ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ಗೆ ‘ಬಿಸಿಸಿಐ’ನಿಂದ ಗುಡ್ ನ್ಯೂಸ್; ಆದರೆ ಈ ಆಟಗಾರರಿಗೆ ಆಘಾತ?
ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಗೆ ಬಿಸಿಸಿಐನಿಂದ ಮತ್ತೆ ಕೇಂದ್ರೀಯ ಒಪ್ಪಂದ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಮೊಹಮ್ಮದ್ ಶಮಿ ಸೇರಿದಂತೆ ಹಲವು ಆಟಗಾರರಿಗೆ ಈ ಒಪ್ಪಂದದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಆವೃತ್ತಿಗೆ ವಾರ್ಷಿಕ ಕೇಂದ್ರೀಯ ಒಪ್ಪಂದವನ್ನು ಘೋಷಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಆ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಹೆಸರೇ ಇರಲಿಲ್ಲ. ಬಿಸಿಸಿಐ ಆದೇಶಗಳನ್ನು ಧಿಕ್ಕರಿಸಿದ ಕಾರಣ, ಇಬ್ಬರನ್ನೂ ಕಾಂಟ್ರಾಕ್ಟ್ನಿಂದ ಹೊರಗಿಡಲಾಗಿತ್ತು. ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡದ ಕಾರಣ ಬೋರ್ಡ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಆದಾಗ್ಯೂ, ಈಗ ಬಿಸಿಸಿಐನಿಂದ ಅಯ್ಯರ್ ಮತ್ತು ಇಶಾನ್ಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಇಬ್ಬರಿಗೂ ಮತ್ತೆ ಕೇಂದ್ರೀಯ ಒಪ್ಪಂದ ಸಿಗುವ ನಿರೀಕ್ಷೆಯಿದೆ. ಆದರೆ ಹಲವು ಆಟಗಾರರನ್ನು ಈ ವಾರ್ಷಿಕ ಒಪ್ಪಂದದಿಂದ ಹೊರಗಿಡಬಹುದು. ಶ್ರೇಯಸ್ ಅಯ್ಯರ್ ಪ್ರಸ್ತುತ ಭಾರತದ ಏಕದಿನ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಇಶಾನ್ ಕಿಶನ್ ಐಪಿಎಲ್ 2025ರ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮತ್ತೆ ಭಾರತ ತಂಡಕ್ಕೆ ಮರಳುವಿಕೆಯ ಸಿಗ್ನಲ್ ನೀಡಿದ್ದಾರೆ.
ಅಯ್ಯರ್ಗೆ ಬಿ ದರ್ಜೆಯ ಒಪ್ಪಂದ
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶ್ರೇಯಸ್ ಮತ್ತು ಇಶಾನ್ರನ್ನು ಬಿಸಿಸಿಐ ಕೇಂದ್ರೀಯ ಒಪ್ಪಂದದ ಆಟಗಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಬಿಸಿಸಿಐ ಶೀಘ್ರದಲ್ಲೇ ಪಟ್ಟಿ ಘೋಷಿಸಲಿದ್ದು, ಅಯ್ಯರ್ಗೆ ಬಿ ಗ್ರೇಡ್ ಒಪ್ಪಂದ ಸಿಗುವ ಸಾಧ್ಯತೆಯಿದೆ. ಇದರಲ್ಲಿ ಆಟಗಾರರಿಗೆ ವಾರ್ಷಿಕ 3 ಕೋಟಿ ರೂಪಾಯಿ ಸಿಗುತ್ತದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಯ್ಯರ್, ಭಾರತದ ಅಗ್ರ ಸ್ಕೋರರ್ ಆಗಿದ್ದರು.
ಇದನ್ನೂ ಓದಿ: ಐಪಿಎಲ್ ಅಂಕಪಟ್ಟಿ; ಟೇಬಲ್ ಟಾಪರ್ ಯಾರು?
