ಭಾರತದ ವಿರುದ್ಧದ ಟೆಸ್ಟ್, ಒಡಿಐ, ಟಿ20 ಸರಣಿಗೆ ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಸೌತ್ ಆಫ್ರಿಕಾ; ಬವುಮಾ, ರಬಾಡಗೆ ರೆಸ್ಟ್
South Africa Announce Squads: ಡಿಸೆಂಬರ್ 10ರಿಂದ ಶುರುವಾಗುವ ಭಾರತ ಎದುರಿನ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಳಿಗೆ ಸೌತ್ ಆಫ್ರಿಕಾ ಪ್ರತ್ಯೇಕ ಮೂರು ತಂಡಗಳನ್ನು ಪ್ರಕಟಿಸಿದೆ.
ಭಾರತ ವಿರುದ್ಧದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ಪ್ರತ್ಯೇಕ ಮೂರು ಬಲಿಷ್ಠ ತಂಡಗಳನ್ನು (South Africa Announce Squads) ಪ್ರಕಟಿಸಿದೆ. ನಾಯಕ ಟೆಂಬಾ ಬವುಮಾಗೆ ಸೀಮಿತ ಓವರ್ಗಳ ಸರಣಿ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಏಡೆನ್ ಮಾರ್ಕ್ರಾಮ್ ಏಕದಿನ ಮತ್ತು ಟಿ20 ತಂಡಗಳ ನಾಯಕನಾಗಿ ನೇಮಗೊಂಡಿದ್ದಾರೆ. ಬವುಮಾ ಜೊತೆಗೆ ಕಗಿಸೊ ರಬಾಡ ಅವರನ್ನು ವೈಟ್-ಬಾಲ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ.
ರೋಹಿತ್ ಶರ್ಮಾ ನೇತೃತ್ವದ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವಿಶ್ರಾಂತಿ ಪಡೆದ ಬವುಮಾ, ರಬಾಡ ಮರಳಲಿದ್ದಾರೆ. ಜೊತೆಗೆ ಗೆರಾಲ್ಡ್ ಕೊಯೆಟ್ಜಿ, ಮಾರ್ಕೊ ಜಾನ್ಸೆನ್, ಲುಂಗಿ ಎನ್‌ಗಿಡಿ ಕೂಡ ಟೆಸ್ಟ್ ತಂಡದ ಭಾಗವಾಗಿದ್ದಾರೆ. ದಕ್ಷಿಣ ಆಫ್ರಿಕಾ ಕೂಡ ಎಲ್ಲಾ ಮೂರು ತಂಡಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಅನುಭವಿಗಳ ಜೊತೆ ಯುವ ಆಟಗಾರರು ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.
ಸೀಮರ್‌ಗಳಾದ ಒಟ್ನಿಯೆಲ್ ಬಾರ್ಟ್‌ಮ್ಯಾನ್ ಮತ್ತು ನಾಂಡ್ರೆ ಬರ್ಗರ್ ಅವರನ್ನು ವೈಟ್-ಬಾಲ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಪಶ್ಚಿಮ ಪ್ರಾಂತ್ಯದ ಬ್ಯಾಟರ್ ಡೇವಿಡ್ ಬೆಡಿಂಗ್‌ಹ್ಯಾಮ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗಾದರೆ ಭಾರತದ ವಿರುದ್ಧದ ಸರಣಿಗೆ ಸೌತ್ ಆಫ್ರಿಕಾ ಪರ ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡಿ.
ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಟಿ20 ತಂಡ
ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಗೆರಾಲ್ಡ್ ಕೋಯೆಟ್ಜಿ, ಡೊನೊವನ್ ಫೆರೆರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲೊ ಪೆಹ್ಲುಕ್ವಾಯೋ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾಡ್ ವಿಲಿಯಮ್ಸ್.
ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಏಕದಿನ ತಂಡ
ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ರಾಸ್ಸಿ, ವ್ಯಾನ್ ಡೆರ್ ಡ್ಯುಸ್ಸೆನ್, ಕೈಲ್ ವೆರಿನ್ನೆ, ಲಿಜಾರ್ಡ್ ವಿಲಿಯಮ್ಸನ್.
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ
ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಯೆಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೋ ರಬಾಡಾ , ಕೈಲ್ ವೆರಿನ್ನೆ, ಟ್ರಿಸ್ಟಾನ್ ಸ್ಟಬ್ಸ್.
ಭಾರತ - ದಕ್ಷಿಣ ಆಫ್ರಿಕಾ ನಡುವಿನ ಸರಣಿಗಳ ವೇಳಾಪಟ್ಟಿ | |||
---|---|---|---|
ದಿನ | ದಿನಾಂಕ | ಪಂದ್ಯಗಳು | ಸ್ಥಳ |
ಭಾನುವಾರ | ಡಿಸೆಂಬರ್ 10, 2023 | ಮೊದಲ ಟಿ20 | ಡರ್ಬನ್ |
ಮಂಗಳವಾರ | ಡಿಸೆಂಬರ್ 12, 2023 | ಎರಡನೇ ಟಿ20 | ಗ್ಕೆಬರ್ಹಾ |
ಗುರುವಾರ | ಡಿಸೆಂಬರ್ 14, 2023 | ಮೂರನೇ ಟಿ20 | ಜೋಹಾನ್ಸ್‌ಬರ್ಗ್ |
ಭಾನುವಾರ | ಡಿಸೆಂಬರ್ 17, 2023 | ಮೊದಲ ಏಕದಿನ | ಜೋಹಾನ್ಸ್‌ಬರ್ಗ್ |
ಮಂಗಳವಾರ | ಡಿಸೆಂಬರ್ 19, 2023 | ಎರಡನೇ ಏಕದಿನ | ಗ್ಕೆಬರ್ಹಾ |
ಗುರುವಾರ | ಡಿಸೆಂಬರ್ 21, 2023 | ಮೂರನೇ ಏಕದಿನ | ಪರ್ಲ್ |
ಮಂಗಳವಾರ | ಡಿ. 26 ರಿಂದ ಡಿ. 30, 2023 | ಮೊದಲ ಟೆಸ್ಟ್ | ಸೆಂಚುರಿಯನ್ |
ಬುಧವಾರ | ಜ.3ರಿಂದ ಜ.07, 2024 | ಎರಡನೇ ಟೆಸ್ಟ್ | ಕೇಪ್ ಟೌನ್ |