ಕನ್ನಡ ಸುದ್ದಿ  /  Cricket  /  Shreyas Iyer Set To Play Ranji Trophy Semi Final In Mumbai Vs Tamil Nadu After Bcci Prefer Domestic Cricket Over Ipl Jra

ಕೊನೆಗೂ ರಣಜಿ ಆಡಲು ಮುಂದಾದ ಶ್ರೇಯಸ್‌ ಅಯ್ಯರ್; ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಮುಂಬೈ ಪರ ಕಣಕ್ಕೆ

Shreyas Iyer: ಮುಂಬೈ ಮತ್ತು ತಮಿಳುನಾಡು ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಸದ್ಯ ಫಾರ್ಮ್ ಕಳೆದುಕೊಂಡಿರುವ ಅವರು, ಲಯ ಕಂಡುಕೊಳ್ಳುವ ಭರವಸೆಯಲ್ಲಿದ್ದಾರೆ. ಆ ಬಳಿಕ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಕೊನೆಗೂ ರಣಜಿ ಆಡಲು ಮುಂದಾದ ಶ್ರೇಯಸ್‌ ಅಯ್ಯರ್
ಕೊನೆಗೂ ರಣಜಿ ಆಡಲು ಮುಂದಾದ ಶ್ರೇಯಸ್‌ ಅಯ್ಯರ್ (AFP)

ಭಾರತ ಕ್ರಿಕೆಟ್‌ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್‌ ಅಯ್ಯರ್ (Shreyas Iyer) ರಣಜಿ ಪಂದ್ಯ ಆಡಲು ಸಜ್ಜಾಗಿದ್ದಾರೆ. ದೇಶೀಯ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಐಪಿಎಲ್‌ಗೆ ಆದ್ಯತೆ ನೀಡದಂತೆ ಕೇಂದ್ರ ಗುತ್ತಿಗೆ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿತ್ತು. ಈ ನಡುವೆ ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಟೀಮ್‌ ಇಂಡಿಯಾದ ಬ್ಯಾಟರ್ ಅಯ್ಯರ್ ರಣಜಿ ಪಂದ್ಯ ಆಡಲು ಮುಂದಾಗಿದ್ದಾರೆ.

ಬರೋಡಾ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯವು ಡ್ರಾಗೊಂಡ ಬಳಿಕ, ಮುಂಬೈ ತಂಡವು ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ಮುಂಬೈ ತಂಡದ ನಿರ್ಣಾಯಕ ಸೆಮಿಫೈನಲ್‌ ಕದನಕ್ಕೆ ಅಯ್ಯರ್ ತಂಡ ಸೇರಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಅಯ್ಯರ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಸರ್ಫರಾಜ್ ಖಾನ್, ರಜತ್ ಪಾಟೀದಾರ್ ಮತ್ತು ಆಕಾಶ್ ದೀಪ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಯ್ತು. ಈ ಮೂರೂ ಆಟಗಾರರು ತಂಡಲ್ಲಿ ಆಡುವ ಅವಕಾಶ ಪಡೆದರು. ಅಲ್ಲದೆ ರೋಹಿತ್ ಶರ್ಮಾ ಪಡೆಯು ಸತತ ಮೂರು ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿತು.

ಇದನ್ನೂ ಓದಿ | Ranji Trophy: 10, 11ನೇ ಕ್ರಮಾಂಕದ ಬ್ಯಾಟರ್‌ಗಳ ಶತಕ ವೈಭವ; ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ

ಬೆನ್ನು ನೋವಿನ ಕಾರಣದಿಂದಾಗಿ ಮೂರನೇ ಟೆಸ್ಟ್‌ ಪಂದ್ಯದಿಂದ ಅಯ್ಯರ್‌ ಹೊರಬಿದ್ದರು. ಅದಕ್ಕೂ ಮುನ್ನ ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 35 ಮತ್ತು 13 ರನ್ ಗಳಿಸಿದ್ದರು. ಆ ಬಳಿಕ ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್ ನಲ್ಲಿ 27 ಮತ್ತು 29 ರನ್ ಗಳಿಸಲಷ್ಟೇ ಶಕ್ತರಾದರು. 3ನೇ ಟೆಸ್ಸ್ಟ್‌ ಪಂದ್ಯಕ್ಕೂ ಮುನ್ನ ಅವರು ಆಯ್ಕೆಗೆ ಲಭ್ಯವಿದ್ದರೂ, ಪಂದ್ಯದಿಂದ ಹೊರಬಿದ್ದರು.

ಸೆಮೀಸ್‌ ಆಡಲಿದ್ದಾರೆ ಅಯ್ಯರ್

ಬೆನ್ನುನೋವಿನಿಂದಾಗಿ‌ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದ ಅಯ್ಯರ್, ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಅಯ್ಯರ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದಾರೆ. ಬಿಕೆಸಿ ಮೈದಾನದಲ್ಲಿ ಶನಿವಾರ ನಡೆಯಲಿರುವ ಸೆಮಿ ಕದನದಲ್ಲಿ ತಮಿಳುನಾಡು ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಯ್ಯರ್ ಅವರು ಆಯ್ಕೆಗೆ ಲಭ್ಯವಿರುವುದಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದಾರೆ. ಅಯ್ಯರ್ ಈಗ ಫಿಟ್ ಆಗಿದ್ದಾರೆ. ಅಲ್ಲದೆ ಮುಂಬೈ ತಂಡದ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಖಚಿತಪಡಿಸಿದ್ದಾರೆ, ಎಂದು ಮೂಲಗಳು ತಿಳಿಸಿವೆ.

ಪಂದ್ಯ ಡ್ರಾ, ಸೆಮೀಸ್‌ಗೆ ಮುಂಬೈ

ಬರೋಡಾ ಮತ್ತು ಮುಂಬೈ ತಂಡಗಳ ನಡುವಿನ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ, ಗೆಲುವಿಗೆ 606 ರನ್‌ಗಳ ಬೃಹತ್‌ ಗುರಿ ಪಡೆದ ಬರೋಡಾ ತಂಡವು 3 ವಿಕೆಟ್‌ ಕಳೆದುಕೊಂಡು 121 ರನ್‌ ಗಳಿಸಿತು. ಹೀಗಾಗಿ ಪಂದ್ಯ ಡ್ರಾಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡ ಮುನ್ನಡೆ ಸಾಧಿಸಿದ್ದ ಹಿನ್ನೆಲೆಯಲ್ಲಿ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿತು.

IPL_Entry_Point