ಅಡ್ಡ ಹೆಸರು, ಫೇವರಿಟ್ ಕ್ರಿಕೆಟರ್, ಜೆರ್ಸಿ 18ರ ಸೀಕ್ರೆಟ್; ಹಲವು ಪ್ರಶ್ನೆಗಳಿಗೆ ಸ್ಮೃತಿ ಮಂಧಾನ ಉತ್ತರಿಸಿದ್ದಿಷ್ಟು
Smriti Mandhana: ತನ್ನ ಫೇವರಿಟ್ ಕ್ರಿಕೆಟರ್, ನಿಕ್ ನೇಮ್, ಜೆರ್ಸಿ 18ರ ಸೀಕ್ರೆಟ್, ಆರ್ಸಿಬಿ ಕುರಿತು ಒಂದು ಪದದಲ್ಲಿ ಉತ್ತರ ಹೀಗೆ ಹಲವು ಪ್ರಶ್ನೆಗಳಿಗೆ ಸ್ಮೃತಿ ಮಂಧಾನ ಉತ್ತರವನ್ನು ಕೊಟ್ಟಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (WPL 2024) ಆರಂಭಕ್ಕೆ ದಿನಗಣನೇ ಆರಂಭವಾಗಿದೆ. ಐದು ತಂಡಗಳು ಭರ್ಜರಿ ಸಿದ್ಧತೆ ಆರಂಭಿಸಿವೆ. ಹತ್ತು ದಿನಗಳಿಂದ ತವರಿನ ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಆಟಗಾರ್ತಿಯರು ನೆಟ್ಸ್ನಲ್ಲಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಇದರ ನಡುವೆ ನಾಯಕಿ ಸ್ಮೃತಿ ಮಂಧಾನ (Smriti Mandhana) ಆರ್ಸಿಬಿ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ.
ತನ್ನ ಫೇವರಿಟ್ ಕ್ರಿಕೆಟರ್, ತನ್ನ ನಿಕ್ ನೇಮ್, ಜೆರ್ಸಿ 18ರ ಸೀಕ್ರೆಟ್, ಆರ್ಸಿಬಿ ಕುರಿತು ಒಂದು ಪದದಲ್ಲಿ ಉತ್ತರ ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದಾರೆ. ಈ ಸಂದರ್ಶನದ ವಿಡಿಯೋವನ್ನು ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
ಪ್ರಶ್ನೆ: ನಿಮ್ಮ ಪ್ರಕಾರ ಆರ್ ಸಿಬಿ ಕುರಿತು ಒಂದು ಪದದಲ್ಲಿ ಉತ್ತರಿಸಿ?
ಫ್ಯಾನ್ ಬೇಸ್. ಅವರು ನಿಷ್ಠಾವಂತ ಅಭಿಮಾನಿಗಳು.
ಪ್ರಶ್ನೆ: ನಿಮ್ಮ ಅಡ್ಡ ಹೆಸರು ಏನು? ಹಾಗೆ ಕಾರಣವೇನು?
ನನ್ನ ಅಪ್ಪ ಬೆಬು ಎಂದು ಕರೆಯುತ್ತಾರೆ. ನಾನು ಚಿಕ್ಕವಳಿದ್ದಾಗ ಸ್ಕೂಲ್ ನಲ್ಲಿ ಸ್ಮೃತಿ ಎಂದು ಉಚ್ಚರಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ಅಪ್ಪ ಬೆಬು ಎಂದು ಹೇಳಿದ್ದರು.
ಪ್ರಶ್ನೆ: ನಿಮ್ಮ ಜೆರ್ಸಿ ಸಂಖ್ಯೆ ಯಾವುದು? ಅದರ ಹಿಂದಿರುವ ಕಥೆ ಏನು?
ನನ್ನ ಜೆರ್ಸಿ ಸಂಖ್ಯೆ 18. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವಾಗ ಜೆರ್ಸಿ ಸಂಖ್ಯೆ 7 ಬೇಕೆಂದು ಕೇಳಿದ್ದೆ. ಏಕೆಂದರೆ ಸ್ಕೂಲ್‌ನಲ್ಲಿ ನನ್ನ ರೋಲ್ ನಂಬರ್ 7 ಆಗಿತ್ತು. ಆದರೆ ಮತ್ತೊಬ್ಬರು ಅದಾಗಲೇ ತೆಗೆದುಕೊಂಡಿದ್ದರು. ಬಿಸಿಸಿಐನಿಂದ ಒಬ್ಬರು ಕರೆ ಮಾಡಿ 18ರ ಸಂಖ್ಯೆ ತೆಗೆದುಕೊಳ್ಳಲು ಸೂಚಿಸಿದರು. ಏಕೆಂದರೆ ನಿಮ್ಮ ಬರ್ತ್ ಡೇ ದಿನವೂ ಅದೆ ಎಂದಿದ್ದರು. ಆದರೆ ಜೆರ್ಸಿ 7 ಸಿಗಲಿಲ್ಲ ಅಂದರೆ ಯಾವುದಾದರೂ ಸರಿ ಎಂದು ಹೇಳಿದ್ದೆ.
ಪ್ರಶ್ನೆ: ನಿಮ್ಮ ಫೇವರಿಟ್ ಕ್ರಿಕೆಟರ್ ಯಾರು? ಯಾಕೆ?
ನನ್ನ ಫೇವರಿಟ್ ಕ್ರಿಕೆಟರ್ ಕುಮಾರ್ ಸಂಗಕ್ಕಾರ. ಹಾಗೆಯೇ ಸಚಿನ್ ಸರ್ ಕೂಡ ಇದ್ದಾರೆ. ಇಬ್ಬರ ಆಟವನ್ನು ನೋಡಿಯೇ ಬೆಳೆದಿದ್ದೇನೆ. ಹಾಗಾಗಿ ಇಬ್ಬರು ಇಷ್ಟ.
ಪ್ರಶ್ನೆ: ಟಿವಿ ಅಥವಾ ಲೈವ್ (ಮೈದಾನ)ನಲ್ಲಿ ನೋಡಿದ ಅತ್ಯುತ್ತಮ ಪಂದ್ಯ ಯಾವುದು?
2016ರ ಟಿ20 ವಿಶ್ವಕಪ್ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ. ಕೊಹ್ಲಿ ಮತ್ತು ಧೋನಿ ಇಬ್ಬರು ಸಹ ವಿಕೆಟ್ ಮಧ್ಯೆ ರನ್ ಗಾಗಿ ಓಡಿದ್ದು ಮತ್ತು ಜೊತೆಯಾಟ ತುಂಬಾ ಇಷ್ಟವಾಯಿತು.
ಪ್ರಶ್ನೆ: ಕ್ರಿಕೆಟ್‌ನಲ್ಲಿ ನಿಮ್ಮ ಹೆಸರನ್ನು ಯಾವುದರಲ್ಲಿ ದಾಖಲಿಸಲು ಇಷ್ಟಪಡುತ್ತೀರಿ?
ಅತಿ ಹೆಚ್ಚು ವಿಶ್ವಕಪ್ ದಾಖಲೆಯಲ್ಲಿ ಹೆಸರನ್ನು ಸೇರಿಸಲು ಇಷ್ಟಪಡುತ್ತೇನೆ.
ಪ್ರಶ್ನೆ: ವಿರಾಟ್ ಕೊಹ್ಲಿ ಬಗ್ಗೆ ಏನು ಹೇಳುತ್ತೀರಿ?
ರನ್ ಮೆಷಿನ್
ಪ್ರಶ್ನೆ: ನೀವು ಕ್ರಿಕೆಟರ್ ಆಗಿರದಿದ್ದರೆ ಏನಾಗಲು ಇಷ್ಟಪಡುತ್ತಿದ್ದೀರಿ?
ನಾನು ಶೆಫ್ ಆಗುತ್ತಿದ್ದೆ. ಏಕೆಂದರೆ ನನಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ಹೋಟೆಲ್ ಬಿಸಿನೆಸ್, ರೆಸ್ಟೋರೆಂಟ್ ಮಾಡುವುದೆಂದರೆ ತುಂಬಾ ಇಷ್ಟ.
ಪ್ರಶ್ನೆ: ನಿಮ್ಮಲ್ಲಿರುವ ಯುನಿಕ್ ಟ್ಯಾಲೆಂಟ್ ಯಾವುದು?
ವಿಡಿಯೋ ಗೇಮ್ಸ್ ಆಡುತ್ತೇನೆ.
