SRH vs RR Highlights IPL 2024:‌ 36 ರನ್‌ಗಳಿಂದ ರಾಜಸ್ಥಾನ್ ಮಣಿಸಿದ ಸನ್‌ರೈಸರ್ಸ್;‌ ಕೆಕೆಆರ್‌ vs ಎಸ್‌ಆರ್‌ಎಚ್‌ ಫೈನಲ್‌ ಫೈಟ್
ಕನ್ನಡ ಸುದ್ದಿ  /  ಕ್ರಿಕೆಟ್  /  Srh Vs Rr Highlights Ipl 2024:‌ 36 ರನ್‌ಗಳಿಂದ ರಾಜಸ್ಥಾನ್ ಮಣಿಸಿದ ಸನ್‌ರೈಸರ್ಸ್;‌ ಕೆಕೆಆರ್‌ Vs ಎಸ್‌ಆರ್‌ಎಚ್‌ ಫೈನಲ್‌ ಫೈಟ್

ಕೆಕೆಆರ್‌ vs ಎಸ್‌ಆರ್‌ಎಚ್‌ ಫೈನಲ್‌ ಫೈಟ್

SRH vs RR Highlights IPL 2024:‌ 36 ರನ್‌ಗಳಿಂದ ರಾಜಸ್ಥಾನ್ ಮಣಿಸಿದ ಸನ್‌ರೈಸರ್ಸ್;‌ ಕೆಕೆಆರ್‌ vs ಎಸ್‌ಆರ್‌ಎಚ್‌ ಫೈನಲ್‌ ಫೈಟ್

Updated May 24, 2024 11:25 PM ISTUpdated May 24, 2024 11:25 PM IST
  • twitter
  • Share on Facebook
Updated May 24, 2024 11:25 PM IST
  • twitter
  • Share on Facebook

ಐಪಿಎಲ್‌ 2024ರಲ್ಲಿ ಮೇ 24ರ ಶುಕ್ರವಾರ‌ ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಗೆದ್ದು ಬೀಗಿದೆ. ಎಲಿಮನೇಟರ್‌ ಪಂದ್ಯದಲ್ಲಿ ಗೆದ್ದು ಬಂದಿದ್ದ ರಾಜಸ್ಥಾನ್‌ ರಾಯಲ್ಸ್‌ ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಎಸ್‌ಆರ್‌ಎಚ್‌ ಫೈನಲ್‌ ಪ್ರವೇಶಿಸಿದ್ದು, ಕೆಕೆಆರ್‌ ವಿರುದ್ಧ ಫೈನಲ್‌ ಪಂದ್ಯ ಆಡಲಿದೆ.

Fri, 24 May 202405:55 PM IST

ಫೈನಲ್‌ ಕದನಕ್ಕೆ ಮುಹೂರ್ತ ಫಿಕ್ಸ್

ಐಪಿಎಲ್‌ 2024ರ ಫೈನಲಿಸ್ಟ್‌ಗಳು ಯಾರೆಂಬುದು ನಿರ್ಧಾರವಾಗಿದೆ. ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ಮೇ 26ರ ಭಾನುವಾರ ಇದೇ ಮೈದಾನದಲ್ಲಿ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ) ಮುಖಾಮುಖಿಯಾಗಲಿವೆ.