ಬಿಸಿಸಿಐ ಮೂಲಗಳು ಹೇಳಿರುವಂತೆ, 'ಅಯ್ಯರ್ ಸಂಪೂರ್ಣ ದೇಶೀಯ ಸೀಸನ್ ಆಡಿದ್ದಾರೆ. ಬಿಸಿಸಿಐ ಕೂಡ ಇದನ್ನೇ ನಿರೀಕ್ಷಿಸಲಾಗಿತ್ತು. ರಣಜಿ, ದುಲೀಪ್ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ, ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಅಯ್ಯರ್, ಚಾಂಪಿಯನ್ಸ್ ಟ್ರೋಫಿಯಲ್ಲೂ ಅತ್ಯುತ್ತಮ ಆಟದ ಮೂಲಕ ಗಮನ ಸೆಳೆದರು.
ಅಶ್ವಿನ್, ಶಮಿ ಸೇರಿದಂತೆ ನಾಲ್ವರಿಗೆ ಗೇಟ್ಪಾಸ್
ನಿವೃತ್ತರಾದ ರವಿಚಂದ್ರನ್ ಅಶ್ವಿನ್ ನಿವೃತ್ತಿ ಪಡೆದಿರುವ ಕಾರಣ ಅವರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. ಆದರೆ ವೇಗಿ ಮೊಹಮ್ಮದ್ ಶಮಿ ಅವರೂ ಬಿಸಿಸಿಐನ ಕೇಂದ್ರೀಯ ಒಪ್ಪಂದದಿಂದ ವಂಚಿತರಾಗಬಹುದು ಎಂದು ಉಲ್ಲೇಖಿಸಲಾಗಿದೆ. ಏಕೆಂದರೆ 2024ರಲ್ಲಿ ಗಾಯಗೊಂಡಿದ್ದ ಅವರು, 2025ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಮಾತ್ರ ಮೈದಾನಕ್ಕೆ ಮಳಿದ್ದರು.
ಶಮಿ ಜೊತೆಗೆ ಶಾರ್ದೂಲ್ ಠಾಕೂರ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಸಹ ಹೊರಗಿಡಬಹುದು. ಈ ಇಬ್ಬರು ಆಟಗಾರರು ಹೆಚ್ಚು ಕ್ರಿಕೆಟ್ ಆಡಿಲ್ಲ. ಒಂದು ವೇಳೆ ಶಮಿ ಅವರನ್ನು ಸೇರಿಸಿದ್ದೇ ಆದರೆ ಸಿ ಗ್ರೇಡ್ ಕೇಂದ್ರೀಯ ಒಪ್ಪಂದ ಅವರಿಗೆ ಸಿಗಬಹುದು. ಟಿ20 ವಿಶ್ವಕಪ್ 2024ರ ಗೆಲುವಿನ ಬಳಿಕ ಟಿ20ಐನಿಂದ ನಿವೃತ್ತಿಯಾದರೂ, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ A+ ಒಪ್ಪಂದದಲ್ಲೇ ಮುಂದುವರೆಯುವ ಸಾಧ್ಯತೆ ಇದೆ.
ಜಸ್ಪ್ರೀತ್ ಬುಮ್ರಾ ಕೂಡ ಎ ಪ್ಲಸ್ ದರ್ಜೆಯಲ್ಲೇ ಮುಂದುವರೆಯಲಿದ್ದಾರೆ. ಇದರರ್ಥ ಈ ಮೂವರು ಆಟಗಾರರು ವಾರ್ಷಿಕ 7 ಕೋಟಿ ರೂಪಾಯಿ ಗಳಿಸಲಿದ್ದಾರೆ. ವಿರಾಟ್ ಮತ್ತು ರೋಹಿತ್ ರೀತಿಯಲ್ಲಿ ರವೀಂದ್ರ ಜಡೇಜಾ ಕೂಡ ಟಿ20ಐ ನಿಂದ ನಿವೃತ್ತರಾಗಿದ್ದಾರೆ. ಆದರೂ ಬಿಸಿಸಿಐನಿಂದ ಅವರಿಗೂ ಕೇಂದ್ರೀಯ ಒಪ್ಪಂದದ ಪಟ್ಟಿಯಲ್ಲಿ ಸ್ಥಾನ ಸಿಗುವ ಸಂಪೂರ್ಣ ಸಾಧ್ಯತೆ ಇದೆ.

ವಿಭಾಗ