ರಣಜಿಗೆ ಚಕ್ಕರ್, ಐಪಿಎಲ್​ ಜಾಹೀರಾತು ಶೂಟಿಂಗ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿಗೆ ಚಕ್ಕರ್, ಐಪಿಎಲ್​ ಜಾಹೀರಾತು ಶೂಟಿಂಗ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ

ರಣಜಿಗೆ ಚಕ್ಕರ್, ಐಪಿಎಲ್​ ಜಾಹೀರಾತು ಶೂಟಿಂಗ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ

Shreyas Iyer : ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್​​ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶ್ರೇಯಸ್ ಅಯ್ಯರ್, ಕೊನೆಯ ಮೂರು ಪಂದ್ಯಗಳಿಗೆ ತನಗೆ ಬೆನ್ನು ನೋವು ಎಂದು ಹೊರಬಿದ್ದರು. ಆದರೆ ಕೆಕೆಆರ್​ ತಂಡದ ನಾಯಕ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಈಗ ಗೊತ್ತಾಗಿದೆ.

ರಣಜಿಗೆ ಚಕ್ಕರ್, ಐಪಿಎಲ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ
ರಣಜಿಗೆ ಚಕ್ಕರ್, ಐಪಿಎಲ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ

ಐಪಿಎಲ್ 2024 (IPL 2024) ಆರಂಭಕ್ಕೆ ತಿಂಗಳಿಂತ ಕಡಿಮೆ ಅವಧಿ ಇದೆ. ಟೂರ್ನಿಯ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮಾರ್ಚ್ 22ರಿಂದ ನಗದು ಸಮೃದ್ಧ ಲೀಗ್​ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಐಪಿಎಲ್‌ ವೇಳಾಪಟ್ಟಿ ಪ್ರಕಟಗೊಂಡ ತಕ್ಷಣವೇ ಕ್ರಿಕೆಟಿರ್ಸ್ ಜಾಹೀರಾತು ಶೂಟಿಂಗ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು ಎಂಬುದು ಅಚ್ಚರಿ ಮೂಡಿಸಿದೆ.

ಅಯ್ಯರ್​ ಹೇಳಿದ್ದು ಸುಳ್ಳು

ಫೆಬ್ರವರಿ 23ರಿಂದ ಆರಂಭಗೊಂಡ ರಣಜಿ ಟ್ರೋಫಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡಲು ಹಿಂದೇಟು ಹಾಕಿದ್ದರು. ಬರೋಡಾ ವಿರುದ್ಧದ ಪಂದ್ಯಕ್ಕೂ ಮುನ್ನ ತನಗೆ ಬೆನ್ನು ನೋವು ಎಂದು ಹೇಳಿ ಹಿಂದೆ ಸರಿದರು. ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್​​ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅಯ್ಯರ್, ಕೊನೆ ಮೂರು ಪಂದ್ಯಗಳಿಗೆ ತನಗೆ ಬೆನ್ನು ನೋವು ಎಂದು ಹೊರಬಿದ್ದರು. ಆದರೆ ಕೆಕೆಆರ್​ ತಂಡದ ನಾಯಕ ಅಯ್ಯರ್ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಈಗ ಗೊತ್ತಾಗಿದೆ.

ರಣಜಿ ಕ್ವಾರ್ಟರ್​ಫೈನಲ್​ ಪಂದ್ಯದಿಂದ ಹಿಂದೆ ಸರಿದ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಬಿಸಿಸಿಐಗೆ ಇ-ಮೇಲ್​ ಒಂದನ್ನು ಕಳುಹಿಸಿತ್ತು. ಅವರಿಗೆ ಗಾಯದ ಸಮಸ್ಯೆ ಇಲ್ಲ. ಸಂಪೂರ್ಣ ಫಿಟ್ ಆಗಿದ್ದಾರೆ. ಆಯ್ಕೆ ಲಭ್ಯರಿದ್ದಾರೆ ಎಂದು ಆ ಮೇಲ್​ನಲ್ಲಿ ಉಲ್ಲೇಖಿಸಿತ್ತು. ಈ ಬಗ್ಗೆ ಈಗಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಅಲ್ಲದೆ, ರಣಜಿ ಆಡುವಂತೆ ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಆದರೆ ಇಲ್ಲದ ಗಾಯವನ್ನು ಉಲ್ಲೇಖಿಸಿ ರಣಜಿಗೆ ಚಕ್ಕರ್ ಹಾಕಿ, ಐಪಿಎಲ್ ಜಾಹೀರಾತು ಚಿತ್ರೀಕರಣಗಳಿಗೆ ಹಾಜರ್ ಆಗಿದ್ದಾರೆ. ಸದ್ಯ ಅಯ್ಯರ್​​ರನ್ನು ಸೆಂಟ್ರಲ್​ ಕಾಂಟ್ರಾಕ್ಟ್​ನಿಂದ ಕೈಬಿಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ರಣಜಿಗೆ ಚಕ್ಕರ್, ಐಪಿಎಲ್​ಗೆ ಹಾಜರ್

ಗಾಯವೆಂದು ಹೇಳಿದ ಮೇಲೆ ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುತ್ತಾರೆ ಎಂದುಕೊಂಡಿದ್ದ ಕೆಲವರಿಗೆ ಈಗ ಅಚ್ಚರಿಯಾಗಿದೆ. ಗಾಯದ ನೆಪದಲ್ಲಿ ಭಾರತ ತಂಡದಿಂದ ಬೇರ್ಪಟ್ಟಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಹೀರಾತಿನ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಯ್ಯರ್ ಲುಂಗಿ ಧರಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿರುವ ಅಯ್ಯರ್, ಇದೇ ಬೆನ್ನು ನೋವಿನ ಕಾರಣ ಕಳೆದ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಈ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.

ಶ್ರೇಯಸ್ ಅಯ್ಯರ್ ಮಾತ್ರವಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಲಕ್ನೋ ಸೂಪರ್ ಜೇಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡ ಜಾಹೀರಾತು ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಅವರ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಂತ್​ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಟೆಸ್ಟ್ ತಂಡದ ಭಾಗವಲ್ಲ. ಆದರೆ ಟೆಸ್ಟ್ ತಂಡದ ಭಾಗವಾಗಿದ್ದ ರಾಹುಲ್ ಕೂಡ ಗಾಯವೆಂದು ಹೇಳಿ ಶೂಟಿಂಗ್​​ನಲ್ಲಿ​ ಬ್ಯುಸಿಯಾಗಿರುವುದು ಅಚ್ಚರಿ ಮೂಡಿಸಿದೆ.

Whats_app_banner