ಶುಭ್ಮನ್ ಗಿಲ್ ಟು ರಶೀದ್ ಖಾನ್; ಹಾರ್ದಿಕ್ ನಾಯಕತ್ವದ ಸ್ಥಾನ ತುಂಬಬಲ್ಲ ಐವರು ಆಟಗಾರರು ಇವರೇ
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್ ಗಿಲ್ ಟು ರಶೀದ್ ಖಾನ್; ಹಾರ್ದಿಕ್ ನಾಯಕತ್ವದ ಸ್ಥಾನ ತುಂಬಬಲ್ಲ ಐವರು ಆಟಗಾರರು ಇವರೇ

ಶುಭ್ಮನ್ ಗಿಲ್ ಟು ರಶೀದ್ ಖಾನ್; ಹಾರ್ದಿಕ್ ನಾಯಕತ್ವದ ಸ್ಥಾನ ತುಂಬಬಲ್ಲ ಐವರು ಆಟಗಾರರು ಇವರೇ

Hardik Pandya: ಒಂದು ವೇಳೆ ಹಾರ್ದಿಕ್ ಪಾಂಡ್ಯ ತೊರೆದು ಮುಂಬೈ ಇಂಡಿಯನ್ಸ್ ಸೇರಿದರೆ ಗುಜರಾತ್ ಟೈಟಾನ್ಸ್​ ತಂಡವನ್ನು ಮುನ್ನಡೆಸುವವರು ಯಾರು? ಮುಂದಿನ ನಾಯಕನಾಗುವ 5 ಆಟಗಾರರ ನೋಟ ಇಲ್ಲಿದೆ:

ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್.
ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್.

ಇಂಡಿಯನ್ ಪ್ರೀಮಿಯರ್ ಲೀಗ್​ (Indian Premier League) ನಾಯಕನಾದ ಮೊದಲ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್‌ಗೆ (Gujarat Titans) ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದ ಸ್ಟಾರ್ ಇಂಡಿಯನ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), 2ನೇ ಸೀಸನ್‌ನಲ್ಲೂ ತಂಡವನ್ನು ಫೈನಲ್​ಗೇರಿಸಿದ್ದರು. ಆದರೀಗ 3ನೇ ಆವೃತ್ತಿಗೂ ಮುನ್ನವೇ ಫ್ರಾಂಚೈಸಿ ತೊರೆದು ಮುಂಬೈ ಇಂಡಿಯನ್ಸ್‌ಗೆ (Mumbai Indians) ಮರಳಲು ಸಿದ್ಧರಾಗಿದ್ದಾರೆ.

30 ವರ್ಷದ ಕ್ರಿಕೆಟಿಗ 2015ರಲ್ಲಿ ಮುಂಬೈ ತಂಡದೊಂದಿಗೆ ಕಣಕ್ಕಿಳಿಯುವ ಮೂಲಕ ಪಾದಾರ್ಪಣೆ ಮಾಡಿದರು. 2015 ರಿಂದ 2021ರವರೆಗೂ ಮುಂಬೈ ಪರ ಆಡಿದ್ದು 4 ಬಾರಿ ಟ್ರೋಫಿ ಗೆದ್ದಿದ್ದಾರೆ. ಇದೀಗ ಅಹ್ಮದಾಬಾದ್ ಮೂಲಕ ಫ್ರಾಂಚೈಸ್‌ನೊಂದಿಗೆ ತಮ್ಮ 2 ವರ್ಷಗಳ ಸಂಬಂಧ ಮುರಿದುಕೊಳ್ಳಲು ಸಜ್ಜಾಗಿದ್ದಾರೆ. ಅದಕ್ಕಾಗಿ 15 ಕೋಟಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಾರ್ದಿಕ್ ತೊರೆದರೆ ಗುಜರಾತ್​ ತೊರೆದರೆ ಭಾರಿ ಹಿನ್ನಡೆಯಾಗಲಿದೆ. ಬೌಲಿಂಗ್​, ಬ್ಯಾಟಿಂಗ್, ಫೀಲ್ಡಿಂಗ್, ಕ್ಯಾಪ್ಟನ್ ಎಲ್ಲರದಲ್ಲೂ ಬೊಂಬಾಟ್ ಪ್ರದರ್ಶನ ನೀಡುವ ಹಾರ್ದಿಕ್​, ವಿಶ್ವ ದರ್ಜೆಯ ಆಟಗಾರ ಎನಿಸಿಕೊಂಡಿದ್ದಾರೆ. ಒಂದು ವೇಳೆ ಹಾರ್ದಿಕ್, ಮುಂಬೈ ಸೇರಿದರೆ ಗುಜರಾತ್​ ತಂಡವನ್ನು ಮುನ್ನಡೆಸುವವರು ಯಾರು? ಮುಂದಿನ ನಾಯಕನಾಗುವ ಐದು ಆಟಗಾರರ ನೋಟ ಇಲ್ಲಿದೆ:

1. ರಶೀದ್ ಖಾನ್

ಸ್ಟಾರ್ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಗುಜರಾತ್ ಟೈಟಾನ್ಸ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರ ಉಪನಾಯಕರಾಗಿದ್ದಾರೆ. ಹಾರ್ದಿಕ್ ಅಲಭ್ಯರಾಗಿದ್ದ ಕಳೆದ 2 ಆವೃತ್ತಿಗಳಲ್ಲಿ ಒಂದೆರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. 25 ವರ್ಷ ವಯಸ್ಸಿನ ರಶೀದ್, ತಮ್ಮ ರಾಷ್ಟ್ರೀಯ ತಂಡಕ್ಕೆ ನಾಯಕನಾದ ಅನುಭವ ಹೊಂದಿದ್ದಾರೆ. ಟಿ20 ಮತ್ತು ಪ್ರಮುಖ ತಂಡಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಹಾರ್ದಿಕ್ ಬದಲಿಗೆ ಜಿಟಿ ನಾಯಕನಾಗಿ ಅವರು ಮುಂಚೂಣಿಯಲ್ಲಿದ್ದಾರೆ.

2. ಶುಭ್ಮನ್ ಗಿಲ್

ಗುಜರಾತ್ ಟೈಟಾನ್ಸ್ ಭಾರತೀಯ ನಾಯಕನನ್ನು ನೇಮಿಸಲು ಬಯಸಿದರೆ, ಶುಭ್ಮನ್ ಗಿಲ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. 24ರ ಹರೆಯದ ಗಿಲ್, ಐಪಿಎಲ್ 2023ರಲ್ಲಿ 17 ಪಂದ್ಯಗಳಲ್ಲಿ 890 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದರು. ಅದ್ಭುತ ಫಾರ್ಮ್​ನಲ್ಲಿರುವ ಗಿಲ್, ತನ್ನ ದೇಶೀಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ದೀರ್ಘಾವಧಿಯ ಆಯ್ಕೆಯೂ ಆಗಬಹುದು.

3. ಕೇನ್ ವಿಲಿಯಮ್ಸನ್

ಕಳೆದ ವರ್ಷ ಐಪಿಎಲ್​ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್‌ನ ವೈಟ್-ಬಾಲ್ ನಾಯಕ ಕೇನ್ ವಿಲಿಯಮ್ಸನ್​​ರನ್ನು ಗುಜರಾತ್​ ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದರೆ, 2023ರ ಉದ್ಘಾಟನಾ ಪಂದ್ಯದಲ್ಲಿಯೇ ಗಾಯಗೊಂಡು ಇಡೀ ಟೂರ್ನಿಯಿಂದ ಹೊರಗುಳಿದರು. ವಿಲಿಯಮ್ಸನ್ ನ್ಯೂಜಿಲೆಂಡ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಮುನ್ನಡೆಸಿದ್ದಾರೆ. ಜೊತೆಗೆ ಅತ್ಯಂತ ಯಶಸ್ವಿ ನಾಯಕ.

4. ಡೇವಿಡ್ ಮಿಲ್ಲರ್

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅತ್ಯಂತ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್. ಕಳೆದ 2 ಸೀಸನ್‌ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. ವೈಟ್-ಬಾಲ್ ಸ್ಪೆಷಲಿಸ್ಟ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸಿದ್ದಾರೆ. ಹಾಗಾಗಿ ನಾಯಕನ ಪಾತ್ರಕ್ಕೆ ಅವರನ್ನು ಪರಿಗಣಿಸಬಹುದು.

5. ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಐಪಿಎಲ್​ 2024 ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ನಾಯಕನಾಗಿ ಎರಡು ಐಸಿಸಿ ಟ್ರೋಫಿ ಗೆದ್ದಿದ್ದಾರೆ. ಆಸ್ಟ್ರೇಲಿಯಾಗೆ 2023ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ನವೆಂಬರ್ 19ರಂದು ಏಕದಿನ ವಿಶ್ವಕಪ್ ಗೆದ್ದುಕೊಟ್ಟರು. ಪ್ರಮುಖ ಸರಣಿಗಳಲ್ಲೂ ಜಯದ ನಗೆ ಬೀರಿದ್ದಾರೆ. ಹರಾಜಿನಲ್ಲಿ ಕಮಿನ್ಸ್​​ರನ್ನು ಗುಜರಾತ್ ಖರೀದಿಸಿದರೆ, ನಾಯಕನ ಪಟ್ಟ ನೀಡಬಹುದು.

Whats_app_banner