ಕನ್ನಡ ಸುದ್ದಿ  /  Cricket  /  Social Media Twitter Reacts On Hardik Pandya Behavior On Rohit Sharma During Ipl 2024 Opener Mi Vs Gt Mumbai Indians Jra

ಏನೇ ಆದ್ರೂ ನಮ್ಮ ನಾಯಕ ರೋಹಿತ್‌ ಮಾತ್ರ, ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್‌ ಇಮೋಜಿಗಳದ್ದೇ ಸದ್ದು

ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್‌ ಟೈಟಾನ್ಸ್ ತಂಡಗಳ ನಡುವಿನ‌ ಐಪಿಎಲ್ ಪಂದ್ಯವು ನಾಟಕೀಯವಾಗಿ ಸಾಗಿತು. ಹಾರ್ದಿಕ್‌ ಪಾಂಡ್ಯರಿಗೆ ಅಭಿಮಾನಿಗಳ ಬೆಂಬಲ ಕಂಡುಬರಲಿಲ್ಲ. ಅಹಮದಾಬಾದ್‌ ಮೈದಾನದಲ್ಲಿ ತುಂಬಿದ್ದ ಪ್ರೇಕ್ಷಕರು ರೋಹಿತ್‌, ರೋಹಿತ್‌ ಎಂಬುದಾಗಿ ಘೋಷಣೆ ಕೂಗಿದ್ದಾರೆ. ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್‌ ಇಮೋಜಿಗಳದ್ದೇ ಸದ್ದು
ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್‌ ಇಮೋಜಿಗಳದ್ದೇ ಸದ್ದು

ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಶುಭ್ಮನ್‌ ಗಿಲ್‌ ನೇತೃತ್ವದ ಗುಜರಾತ್‌ ತಂಡವು ರೋಚಕ ಜಯ ಸಾಧಿಸಿತು. ಪಂದ್ಯ ಮುಗಿದು ದಿನ ಸಮೀಪಿಸುತ್ತಿದ್ದರೂ, ಇಂಟರ್ನೆಟ್‌ ಹಾಗೂ ಸೋಷಿಯಲ್‌ ಮೀಡಿಯಾದಲ್ಲೇ ಇನ್ನೂ ಪಂದ್ಯದ ಕುರಿತ ಚರ್ಚೆಗಳು ನಡೆಯುತ್ತಿವೆ. ಕಳೆದ ಆವೃತ್ತಿಯವರೆಗೂ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್‌ ಶರ್ಮಾ ಈ ಬಾರಿ ತಂಡದ ನಾಯಕನಾಗಿ ಉಳಿದಿಲ್ಲ. ಅವರ ಬದಲಿಗೆ ಕಳೆದ ಆವೃತ್ತಿಯಲ್ಲಿ ಗುಜರಾತ್‌ ತಂಡದ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಗಿದೆ. ತಂಡದಲ್ಲಿ ರೋಹಿತ್‌ ಆಡುತ್ತಿದ್ದರೂ, ಅವರ ಬದಲಿಗೆ ಪಾಂಡ್ಯರನ್ನು ನಾಯಕನಾಗಿ ನೋಡಲು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ಎಂಐ ಹಾಗೂ ಜಿಟಿ ತಂಡಗಳ ನಡುವಿನ ಪಂದ್ಯವು ಸಾಕಷ್ಟು ನಾಟಕೀಯವಾಗಿ ಸಾಗಿತು. ಆರಂಭದಲ್ಲಿ ನಡೆದ ಟಾಸ್‌ ಪ್ರಕ್ರಿಯೆಯ ವೇಳೆಯೇ, ಪಾಂಡ್ಯಗೆ ಅಭಿಮಾನಿಗಳ ಬೆಂಬಲ ಕಂಡುಬರಲಿಲ್ಲ. ಹಾರ್ದಿಕ್‌ ಮಾತನಾಡುವಾಗ ಮೈದಾನದಲ್ಲಿ ತುಂಬಿದ್ದ ಪ್ರೇಕ್ಷಕರು ರೋಹಿತ್‌, ರೋಹಿತ್‌ ಎಂಬುದಾಗಿ ಘೋಷಣೆ ಕೂಗಲು ಶುರು ಮಾಡಿದ್ದರು. ಆ ಬಳಿಕ ಪಂದ್ಯ ನಡೆಯುವ ವೇಳೆಯೂ ಇದೇ ಘೋಷಣೆ ಆಗಾಗ ಕೇಳಿ ಬಂತು.

ಪಂದ್ಯದ ನಡುವೆ ಕ್ಯಾಮರಾಮೆನ್‌ ಕೂಡಾ ಆಗಾಗ ರೋಹಿತ್‌ ಶರ್ಮಾರನ್ನೇ ತೋರಿಸುತ್ತಿದ್ದರು. ಇದು ಅಭಿಮಾನಿಗಳ ಮನಸ್ಸು ಹಾಗೂ ಹೃದಯ ಭಾರವಾಗುವಂತೆ ಮಾಡಿತ್ತು. ರೋಹಿತ್‌ರನ್ನು ಮುಂಬೈ ತಂಡದ ನಾಯಕ ಎಂಬುದಾಗಿ ಮನಸಾರೆ ಒಪ್ಪಿಕೊಂಡಿದ್ದ ಅಭಿಮಾನಿಗಳಿಗೆ, ಹಾರ್ದಿಕ್‌ ಪಾಂಡ್ಯ ನಾಯಕ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.‌

ಇದನ್ನೂ ಓದಿ | IPL 2024 Latest Updates: ಆರ್‌ಸಿಬಿ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

ಮೈದಾನದಲ್ಲಿ ಫೀಲ್ಡಿಂಗ್‌ ಸ್ಥಾನ ಬದಲಾವಣೆಯ ವೇಳೆ, ರೋಹಿತ್‌ರನ್ನು ಹಾರ್ದಿಕ್‌ ಬೌಂಡರಿ ಲೈನ್‌ ಬಳಿ ಕಳುಹಿಸಿದರು. ಆ ವೇಳೆ ರೋಹಿತ್‌ ಪ್ರತಿಕ್ರಿಯೆ ನೋಡಿ ಅಭಿಮಾನಿಗಳಿಗೆ ಮತ್ತಷ್ಟು ಬೇಸರವಾಗಿದೆ. ಕಳೆದ ವರ್ಷದವರೆಗೂ ಹಿಟ್‌ಮ್ಯಾನ್‌ ಮಾಡುತ್ತಿದ್ದ ಕೆಲಸವನ್ನು ಈ ಬಾರಿ ಪಾಂಡ್ಯ ಮಾಡುತ್ತಿದ್ದಾರೆ. ಹಾರ್ದಿಕ್‌ ನಾಯಕತ್ವದ ಅಡಿಯಲ್ಲಿ ಆಡುವುದನ್ನು ನಮ್ಮಿಂದ ನೋಡಲಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ನಡುವೆ ವೇಗಿ ಲ್ಯೂಕ್‌ ವುಡ್‌ಗೆ ಸಲಹೆ ನೀಡಲೆಂದು ಬಂದಾಗ, ವುಡ್‌ ಅವರತ್ತ ಗಮನ ಕೊಡತೆ ಬೌಲಿಂಗ್‌ ಮಾಡಲು ಮುಂದುವರೆಯುತ್ತಾರೆ. ಆಗ ರೋಹಿತ್‌ ಅಲ್ಲಿಂದಲೇ ಹಿಂದಿರುಗಿ ತಮ್ಮ ಫೀಲ್ಡಿಂಗ್‌ ಸ್ಥಾನದತ್ತ ನಿರಾಶೆಯಿಂದ ಹೋಗುತ್ತಾರೆ.

ಟ್ವಿಟರ್‌ನಲ್ಲಿ ರೋಹಿತ್‌ ಶರ್ಮಾ ಟ್ರೆಂಡಿಂಗ್

ಪಂದ್ಯದುದ್ದಕ್ಕೂ ಮೈದಾನದಲ್ಲಿ ರೋಹಿತ್‌ ಸಾಮಾನ್ಯ ಆಟಗಾರನಾಗಿ ಆಡುವುದು ಫ್ಯಾನ್ಸ್‌ಗೆ ಇಷ್ಟವಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನಮ್ಮ ನಾಯಕ ರೋಹಿತ್‌ ಶರ್ಮಾ ಒಬ್ಬರೇ. ಬೇರೆ ಯಾರೂ ಅಲ್ಲ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.‌ ಮುಂಬೈ ಇಂಡಿಯನ್ಸ್‌ ತಂಡವು ಒಂದ ಕುಟುಂಬವಾಗಿ ಉಳಿದಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. ಈ ಕುರಿತ ಟ್ವೀಟ್‌ಗಳು ಇಲ್ಲಿವೆ.

ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವು 6 ರನ್‌ಗಳ ರೋಚಕ ಜಯ ಸಾಧಿಸಿತು. ಇತ್ತ ಹಾರ್ದಿಕ್‌ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಸೋಲಿನ ಅಭಿಯಾನ ಆರಂಭಿಸಿದೆ.

IPL_Entry_Point