ಕನ್ನಡ ಸುದ್ದಿ  /  ಕ್ರಿಕೆಟ್  /  ಸವಾಲಿನ ನಸ್ಸೌ ಪಿಚ್‌ನಲ್ಲಿ 113 ರನ್‌ ಡಿಫೆಂಡ್‌ ಮಾಡಿದ ದಕ್ಷಿಣ ಆಫ್ರಿಕಾ; ಬಾಂಗ್ಲಾದೇಶ ವಿರುದ್ಧ ರೋಚಕ ಜಯ

ಸವಾಲಿನ ನಸ್ಸೌ ಪಿಚ್‌ನಲ್ಲಿ 113 ರನ್‌ ಡಿಫೆಂಡ್‌ ಮಾಡಿದ ದಕ್ಷಿಣ ಆಫ್ರಿಕಾ; ಬಾಂಗ್ಲಾದೇಶ ವಿರುದ್ಧ ರೋಚಕ ಜಯ

ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 113 ರನ್ ಯಶಸ್ವಿಯಾಗಿ ಡಿಫೆಂಡ್‌ ಮಾಡಿದೆ. ಪಾಕಿಸ್ತಾನ ವಿರುದ್ಧ ಭಾರತ ಯಶಸ್ವಿಯಾದಂತೆ, ಬಾಂಗ್ಲಾ ವಿರುದ್ಧ ಹರಿಣಗಳು ಯಶಸ್ಸು ಸಾಧಿಸಿದ್ದಾರೆ.

113 ರನ್‌ ಡಿಫೆಂಡ್‌ ಮಾಡಿದ ದಕ್ಷಿಣ ಆಫ್ರಿಕಾ; ಬಾಂಗ್ಲಾದೇಶ ವಿರುದ್ಧ ರೋಚಕ ಜಯ
113 ರನ್‌ ಡಿಫೆಂಡ್‌ ಮಾಡಿದ ದಕ್ಷಿಣ ಆಫ್ರಿಕಾ; ಬಾಂಗ್ಲಾದೇಶ ವಿರುದ್ಧ ರೋಚಕ ಜಯ (AP)

ಟಿ20 ವಿಶ್ವಕಪ್‌ 2024ರಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರನೇ ಜಯ ಸಾಧಿಸಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿದೆ. ಸವಾಲಿನ ಪಿಚ್‌ನಲ್ಲಿ 114 ರನ್‌ಗಳ ಸಾಧಾರಣ ಮೊತ್ತವನ್ನು ಡಿಫೆಂಡ್‌ ಮಾಡಿಕೊಂಡ ತಂಡವು, ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆಯಷ್ಟೇ ಇದೇ ಪಿಚ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡವು 119 ರನ್‌ ಡಿಫೆಂಡ್‌ ಮಾಡಿಕೊಂಡಿತ್ತು. ಇಂದು ದಕ್ಷಿಣ ಆಫ್ರಿಕಾ ಇದೇ ಸಾಧನೆ ಪುನರಾವರ್ತಿಸಿದೆ. ಅಲ್ಪ ಮೊತ್ತ ಗಳಿಸಿದರೂ ಯಶಸ್ವಿಯಾಗಿ ರಕ್ಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ, ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕದ ಜೊತೆಯಾಟದ ನೆರವಿಂದ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಬಾಂಗ್ಲಾದೇಶ, ತೌಹಿದ್‌ ಹಾಗೂ ಮಹ್ಮದುಲ್ಲಾ ಹೋರಾಟದ ಹೊರತಾಗಿಯೂ 109 ರನ್‌ ಗಳಿಸಲಷ್ಟೇ ಶಕ್ತವಾಯ್ತು. 

ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶ ಗೆಲುವಿಗೆ 11 ರನ್‌ ಬೇಕಿತ್ತು. ಮಹ್ಮದುಲ್ಲಾ ಮೈದಾನದಲ್ಲಿದ್ದರು. ಕೊನೆಯ 2 ಎಸೆತಗಳಲ್ಲಿ 6 ರನ್‌ ಬೇಕಿದ್ದಾಗ ಮಹ್ಮದುಲ್ಲಾ ಹೊಡೆದ ಎಸೆತವನ್ನು ಬೌಂಡರಿ ಲೈನ್‌ ಬಳಿ ಮರ್ಕ್ರಾಮ್‌ ಕ್ಯಾಚ್‌ ಹಿಡಿದರು. ಕೊನೆಗೆ ತಂಡವು 4 ರನ್‌ಗಳಿಂದ ಸೋಲು ಕಂಡಿತು. ಅಂತಿಮ ಓವರ್‌ನಲ್ಲಿ ಪಂದ್ಯವನ್ನು ಹಿಡಿತಕ್ಕೆ ತಂದ ಶ್ರೇಯಸ್ಸು ಕೇಶವ್‌ ಮಹಾರಾಜ್‌ಗೆ ಸಲ್ಲಬೇಕು.

ಬಾಂಗ್ಲಾದೇಶ ಪರ ತಂಜಿದ್‌ ಹಸನ್‌ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಇನ್ನಿಂಗ್ಸ್‌ ಆರಂಭಿಸಿದರು. ಅದರ ಬೆನ್ನಲ್ಲೇ 9 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಲಿಟ್ಟನ್‌ ದಾಸ್‌ ಆಟ 9 ರನ್‌ಗೆ ಅಂತ್ಯವಾಯ್ತು. ಅನುಭವಿ ಶಕೀಬ್‌ ಅಲ್‌ ಹಸನ್‌ ಕೇವಲ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಿಧಾನವಾಗಿ ಬ್ಯಾಟ್‌ ಬೀಸುತ್ತಿದ್ದ ಶಾಂಟೊ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಒಂದಾದ ತೌಹೀದ್‌ ಹೃದಯೋಯ್‌ ಹಾಗೂ ಅನುಭವಿ ಆಟಗಾರ ಮಹ್ಮುದುಲ್ಲಾ 44 ರನ್‌ಗಳ ಅಮೂಲ್ಯ ಹಾಗೂ ಆಕರ್ಷಕ ಜೊತೆಯಾಟವಾಡಿದರು. 37 ರನ್‌ ಗಳಿಸಿ ತೌಹಿದ್‌ ಔಟಾದರು.

ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್, ಎದುರಿಸಿದ ಮೊದಲ ಎಸೆತದಲ್ಲೇ ಔಟಾದರು. ಕ್ವಿಂಟನ್ ಡಿ ಕಾಕ್ ಪಂದ್ಯದ ಮೊದಲ ಮೂರು ಎಸೆತಗಳಲ್ಲಿ 10 ರನ್ ಗಳಿಸಿದರು. ಆದರೆ ಆ ವೇಗ ಮುಂದುವರೆಸಲು ಸಾಧ್ಯವಾಗಲಿಲ್ಲ. 11 ಎಸೆತಗಳಲ್ಲಿ 18 ರನ್‌ ಗಳಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ 5 ಎಸೆತ ಎದುರಿಸಿ ಖಾತೆ ತೆರೆಯದೆ ನಿರ್ಗಮಿಸಿದರು. ನಾಯಕ ಐಡೆನ್ ಮಾರ್ಕ್ರಮ್ ಆಟ 4 ರನ್‌ಗಳಿಗೆ ಸೀಮಿತವಾಯ್ತು.

ಮೊದಲ ಆರು ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತ್ತು. ಈ ವೇಳೆ ತಂಡಕ್ಕೆ ಉತ್ತಮ ಜೊತೆಯಾಟವೊಂದರ ಅಗತ್ಯವಿತ್ತು. ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಈ ಜವಾಬ್ದಾರಿ ತೆಗೆದುಕೊಂಡರು. ಇವರಿಬ್ಬರ ನಡುವೆ 79 ರನ್‌ಗಳ ಆಕರ್ಷಕ ಜೊತೆಯಾಟ ಬಂತು. ನಿಧಾನವಾಗಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಕ್ಲಾಸೆನ್ 46 ರನ್‌ ಗಳಿಸಿದರೆ,, ಮಿಲ್ಲರ್‌ 29 ರನ್‌ ಸಿಡಿಸಿದರು.

ಬಾಂಗ್ಲಾದೇಶ ಪರ ತಂಜಿಮ್ ಹಸನ್ ಸಾಕಿಬ್ ಮೂರು ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ ಎರಡು ವಿಕೆಟ್ ಪಡೆದರು.

ಟಿ20 ವರ್ಲ್ಡ್‌ಕಪ್ 2024