ಸನ್​ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ
ಕನ್ನಡ ಸುದ್ದಿ  /  ಕ್ರಿಕೆಟ್  /  ಸನ್​ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ

ಸನ್​ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ

SRH vs LSG, IPL Match 7: ಇಂಡಿಯನ್ ಪ್ರೀಮಿಯರ್ ಲೀಗ್​​ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಹೈದರಾಬಾದ್​ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ಸನ್​ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ
ಸನ್​ರೈಸರ್ಸ್ ರನ್ ವೇಗ ತಡೆಯುವುದೇ ಲಕ್ನೋ; ಉಭಯ ತಂಡಗಳ ಪ್ರಮುಖ ಅಂಕಿ-ಅಂಶ, ದಾಖಲೆಗಳು, ಇತಿಹಾಸ

ಕಳೆದ ಆವೃತ್ತಿಯಂತೆ ಆಕ್ರಮಣಕಾರಿ ಆಟದಿಂದ ಎದುರಾಳಿಗಳನ್ನು ಕಂಗೆಡಿಸುತ್ತಿರುವ ತಂತ್ರವನ್ನು ಸನ್​ರೈಸರ್ಸ್​ ಹೈದರಾಬಾದ್ ಈ ಋತುವಿನಲ್ಲೂ ಮುಂದುವರೆಸಿದೆ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್​ಗಳನ್ನು ಚೆಂಡಾಡಿದ್ದ ಹೈದರಾಬಾದ್ ಇಂದು (ಮಾರ್ಚ್ 27) ಲಕ್ನೋ ಸೂಪರ್ ಜೈಂಟ್ಸ್ ಸವಾಲಿಗೆ ಸಜ್ಜಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಹೈಆಕ್ಟೇನ್ ಪಂದ್ಯ ನಡೆಯಲಿದೆ. ಇದು ಐಪಿಎಲ್ ಲೀಗ್ ಹಂತದ 7ನೇ ಪಂದ್ಯ.

ತನ್ನ ಮೊದಲ ಪಂದ್ಯವನ್ನು ಗೆದ್ದಿರುವ ಸನ್‌ರೈಸರ್ಸ್, ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ವೇಗ ಮುಂದುವರಿಸುವ ಗುರಿ ಹೊಂದಿದ್ದಾರೆ. ಎದುರಾಳಿ ತಂಡದ ಬೌಲಿಂಗ್ ಅನ್ನು ಮತ್ತೊಮ್ಮೆ ಕೆಡವಿ ಸತತ 2 ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ವಲ್ಪ ಅಂತರದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದ ತಪ್ಪುಗಳನ್ನು ಪುನರಾವರ್ತಿಸದಿರಲು ಮತ್ತು ಆತಿಥೇಯರ ಲೆಕ್ಕಾಚಾರ ಧ್ವಂಸಗೊಳಿಸಲು ದೃಢನಿಶ್ಚಯ ಮಾಡಿದೆ.

ಐಪಿಎಲ್‌ನಲ್ಲಿ SRH vs LSG ಐತಿಹಾಸಿಕ ಅವಲೋಕನ

ಸನ್‌ರೈಸರ್ಸ್ ಮತ್ತು ಲಕ್ನೋ ತಂಡಗಳು ಇಲ್ಲಿಯವರೆಗೆ ಒಟ್ಟು ನಾಲ್ಕು ಐಪಿಎಲ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಲಕ್ನೋ 3 ಬಾರಿ ಮೇಲುಗೈ ಸಾಧಿಸಿದ್ದರೆ, ಸನ್‌ರೈಸರ್ಸ್ ಒಂದು ಬಾರಿ ಮತ್ತು ಕಳೆದ ವರ್ಷ ನಡೆದ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ರಾಹುಲ್ ಚಹರ್.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ XI

ಏಡನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಹಬಾಜ್ ಅಹ್ಮದ್, ಪ್ರಿನ್ಸ್ ಯಾದವ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ದಿಗ್ವೇಶ್ ಸಿಂಗ್.

ಎರಡೂ ತಂಡಗಳ ಕದನದಲ್ಲಿ ಹೆಚ್ಚು ರನ್ ಗಳಿಸಿದವರು

ನಿಕೋಲಸ್ ಪೂರನ್ 137 ರನ್‌: ಲಕ್ನೋ ಫ್ರಾಂಚೈಸಿ ಪರ ಪ್ರಬಲ ಪ್ರದರ್ಶನ ನೀಡುತ್ತಿರುವ ಪೂರನ್, ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಗಳಲ್ಲಿ ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 198.55 ಸ್ಟ್ರೈಕ್ ರೇಟ್‌ನಲ್ಲಿ 137 ರನ್ ಗಳಿಸಿದ್ದಾರೆ.

