ಶ್ರೀಲಂಕಾ ನೀಡಿದ ಅಲ್ಪ ಗುರಿಯನ್ನು ತಿಣುಕಾಡಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ; ಟಿ20 ವಿಶ್ವಕಪ್‌ನಲ್ಲಿ ಹರಿಣಗಳ ಶುಭಾರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ನೀಡಿದ ಅಲ್ಪ ಗುರಿಯನ್ನು ತಿಣುಕಾಡಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ; ಟಿ20 ವಿಶ್ವಕಪ್‌ನಲ್ಲಿ ಹರಿಣಗಳ ಶುಭಾರಂಭ

ಶ್ರೀಲಂಕಾ ನೀಡಿದ ಅಲ್ಪ ಗುರಿಯನ್ನು ತಿಣುಕಾಡಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ; ಟಿ20 ವಿಶ್ವಕಪ್‌ನಲ್ಲಿ ಹರಿಣಗಳ ಶುಭಾರಂಭ

Sri Lanka vs South Africa T20 World Cup 2024: ಟಿ20 ವಿಶ್ವಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ‌ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದೆ. ಇದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಶ್ರೀಲಂಕಾ ನೀಡಿದ ಅಲ್ಪ ಗುರಿಯನ್ನು ತಿಣುಕಾಡಿ ಗೆದ್ದ ದಕ್ಷಿಣ ಆಫ್ರಿಕಾ; ಟಿ20 ವಿಶ್ವಕಪ್‌ನಲ್ಲಿ ಹರಿಣಗಳ ಶುಭಾರಂಭ
ಶ್ರೀಲಂಕಾ ನೀಡಿದ ಅಲ್ಪ ಗುರಿಯನ್ನು ತಿಣುಕಾಡಿ ಗೆದ್ದ ದಕ್ಷಿಣ ಆಫ್ರಿಕಾ; ಟಿ20 ವಿಶ್ವಕಪ್‌ನಲ್ಲಿ ಹರಿಣಗಳ ಶುಭಾರಂಭ (Getty Images via AFP)

ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಶುಭಾರಂಭ ಮಾಡಿದೆ. ಡಿ ಗುಂಪಿನಲ್ಲಿರುವ ತಂಡವು ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಸೌತ್‌ ಆಫ್ರಿಕಾ, ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಆನ್ರಿಚ್‌ ನಾರ್ಟ್ಜೆ ಮಾರಕ ಬೌಲಿಂಗ್‌ ಪ್ರದರ್ಶನ ನೀಡಿದರು. ಆ ಬಳಿಕ ಹೆನ್ರಿಚ್‌ ಕ್ಲಾಸೆನ್ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿಂದ ನೂತನ ನ್ಯೂಯಾರ್ಕ್‌ ಸ್ಟೇಡಿಯಂನಲ್ಲಿ ಹರಿಣಗಳು ಜಯದ ಆರಂಭ ಪಡೆದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ, ಕೇವಲ 77 ರನ್‌ ಗಳಿಸಿ ಆಲೌಟ್‌ ಆಯ್ತು. ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ನಿಧಾನಗತಿಯಲ್ಲಿ ಬ್ಯಾಟಿಂಗ್‌ ನಡೆಸಿ ಕೊನೆಗೆ 16.2 ಓವರ್‌ಗಳಲ್ಲಿ ಗುರಿ ತಲುಪಿತು.

ಟಾಸ್‌ ಗೆದ್ದ ಬ್ಯಾಟಿಂಗ್‌ ನಡೆಸಿದ ಲಂಕಾ, ಭಾರಿ ಬ್ಯಾಟಿಂಗ್‌ ಕುಸಿತ ಅನುಭವಿಸಿತು. ಟಿ20 ಕ್ರಿಕೆಟ್‌ನಲ್ಲಿ ತಂಡ ಅತ್ಯಂತ ಕಡಿಮೆ ಮೊತ್ತ ದಾಖಲಿಸಿತು. ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ (19) ಮತ್ತು ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ (16) ತಂಡದ ಪರ ವೈಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಉಳಿದಂತೆ ಯಾವೊಬ್ಬ ಆಟಗಾರ ಕೂಡಾ 15 ರನ್‌ ದಾಟಲಿಲ್ಲ. ದಕ್ಷಿಣ ಆಫ್ರಿಕಾ ಪರ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ವೇಗದ ಬೌಲರ್ ಒಟ್ನೀಲ್ ಬಾರ್ಟ್‌ಮ್ಯಾನ್, ತಮ್ಮ ಮೊದಲ ಎಸೆತದಲ್ಲಿಯೇ ಪಾತುಮ್ ನಿಸ್ಸಾಂಕಾ ವಿಕೆಟ್‌ ಪಡೆದು ಮಿಂಚಿದರು.

ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ ಕೇವಲ ಏಳು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಕಗಿಸೊ ರಬಾಡ 21 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರೆ, ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡಾ 2 ವಿಕೆಟ್‌ ಕಬಳಿಸಿದರು.

78 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಕುಂಟುತ್ತಾ ಸಾಗಿತು. ಆರಂಭಿಕ ಆಟಗಾರ ರೀಝಾ ಹೆಂಡ್ರಿಕ್ಸ್‌ 4 ರನ್‌ ಗಳಿಸಿ ಔಟಾದರೆ, ನಾಯಕ ಐಡೆನ್‌ ಮರ್ಕ್ರಾಮ್‌ ಆಟ 12 ರನ್‌ಗಳಿಗೆ ಅಂತ್ಯವಾಯ್ತು. ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಡಿಕಾಕ್‌ 20 ರನ್‌ ಗಳಿಸಿದ್ದಾಗ ಹಸರಂಗ ಮ್ಯಾಜಿಕ್‌ಗೆ ಬಲಿಯಾದರು. ಐಪಿಎಲ್‌ನಲ್ಲಿ ಸಿಡಿಗುಂಡಿನಂತೆ ಸಿಡಿದಿದ್ದ ಸ್ಟಬ್ಸ್‌ 13 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ವೇಗದ ಆಟಕ್ಕೆ ಕೈಹಾಕಿದ ಕ್ಲಾಸೆನ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

Whats_app_banner