malik Wife Sana Javed Face Chants Of Sania Mirza By Pakistan Fans At Psl 2024 Cricket Match Viral Video Jra

‌Video: ಮೈದಾನದಲ್ಲಿ ಸನಾ ಜಾವೇದ್ ನೋಡಿ ಸಾನಿಯಾ ಮಿರ್ಜಾ ಎಂದು ಘೋಷಣೆ ಕೂಗಿದ ಪಾಕ್‌ ಅಭಿಮಾನಿಗಳು; ವಿಡಿಯೋ ವೈರಲ್

Sana Javed viral video: ಪಾಕಿಸ್ತಾನ ನಟಿ ಸನಾ ಜಾವೇದ್, ಪಿಎಸ್‌ಎಲ್‌ ಕ್ರಿಕೆಟ್ ಪಂದ್ಯದಲ್ಲಿ ಹಾಜರಾಗಿದ್ದರು. ಈ ವೇಳೆ ಪಾಕಿಸ್ತಾನ ಅಭಿಮಾನಿಗಳು 'ಸಾನಿಯಾ ಮಿರ್ಜಾ' ಎಂಬ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೈದಾನದಲ್ಲಿ ಸನಾ ಜಾವೇದ್ ನೋಡಿ ಸಾನಿಯಾ ಮಿರ್ಜಾ ಎಂದು ಘೋಷಣೆ ಕೂಗಿದ ಪಾಕ್‌ ಅಭಿಮಾನಿಗಳು;
ಮೈದಾನದಲ್ಲಿ ಸನಾ ಜಾವೇದ್ ನೋಡಿ ಸಾನಿಯಾ ಮಿರ್ಜಾ ಎಂದು ಘೋಷಣೆ ಕೂಗಿದ ಪಾಕ್‌ ಅಭಿಮಾನಿಗಳು; (X)

ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಭಾವಿ ಪತ್ನಿ ಸನಾ ಜಾವೇದ್ (Sana Javed), ಇತ್ತೀಚೆಗೆ ನಡೆದ ಪಿಎಸ್‌ಎಲ್‌ (PSL) ಪಂದ್ಯದ ವೇಳೆ ಮೈದಾನದಲ್ಲಿ ಹಾಜರಿದ್ದರು. ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಪಂದ್ಯ ವೀಕ್ಷಿಸಲು ಬಂದ ನಟಿ ಸನಾ ಮುಂದೆ, ಪಾಕಿಸ್ತಾನ ಅಭಿಮಾನಿಗಳು ಸಾನಿಯಾ ಮಿರ್ಜಾ ಎಂದು ಜೋರಾಗಿ ಘೋಷಣೆ ಕೂಗಿ ಚಾಣಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಿಎಸ್‌ಎಲ್‌ನಲ್ಲಿ ನಟಿ ಸನಾ ಅವರ ಪತಿ ಶೋಯೆಬ್ ಮಲಿಕ್‌ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಪತಿಯನ್ನು ಬೆಂಬಲಿಸಲು ಸನಾ ಜಾವೆದ್‌ ಮೈದಾನಕ್ಕೆ ಬಂದಿದ್ದರು. ಈ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರಲ್ಲಿ ಒಂದು ಗುಂಪು ಸಾನಿಯಾ ಮಿರ್ಜಾ ಹೆಸರನ್ನು ಕೂಗುತ್ತಾ ಸನಾ ಅವರನ್ನು ರೇಗಿಸಲು ನೋಡಿದ್ದಾರೆ. ಅಲ್ಲದೆ ಅವರ ವಿಡಿಯೋ ಚಿತ್ರೀಕರಣ ಕೂಡಾ ಮಾಡಿದ್ದಾರೆ.

ಘೋಷಣೆ ಕೇಳುತ್ತಿದ್ದಂತೆಯೇ ಸನಾ ವೀಕ್ಷಕರತ್ತ ತಿರುಗಿ ನೋಡುತ್ತಾರೆ. ಅವರ ಮುಖದಲ್ಲಿ ಯಾವುದೇ ರೀತಿಯ ಕೋಪವಾಗಲಿ, ಭಾವನೆಯಾಗಲಿ ಕಾಣಿಸಲಿಲ್ಲ. ಅವರತ್ತ ಗಮನ ಕೊಡದೆ ಮುಂದುವರೆಯುತ್ತಾರೆ. ಸನಾ ಅವರ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಅವರು ವಿಐಪಿ ಸೋಫಾದಲ್ಲಿ ಕುಳೀತಾಗಲೂ ಘೋಷಣೆಗಳು ಕೇಳುತ್ತಿರುತ್ತವೆ. ಈ ವೇಳೆ ಅವರು ತಮ್ಮ ಸಮೀಪ ನಿಂತಿದ್ದ ವ್ಯಕ್ತಿಯೊಂದಿಗೆ ನಗುತ್ತಾ ಮಾತನಾಡುತ್ತಾರೆ. ಅಭಿಮಾನಿಗಳತ್ತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ಇದನ್ನೂ ಓದಿ | PSL: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಾಬರ್ ಅಜಾಮ್ ಹೊಸ ದಾಖಲೆ; ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ

ಸನಾ ಬೆಂಬಲಕ್ಕೆ ನಿಂತ ಅಭಿಮಾನಿಗಳು

ಅತ್ತ ಭಾರತೀಯ ಮತ್ತು ಪಾಕಿಸ್ತಾನಿ ಅಭಿಮಾನಿಗಳ ಟೀಕೆಗಳ ಹೊರತಾಗಿಯೂ, ಸನಾ ಅವರ ಕೆಲವು ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. “ಸಾಮಾಜಿಕ ಮಾಧ್ಯಮದಲ್ಲಿನ ಎಲ್ಲಾ ಟೀಕೆಗಳ ಹೊರತಾಗಿಯೂ, ಪತಿ ಶೋಯೆಬ್‌ ಮಲಿಕ್‌ ಅವರನ್ನು ಬೆಂಬಲಿಸಲು ಸನಾ ಜಾವೇದ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದನ್ನು ನೋಡಲು ಖುಷಿಯಾಗುತ್ತಿದೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಸನಾ ಮತ್ತು ಶೋಯೆಬ್ ಮದುವೆ

ಸನಾ ಮತ್ತು ಶೋಯೆಬ್ ಮಲಿಕ್‌ ಜನವರಿ ತಿಂಗಳಲ್ಲಿ ವಿವಾಹವಾದರು. ಅದಕ್ಕೂ ಮುನ್ನವೇ, ತಿಂಗಳುಗಳ ಹಿಂದೆ ಸಾನಿಯಾ ಮಿರ್ಜಾ ಮತ್ತು ಮಲಿಕ್‌ ಬೇರ್ಪಟ್ಟಿದ್ದಾರೆ ಸಾನಿಯಾ ಕುಟುಂಬ ದೃಢಪಡಿಸಿದೆ. ಕ್ರಿಕೆಟಿಗ ಮತ್ತು ನಟಿ ಸನಾ ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ವಿವಾಹವನ್ನು ಘೋಷಿಸಿದರು. ಇತ್ತ ಸಾನಿಯಾ ಹೈದರಾಬಾದ್‌ಗೆ ಮರಳಿದ್ದಾರೆ.

ಇದನ್ನೂ ಓದಿ | Rishabh Pant: ಐಪಿಎಲ್‌ಗೂ ಮುನ್ನ ಮೊದಲ ಪೂರ್ಣ ಪಂದ್ಯ ಆಡಿದ ರಿಷಭ್ ಪಂತ್; ಟಿ20 ವಿಶ್ವಕಪ್ ಆಯ್ಕೆಗೆ ಸಿದ್ಧ

ಇದಕ್ಕೂ ಮುನ್ನ 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಶೋಯೆಬ್ ವಿವಾಹವಾಗಿದ್ದರು. ಹೈದರಾಬಾದ್‌ನಲ್ಲಿ ವಿವಾಹವಾದ ಬಳಿಕ ದುಬೈಗೆ ಸ್ಥಳಾಂತರಗೊಂಡರು. ಇವರಿಗೆ ಇಜಾನ್ ಮಿರ್ಜಾ ಮಲಿಕ್ ಎಂಬ ಮಗನಿದ್ದಾನೆ.

IPL_Entry_Point