ಕನ್ನಡ ಸುದ್ದಿ  /  ಕ್ರಿಕೆಟ್  /  ಸನ್​ರೈಸರ್ಸ್ ಹೈದರಾಬಾದ್ ಸೋಲಿಗೆ ಪ್ರಮುಖ ಮೂರು ಕಾರಣಗಳು; 2ನೇ ಕ್ವಾಲಿಫೈಯರ್​ಗೂ ಮುನ್ನ ತಂಡದಲ್ಲಿ ಬದಲಾವಣೆಗೆ ಚಿಂತನೆ

ಸನ್​ರೈಸರ್ಸ್ ಹೈದರಾಬಾದ್ ಸೋಲಿಗೆ ಪ್ರಮುಖ ಮೂರು ಕಾರಣಗಳು; 2ನೇ ಕ್ವಾಲಿಫೈಯರ್​ಗೂ ಮುನ್ನ ತಂಡದಲ್ಲಿ ಬದಲಾವಣೆಗೆ ಚಿಂತನೆ

SRH vs KKR Qualifier 1 : 17ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್​​ರೈಸರ್ಸ್ ಹೈದರಾಬಾದ್ ತಂಡವು 8 ವಿಕೆಟ್​​ಗಳ ಸೋಲಿಗೆ ಮೂರು ಕಾರಣಗಳು ಇಲ್ಲಿವೆ.

ಸನ್​ರೈಸರ್ಸ್ ಹೈದರಾಬಾದ್ ಸೋಲಿಗೆ ಪ್ರಮುಖ ಮೂರು ಕಾರಣಗಳು; 2ನೇ ಕ್ವಾಲಿಫೈಯರ್​ಗೂ ಮುನ್ನ ತಂಡದಲ್ಲಿ ಬದಲಾವಣೆಗೆ ಚಿಂತನೆ
ಸನ್​ರೈಸರ್ಸ್ ಹೈದರಾಬಾದ್ ಸೋಲಿಗೆ ಪ್ರಮುಖ ಮೂರು ಕಾರಣಗಳು; 2ನೇ ಕ್ವಾಲಿಫೈಯರ್​ಗೂ ಮುನ್ನ ತಂಡದಲ್ಲಿ ಬದಲಾವಣೆಗೆ ಚಿಂತನೆ

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​​ಗಳಿಂದ ಸೋಲಿಸಿ, ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿತು. ಅಲ್ಲದೆ, ಪ್ರಸಕ್ತ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಮೊದಲು ಬ್ಯಾಟಿಂಗ್ ಮಾಡಿ​ ಕೇವಲ 159 ರನ್​​ಗೆ ಆಲೌಟಾದ ಎಸ್​ಆರ್​ಹೆಚ್, ಮಹತ್ವದ ಪಂದ್ಯದಲ್ಲಿ ಸೋಲಿಗೆ ಈ ಮೂರು ಪ್ರಮುಖ ಕಾರಣಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

1. ಅಗ್ರ ಕ್ರಮಾಂಕದ ದಯನೀಯ ವೈಫಲ್ಯ

ಸನ್​ರೈಸರ್ಸ್​ ಹೈದರಾಬಾದ್ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಬೌಲರ್​​ಗಳ ವಿರುದ್ಧ ದಂಡಯಾತ್ರೆ ನಡೆಸಿ ಪವರ್​​ಪ್ಲೇನಲ್ಲೇ ಹೈಸ್ಕೋರಿಂಗ್ ಮಾಡುತ್ತಿದ್ದರು. ಈ ಜೋಡಿ ಮೊದಲ 6 ಓವರ್​​​ಗಳಲ್ಲಿ 100+ ಗಡಿ ದಾಟಿತ್ತು. ಆದರೆ, ತಂಡವು ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡುತ್ತಿದ್ದ ಅಭಿಷೇಕ್ ಮತ್ತು ಹೆಡ್​ ಮಹತ್ವದ ಪಂದ್ಯದಲ್ಲಿ ಠುಸ್ ಆದರು. ಹೆಡ್ ಡಕೌಟ್ ಆದರೆ, 4 ಎಸೆತಗಳಲ್ಲಿ 3 ರನ್ ಗಳಿಸಿದರು. ಈ ವರ್ಷ ಹೆಡ್ 533 ರನ್ ಗಳಿಸಿದ್ದರೆ, ಅಭಿಷೇಕ್ 470 ರನ್ ಗಳಿಸಿದ್ದಾರೆ. ಆದರೆ ಮಹತ್ವದ ಪಂದ್ಯದಲ್ಲಿ ಕೈಕೊಟ್ಟರು.

2. ಪ್ಲಾನ್ ಬಿ ಹೊಂದಿರಲಿಲ್ಲ ಹೈದರಾಬಾದ್

ಇಲ್ಲಿಯವರೆಗೆ, ಹೈದರಾಬಾದ್ ತಮ್ಮ ಆಕ್ರಮಣಕಾರಿ ಆಟದಿಂದಾಗಿ ಐಪಿಎಲ್ 2024 ರಲ್ಲಿ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದೆ. ಆದರೆ ಪ್ರಮುಖ ಪಂದ್ಯದಲ್ಲಿ ಆಟಗಾರರು ಜವಾಬ್ದಾರಿಯುತವಾಗಿ ಆಡಬೇಕಾಗಿತ್ತು. ವಿಶೇಷವಾಗಿ ಶಹಬಾಜ್ ಅಹ್ಮದ್ ಮತ್ತು ನಿತೀಶ್ ರೆಡ್ಡಿ ರಕ್ಷಣಾತ್ಮಕವಾಗಿ ಆಡಬೇಕಿತ್ತು. ಆದರೆ ಅವರು ಸಹ ಕೈಕೊಟ್ಟರು. ಇವರ ನಂತರ ಅಬ್ದುಲ್ ಸಮದ್ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಸಮದ್ ಔಟಾದಾಗ ಇನ್ನೂ 5 ಓವರ್​​ಗಳು ಬಾಕಿ ಉಳಿದಿದ್ದವು. ಆದರೆ, ತಂಡವನ್ನು ರಕ್ಷಿಸುವ ಅವಕಾಶವನ್ನು ಕಳೆದುಕೊಂಡರು.

3. ದುರ್ಬಲ ಪ್ಲೇಯಿಂಗ್ ಇಲೆವೆನ್ ಆಯ್ಕೆ

ಪ್ಲೇಯಿಂಗ್ ಇಲೆವೆನ್​ನಲ್ಲಿ ನಿಯಮಿತ ಸ್ಪಿನ್ನರ್​ ಇರಲಿಲ್ಲ. ತಂಡವು ಸಂಪೂರ್ಣವಾಗಿ ವೇಗದ ಬೌಲಿಂಗ್ ಮೇಲೆ ಅವಲಂಬಿತವಾಗಿತ್ತು. ಆ ಮೂಲಕ ದೊಡ್ಡ ತಪ್ಪು ಮಾಡಿತು. ಟ್ರಾವಿಸ್ ಹೆಡ್ ಬೌಲಿಂಗ್ ಮಾಡಿದರೂ 10 ಎಸೆತಗಳಲ್ಲಿ 32 ರನ್ ಬಿಟ್ಟುಕೊಟ್ಟರು. ವೇಗಿಗಳು ಸಹ ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಅದರಲ್ಲೂ ತಂಡವು ಕಡಿಮೆ ಗಳಿಸಿದ್ದು ಕಡಿಮೆ ಸ್ಕೋರ್ ಆದ ಕಾರಣ ಡಿಫೆಂಡ್ ಮಾಡಿಕೊಳ್ಳಲು ಸಹ ಹೆಣಗಾಡಬೇಕಾಯಿತು.

ಎಸ್​ಆರ್​ಹೆಚ್​ ಮುಂದಿನ ಯಾವಾಗ?

ಸನ್​ರೈಸರ್ಸ್ ಹೈದರಾಬಾದ್ ತಂಡವು ಮೊದಲ ಕ್ವಾಲಿಫೈಯರ್​​ನಲ್ಲಿ ಸೋತಿದ್ದರೂ ಮತ್ತೊಂದು ಅವಕಾಶ ಪಡೆಯಲಿದೆ. ಮೇ 24ರಂದು ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಮೇ 22ರಂದು ನಡೆಯವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಸೆಣಸಾಟ ನಡೆಸಲಿವೆ. ಈ ಪಂದ್ಯವು ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಇಲ್ಲಿ ಪಿಚ್​ ಸ್ಲೋ ಇರುವ ಕಾರಣ ಯಾರಿಗೆ ತಂಡದಲ್ಲಿ ಸ್ಪಿನ್ನರ್​ಗಳಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ.

2ನೇ ಕ್ವಾಲಿಫೈಯರ್​ ಪಂದ್ಯಕ್ಕೆ ಎಸ್​ಆರ್​ಹೆಚ್ ಪ್ಲೇಯಿಂಗ್ 11

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್. (ಟ್ರಾವಿಸ್ ಹೆಡ್ ಇಂಪ್ಯಾಕ್ಟ್ ಪ್ಲೇಯರ್​ ಆಗಲಿದ್ದು, ಸ್ಪಿನ್ನರ್​ಗೆ ಮಣೆ ಹಾಕಬಹುದು, ಮತ್ತೊಬ್ಬ ಸ್ಪಿನ್ನರ್ ಶಹಬಾಜ್ ಅಹ್ಮದ್ ಇರಲಿದ್ದಾರೆ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