ಪ್ರಶ್ನೆ: ಊಟಕ್ಕೆ ಹೋದರೆ ನಿಮ್ಮ ತಟ್ಟೆಯಲ್ಲಿ ಏನು ನೋಡಬಹುದು?
ಬೇಲ್ ಪುರಿ ಸೇರಿದಂತೆ ಯಾವುದಾದರೂ ಚಾರ್ಟ್ಸ್ ಆಗಿರಬಹುದು. ಪಾನಿಪೂರಿ, ಸೇವ್ ಪುರಿ.
ಪ್ರಶ್ನೆ: ಕ್ರಿಕೆಟ್‌ನಲ್ಲಿ ಯಾವ ನಿಯಮ ಬದಲಾವಣೆ ಮಾಡಲು ಬಯಸುತ್ತೀರಿ?
ಒಬ್ಬ ಬ್ಯಾಟರ್ ಎರಡು ಬಾರಿ ಆಡಲು ಅವಕಾಶ ಕೊಡಬೇಕು.
ಪ್ರಶ್ನೆ: ನಿಮ್ಮ ಪ್ರಕಾರ ಡಬ್ಲ್ಯುಪಿಎಲ್ ನಲ್ಲಿ ಯಾವ ದಾಖಲೆ ಮುರಿಯಲಾಗುತ್ತದೆ?
ಈ ಬಾರಿ ಶತಕ ಬಾರಿಸುವುದನ್ನು ನೋಡುತ್ತೇನೆ. ಕಳೆದ ಬಾರಿ ಸೋಫಿ ಡಿವೈನ್ (99) ಹತ್ತಿರಕ್ಕೆ ಬಂದಿದ್ದರು. ಅದನ್ನು ಆಟಗಾರ್ತಿಯರೇ ಮಾಡುತ್ತಾರೆ ಎಂಬ ನಂಬಿಕೆ ಇದೆ.
ಪ್ರಶ್ನೆ: ಈ ಸೀಸನ್ ನಲ್ಲಿ ಯಾವ ಗುರಿಯನ್ನು ಹೊಂದಿದ್ದೀರಿ?
ಯಾವ ಗುರಿ ಕುರಿತು ಮಾತನಾಡದಿರುವುದೇ ನನ್ನ ಪ್ರಮುಖ ಗುರಿ.
ಪ್ರಶ್ನೆ: ನಿಮಗೆ ಗೊತ್ತಿರುವಂತೆ ಬೆಂಗಳೂರು ಯಾವುದಕ್ಕೆ ಫೇಮಸ್? ಯಾವುದನ್ನು ಇಲ್ಲಿ ಪ್ರಯತ್ನಿಸಬೇಕು ಎಂದುಕೊಂಡಿದ್ದೀರಿ?
ಇಲ್ಲಿ ದೋಸಾ ತುಂಬಾ ಅದ್ಬುತವಾಗಿರುತ್ತದೆ. ಈಗಾಗಲೇ ತಿಂದಿದ್ದೇನೆ. ನಾನು ಲೋಕಲ್ ದೋಸಾ ತಿನ್ನಬೇಕೆಂಬ ಆಸೆ ಇದೆ.
ಪ್ರಶ್ನೆ: ಸಹ ಆಟಗಾರ್ತಿಯರಲ್ಲಿ ಸವಾಲು ಎನಿಸುವವರು ಯಾರು?
ಕೇಟ್ ಕ್ರಾಸ್. ಆಕೆಯ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ.
ಪ್ರಶ್ನೆ: ಸ್ಮೃತಿ ಮಂಧಾನ ಏನಾದರೂ ಶಾಪಿಂಗ್ ಮಾಡಿದ್ದೀರಾ?
ಎಲೆಕ್ಟ್ರಾನಿಕ್ಸ್, ವಾಚ್, ಫರ್ಪ್ಯೂಮ್.. ಎಲ್ಲವನ್ನೂ ಶಾಪಿಂಗ್ ಮಾಡಿದ್ದೇನೆ.
ಪ್ರಶ್ನೆ: ನಿಮ್ಮಲ್ಲಿರುವ ಹೆಚ್ಚು ಕಲೆಕ್ಷನ್ ಯಾವುದು?
ಸ್ನೀಕರ್ ಶೂಗಳು.