ಭಾರತದ ಈ ಸ್ಟಾರ್​ ಆಟಗಾರ ಆಸ್ಟ್ರೇಲಿಯಾಗೆ 27 ಬ್ಯಾಗ್​ ಹೊತ್ತೊಯ್ದಿದ್ದರಂತೆ! ಬಿಸಿಸಿಐ ಪಾವತಿಸಿದ್ಯಂತೆ ಲಕ್ಷ ಲಕ್ಷ!
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಈ ಸ್ಟಾರ್​ ಆಟಗಾರ ಆಸ್ಟ್ರೇಲಿಯಾಗೆ 27 ಬ್ಯಾಗ್​ ಹೊತ್ತೊಯ್ದಿದ್ದರಂತೆ! ಬಿಸಿಸಿಐ ಪಾವತಿಸಿದ್ಯಂತೆ ಲಕ್ಷ ಲಕ್ಷ!

ಭಾರತದ ಈ ಸ್ಟಾರ್​ ಆಟಗಾರ ಆಸ್ಟ್ರೇಲಿಯಾಗೆ 27 ಬ್ಯಾಗ್​ ಹೊತ್ತೊಯ್ದಿದ್ದರಂತೆ! ಬಿಸಿಸಿಐ ಪಾವತಿಸಿದ್ಯಂತೆ ಲಕ್ಷ ಲಕ್ಷ!

BCCI: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗರೊಬ್ಬರು ಒಟ್ಟು 250 ಕೆಜಿ ತೂಕದ 27 ಬ್ಯಾಗ್​​ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು ಎಂದು ವರದಿಯೊಂದು ಹೇಳಿದೆ.

ಭಾರತದ ಈ ಸ್ಟಾರ್​ ಆಟಗಾರ ಆಸ್ಟ್ರೇಲಿಯಾಗೆ 27 ಬ್ಯಾಗ್​ ಹೊತ್ತೊಯ್ದಿದ್ದರಂತೆ! ಬಿಸಿಸಿಐ ಪಾವತಿಸಿದ್ಯಂತೆ ಲಕ್ಷ ಲಕ್ಷ!
ಭಾರತದ ಈ ಸ್ಟಾರ್​ ಆಟಗಾರ ಆಸ್ಟ್ರೇಲಿಯಾಗೆ 27 ಬ್ಯಾಗ್​ ಹೊತ್ತೊಯ್ದಿದ್ದರಂತೆ! ಬಿಸಿಸಿಐ ಪಾವತಿಸಿದ್ಯಂತೆ ಲಕ್ಷ ಲಕ್ಷ!

ನವದೆಹಲಿ (ಫೆ 14): ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (BGT 2024-25) ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿದ ಟೀಮ್ ಇಂಡಿಯಾದ (Team India) ಕಳಪೆ ಪ್ರದರ್ಶನವು ಭಾರತೀಯ ಕ್ರಿಕೆಟ್​ನಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಯಿತು. 10 ವರ್ಷಗಳ ನಂತರ ಬಿಜಿಟಿ ಸರಣಿ ಕಳೆದುಕೊಂಡ ಭಾರತ, ಸಾಕಷ್ಟು ಪರಿಣಾಮ ಎದುರಿಸಿತು. ಸರಣಿ ಬಳಿಕ ಸ್ಟಾರ್ ಆಟಗಾರರ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದವು. ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆಯಾಯಿತು. ಸರಣಿ ಮಧ್ಯೆ ರವಿಚಂದ್ರನ್ ಅಶ್ವಿನ್ ನಿವೃತ್ತರಾದರು. ಹೆಡ್​ಕೋಚ್ ಗೌತಮ್ ಗಂಭೀರ್ ಭಾರೀ ಟೀಕೆ ಎದುರಿಸಿದರು. ಪ್ರವಾಸದ ನಂತರ ತಂಡದ ಹಲವು ಬದಲಾವಣೆ ಕಂಡಿತು.

ಕಳಪೆ ಪ್ರದರ್ಶನದ ಬಳಿಕ ಆಟಗಾರರಲ್ಲಿ ಹೆಚ್ಚಿನ ಶಿಸ್ತು ಮೂಡಿಸುವ ಪ್ರಯತ್ನದಲ್ಲಿ ಬಿಸಿಸಿಐ, ಕಟ್ಟುನಿಟ್ಟಾದ 10 ಅಂಶಗಳ ಆದೇಶವನ್ನು ಪರಿಚಯಿಸಿದೆ. ಈ ಪೈಕಿ ದೇಶೀಯ ಕ್ರಿಕೆಟ್ ಆಡುವುದೂ ಸೇರಿದೆ. ಕುಟುಂಬ ಪ್ರಯಾಣದ ಮೇಲಿನ ನಿರ್ಬಂಧವು ಕೂಡ ನಿರ್ಣಾಯಕ ಅಂಶವಾಗಿದೆ. ಮತ್ತೊಂದು ಪ್ರಮುಖ ನಿಯಮ ಏನೆಂದರೆ ಆಟಗಾರನು ತನ್ನೊಂದಿಗೆ ಕೊಂಡೊಯ್ಯುವ ಲಗೇಜ್​​ ಪ್ರಮಾಣದ ಮೇಲೆ ಮಿತಿ ಹಾಕಿದ್ದು. ಹೊಸ ಪ್ರೋಟೋಕಾಲ್ ಪ್ರಕಾರ, ಒಬ್ಬ ಆಟಗಾರ 150 ಕೆಜಿಗಿಂತ ಹೆಚ್ಚು ಮೌಲ್ಯದ ಲಗೇಜ್ ತನ್ನೊಂದಿಗೆ ಕೊಂಡೊಯ್ಯುಂತಿಲ್ಲ! ಇದೆಲ್ಲದಕ್ಕೂ ಬಿಸಿಸಿಐ ಮಿತಿ ಹೇರಲು ಕಾರಣ ಆಟಗಾರನೊಬ್ಬನ 27 ಲಗೇಜ್ ಬ್ಯಾಗ್ ತೆಗೆದುಕೊಂಡು ಹೋಗಿದ್ದರಿಂದ!

27 ಬ್ಯಾಗ್ ತೆಗೆದುಕೊಂಡು ಹೋಗಿದ್ದ ಆಟಗಾರ

ಹೌದು, ಟೀಮ್ ಇಂಡಿಯಾ ಸ್ಟಾರ್ ಆಟಗಾರನೊಬ್ಬ ತನ್ನೊಂದಿಗೆ 250 ಕೆಜಿ ತೂಕದ ಲಗೇಜ್​​ ಅನ್ನು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡಿದ್ದರಂತೆ. ಇದಕ್ಕಾಗಿ ಬಿಸಿಸಿಐ ಲಕ್ಷ ಲಕ್ಷ ಪಾವತಿ ಮಾಡಿದ್ಯಂತೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ದೈನಿಕ್ ಜಾಗರಣ್ ವರದಿಯ ಪ್ರಕಾರ, ಈ ಆಟಗಾರ ಯಾರು ಎಂಬುದು ತಿಳಿದು ಬಂದಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ತನ್ನೊಂದಿಗೆ 27 ಬ್ಯಾಗ್​​ಗಳನ್ನು ತೆಗೆದುಕೊಂಡು ಹೋಗಿದ್ದರಂತೆ. ಇಲ್ಲಿ ಒಂದು ಟ್ವಿಸ್ ಇದೆ. ಹೊತ್ತೊಯ್ದಿದ್ದ 27 ಚೀಲಗಳೂ ಆತನಿಗೆ ಸೇರಿದವಲ್ಲ. ಅವುಗಳಲ್ಲಿ ಕೆಲವು ಅವರ ಕುಟುಂಬ ಮತ್ತು ವೈಯಕ್ತಿಕ ಸಹಾಯಕರಿಗೆ ಸೇರಿದ್ದವಾಗಿದ್ದವು. ಅವರ ಸ್ವಂತ ಲಗೇಜ್​​ಗಳಲ್ಲಿ 17 ಬ್ಯಾಟ್​ಗಳು ಸೇರಿದ್ದವು. ಇದೆಲ್ಲವೂ ಹಿರಿಯ ಆಟಗಾರರಿಗೆ ಸಂಬಂಧಪಟ್ಟವು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಮಿತಿ ಹೆಚ್ಚಾದರೆ ಆಟಗಾರನೇ ಪಾವತಿಸಬೇಕು

ಇಲ್ಲಿ ಮತ್ತೊಂದು ಅಚ್ಚರಿ ಏನೆಂದರೆ ಎಲ್ಲಾ ಲಗೇಜ್​ಗಳಿಗೂ ಬಿಸಿಸಿಐ ಕಡೆಯಿಂದಲೇ ಪಾವತಿ ಮಾಡಲಾಗಿತ್ತಂತೆ. ಹೌದು, ಆಸ್ಟ್ರೇಲಿಯಾದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಿದ ಅವಧಿಯಲ್ಲಿ ಬಿಸಿಸಿಐ ಈ ಎಲ್ಲಾ ಲಗೇಜ್​​ಗೂ ಪಾವತಿಸಿತ್ತಂತೆ. ಎಲ್ಲದಕ್ಕೂ ಪಾವತಿಸುವುದನ್ನು ಬಿಟ್ಟು ಬೇರೆ ಆಯ್ಕೆ ಬಿಸಿಸಿಐ ಮುಂದಿರಲಿಲ್ಲ. ಲಗೇಜ್​ಗಳ ಸ್ಥಳಾಂತರ ಮತ್ತು ಅದಕ್ಕೆ ಸಂಬಂಧಿಸಿ ತಗುಲಿದ ನಿಖರವಾದ ಮೊತ್ತ ಎಷ್ಟು ಎಂಬುದು ಬಹಿರಂಗಪಡಿಸಲಾಗಿಲ್ಲ. ಆದರೆ ಇದು ಲಕ್ಷಗಳಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೇ ಕೆಲವರು ಅನುಕರಣೆ ಮಾಡಲು ಯತ್ನಿಸಿದರು ಎಂದೂ ವರದಿ ಹೇಳಿದೆ. ಇದು ಬಿಸಿಸಿಐ ಹೊರೆಯೂ ಆಯಿತು. ಹೀಗಾಗಿ ಲಗೇಜ್​ ಮಿತಿಯನ್ನು 250 ಕೆಜಿಯಿಂದ 150 ಕೆಜಿಗೆ ಆದೇಶ ಹೊರಡಿಸಿತು. ಗರಿಷ್ಠ ಮಿತಿಯನ್ನು ಮೀರಿದರೆ, ಆಟಗಾರನೇ ಪಾವತಿಸಬೇಕಾಗುತ್ತದೆ.

ಚಾಂಪಿಯನ್ಸ್ ಟ್ರೋಫಿಯಿಂದಲೇ ನಿಯಮಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ. ದುಬೈನಲ್ಲಿ 25 ದಿನಗಳಿಗಿಂತ ಹೆಚ್ಚು ಕಾಲ ಉಳಿಯದ ಕಾರಣ ಕುಟುಂಬಗಳು ಅವರೊಂದಿಗೆ ದುಬೈಗೆ ಹೋಗುವುದಿಲ್ಲ ಎಂದು ಆಟಗಾರರಿಗೆ ಈಗಾಗಲೇ ತಿಳಿಸಲಾಗಿದೆ. ನಿಯಮಗಳ ಪ್ರಕಾರ, ಕುಟುಂಬಗಳು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರವಾಸಗಳಲ್ಲಿ ಆಟಗಾರರೊಂದಿಗೆ ಎರಡು ವಾರಗಳವರೆಗೆ ಇರಬಹುದು. ಅಂದರೆ ಭಾರತದ ಇಂಗ್ಲೆಂಡ್ ಪ್ರವಾಸ ಕೈಗೊಂಡರೆ ಪತ್ನಿಯರು ಅಥವಾ ಕುಟುಂಬ ಸದಸ್ಯರು ಆಟಗಾರರ ಜೊತೆಗೆ ಎರಡು ವಾರಗಳ ಕಾಲ ಇರಬಹುದು.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner