ಕನ್ನಡ ಸುದ್ದಿ  /  Cricket  /  Stop Calling Me That Word Virat Kohli Left Embarrased With King Tag Rebukes Danish Sait Virat Kohli Rcb Unbox Event Prs

ಇನ್ಮುಂದೆ ನನ್ನನ್ನು ಆ ರೀತಿ ಕರೆಯಬೇಡಿ ಮುಜುಗರವಾಗುತ್ತೆ; ತನ್ನನ್ನು ಏನೆಂದು ಕರೆಯಬೇಕೆಂದು ಹೇಳಿದ ವಿರಾಟ್ ಕೊಹ್ಲಿ

Virat Kohli : ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ನಲ್ಲಿ ತನ್ನನ್ನು ಕಿಂಗ್ ಎಂದು ಕರೆಯಬೇಡಿ ಎಂದು ಬ್ಯಾಟಿಂಗ್​ ಸೂಪರ್ ಸ್ಟಾರ್​ ವಿರಾಟ್ ಕೊಹ್ಲಿ ಅವರು ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ತನ್ನನ್ನು ಏನೆಂದು ಕರೆಯಬೇಕೆಂದು ಹೇಳಿದ ವಿರಾಟ್ ಕೊಹ್ಲಿ
ತನ್ನನ್ನು ಏನೆಂದು ಕರೆಯಬೇಕೆಂದು ಹೇಳಿದ ವಿರಾಟ್ ಕೊಹ್ಲಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ 'ಅನ್​ಬಾಕ್ಸ್ ಈವೆಂಟ್' (RCB Unbox Event) ಅದ್ಧೂರಿಯಾಗಿ ನಡೆಯಿತು. ಡಬ್ಲ್ಯುಪಿಎಲ್​ನಲ್ಲಿ (WPL 2024) ಟ್ರೋಫಿ ಗೆದ್ದ ಆರ್​ಸಿಬಿ ಮಹಿಳಾ ತಂಡದ ಆಟಗಾರ್ತಿಯರಿಗೆ ವಿಶೇಷ ಗೌರವ, ನೂತನ ಜೆರ್ಸಿ ಅನಾವರಣ, ಹೆಸರು ಬದಲಾವಣೆ, ವಿನಯ್ ಕುಮಾರ್​ಗೆ ಹಾಲ್​ ಆಫ್ ಫೇಮ್ ಗೌರವ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬ್ಯಾಟಿಂಗ್​ ಸೂಪರ್ ಸ್ಟಾರ್​ ವಿರಾಟ್ ಕೊಹ್ಲಿ ಅವರು ತನ್ನನ್ನು ಕಿಂಗ್ ಎಂದು ಕರೆಯಬೇಡಿ ಎಂದು ಅಭಿಮಾನಿಗಳಿಗೆ ಸೂಚಿಸಿದ್ದಾರೆ. ನೂತನ ಜೆರ್ಸಿ ಅನಾವರಣದ ವೇಳೆ ವಿರಾಟ್ ಕೊಹ್ಲಿ ವೇದಿಕೆಗೆ ಆಗಮಿಸಿದಾಗ ನಿರೂಪಕ ಮಿಸ್ಟರ್ ನ್ಯಾಗ್ಸ್​ ಖ್ಯಾತಿಯ ದಾನಿಷ್ ಸೇಠ್ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಈ ವೇದಿಕೆಯಲ್ಲಿದ್ದರು.

ಕಿಂಗ್ ಫೀಲಿಂಗ್ ಹೇಗಿದೆ ಎಂದು ನಿರೂಪಕ ಕೊಹ್ಲಿಗೆ ಕೇಳುತ್ತಾರೆ. ಆಗ ಉತ್ತರಿಸಿದ ವಿರಾಟ್​. ಮೈದಾನದಲ್ಲಿ ಕೊಹ್ಲಿ ಕೊಹ್ಲಿ ಎಂದು ಕೂಗಿ ಮಾತನಾಡಲು ಬಿಡಲಿಲ್ಲ. ಹಾಗಾಗಿ ಗಾಯ್ಸ್​.. ನನ್ನನ್ನು ಮಾತನಾಡಲು ಬಿಡಿ. ನಾವು ಇಂದು ರಾತ್ರಿ ನಾವು ಚೆನ್ನೈಗೆ ಹೋಗಬೇಕು. ನಮಗೆ ಚಾರ್ಟರ್ಡ್ ಫ್ಲೈಟ್ ಇದೆ. ಹಾಗಾಗಿ ನಮಗೆ ಹೆಚ್ಚು ಸಮಯ ಇಲ್ಲ ಎಂದು ಕೊಹ್ಲಿ ನಗುತ್ತಾ ಹೇಳಿದ್ದಾರೆ.

ಮೊದಲನೆಯದಾಗಿ, ನೀವು ನನ್ನನ್ನು ಆ ಪದದಿಂದ (ಕಿಂಗ್) ಕರೆಯುವುದನ್ನು ನಿಲ್ಲಿಸಬೇಕು. ನೀವು ಪ್ರತಿ ವರ್ಷ ನನ್ನನ್ನು ಕಿಂಗ್ ಎಂದು ಕರೆಯುವಾಗ ನನಗೆ ತುಂಬಾ ಮುಜುಗರವಾಗುತ್ತದೆ. ನನ್ನನ್ನು ವಿರಾಟ್ ಎಂದು ಕರೆಯಿರಿ ಸಾಕು ಎಂದು ಮಾಜಿ ನಾಯಕ ಹೇಳಿದ್ದಾರೆ. ಜೆರ್ಸಿ ಅನಾವರಣ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲಿ ಹೇಳಿದ್ದಾರೆ.

ಅಧಿಕೃತವಾಗಿ ಹೆಸರು ಬದಲಾವಣೆ

ಆರ್​ಸಿಬಿ ಹೆಸರನ್ನು ಅಧಿಕೃತವಾಗಿ ಬದಲಾವಣೆ ಮಾಡಲಾಯಿತು. ಕಳೆದೊಂದು ವಾರದಿಂದ ಹೆಸರು ಬದಲಾವಣೆ ಕುರಿತು ಸುಳಿವು ನೀಡುವ ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿತ್ತು. ಕನ್ನಡ ಚಿತ್ರರಂಗ ತಾರೆಗಳಾದ ರಿಷಬ್ ಶೆಟ್ಟಿ, ಶಿವರಾಜ್​ಕುಮಾರ್, ಅಶ್ವಿನಿ ಪುನೀತ್​ ರಾಜ್​ಕುಮಾರ್, ರಶ್ಮಿಕಾ ಮಂದಣ್ಣ, ಕಿಚ್ಚ ಸುದೀಪ್ ಈ ಪ್ರೋಮೋಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ Royal Challengers Bangalore ಬದಲಿಗೆ Royal Challengers Bengaluru ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ವಿನಯ್​ ಕುಮಾರ್​ಗೆ ಹಾಲ್​ ಆಫ್ ಫೇಮ್

ಕಳೆದ ಬಾರಿಯಂತೆ ಈ ಬಾರಿಯೂ ಒಬ್ಬ ಆಟಗಾರನಿಗೆ ಹಾಲ್​ ಆಫ್ ಫೇಮ್​ ಗೌರವ ನೀಡಲಾಗಿದೆ. ಆರ್​ಸಿಬಿ ಫ್ರಾಂಚೈಸಿ ಪರ ಆಡಿದ ಶ್ರೇಷ್ಠ ಆಟಗಾರರನ್ನು ಗೌರವಿಸಿದೆ. ಕಳೆದ ಬಾರಿ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್​ ಗೇಲ್ ಅವರಿಗೆ ಈ ಗೌರವ ನೀಡಲಾಗಿತ್ತು. ಈ ಬಾರಿ ಕರ್ನಾಟಕದ ಆಟಗಾರ ವಿನಯ್ ಕುಮಾರ್ ಅವರನ್ನು ಆರ್​ಸಿಬಿ ಹಾಲ್ ಆಫ್​ ಫೇಮ್ ನೀಡಿ ಗೌರವಿಸಲಾಗಿದೆ.

ಮಹಿಳಾ ಕ್ರಿಕೆಟರ್ಸ್​ಗೆ ಗಾರ್ಡ್​ ಆಫ್ ಹಾನರ್​

ವುಮೆನ್ಸ್ ಪ್ರೀಮಿಯರ್​ ಲೀಗ್​​ನಲ್ಲಿ ಟ್ರೋಫಿ ಗೆದ್ದ ಸ್ಮೃತಿ ಮಂಧಾನ ನೇತೃತ್ವದ ತಂಡಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. ಪುರುಷ ತಂಡದ ಆಟಗಾರರು ಎರಡು ಕಡೆ ಸಾಲುಗಟ್ಟಿ ನಿಂತು ಚಾಂಪಿಯನ್ ಮಹಿಳಾ ತಂಡದ ಆಟಗಾರ್ತಿಯರನ್ನು ಸ್ವಾಗತಿಸಿದರು. ವಿರಾಟ್ ಕೊಹ್ಲಿ ಹಾಜರಾತಿಯೊಂದಿಗೆ ಮೈದಾನದಲ್ಲಿ ಸ್ಮೃತಿ ಮಂಧಾನ ನೇತೃತ್ವದ ಡಬ್ಲ್ಯುಪಿಎಲ್​​ ಪ್ರಶಸ್ತಿ ವಿಜೇತ ತಂಡವನ್ನು ಸ್ವಾಗತಿಸಿದರು. ಎಲ್ಲಾ ಜಯಘೋಷ, ಕೂಗು, ಚಪ್ಪಾಳೆಗಳ ನಡುವೆ ಅವರನ್ನು ಸ್ವಾಗತ ಮಾಡಿಕೊಂಡರು. ಈ ದೃಶ್ಯವು ಗೂಸ್‌ಬಂಪ್‌ ತರಿಸಿತ್ತು.