ಅತ್ಯಧಿಕ ರನ್, ಗರಿಷ್ಠ 250+ ಸ್ಕೋರ್, 4 ಸಲ ಆರ್ಸಿಬಿ ರೆಕಾರ್ಡ್ ಧ್ವಂಸ; 286 ರನ್ ಚಚ್ಚಿದ SRH ದಾಖಲೆಗಳ ಮಾರಣಹೋಮ
ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಚಚ್ಚಿದ ಸನ್ರೈಸರ್ಸ್ ಹೈದರಾಬಾದ್ ದಾಖಲೆಗಳ ಮಾರಣಹೋಮ ನಡೆಸಿದೆ. ಒಂದು ಗರಿಷ್ಠ ಸ್ಕೋರ್ನೊಂದಿಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದೆ.

ಕಳೆದ ವರ್ಷದ ವಿಧ್ವಂಸಕ ಬ್ಯಾಟಿಂಗ್ ವೈಭವ ಮುಂದುವರೆಸಿರುವ ಸನ್ರೈಸರ್ಸ್ ಹೈದರಾಬಾದ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಮೊದಲ ಪಂದ್ಯದಿಂದಲೇ ದಾಖಲೆಗಳ ಬೇಟೆ ಆರಂಭಿಸಿದೆ. ಮಾರ್ಚ್ 23ರಂದು ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಲೀಗ್ನ 2ನೇ ಪಂದ್ಯದಲ್ಲಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಮೇಲೆ ದಂಡಯಾತ್ರೆ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ದಾಖಲೆಗಳ ಮೇಲೆ ದಾಖಲೆ ಬರೆದಿದೆ.
ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (24) ಮತ್ತು ಟ್ರಾವಿಸ್ ಹೆಡ್ (67) ಸಾಲಿಡ್ ಆರಂಭ ಒದಗಿಸಿಕೊಟ್ಟರೆ, ಬಳಿಕ ಇಶಾನ್ ಕಿಶನ್ (106*) ಚೊಚ್ಚಲ ಐಪಿಎಲ್ ಶತಕದೊಂದಿಗೆ ಮೆರೆದಾಡಿದರು. ಹೆನ್ರಿಚ್ ಕ್ಲಾಸೆನ್ (34), ನಿತೀಶ್ ಕುಮಾರ್ ರೆಡ್ಡಿ (30) ಅಮೋಘ ಕಾಣಿಕೆ ನೀಡಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ 2ನೇ ಗರಿಷ್ಠ ಸ್ಕೋರ್. ಮೊದಲು ಸ್ಥಾನವೂ ಇದೇ ತಂಡದ್ದೇ ಇದೆ.
ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿದೆ. 2024ರಲ್ಲಿ 287 ರನ್ ಗಳಿಸಿದ್ದ ಹೈದರಾಬಾದ್ ಇದೀಗ 286 ರನ್ ಬಾರಿಸಿ ಎರಡೇ ರನ್ನಿಂದ ತನ್ನದೇ ದಾಖಲೆ ಮುರಿದು ಅಗ್ರಸ್ಥಾನಕ್ಕೇರುವ ಅವಕಾಶವನ್ನು ತಪ್ಪಿಸಿಕೊಂಡಿತು. ಐಪಿಎಲ್ನ ಗರಿಷ್ಠ ಸ್ಕೋರ್ ಮಾಡಿದ ತಂಡಗಳ ಪಟ್ಟಿ ಇಲ್ಲಿದೆ.
287/3 - ಎಸ್ಆರ್ಹೆಚ್ vs ಆರ್ಸಿಬಿ, ಬೆಂಗಳೂರು, 2024
286/6 - ಎಸ್ಆರ್ಹೆಚ್ vs ಆರ್ಆರ್, ಹೈದರಾಬಾದ್, 2025
277/3 - ಎಸ್ಆರ್ಹೆಚ್ vs ಮುಂಬೈ, ಹೈದರಾಬಾದ್, 2024
272/7 - ಕೆಕೆಆರ್ vs ಡೆಲ್ಲಿ, ವಿಶಾಖಪಟ್ಟಣಂ, 2024
266/7 - ಎಸ್ಆರ್ಹೆಚ್ vs ಡೆಲ್ಲಿ, ದೆಹಲಿ, 2024
263/5 - ಆರ್ಸಿಬಿ vs ಪುಣೆ, ಬೆಂಗಳೂರು, 2013
ಅತಿ ಹೆಚ್ಚು ಬಾರಿ 250 ಪ್ಲಸ್ ಸ್ಕೋರ್
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸಲ 250 ಪ್ಲಸ್ ಸ್ಕೋರ್ ಮಾಡಿದ ತಂಡದ ಎಂಬ ಹೆಗ್ಗಳಿಕೆಗೆ ಸನ್ರೈಸರ್ಸ್ ಹೈದರಾಬಾದ್ ಪಾತ್ರವಾಗಿದೆ. ಇದರೊಂದಿಗೆ ಇಂಗ್ಲೆಂಡ್ನ ಸರ್ರೆ ತಂಡ ಮತ್ತು ಭಾರತ ಕ್ರಿಕೆಟ್ ತಂಡದ ದಾಖಲೆಯನ್ನೇ ಪುಡಿಗಟ್ಟಿದೆ. ಹೈದರಾಬಾದ್ ತಂಡವು ಒಟ್ಟು ನಾಲ್ಕು ಸಲ 250 ಪ್ಲಸ್ ಸ್ಕೋರ್ ಮಾಡಿದೆ. ಆದರೆ ಭಾರತ ತಂಡ ಮತ್ತು ಸರ್ರೆ ತಂಡವು ತಲಾ 3 ಸಲ ಈ ಸಾಧನೆ ಮಾಡಿದೆ.
4 - ಸನ್ರೈಸರ್ಸ್ ಹೈದರಾಬಾದ್ (287/3, 286/6, 277/3, 263/5)
3 - ಸರ್ರೆ (258/6, 252/7, 250/6)
3 - ಭಾರತ (297/6, 260/5, 283/1)
ಆರ್ಸಿಬಿ ದಾಖಲೆಯನ್ನು 4ನೇ ಸಲ ಬ್ರೇಕ್
ಸನ್ರೈಸರ್ಸ್ ಹೈದರಾಬಾದ್ ಆರ್ಸಿಬಿ ದಾಖಲೆಯನ್ನು ನಾಲ್ಕನೇ ಸಲ ಬ್ರೇಕ್ ಮಾಡಿದೆ. ಕಳೆದ ವರ್ಷ ಮೂರು ಬಾರಿ, ಈ ಸಲ ಒಂದು ಬಾರಿ ಆರ್ಸಿಬಿಯ 263 ರನ್ಗಳ ದಾಖಲೆಯನ್ನು ಹಿಂದಿಕ್ಕಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಬಾರಿಸಿತ್ತು. ಈ ದಾಖಲೆ 11 ವರ್ಷಗಳಿಂದ ಸುರಕ್ಷಿತವಾಗಿತ್ತು. ಆದರೆ ಕಳೆದ ವರ್ಷ ಹೈದರಾಬಾದ್ ಅಬ್ಬರಕ್ಕೆ ಇದು ಕೊಚ್ಚಿ ಹೋಗಿತ್ತು. ಯಾವಾಗೆಲ್ಲಾ ಆರ್ಸಿಬಿ ದಾಖಲೆ ಬ್ರೇಕ್ ಆಗಿದೆ ಎನ್ನುವುದಕ್ಕೆ ಮೇಲೆ ಅಂಕಿ-ಅಂಶ ಇದೆ.
ಐಪಿಎಲ್‌ನಲ್ಲಿ ಅತ್ಯಧಿಕ ಪವರ್‌ಪ್ಲೇ ಮೊತ್ತಗಳು
125/0 - ಎಸ್ಆರ್ಹೆಚ್ vs ಡಿಸಿ, ದೆಹಲಿ, 2024
107/0 - ಎಸ್ಆರ್ಹೆಚ್ vs ಲಕ್ನೋ, ಹೈದರಾಬಾದ್, 2024
105/0 - ಕೆಕೆಆರ್ vs ಆರ್ಸಿಬಿ, ಬೆಂಗಳೂರು, 2017
100/2 - ಸಿಎಸ್ಕೆ vs ಪಂಜಾಬ್, ವಾಂಖೆಡೆ, 2014
94/1 - ಎಸ್ಆರ್ಹೆಚ್ vs ಆರ್ಆರ್, ಹೈದರಾಬಾದ್, 2025*
93/1 - ಪಂಜಾಬ್ vs ಕೆಕೆಆರ್, ಕೋಲ್ಕತ್ತಾ, 2024