Fri, 24 May 202405:53 PM IST

ರಾಜಸ್ಥಾನ್‌ ಎಲಿಮನೇಟ್

ಚೆನ್ನೈನ ಸ್ಲೋ ಪಿಚ್‌ನಲ್ಲಿ ಸನ್‌ರೈಸರ್ಸ್‌ ಮೇಲುಗೈ ಸಾಧಿಸಿದೆ. ತಂಡ ಟಾಸ್‌ ಸೋತರೂ ಪಂದ್ಯ ಗೆದ್ದಿದೆ.‌ ರಾಜಸ್ಥಾನ ಪರ ಧ್ರುವ್‌ ಜುರೆಲ್ ಆಕರ್ಷ‌ಕ ಅರ್ಧಶತಕ ಸಿಡಿಸಿದರು. ಡೆತ್‌ ಓವರ್‌ಗಳಲ್ಲಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಹಾಕಿದರು. ಗುರಿ ದೊಡ್ಡದಾಗಿದ್ದರಿಂದ ಅವರಿಂದ ಗೆಲುವು ಒಲಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಬಳಸಿದ ಪ್ಯಾಟ್‌ ಕಮಿನ್ಸ್‌, ಹೆಚ್ಚು ವಿಕೆಟ್‌ ಬರುವಂತೆ ನೋಡಿಕೊಂಡರು. ಶಹಬಾಜ್‌ ಅಹ್ಮದ್‌ ಮಾತ್ರವಲ್ಲದೆ ಅಭಿಷೇಕ್‌ ಶರ್ಮಾ ಕೂಡಾ ವಿಕೆಟ್‌ ಟೇಕಿಂಗ್‌ ಪ್ರದರ್ಶನ ನೀಡಿದರು. ತಂಡ ಗೆಲುವಿನ ಸಮೀಪ ಬರುತ್ತಿದ್ದಂತೆಯೇ ಎಸ್‌ಆರ್‌ಎಚ್‌ ಮಾಲಕಿ ಕಾವಿಯಾ ಮಾರನ್ ಸಂಭ್ರಮದಿಂದ ಕುಣಿದಾಡಿದ್ದಾರೆ.‌ ಮೂರನೇ ಬಾರಿಗೆ ಸನ್‌ರೈಸರ್ಸ್ ಐಪಿಎಲ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅತ್ತ ರಾಜಸ್ಥಾನ್‌ ರಾಯಲ್ಸ್‌ ತಂಡವು ಫೈನಲ್‌ ಟೂರ್ನಿಯಿಂದ ನಿರ್ಗಮಿಸಿದೆ.

Fri, 24 May 202405:51 PM IST

ಫೈನಲ್‌ ಪ್ರವೇಶಿಸಿದ ಸನ್‌ರೈಸರ್ಸ್‌ ಹೈದರಾಬಾದ್

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ 2024ರ ಫೈನಲ್‌ ಪ್ರವೇಶಿಸಿದೆ. ರಾಜಸ್ಥಾನ್‌ ರಾಯಲ್ಸ್‌ ಟೂರ್ನಿಯಿಂದ ನಿರ್ಗಮಿಸಿದೆ. 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಕೇವಲ 139 ರನ್‌ ಗಳಿಸುವಲ್ಲಿ ಸಂಜು ಸ್ಯಾಮ್ಸನ್‌ ಪಡೆ ಸುಸ್ತಾಗಿದೆ. ಭರ್ಜರಿ 36 ರನ್‌ಗಳಿಂದ ಗೆದ್ದ ಹೈದರಾಬಾದ್‌ ಮುಂದೆ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಎದುರಿಸಲಿದೆ.

Fri, 24 May 202405:45 PM IST

ಗೆಲುವಿನ ಹೊಸ್ತಿಲಲ್ಲಿ ಸನ್‌ರೈಸರ್ಸ್

ಆರ್‌ಸಿಬಿ ವಿರುದ್ಧದ ಎಲಿಮನೇಟರ್‌ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ್ದ ರೋವ್ಮನ್‌ ಪೊವೆಲ್‌ 6 ರನ್‌ ಗಳಿಸಿ ಔಟಾಗಿದ್ದಾರೆ. ರಾಜಸ್ಥಾನ ಸೋಲಿನ ಸಮೀಪದಲ್ಲಿದೆ. ಅತ್ತ ಸನ್‌ರೈಸರ್ಸ್‌ ಗೆಲುವಿನ ಸಮೀಪ ಬಂದಿದೆ.

Fri, 24 May 202405:35 PM IST

ರಾಯಲ್ಸ್:‌ 123/6 (17)

17 ಓವರ್‌ ಬಳಿಕ ರಾಜಸ್ಥಾನ್‌ 6 ವಿಕೆಟ್‌ ನಷ್ಟಕ್ಕೆ 123 ರನ್‌ ಪೇರಿಸಿದೆ. ತಂಡದ ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ 53 ರನ್‌ಗಳ ಅಗತ್ಯವಿದೆ. ಧ್ರುವ್‌ ಜುರೆಲ್‌ ಹಾಗೂ ಪೊವೆಲ್‌ ಕ್ರೀಸ್‌ನಲ್ಲಿದ್ದಾರೆ.