ಅಭಿಷೇಕ್ ಶರ್ಮಾ 95 ರನ್: ಈ ಎರಡೂ ತಂಡಗಳ ನಡುವಿನ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಕ್ರಮಣಕಾರಿ ಎಡಗೈ ಓಪನರ್ ಆಗಿರುವ ಅಭಿ, ಲಕ್ನೋ ವಿರುದ್ಧ ಎಸ್​ಆರ್​​ಹೆಚ್​ ಪರ 215.90 ಸ್ಟ್ರೈಕ್ ರೇಟ್‌ನಲ್ಲಿ 95 ರನ್ ಗಳಿಸಿದ್ದಾರೆ.

ಟ್ರಾವಿಸ್ ಹೆಡ್ 89 ರನ್‌: ಎಸ್‌ಆರ್‌ಹೆಚ್ vs ಎಲ್‌ಎಸ್‌ಜಿ ಪಂದ್ಯಗಳಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟ್ರಾವಿಸ್ ಹೆಡ್ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಆರಂಭಿಕ ಆಟಗಾರ ಲಕ್ನೋ ವಿರುದ್ಧ ಕೇವಲ 1 ಪಂದ್ಯವನ್ನಾಡಿದ್ದು, 30 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದ್ದಾರೆ.

ಎರಡೂ ತಂಡಗಳ ಕದನದಲ್ಲಿ ಹೆಚ್ಚು ವಿಕೆಟ್ ಪಡೆದವರು

ಅವೇಶ್ ಖಾನ್ 5 ವಿಕೆಟ್‌: ಐಪಿಎಲ್‌ನಲ್ಲಿ ಲಕ್ನೋ ಆಡುವಾಗ ಎಸ್‌ಆರ್‌ಎಚ್ ವಿರುದ್ಧ 7.2 ಸ್ಟ್ರೈಕ್ ರೇಟ್ ಮತ್ತು 10.80ರ ಸರಾಸರಿಯಲ್ಲಿ ಅವೇಶ್ ಖಾನ್ 5 ವಿಕೆಟ್‌ ಕಬಳಿಸಿದ್ದಾರೆ.

ಅಭಿಷೇಕ್ ಶರ್ಮಾ, ಪ್ಯಾಟ್ ಕಮಿನ್ಸ್ 1 ವಿಕೆಟ್: ಎಸ್​ಆರ್​ಹೆಚ್ ಪರ ಆಡುವಾಗ ಲಕ್ನೋ ವಿರುದ್ಧ ಅಭಿಷೇಕ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ಅವರು ತಲಾ 1 ವಿಕೆಟ್ ಪಡೆದಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ದಾಖಲೆಗಳು

ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಇಬ್ಬರೂ ಅಜೇಯ ಆರಂಭಿಕ ಜೊತೆಯಾಟ ನಡೆಸಿ 9.4 ಓವರ್‌ಗಳಲ್ಲಿ 166 ರನ್‌ಗಳ ಗುರಿಯನ್ನು ಬೆನ್ನಟ್ಟಿದರು. ಇದು ಬಂದಿದ್ದು ಕೂಡ ಲಕ್ನೋ ವಿರುದ್ಧವೇ.

ಹೈದರಾಬಾದ್‌ ಮೈದಾನದಲ್ಲಿ 200+ ಸ್ಟ್ರೈಕ್-ರೇಟ್ ಹೊಂದಿರುವ ಐಪಿಎಲ್‌ನ ಏಕೈಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ - 348 ರನ್‌, 204.70 ಸ್ಟ್ರೈಕ್-ರೇಟ್.

ಐಪಿಎಲ್ 2024ರಿಂದ ಎಸ್​​ಆರ್​ಹೆಚ್​​ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಟ್ರಾವಿಸ್ ಹೆಡ್ - 634 ರನ್‌, 42.26 ಸರಾಸರಿ ಮತ್ತು 193.88 ಸ್ಟ್ರೈಕ್-ರೇಟ್.

