ಕನ್ನಡ ಸುದ್ದಿ  /  Cricket  /  Srk To Light Up Wpl 2024 Womens Premier League Opening Ceremony Performers Date Time Telecast Streaming Rcb Mi Dc Up Prs

ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ: ಪ್ರದರ್ಶಕರು, ದಿನಾಂಕ, ಸಮಯ, ಲೈವ್ ಟೆಲಿಕಾಸ್ಟ್, ಸ್ಟ್ರೀಮಿಂಗ್ ವಿವರ ಇಲ್ಲಿದೆ

WPl 2024 opening ceremony streaming : ಮಹಿಳಾ ಪ್ರೀಮಿಯರ್ ಲೀಗ್​ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭ ಎಷ್ಟೊತ್ತಿಗೆ, ವೀಕ್ಷಿಸುವುದೇಗೆ? ಇಲ್ಲಿದೆ ವಿವರ.

ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ
ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ

ಫೆಬ್ರವರಿ 23ರಿಂದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ (WPL 2024) ಆರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಯಾವೆಲ್ಲಾ ಬಾಲಿವುಡ್​ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬುದರ ಕುರಿತು ಬಿಸಿಸಿಐ ಮಾಹಿತಿ ನೀಡಿದೆ. ಬಿ ಟೌನ್​ನ 6 ನಟರು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಲು ಸಜ್ಜಾಗಿದ್ದಾರೆ.

ಡಬ್ಲ್ಯುಪಿಎಲ್ 2024ರ ಸೀಸನ್ ಶುಕ್ರವಾರ (ಫೆಬ್ರವರಿ 23) 2023ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್​ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಮುಂಬೈ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಡೆಲ್ಲಿ ಕ್ಯಾಪ್ಟನ್ ಮೆಗ್ ಲ್ಯಾನಿಂಗ್​ ಟಾಸ್​ ಪ್ರಕ್ರಿಯೆಗೆ ಮೈದಾನಕ್ಕೆ ಪ್ರವೇಶಿಸುವ ಮೊದಲು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ ತಾರೆಯರು ಕಾರ್ಯಕ್ರಮಕ್ಕೆ ಮೆರುಗು ತಂದುಕೊಡಲು ಸಿದ್ಧರಾಗಿದ್ದಾರೆ. ಹಾಗಾದರೆ ಆ ಬಾಲಿವುಡ್ ತಾರೆಯರು ಯಾರು? ಎಷ್ಟೊತ್ತಿಗೆ ಉದ್ಘಾಟನಾ ಸಮಾರಂಭ, ನೇರ ಪ್ರಸಾರ ನೋಡುವುದೇಗೆ? ಇಲ್ಲಿದೆ ವಿವರ.

ಶಾರೂಖ್​ ಖಾನ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ, ಟೈಗರ್ ಶ್ರಾಫ್, ಶಾಹಿದ್ ಕಪೂರ್ ಮತ್ತು ವರುಣ್ ಧವನ್ ಸೇರಿದಂತೆ ಹಲವರಿಗೆ ಅತ್ಯುತ್ತಮ ಪ್ರದರ್ಶನ ಹೊರಬರಲಿದೆ. 2023ರ ಚೊಚ್ಚಲ ಆವೃತ್ತಿಯಲ್ಲಿ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನನ್ ಅವರು ನೃತ್ಯಪ್ರದರ್ಶನ ನೀಡಿದ್ದರು. ಗಾಯಕರಾದ ಎಪಿ ಧಿಲ್ಲೋನ್, ಶಂಕರ್ ಮಹದೇವನ್ ಹಾಡುಗಳನ್ನು ಹಾಡಿದ್ದರು.

ಡಬ್ಲ್ಯುಪಿಎಲ್ 2024 ಉದ್ಘಾಟನಾ ಸಮಾರಂಭ - ಪ್ರದರ್ಶಕರ ಸಂಪೂರ್ಣ ಪಟ್ಟಿ

ಶಾರುಖ್ ಖಾನ್

ಕಾರ್ತಿಕ್ ಆರ್ಯನ್

ಶಾಹಿದ್ ಕಪೂರ್

ಸಿದ್ಧಾರ್ಥ್ ಮಲ್ಹೋತ್ರಾ

ವರುಣ್ ಧವನ್

ಟೈಗರ್ ಶ್ರಾಫ್

ಡಬ್ಲ್ಯುಪಿಎಲ್ 2024 ಉದ್ಘಾಟನಾ ಸಮಾರಂಭ - ದಿನಾಂಕ, ಸಮಯ, ಸ್ಥಳ

ಡಬ್ಲ್ಯುಪಿಎಲ್ 2024 ರ ಉದ್ಘಾಟನಾ ಸಮಾರಂಭವು ಶುಕ್ರವಾರ (ಫೆಬ್ರವರಿ 23) ಸಂಜೆ 6:30ಕ್ಕೆ ಪ್ರಾರಂಭವಾಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು (ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು)

ಡಬ್ಲ್ಯುಪಿಎಲ್ 2024ರ ಉದ್ಘಾಟನಾ ಸಮಾರಂಭವನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಡಬ್ಲ್ಯುಪಿಎಲ್ 2024ರ ಉದ್ಘಾಟನಾ ಸಮಾರಂಭವನ್ನು ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ.

2024ರ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ಎರಡು ಹಂತಗಳಲ್ಲಿ ನಡೆಯಲಿದೆ. ಲೀಗ್​, ಎಲಿಮಿನೇಟರ್, ಫೈನಲ್ ಸೇರಿ ಎರಡು 22 ಪಂದ್ಯಗಳು ಜರುಗಲಿವೆ. ಫೆಬ್ರವರಿ 23 ರಿಂದ ಮಾರ್ಚ್ 17ರವರೆಗೆ ಈ ಲೀಗ್ ನಡೆಯಲಿದೆ. ಮೊದಲ ಹಂತದ 11 ಪಂದ್ಯಗಳಿಗೆ (ಫೆಬ್ರವರಿ 23-ಮಾರ್ಚ್ 4) ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ.

ಲೀಗ್, ಎಮಿಮಿನೇಟರ್, ಫೈನಲ್ ಸೇರಿ 11 ಪಂದ್ಯಗಳಿಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಲಿದೆ. 2023ರ ಋತುವಿನಲ್ಲಿ ಡಬ್ಲ್ಯುಪಿಎಲ್​ ಮುಂಬೈ (ಬ್ರಬೋರ್ನ್ ಸ್ಟೇಡಿಯಂ) ಮತ್ತು ನವಿ ಮುಂಬೈ (ಡಿವೈ ಪಾಟೀಲ್ ಸ್ಟೇಡಿಯಂ) ಎರಡು ಸ್ಟೇಡಿಯಂಗಳಲ್ಲಿ ನಡೆದಿತ್ತು.