Fri, 24 May 202405:19 PM IST

ರಾಯಲ್ಸ್:‌ 93/6 (14)

ರಾಜಸ್ಥಾನ್‌ ರಾಯಲ್ಸ್ 92 ರನ್‌ ವೇಳೆಗೆ 6 ವಿಕೆಟ್‌ ಕಳೆದುಕೊಂಡಿದೆ. ಹೈದರಾಬಾದ್‌ ಸ್ಪಿನ್ನರ್‌ಗಳು ಮೋಡಿ ಮಾಡಿದ್ದಾರೆ.‌ 14 ಓವರ್‌ಗಳ ಅಂತ್ಯಕ್ಕೆ ತಂಡವು 6 ವಿಕೆಟ್‌ ನಷ್ಟಕ್ಕೆ 93 ರನ್‌ ಮಾತ್ರ ಗಳಿಸಿದೆ. ಮುಂದಿನ 6 ಓವರ್‌ಗಳಲ್ಲಿ ರಾಜಸ್ಥಾನಕ್ಕೆ 83 ರನ್‌ಗಳ ಅಗತ್ಯವಿದೆ.

Fri, 24 May 202405:08 PM IST

ರಾಜಸ್ಥಾನ್‌ ರಾಯಲ್ಸ್:‌ 80/5 (12)

ಒಂದೇ ಓವರ್‌ನಲ್ಲಿ ಶಹಬಾಜ್‌ ಅಹ್ಮದ್‌ 2 ವಿಕೆಟ್‌ ಕಬಳಿಸಿದ್ದಾರೆ. ಪರಾಗ್‌ ಬೆನ್ನಲ್ಲೇ ಲೋಕಲ್‌ ಹೀರೋ ಆರ್‌ ಅಶ್ವಿನ್‌ ಔಟಾಗಿದ್ದಾರೆ. 12 ಓವರ್‌ ಬಳಿಕ ರಾಯಲ್ಸ್ 5 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿದೆ.

Fri, 24 May 202405:04 PM IST

ರಿಯಾನ್‌ ಪರಾಗ್‌ ಔಟ್!!!

‌ಔಟ್!!! ರಿಯಾನ್‌ ಪರಾಗ್‌ ಔಟ್;‌ ಸ್ಲೋ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಮೋಡಿ ಮಾಡುತ್ತಿದ್ದಾರೆ. ಸನ್‌ರೈಸರ್ಸ್‌ ಪಂದ್ಯದಲ್ಲಿ ಹಿಡಿತ ಸಾಧಿಸುತ್ತಿದೆ. ರಾಜಸ್ಥಾನ ಪ್ರಮುಖ ವಿಕೆಟ್‌ ಕಳೆದುಕೊಂಡಿದೆ. ತಂಡದ ಇನ್‌ಫಾರ್ಮ್‌ ಬ್ಯಾಟರ್‌ ರಿಯಾನ್‌ ಪರಾಗ್‌ 6 ರನ್‌ ಗಳಿಸಿ ಔಟಾಗಿದ್ದಾರೆ. ಶಹಬಾಜ್‌ ಅಹ್ಮದ್‌ ಪ್ರಮುಖ 2 ವಿಕೆಟ್‌ ಕಬಳಿಸಿದ್ದಾರೆ.

Fri, 24 May 202404:55 PM IST

ನಾಯಕ ಸಂಜು ಸ್ಯಾಮ್ಸನ್‌ ಔಟ್‌, ರಾಜಸ್ಥಾನ್‌ : 70/3 (9)

ಅಭಿಷೇಕ್‌ ಶರ್ಮಾ ಎಸೆತದಲ್ಲಿ ನಾಯಕ ಸಂಜು ಸ್ಯಾಮ್ಸನ್‌ ವಿಕೆಟ್‌ ಒಪ್ಪಿಸಿದ್ದಾರೆ. 67 ರನ್‌ ವೇಳೆಗೆ ರಾಜಸ್ಥಾನ್‌ ಅಗ್ರ 3 ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡಿದೆ. 9 ಓವರ್‌ ಬಳಿಕ ತಂಡವು 70 ರನ್‌ ಗಳಿಸಿದೆ.

Fri, 24 May 202404:50 PM IST

ರಾಜಸ್ಥಾನ್‌ 65/2 (7.5)

42 ರನ್‌ ಗಳಿಸಿದ್ದ ಜೈಸ್ವಾಲ್‌ ಔಟಾಗಿದ್ದಾರೆ. ರಾಜಸ್ಥಾನವು ಪ್ರಮುಖ ವಿಕೆಟ್‌ ಕಳೆದುಕೊಂಡಿದೆ. ಶಹಬಾಜ್‌ ಅಹ್ಮದ್‌ ತಂಡಕ್ಕಾಗಿ ಪ್ರಮುಖ ವಿಕೆಟ್‌ ಕಬಳಿಸಿದಾರೆ. 7.5 ಓವರ್‌ಗಳಲ್ಲಿ ರಾಜಸ್ಥಾನ್‌ 2 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದೆ.

Fri, 24 May 202404:38 PM IST

ರಾಜಸ್ಥಾನ್‌ ರಾಯಲ್ಸ್‌: 51/1 (6)

ಪವರ್‌ಪ್ಲೇ ಕೊನೆಯ ಓವರ್‌ನಲ್ಲಿ ಜೈಸ್ವಾಲ್‌ 19 ರನ್‌ ಗಳಿಸಿದ್ದಾರೆ. 6 ಓವರ್‌ಗಳ ಪವರ್‌ಪ್ಲೇ ಬಳಿಕ ರಾಯಲ್ಸ್‌ 1 ವಿಕೆಟ್‌ ನಷ್ಟಕ್ಕೆ 51 ರನ್‌ ಗಳಿಸಿದೆ. ಜೈಸ್ವಾಲ್ 15‌ ಎಸೆತಗಳಲ್ಲಿ 33 ರನ್‌ ಸಿಡಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ 6 ರನ್‌ ಗಳಿಸಿ ಸಾಥ್‌ ನೀಡುತ್ತಿದ್ದಾರೆ.

Fri, 24 May 202404:28 PM IST

ರಾಜಸ್ಥಾನ್‌ ರಾಯಲ್ಸ್‌: 24/1 (4)

ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡಿದೆ. ಕಮಿನ್ಸ್‌ ಎಸೆತದಲ್ಲಿ ಟಾಮ್ ಕೊಹ್ಲರ್-ಕ್ಯಾಡ್ಮೋರ್ 10(16) ಔಟಾಗಿದ್ದಾರೆ.‌ 4 ಓವರ್‌ ಬಳಿಕ ಆರ್‌ಆರ್‌ 1 ವಿಕೆಟ್‌ ಕಳೆದುಕೊಂಡು 24 ರನ್ ಗಳಿಸಿದೆ.

Fri, 24 May 202404:20 PM IST

ರಾಜಸ್ಥಾನ್‌ ರಾಯಲ್ಸ್: 19/0 (3)

3 ಓವರ್‌ ಬಳಿಕ ರಾಯಲ್ಸ್‌ 19 ರನ್‌ ಗಳಿಸಿದೆ. ಯಶಸ್ವಿ ಜೈಸ್ವಾಲ್‌ 14 ರನ್‌ ಗಳಿಸಿದ್ದಾರೆ. ಟಾಮ್ ಕೊಹ್ಲರ್-ಕ್ಯಾಡ್ಮೋರ್ 6 ರನ್‌ ಗಳಿಸಿ ಆಡುತ್ತಿದ್ದಾರೆ.

Fri, 24 May 202404:15 PM IST

ಎರಡು ಓವರ್‌ ಬಳಿಕ ರಾಜಸ್ಥಾನ್‌: RR 13/0 (2)

2 ಓವರ್‌ ಬಳಿಕ ರಾಜಸ್ಥಾನ್‌ ರಾಯಲ್ಸ್ 13 ರನ್‌ ಗಳಿಸಿದೆ.

Fri, 24 May 202404:07 PM IST

ಚೇಸಿಂಗ್‌ ಆರಂಭಿಸಿದ ರಾಯಲ್ಸ್

ರಾಜಸ್ಥಾನ್‌ ರಾಯಲ್ಸ್‌ ತಂಡವು 176 ರನ್​ ಚೇಸಿಂಗ್‌ ಆರಂಭಿಸಿದೆ. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್‌ ಹಾಗೂ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಕಣಕ್ಕಿಳಿದಿದ್ದಾರೆ.

Fri, 24 May 202403:50 PM IST

ಎಸ್​ಆರ್​​ಹೆಚ್ ಇನ್ನಿಂಗ್ಸ್ ಮುಕ್ತಾಯ

ಎಸ್​ಆರ್​ಹೆಚ್ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಹೆನ್ರಿಚ್ ಕ್ಲಾಸೆನ್ 50 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಆರ್​ಆರ್​ ಪರ ಆವೇಶ್ ಖಾನ್ ಮತ್ತು ಟ್ರೆಂಟ್ ಬೋಲ್ಟ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಸಂಜು ಪಡೆ 176 ರನ್ ಗಳಿಸಿದರೆ, ಮೂರನೇ ಫೈನಲ್ ಟಿಕೆಟ್ ಪಡೆದುಕೊಳ್ಳಲಿದೆ.

Fri, 24 May 202403:45 PM IST

ಕೊನೆಯ ಓವರ್​​ನಲ್ಲಿ ಶಹಬಾಜ್ ಔಟ್

ಕೊನೆಯ ಓವರ್​​​ನಲ್ಲಿ ಶಹಬಾಜ್ ಅಹ್ಮದ್, ಆವೇಶ್ ಖಾನ್ ಬೌಲಿಂಗ್​ನಲ್ಲಿ ಔಟಾದರ. ಅವರು 18 ಎಸೆತಗಳಲ್ಲಿ 18 ರನ್ ಗಳಿಸಿದರು.

Fri, 24 May 202403:38 PM IST

ಹೆನ್ರಿಚ್ ಕ್ಲಾಸೆನ್ ವಿಕೆಟ್ ಪತನ

ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಸಂದೀಪ್ ಶರ್ಮಾ ಬೌಲಿಂಗ್ ಹೆನ್ರಿಚ್ ಕ್ಲಾಸೆನ್ ಔಟಾದರು. ತಂಡದ 7ನೇ ವಿಕೆಟ್ ಪತನವಾಗಿದ್ದು, ಪ್ಯಾಟ್ ಕಮಿನ್ಸ್​ ಕ್ರೀಸ್​ಗೆ ಬಂದಿದ್ದಾರೆ.

Fri, 24 May 202403:35 PM IST

ಹೆನ್ರಿಚ್ ಕ್ಲಾಸೆನ್ ಜವಾಬ್ದಾಯುತ ಅರ್ಧಶತಕ

ಸಂಕಷ್ಟದಲ್ಲಿ ಆಸರೆಯಾದ ಹೆನ್ರಿಚ್​ ಕ್ಲಾಸೆನ್ ಅರ್ಧಶತಕ ಪೂರೈಸಿದ್ದಾರೆ. 33 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 50 ರನ್ ಗಳಿಸಿದ್ದಾರೆ.

SRH 163/6 (18)

Fri, 24 May 202403:18 PM IST

15 ಓವರ್​ ಮುಕ್ತಾಯ 132/6

15ನೇ ಓವರ್​​ನಲ್ಲಿ ಎಸ್​​ಆರ್​​ಹೆಚ್ 12 ರನ್ ಗಳಿಸಿತು. ಹೆನ್ರಿಚ್ ಕ್ಲಾಸೆನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. 26 ಎಸೆತಗಳಲ್ಲಿ 36 ರನ್ ಗಳಿಸಿದ್ದಾರೆ. ತಂಡದ ಮೊತ್ತವನ್ನು 180ರ ಗಡಿ ದಾಟಿಸಲು ಯತ್ನಿಸುತ್ತಿದ್ದಾರೆ.

Fri, 24 May 202403:10 PM IST

ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ

ಸನ್​ರೈಸರ್ಸ್​ ಹೈದರಾಬಾದ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನಗೊಂಡಿದೆ. ಆವೇಶ್ ಖಾನ್ ಬೌಲಿಂಗ್​ನಲ್ಲಿ ನಿತೀಶ್ ರೆಡ್ಡಿ 5 (10) ಮತ್ತು ಅಬ್ದುಲ್ ಸಮದ್ 0 (1) ಪೆವಿಲಿಯನ್ ಸೇರಿದರು.

ತಂಡದ ಮೊತ್ತ 120/6 (14)

Fri, 24 May 202402:59 PM IST

12 ಓವರ್ ಮುಕ್ತಾಯಕ್ಕೆ 108/4

12ನೇ ಓವರ್​​​ನಲ್ಲಿ ಕೇವಲ 6 ರನ್ ಬಂತು

ಎಸ್​ಆರ್​​ಹೆಚ್ 108/4 (12)

ಹೆನ್ರಿಚ್ ಕ್ಲಾಸೆನ್ 21(17)

ನಿತೀಶ್ ರೆಡ್ಡಿ 1(5)

ಕೊನೆಯ ನಾಲ್ಕು ಓವರ್​​ಗಳಲ್ಲಿ ಕೇವಲ 16 ರನ್ ಬಂದಿದೆ,

Fri, 24 May 202402:49 PM IST

ಟ್ರಾವಿಸ್ ಹೆಡ್ ವಿಕೆಟ್

ತಂಡಕ್ಕೆ ಚೇತರಿಕೆ ನೀಡುತ್ತಿದ್ದ ಟ್ರಾವಿಸ್ ಹೆಡ್​ ವಿಕೆಟ್ ಒಪ್ಪಿಸಿದ್ದಾರೆ. ಸಂದೀಪ್ ಶರ್ಮಾ ಬೌಲಿಂಗ್​​ನಲ್ಲಿ ಅಶ್ವಿನ್​ಗೆ ಕ್ಯಾಚ್ ನೀಡಿದರು. ಟ್ರಾವಿಸ್ ಹೆಡ್ 34(28) [4s-3 6s-1]

ಎಸ್​​ಆರ್​ಹೆಚ್​ 99/4 (10)

ಹೆನ್ರಿಚ್ ಕ್ಲಾಸೆನ್ 12(7)

Fri, 24 May 202402:44 PM IST

9 ಓವರ್​ ಮುಕ್ತಾಯ 96/3

ಅಶ್ವಿನ್ 9ನೇ ಓವರ್​ನಲ್ಲಿ ಕೇವಲ 4 ರನ್​ ಬಿಟ್ಟುಕೊಟ್ಟಿದ್ದಾರೆ.

ಎಸ್​​ಆರ್​ಹೆಚ್​ 96/3 (9)

ಟ್ರಾವಿಸ್ ಹೆಡ್ 33(25)

ಹೆನ್ರಿಚ್ ಕ್ಲಾಸೆನ್ 12(7)

Fri, 24 May 202402:35 PM IST

7 ಓವರ್​ ಮುಕ್ತಾಯ 81/3

7ನೇ ಓವರ್​ನಲ್ಲಿ ಎಸ್​​ಆರ್​​ಹೆಚ್ 13 ರನ್ ಹರಿದುಬಂತು. ಟ್ರಾವಿಸ್ ಹೆಡ್ ಒಂದು ಸಿಕ್ಸರ್, 1 ಬೌಂಡರಿ ಸಿಡಿಸಿದರು.

ಎಸ್​​ಆರ್​ಹೆಚ್​ 81/3 (7)

ಟ್ರಾವಿಸ್ ಹೆಡ್ 28(18)

ಹೆನ್ರಿಚ್ ಕ್ಲಾಸೆನ್ 2(2)

Fri, 24 May 202402:29 PM IST

ಪವರ್​​ಪ್ಲೇ ಮುಕ್ತಾಯ 68/3

6ನೇ ಓವರ್​​ನಲ್ಲಿ ಎಸ್​ಆರ್​ಹೆಚ್ 11 ರನ್ ಗಳಿಸಿತು. ಟ್ರಾವಿಸ್ ಹೆಡ್ ಎರಡು ಬೌಂಡರಿ ಸಿಡಿಸಿದರು. ತಂಡದ ಮೊತ್ತ 68/3 (6)

Fri, 24 May 202402:25 PM IST

ಪೆವಿಲಿಯನ್ ಸೇರಿದ ಮಾರ್ಕ್ರಮ್

ಸನ್​ರೈಸರ್ಸ್ ಹೈದರಾಬಾದ್ ಮೂರನೇ ವಿಕೆಟ್ ಕಳೆದುಕೊಂಡಿತು. ತ್ರಿಪಾಠಿ ಔಟಾದ ಅದೇ ಓವರ್​​ನಲ್ಲಿ ಏಡನ್ ಮಾರ್ಕ್ರಮ್ ವಿಕೆಟ್ ಒಪ್ಪಿಸಿದ್ದಾರೆ. ಈ ಮೂರು ವಿಕೆಟ್ ಸಹ ಟ್ರೆಂಟ್ ಬೋಲ್ಟ್ ಪಡೆದರು. 57/3 (5)

Fri, 24 May 202402:23 PM IST

ರಾಹುಲ್ ತ್ರಿಪಾಠಿ ಔಟ್

ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ ತ್ರಿಪಾಠಿ ಔಟ್. 15 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ಸಹಿತ 37 ರನ್ ಗಳಿಸಿದರು. ಎಸ್​ಆರ್​​ಹೆಚ್​​ ಎರಡು ವಿಕೆಟ್ ಕಳೆದುಕೊಂಡಿತು.

Fri, 24 May 202402:19 PM IST

4 ಓವರ್ ಮುಕ್ತಾಯ 45/1

ನಾಲ್ಕನೇ ಓವರ್​​ನಲ್ಲಿ ತ್ರಿಪಾಠಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ಒಟ್ಟು 16 ರನ್ ಹರಿದು ಬಂತು.

ತ್ರಿಪಾಠಿ 26(12)

ಹೆಡ್ 6(7)

Fri, 24 May 202402:15 PM IST

3 ಓವರ್ ಮುಕ್ತಾಯಕ್ಕೆ 29/1

3ನೇ ಓವರ್​​​ನಲ್ಲಿ ಎಸ್​ಆರ್​ಹೆಚ್ 7 ರನ್ ಗಳಿಸಿತು. ತ್ರಿಪಾಠಿ ಮತ್ತೊಂದು ಬೌಂಡರಿ ಸಿಡಿಸಿದರು.

ತ್ರಿಪಾಠಿ 12 (7)

ಹೆಡ್ 5 (6)

Fri, 24 May 202402:11 PM IST

ಎರಡು ಓವರ್ ಮುಕ್ತಾಯ 22 ರನ್

ಮೊದಲ ಎರಡು ಓವರ್​ ಮುಕ್ತಾಯಕ್ಕೆ ಎಸ್​ಆರ್​ಹೆಚ್​ 22 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. 2ನೇ ಓವರ್​​ನಲ್ಲಿ 9 ರನ್ ಗಳಿಸಿತು. ರಾಹುಲ್ ತ್ರಿಪಾಠಿ 1 ಬೌಂಡರಿ ಸಿಡಿಸಿದರು.

Fri, 24 May 202402:07 PM IST

ಹೈದರಾಬಾದ್​ಗೆ ಆರಂಭಿಕ ಆಘಾತ

ಸನ್​ರೈಸರ್ಸ್ ಹೈದರಾಬಾದ್​ಗೆ ಆರಂಭಿಕ ಆಘಾತವಾಗಿದೆ. ಟ್ರೆಂಟ್ ಬೋಲ್ಟ್ ಎಸೆದ ಮೊದಲ ಓವರ್​​ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ಔಟಾದರು. ಒಂದು ಸಿಕ್ಸರ್, 1 ಬೌಂಡರಿ ಸಹಿತ 12 ರನ್ ಗಳಿಸಿ ಕ್ಯಾಚ್ ನೀಡಿದರು.

Fri, 24 May 202402:00 PM IST

ಎಸ್​ಆರ್​​ಹೆಚ್ ಬ್ಯಾಟಿಂಗ್ ಆರಂಭ

ಎರಡನೇ ಸೆಮಿಫೈನಲ್ ಎಂದು ಕರೆಯುವ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಂಭಿಸಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಟ್ರೆಂಟ್ ಬೋಲ್ಟ್ ಮೊದಲ ಓವರ್​​ ಬೌಲಿಂಗ್ ಮಾಡುತ್ತಿದ್ದಾರೆ.

Fri, 24 May 202401:42 PM IST

ರಾಜಸ್ಥಾನ್ ರಾಯಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್

ಶಿಮ್ರಾನ್ ಹೆಟ್ಮೆಯರ್, ನಾಂಡ್ರೆ ಬರ್ಗರ್, ಶುಭಂ ದುಬೆ, ಡೊನೊವನ್ ಫೆರೇರಾ, ಕುಲದೀಪ್ ಸೇನ್

Fri, 24 May 202401:41 PM IST

ಸನ್‌ರೈಸರ್ಸ್ ಹೈದರಾಬಾದ್ ಇಂಪ್ಯಾಕ್ಟ್ ಪ್ಲೇಯರ್ಸ್

ಉಮ್ರಾನ್ ಮಲಿಕ್, ಸನ್ವಿರ್ ಸಿಂಗ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಾಂಡೆ, ಶಹಬಾಜ್ ಅಹ್ಮದ್

Fri, 24 May 202401:37 PM IST

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI)

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.

Fri, 24 May 202401:35 PM IST

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI)

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​/ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್

Fri, 24 May 202401:32 PM IST

ಕ್ವಾಲಿಫೈಯರ್​-2; ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ

ಐಪಿಎಲ್​ನ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Fri, 24 May 202409:17 AM IST

ಮೂರನೇ ಬಾರಿ ಫೈನಲ್‌ಗೆ ಲಗ್ಗೆ ಇಡುವವರ್ಯಾರು?

ರಾಜಸ್ಥಾನ್‌ ರಾಯಲ್ಸ್​ 2008ರಲ್ಲಿ ಚಾಂಪಿಯನ್ ಆಗಿತ್ತು. 2022ರಲ್ಲಿ ರನ್ನರ್​ಅಪ್ ಆಗಿತ್ತು. ಅತ್ತ 2016ರಲ್ಲಿ‌ ಆರ್‌ಸಿಬಿ ಮಣಿಸಿ ಟ್ರೋಫಿ ಗೆದ್ದಿದ್ದ ಎಸ್​ಆರ್​ಹೆಚ್, 2018ರಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು. ಹಾಗಾಗಿ ಈ ಎರಡರಲ್ಲಿ ಗೆದ್ದ ತಂಡವು ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದಂತಾಗುತ್ತದೆ. ಜಯಿಸಿದ ತಂಡವು ಮೇ 26ರಂದು ಕೆಕೆಆರ್ ವಿರುದ್ಧ ಫೈನಲ್ ಆಡಲಿದೆ.

Fri, 24 May 202404:01 AM IST

ಮುಖಾಮುಖಿ ದಾಖಲೆ

ಎಸ್‌ಆರ್‌ಎಚ್‌ ಹಾಗೂ ರಾಜಸ್ಥಾನ್‌ ತಂಡಗಳ ನಡುವೆ ಒಟ್ಟು 19 ಪಂದ್ಯ ನಡೆದಿದ್ದು, ಎಸ್​ಆರ್​ಹೆಚ್ ತಂಡ 10 ಪಂದ್ಯಗಳಲ್ಲಿ ಗೆದ್ದರೆ, ಆರ್​ಆರ್ 09ರಲ್ಲಿ ಗೆಲುವು ಸಾಧಿಸಿದೆ.

Fri, 24 May 202403:58 AM IST

ಚಿದಂಬರಂ ಸ್ಟೇಡಿಯಂ ಪಿಚ್ ರಿಪೋರ್ಟ್

ಪ್ರಸಕ್ತ ಐಪಿಎಲ್​ನಲ್ಲಿ ಎಂಎ ಚಿದಂಬರಂ ಪಿಚ್​​ನಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 164 ಆಗಿದ್ದರೆ, ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 151 ಆಗಿದೆ. ಪಂದ್ಯ ಮುಂದುವರೆದಂತೆ ಪಿಚ್​​ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಇದು ಹಿಟ್ಟರ್​​ಗಳಿಗೆ ಕಷ್ಟವಾಗಬಹುದು. ಸ್ಪಿನ್​​ ಪಿಚ್​ ಆಗಿರುವ ಚೆಪಾಕ್​, ಸಂಪ್ರದಾಯದಂತೆ ಈ ಬಾರಿಯೂ ಬ್ಯಾಟಿಂಗ್​-ಬೌಲಿಂಗ್​ ಎರಡಕ್ಕೂ ಸಮನಾಗಿ ಸಹಕಾರಿಯಾಗಿದೆ.

Fri, 24 May 202403:55 AM IST

ಚೆನ್ನೈನ ಹವಾಮಾನ ವರದಿ

ಕ್ವಾಲಿಫೈಯರ್‌ ಪಂದ್ಯವು ಚೆನ್ನೈನಲ್ಲಿ ನಡೆಯುತ್ತಿದ್ದು, ಮೇ24 ಶುಕ್ರವಾರ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಚೆನ್ನೈನಲ್ಲಿ ನಡೆಯುವ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ. ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಮೂರು ಪಂದ್ಯಗಳು ಮಳೆಯಿಂದಾಗಿ ಸಂಪೂರ್ಣ ರದ್ದಾಗಿದ್ದು, ಈ ಮಹತ್ವದ ಪಂದ್ಯಕ್ಕೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಅಭಿಮಾನಿಗಳಿಗೆ ಸಮಾಧಾನದ ಸುದ್ದಿಯಾಗಿದೆ. ಹೀಗಾಗಿ ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ.

Fri, 24 May 202403:53 AM IST

ಎಸ್​ಆರ್​ಹೆಚ್ ಸಂಭಾವ್ಯ​ ಪ್ಲೇಯಿಂಗ್​ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ , ಏಡೆನ್ ಮಾರ್ಕ್ರಮ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ಕ್ಯಾಪ್ಟನ್ 9 ), ಭುವನೇಶ್ವರ್ ಕುಮಾರ್, ಟಿ ನಟರಾಜನ್ (ಇಂಪ್ಯಾಕ್ಟ್ ಪ್ಲೇಯರ್- ಮಯಾಂಕ್ ಮಾರ್ಕಾಂಡೆ).

Fri, 24 May 202403:53 AM IST

ಆರ್​ಆರ್ ಸಂಭಾವ್ಯ​​ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ಕ್ಯಾಪ್ಟನ್ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ. (ಇಂಪ್ಯಾಕ್ಟ್ ಪ್ಲೇಯರ್- ಯುಜ್ವೇಂದ್ರ ಚಹಲ್)

ಹಂಚಿಕೊಳ್ಳಲು ಲೇಖನಗಳು

  • twitter