ಐಪಿಎಲ್ 2022 ರಿಂದ ಹೈದರಾಬಾದ್‌ ಮೈದಾನದಲ್ಲಿ ಹೆನ್ರಿಚ್ ಕ್ಲಾಸೆನ್ - 469 ರನ್‌, 58.62 ಸರಾಸರಿ ಮತ್ತು 193.80 ಸ್ಟ್ರೈಕ್-ರೇಟ್.

ಐಪಿಎಲ್ 2024ರ ನಂತರ ಟಿ20ಗಳಲ್ಲಿ ಎಡಗೈ ಸ್ಪಿನ್ನರ್‌ಗಳ ವಿರುದ್ಧ ಹೆನ್ರಿಚ್ ಕ್ಲಾಸೆನ್ - 10 ರನ್‌, 3 ಔಟ್‌, 40 ಸ್ಟ್ರೈಕ್-ರೇಟ್.

ಐಪಿಎಲ್‌ನಲ್ಲಿ ಲಕ್ನೋ ವಿರುದ್ಧ ಮೊಹಮ್ಮದ್ ಶಮಿ - 5 ವಿಕೆಟ್‌, 17 ಸರಾಸರಿ ಮತ್ತು 16.8 ಸ್ಟ್ರೈಕ್-ರೇಟ್.

ಐಪಿಎಲ್‌ನಲ್ಲಿ ಜಂಪಾ vs ಪಂತ್ - 2 ವಿಕೆಟ್‌, 137.5 ಸ್ಟ್ರೈಕ್-ರೇಟ್ ಮತ್ತು 11 ಸರಾಸರಿ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ದಾಖಲೆಗಳು

ರವಿ ಬಿಷ್ಣೋಯ್ ಇಲ್ಲಿಯವರೆಗೆ ಹೈದರಾಬಾದ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ.

ಅಭಿಷೇಕ್ ಶರ್ಮಾ ವಿರುದ್ಧ ಶಾರ್ದೂಲ್ ಠಾಕೂರ್ ಉತ್ತಮ ದಾಖಲೆ ಹೊಂದಿದ್ದಾರೆ - 2 ವಿಕೆಟ್‌, ಸರಾಸರಿ 8, ಸ್ಟ್ರೈಕ್-ರೇಟ್ 114.28.

ಇಶಾನ್ ಕಿಶನ್ ಮುಂಬೈ ಪರ ಆಡುತ್ತಿದ್ದಾಗ ಅವರನ್ನು ರವಿ ಬಿಷ್ಣೋಯ್ 7 ಇನ್ನಿಂಗ್ಸ್​ಗಳಲ್ಲಿ 4 ಸಲ ಔಟ್ ಮಾಡಿದ್ದಾರೆ. 91.66 ಸ್ಟ್ರೈಕ್-ರೇಟ್ ಮತ್ತು 8.25 ಸರಾಸರಿ.

ನಿಕೋಲಸ್ ಪೂರನ್ 2022ರ ಆವೃತ್ತಿಯ ನಂತರ ಐಪಿಎಲ್‌ನಲ್ಲಿ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ - 1140 ರನ್‌, 40.71 ಸರಾಸರಿ ಮತ್ತು 165.93 ಸ್ಟ್ರೈಕ್-ರೇಟ್.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ರಿಷಭ್ ಪಂತ್ - 80 ರನ್‌, 26.66 ಸರಾಸರಿ ಮತ್ತು 123.07 ಸ್ಟ್ರೈಕ್-ರೇಟ್.

ಈ ಪಂದ್ಯದಲ್ಲಿ ಮುರಿಯಬಹುದಾದ ದಾಖಲೆಗಳು

ಹೆನ್ರಿಚ್ ಕ್ಲಾಸೆನ್ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಪರ 1000 ರನ್ ಪೂರ್ಣಗೊಳಿಸಲು 39 ರನ್‌ಗಳ ಅಗತ್ಯವಿದೆ.

ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ 1500 ರನ್ ಪೂರ್ಣಗೊಳಿಸಲು 99 ರನ್‌ಗಳ ಅಗತ್ಯವಿದೆ.

ಐಪಿಎಲ್‌ನಲ್ಲಿ ವಿಕೆಟ್ ಹಿಂದೆ ನಿಂತು 100 ವಿಕೆಟ್‌ ಪೂರ್ಣಗೊಳಿಸಲು ರಿಷಭ್ ಪಂತ್‌ಗೆ ಇನ್ನೂ ಎರಡು ವಿಕೆಟ್‌ಗಳು ಬೇಕಾಗಿವೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner