ಮಹತ್ವದ 3 ಪಂದ್ಯಗಳಲ್ಲೂ ಎಸ್​​ಆರ್​​ಹೆಚ್ ತಂಡವನ್ನು​ ನಡುನೀರಿನಲ್ಲಿ ಕೈಬಿಟ್ಟ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹತ್ವದ 3 ಪಂದ್ಯಗಳಲ್ಲೂ ಎಸ್​​ಆರ್​​ಹೆಚ್ ತಂಡವನ್ನು​ ನಡುನೀರಿನಲ್ಲಿ ಕೈಬಿಟ್ಟ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ

ಮಹತ್ವದ 3 ಪಂದ್ಯಗಳಲ್ಲೂ ಎಸ್​​ಆರ್​​ಹೆಚ್ ತಂಡವನ್ನು​ ನಡುನೀರಿನಲ್ಲಿ ಕೈಬಿಟ್ಟ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ

Travis Head and Abhishek Sharma : ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್​ ಶರ್ಮಾ ಅವರು ಕ್ವಾಲಿಫೈಯರ್​-1, ಕ್ವಾಲಿಫೈಯರ್​-2 ಮತ್ತು ಫೈನಲ್​ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾದರು.

ಮಹತ್ವದ 3 ಪಂದ್ಯಗಳಲ್ಲೂ ಎಸ್​​ಆರ್​​ಹೆಚ್ ತಂಡವನ್ನು​ ನಡುನೀರಿನಲ್ಲಿ ಕೈಬಿಟ್ಟ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ
ಮಹತ್ವದ 3 ಪಂದ್ಯಗಳಲ್ಲೂ ಎಸ್​​ಆರ್​​ಹೆಚ್ ತಂಡವನ್ನು​ ನಡುನೀರಿನಲ್ಲಿ ಕೈಬಿಟ್ಟ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ

Travis Head and Abhishek Sharma: 2024ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸುನಾಮಿ ಬ್ಯಾಟಿಂಗ್​, ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಸನ್​ರೈಸರ್ಸ್ ಹೈದರಾಬಾದ್ ತಂಡದ ಈ ಓಪನರ್ಸ್ ಆಟವನ್ನು ಕಣ್ತುಂಬಿಕೊಂಡ ಬಹುತೇಕರು, ಟಿ20 ಕ್ರಿಕೆಟ್ ಹೇಗೆ ಆಡಬೇಕೆಂದು ಇವರನ್ನು ನೋಡಿ ಕಲಿಯಬೇಕು ಎಂದಿದ್ದರು. ಅಷ್ಟೇ ಅಲ್ಲದೆ, ಈ ಆರಂಭಿಕರನ್ನು ಉಲ್ಲೇಖಿಸಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಸ್ಟಾರ್ ಕ್ರಿಕೆಟಿಗರನ್ನು ಟೀಕಿಸಿದ್ದರು. ಆದರೀಗ ಭಾರಿ ಪ್ರಶಂಸೆಗೆ ಒಳಗಾಗಿದ್ದ ಹೆಡ್-ಅಭಿಷೇಕ್ ಜೋಡಿ ತೀವ್ರ ಟೀಕೆಗೆ ಗುರಿಯಾಗಿದೆ.

ಲೀಗ್​ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದ ಅಭಿಷೇಕ್ ಮತ್ತು ಹೆಡ್​, ಈಗ ಪ್ಲೇಆಫ್​ ಮತ್ತು ಫೈನಲ್​ ಪಂದ್ಯಗಳಲ್ಲಿ ಎಸ್​ಆರ್​ಹೆಚ್​ ತಂಡವನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ. ಗ್ರೂಪ್​ ಸ್ಟೇಜ್ ಬಳಿಕ ಆಡಿದ ಕ್ವಾಲಿಫೈಯರ್​​-1, ಕ್ವಾಲಿಫೈಯರ್​​-2 ಮತ್ತು ಫೈನಲ್​ನಲ್ಲಿ ಈ ಜೋಡಿಯ ಬ್ಯಾಟ್​ ಸದ್ದು ಮಾಡಲೇ ಇಲ್ಲ. ಮತ್ತೊಂದೆಡೆ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದ ಹೈದರಾಬಾದ್ ಕೂಡ ಇಕ್ಕಟ್ಟಿಗೆ ಸಿಲುಕಿತು. ಓಪನರ್ಸ್ ಬಹುಬೇಗನೇ ಕೈಕೊಟ್ಟ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಸಹ ಕೈಹಿಡಿಯಲಿಲ್ಲ.

ಟ್ರಾವಿಸ್ ಎರಡು ಡಕೌಟ್, 3 ಪಂದ್ಯಗಳಲ್ಲಿ 34 ರನ್

ಟೂರ್ನಿಯಲ್ಲಿ ಈವರೆಗೂ ಆಡಿದ 15 ಪಂದ್ಯಗಳಲ್ಲಿ 40.50ರ ಬ್ಯಾಟಿಂಗ್ ಸರಾಸರಿಯಲ್ಲಿ 567 ರನ್ ಗಳಿಸಿರುವ ಟ್ರಾವಿಸ್ ಹೆಡ್, ಮಹತ್ವದ ಮೂರು ಪಂದ್ಯಗಳಲ್ಲೂ ರನ್ ಗಳಿಸಲು ವಿಫಲರಾಗಿದ್ದು, ಕೇವಲ 34 ರನ್ ಗಳಿಸಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 2 ಎಸೆತಗಳಲ್ಲಿ ಡಕೌಟ್ ಆದ ಹೆಡ್, ಎರಡನೇ ಕ್ವಾಲಿಫೈಯರ್​ನಲ್ಲಿ 28 ಎಸೆತಗಳಲ್ಲಿ 34 ರನ್ ಗಳಿಸಿದರು. ಇದೀಗ ಕೆಕೆಆರ್ ವಿರುದ್ದದ ಫೈನಲ್​ನಲ್ಲಿ ಮತ್ತೊಮ್ಮೆ ವಿಫಲರಾದರು. ತಾನಾಡಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು.

ತೀವ್ರ ನಿರಾಸೆ ಮೂಡಿಸಿದ ಅಭಿಷೇಕ್

ಮತ್ತೊಬ್ಬ ಆರಂಭಿಕ ಆಟಗಾರ ಅಭಿಷೇಕ್ ಕೂಡ ಟೂರ್ನಿಯುದ್ದಕ್ಕೂ ಆರ್ಭಟಿಸಿದರು. ಹೆಡ್​ ಅವರಂತೆಯೇ ಅಭಿಷೇಕ್ ಸಹ ತಂಡವನ್ನು ಆಧರಿಸಲಿಲ್ಲ. ಮೊದಲ ಕ್ವಾಲಿಫೈಯರ್​ನಲ್ಲಿ 3 ರನ್ ಗಳಿಸಿ ಭಾರಿ ನಿರಾಸೆ ಮೂಡಿಸಿದ್ದ ಶರ್ಮಾ, ಎರಡನೇ ಕ್ವಾಲಿಫೈಯರ್​​ 12 ರನ್ ಗಳಿಸಲಷ್ಟೇ ಶಕ್ತರಾದರು. ಇದೀಗ 2 ರನ್ ಗಳಿಸಿ ಮೊದಲ ಓವರ್​ನಲ್ಲೇ ಔಟಾದರು. ಮೂರು ಪಂದ್ಯಗಳಿಂದಲೂ ಸೇರಿ ಕೇವಲ 17 ರನ್ ಕಲೆ ಹಾಕಿ ತಂಡದ ಹಿನ್ನಡೆಗೆ ಕಾರಣರಾದರು.

ಪರಿಸ್ಥಿತಿಗೆ ತಕ್ಕಂತೆ ಆಡುವುದು ಕಲಿಯಬೇಕು

ಐಪಿಎಲ್ ಎಂದರೆ ಹೊಡಿಬಡಿ ಆಟವಷ್ಟೇ ಅಲ್ಲ, ಕಲಿಯಲು ಒಂದು ಅದ್ಭುತ ವೇದಿಕೆ. ಸಿಕ್ಕ ಅವಕಾಶವನ್ನು ಯಾವತ್ತೂ ಕೈಬಿಡಬಾರದು. ಟ್ರಾವಿಸ್ ಹೆಡ್​ ಅನುಭವಿ ಆಟಗಾರ. ಈಗಾಗಲೇ ತನ್ನ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೂಪಿಸಿದ್ದಾರೆ. ಆದರೆ ಅಭಿಷೇಕ್, ಪಿಚ್​ ಮತ್ತು ಪರಿಸ್ಥಿತಿಗಳನ್ನು ಅರಿತು ಆಡುವುದನ್ನು ಕಲಿಯಬೇಕು. ಹಾಗೆಯೇ ತಾಳ್ಮೆಯ ಮಂತ್ರವನ್ನೂ ಪಠಿಸಬೇಕು. ಹೀಗಿದ್ದಾಗ ಮಾತ್ರ ಯಶಸ್ಸು ಕಾಣಬಹುದು.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

Whats_app_banner