ರತನ್ ಟಾಟಾ ಇಲ್ಲದಿದ್ದರೆ ಭಾರತವು 1983ರ ಐತಿಹಾಸಿಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ; ಹೇಗೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ರತನ್ ಟಾಟಾ ಇಲ್ಲದಿದ್ದರೆ ಭಾರತವು 1983ರ ಐತಿಹಾಸಿಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ; ಹೇಗೆ?

ರತನ್ ಟಾಟಾ ಇಲ್ಲದಿದ್ದರೆ ಭಾರತವು 1983ರ ಐತಿಹಾಸಿಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ; ಹೇಗೆ?

ಕೈಗಾರಿಕಾ ಅಭಿವೃದ್ಧಿಯೊಂದಿಗೆ, ಟಾಟಾ ಗ್ರೂಪ್ ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಟಾಟಾ ಗ್ರೂಪ್ ಅಥ್ಲೀಟ್‌ಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ತಳಮಟ್ಟದಲ್ಲಿ ಆಟಗಾರರನ್ನು ತಯಾರು ಮಾಡುವುದು ಅಥವಾ ಅವರಿಗೆ ಸೌಲಭ್ಯ ಒದಗಿಸುವುದು ಸೇರಿ ಕ್ರೀಡೆಯನ್ನು ಎಲ್ಲಾ ರೀತಿಯಲ್ಲಿ ಉತ್ತೇಜಿಸಲು ಕೆಲಸ ಮಾಡಿದೆ.

ರತನ್ ಟಾಟಾ ಇಲ್ಲದಿದ್ದರೆ ಭಾರತ 1983ರ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ; ಹೇಗೆ?
ರತನ್ ಟಾಟಾ ಇಲ್ಲದಿದ್ದರೆ ಭಾರತ 1983ರ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ; ಹೇಗೆ?

ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಅವರು ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ರೀಡಾ ಲೋಕದ ಹಲವು ಆಟಗಾರರು ಸಂತಾಪ ಸೂಚಿಸಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 'ಯುಗವು ಕೊನೆಗೊಂಡಿದೆ' ಎಂದು ಹೇಳಿದ್ದಾರೆ. ಅವರಲ್ಲದೆ, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಮತ್ತು ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಕ್ರಿಕೆಟಿಗರು ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಿದೆ.

ರತನ್ ಟಾಟಾ ಅವರ ಮುಂದಾಳತ್ವದಲ್ಲಿ, ಟಾಟಾ ಸನ್ಸ್ ಉತ್ತುಂಗಕ್ಕೇರಿತು. ಹೀಗಾಗಿ ರತನ್‌ ಟಾಟಾ ಅವರಿಗೆ ಭಾರತ ಉದ್ಯಮ ವಲಯದ ದಿಗ್ಗಜ ಎಂದೇ ಹೇಳಾಗುತ್ತಿದೆ. ಎಫ್‌ಎಂಸಿಜಿಯಿಂದ ಆಟೋಮೋಟಿವ್‌ವರೆಗೆ, ಟಾಟಾ ಸನ್ಸ್ ಪ್ರತಿಯೊಂದು ವಲಯದಲ್ಲೂ ದೈತ್ಯವಾಗಿ ಹೊರಹೊಮ್ಮಿದೆ. ಇವುಗಳ ನಡುವೆ ಬೆಳಕಿಗೆ ಬಾರದ ಟಾಟಾ ಸಮೂಹದ ಅನೇಕ ಸಂಗತಿಗಳಿವೆ. ಇದರಲ್ಲಿ 1983ರಲ್ಲಿ ಟೀಮ್ ಇಂಡಿಯಾದ ಐತಿಹಾಸಿಕ ವಿಶ್ವಕಪ್ ಗೆಲುವಿನ ಮೇಲೆ ರತನ್ ಟಾಟಾ ಅವರ ಪ್ರಭಾವವೂ ಒಂದು.

1983ರ ಐಸಿಸಿ ಏಕದಿನ ವಿಶ್ವಕಪ್ ಗೆಲುವು ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಅನೇಕ ಆಟಗಾರರು ಮುನ್ನೆಲೆಗೆ ಬಂದರು. ಇದರಲ್ಲಿ ಮೂರು ಪ್ರಮುಖ ಆಟಗಾರರು-ಮೊಹಿಂದರ್ ಅಮರನಾಥ್, ಸಂದೀಪ್ ಪಾಟೀಲ್, ಮತ್ತು ರವಿ ಶಾಸ್ತ್ರಿ. 1983ರ ವಿಜಯಶಾಲಿ ತಂಡದ ಭಾಗವಾಗಿದ್ದ ಈ ಮೂವರು, ದೇಶೀಯ ತಂಡಗಳಿಂದ ಕಲಿತ ಪಾಠ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು. ಇವರು ಆಡಿದ ದೇಶೀಯ ತಂಡ ಟಾಟಾ ಸಮೂಹದ್ದಾಗಿದೆ.

ಮೊಹಿಂದರ್ ಅಮರನಾಥ್ ಅವರು ಏರ್ ಇಂಡಿಯಾ ಪರ ಆಡಿದ್ದರು. ಸಂದೀಪ್ ಪಾಟೀಲ್ಟಾಟಾ ಆಯಿಲ್ ಮಿಲ್ಸ್‌ ಮತ್ತು ರವಿ ಶಾಸ್ತ್ರಿ ಟಾಟಾ ಸ್ಟೀಲ್ ಅನ್ನು ಪ್ರತಿನಿಧಿಸಿದ್ದರು. ಇವರೆಲ್ಲರಿಗೆ ವೇದಿಕೆ ಮಾಡಿಕೊಟ್ಟಿದ್ದು ಟಾಟಾ. ಆ ಸಮಯದಲ್ಲಿ, ರತನ್ ಟಾಟಾ ಅವರು ಟಾಟಾ ಗ್ರೂಪ್‌ನಲ್ಲಿ ವ್ಯವಸ್ಥಾಪಕ ಸ್ಥಾನವನ್ನು ಹೊಂದಿದ್ದರು, ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯಲ್ಲಿ ಇವರು ಅವಿಭಾಜ್ಯ ಅಂಗವಾಗಿದ್ದರು.

ಇವರು ಮಾತ್ರವಲ್ಲದೆ, ಭಾರತೀಯ ಆಟಗಾರರಾದ ಫಾರೋಖ್ ಇಂಜಿನಿಯರ್ (ಟಾಟಾ ಮೋಟಾರ್ಸ್), ಮೊಹಿಂದರ್ ಅಮರನಾಥ್ (ಏರ್ ಇಂಡಿಯಾ), ಜೆ ಶ್ರೀನಾಥ್ (ಇಂಡಿಯನ್ ಏರ್‌ಲೈನ್ಸ್), ಸಂಜಯ್ ಮಂಜ್ರೇಕರ್ (ಏರ್ ಇಂಡಿಯಾ), ಕಿರಣ್ ಮೋರ್ (ಟಿಎಸ್‌ಸಿ), ರುಸಿ ಸೂರ್ತಿ ( IHCL), ಸಂದೀಪ್ ಪಾಟೀಲ್ (ಟಾಟಾ ಆಯಿಲ್ ಮಿಲ್ಸ್), ವಿವಿಎಸ್ ಲಕ್ಷ್ಮಣ್ (ಇಂಡಿಯನ್ ಏರ್ಲೈನ್ಸ್), ಯುವರಾಜ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಹರ್ಭಜನ್ ಸಿಂಗ್ (ಇಂಡಿಯನ್ ಏರ್ಲೈನ್ಸ್), ಸುರೇಶ್ ರೈನಾ (ಏರ್ ಇಂಡಿಯಾ), ರಾಬಿನ್ ಉತ್ತಪ್ಪ (ಏರ್ ಇಂಡಿಯಾ), ಮೊಹಮ್ಮದ್ ಕೈಫ್ (ಭಾರತೀಯ ಏರ್‌ಲೈನ್ಸ್), ನಿಖಿಲ್ ಚೋಪ್ರಾ (ಇಂಡಿಯನ್ ಏರ್‌ಲೈನ್ಸ್), ಇರ್ಫಾನ್ ಪಠಾಣ್ (ಏರ್ ಇಂಡಿಯಾ), ಆರ್‌ಪಿ ಸಿಂಗ್ (ಏರ್ ಇಂಡಿಯಾ), ದಿನೇಶ್ ಮೊಂಗಿಯಾ (ಇಂಡಿಯನ್ ಏರ್‌ಲೈನ್ಸ್) ಅಜಿತ್ ಅಗರ್ಕರ್ (ಟಾಟಾ ಸ್ಟೀಲ್), ರೋಹನ್ ಗವಾಸ್ಕರ್, ರಮೇಶ್ ಪೊವಾರ್ ಮತ್ತು ಇತ್ತೀಚೆಗೆ ಶಾರ್ದೂಲ್ ಠಾಕೂರ್ (ಟಾಟಾ ಪವರ್ ) ಜಯಂತ್ ಯಾದವ್ (ಏರ್ ಇಂಡಿಯಾ) ಮತ್ತು ಜೂಲನ್ ಗೋಸ್ವಾಮಿ (ಏರ್ ಇಂಡಿಯಾ) ಸಹ ಟಾಟಾ ಬೆಂಬಲವನ್ನು ಹೊಂದಿದ್ದಾರೆ.

ಕ್ರೀಡೆಗೆ ಮಹತ್ವದ ಕೊಡುಗೆ

ಕೈಗಾರಿಕಾ ಅಭಿವೃದ್ಧಿಯೊಂದಿಗೆ, ಟಾಟಾ ಗ್ರೂಪ್ ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಟಾಟಾ ಗ್ರೂಪ್ ಅಥ್ಲೀಟ್‌ಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ತಳಮಟ್ಟದಲ್ಲಿ ಆಟಗಾರರನ್ನು ತಯಾರು ಮಾಡುವುದು ಅಥವಾ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು, ಟಾಟಾ ಕ್ರೀಡೆಯನ್ನು ಎಲ್ಲಾ ರೀತಿಯಲ್ಲಿ ಉತ್ತೇಜಿಸಲು ಕೆಲಸ ಮಾಡಿದೆ. ಜೆಮ್‌ಶೆಡ್‌ಪುರದಲ್ಲಿರುವ ಟಾಟಾ ಸ್ಟೀಲ್ ಅಥ್ಲೆಟಿಕ್ಸ್ ಅಕಾಡೆಮಿಯು ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ನಿರ್ಮಿಸಿದೆ. ಇಷ್ಟೇ ಅಲ್ಲ, ಟಾಟಾ ಹಲವು ಕ್ರೀಡಾ ಪಂದ್ಯಾವಳಿಗಳನ್ನು ಕೂಡ ಆಯೋಜಿಸುತ್ತಿದೆ.

ವರದಿ: ವಿನಯ್ ಭಟ್.

Whats_app_banner