ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಟ್ರೋಫಿಯನ್ನೇ ಗೆಲ್ಲದ ದಿಗ್ಗಜರ ಪ್ರಬಲ ಪ್ಲೇಯಿಂಗ್ Xi; ಸೌರವ್ ಗಂಗೂಲಿ ನಾಯಕ, ಎಬಿ ಡಿವಿಲಿಯರ್ಸ್​ಗೂ ಸ್ಥಾನ

ಐಸಿಸಿ ಟ್ರೋಫಿಯನ್ನೇ ಗೆಲ್ಲದ ದಿಗ್ಗಜರ ಪ್ರಬಲ ಪ್ಲೇಯಿಂಗ್ XI; ಸೌರವ್ ಗಂಗೂಲಿ ನಾಯಕ, ಎಬಿ ಡಿವಿಲಿಯರ್ಸ್​ಗೂ ಸ್ಥಾನ

Strongest XI Of Legends Who Never Won ICC Trophy: ಐಸಿಸಿ ಟ್ರೋಫಿಯನ್ನೇ ಗೆಲ್ಲದೆ ತಮ್ಮ ವೃತ್ತಿಜೀವನ ಕೊನೆಗೊಳಿಸಿರುವ ಐಕಾನಿಕ್ ಆಟಗಾರರ ಪ್ಲೇಯಿಂಗ್ XI ಹೇಗಿದೆ ಎಂಬುದರ ವಿವರ ಇಲ್ಲಿದೆ ನೋಡಿ.

ಐಸಿಸಿ ಟ್ರೋಫಿಯನ್ನೇ ಗೆಲ್ಲದ ದಿಗ್ಗಜರ ಪ್ರಬಲ ಪ್ಲೇಯಿಂಗ್ XI; ಸೌರವ್ ಗಂಗೂಲಿ ನಾಯಕ, ಎಬಿ ಡಿವಿಲಿಯರ್ಸ್​ಗೂ ಸ್ಥಾನ
ಐಸಿಸಿ ಟ್ರೋಫಿಯನ್ನೇ ಗೆಲ್ಲದ ದಿಗ್ಗಜರ ಪ್ರಬಲ ಪ್ಲೇಯಿಂಗ್ XI; ಸೌರವ್ ಗಂಗೂಲಿ ನಾಯಕ, ಎಬಿ ಡಿವಿಲಿಯರ್ಸ್​ಗೂ ಸ್ಥಾನ

ಐಸಿಸಿ ಟ್ರೋಫಿ (ICC Trophy) ಗೆಲ್ಲುವುದು ಕ್ರಿಕೆಟ್ (Cricket) ಆಡುವ ತಂಡಗಳ ಮತ್ತು ಆಯಾ ದೇಶಗಳ ಆಟಗಾರರ ಬಹುದೊಡ್ಡ ಕನಸು. ತಾವು ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವುದರೊಳಗೆ ಒಂದು ಐಸಿಸಿ ಟ್ರೋಫಿ ಗೆದ್ದರೆ, ಅವರ ಜೀವನ ಸಾರ್ಥಕವಾದಂತೆ. ಇಡೀ ಪ್ರಪಂಚವನ್ನೇ ಗೆದ್ದಿದ್ದೇವೆ ಎಂಬ ಖುಷಿ ಅವರಲ್ಲಿ ಕಾಣುತ್ತದೆ. ಆದರೆ, ಎಷ್ಟೇ ಪ್ರದರ್ಶನ ನೀಡಿದರೂ ಕೆಲವರಿಗೆ ಐಸಿಸಿ ಪ್ರಶಸ್ತಿ ಎಂಬುದು ಕನಸಿನ ಮಾತಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ನಿವೃತ್ತರಾದರೂ ಕೆಲ ಕ್ರಿಕೆಟಿಗರು ಐಸಿಸಿ ಕಪ್ ಗೆದ್ದಿಲ್ಲವಲ್ಲ ಎಂದು ಕೊರಗುತ್ತಿದ್ದಾರೆ. ಹಲವಾರು ಐಕಾನಿಕ್ ಕ್ರಿಕೆಟಿಗರು ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲದೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಅಂತಹ ಆಟಗಾರರ ಬಲಿಷ್ಠ XI ಅನ್ನು ನೋಡೋಣ.

ಸೌರವ್ ಗಂಗೂಲಿ: 2003ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಭಾರತ ತಂಡದ ಸೌರವ್ ಗಂಗೂಲಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 18 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಆದರೆ ಆರಂಭಿಕ ಆಟಗಾರ ಗಂಗೂಲಿ ಅವರು ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಪ್ರಸ್ತುತ ನಿರ್ಮಿಸಿದ ಐಸಿಸಿ ಟ್ರೋಫಿ ಗೆಲ್ಲದ ತಂಡದ ನಾಯಕನೂ ಅವರೇ ಆಗಿದ್ದಾರೆ.

ಬ್ರೆಂಡನ್ ಮೆಕಲಮ್: ನ್ಯೂಜಿಲೆಂಡ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಅವರು ಸಹ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 2015ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಫೈನಲ್ ತಲುಪಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸೋತಿತು. ಹೀಗಾಗಿ ಅವರು ಕಪ್​ಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡರು.

ರಾಹುಲ್ ದ್ರಾವಿಡ್: 1999 ಏಕದಿನ ವಿಶ್ವಕಪ್, 2003 ಏಕದಿನ ವಿಶ್ವಕಪ್ ಮತ್ತು 2007 ಏಕದಿನ ವಿಶ್ವಕಪ್ ಆಡಿರುವ ರಾಹುಲ್ ದ್ರಾವಿಡ್ ಅವರು ಒಂದು ಟ್ರೋಫಿಯನ್ನೂ ಗೆದ್ದಿಲ್ಲ. 24,000 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿರುವ ಕರ್ನಾಟಕದ ಆಟಗಾರ, 2003ರಲ್ಲಿ ಫೈನಲ್​ಗೇರಿದ್ದ ಭಾರತ ತಂಡದ ಸದಸ್ಯರಾಗಿದ್ದರು. ದುರದೃಷ್ಟವಶಾತ್ 2011ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿಲಿಲ್ಲ.

ಎಬಿ ಡಿವಿಲಿಯರ್ಸ್: ಅತ್ಯಂತ ದುರದೃಷ್ಟಕರ ಆಟಗಾರರ ಪೈಕಿ ಎಬಿಡಿ ಕೂಡ ಒಬ್ಬರು. ಅವರು ಒಂದೇ ಒಂದು ಐಸಿಸಿ ಟೂರ್ನಮೆಂಟ್ ಗೆದ್ದಿಲ್ಲ. 2007, 2015ರ ವಿಶ್ವಕಪ್ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಪರ ಆಡಿದ್ದರು. 2016ರ ಆವೃತ್ತಿಯವರೆಗೆ ಎಲ್ಲಾ ಐಸಿಸಿ ಟಿ20 ವಿಶ್ವಕಪ್‌ಗಳ ಭಾಗವಾಗಿದ್ದರು. ಆದರೆ ಸೌತ್ ಆಫ್ರಿಕಾ ಎಂದೂ ಟ್ರೋಫಿ ಗೆದ್ದಿಲ್ಲ.

ಮೊಹಮ್ಮದ್ ಯೂಸುಫ್: 1999, 2003 ಮತ್ತು 2007ರ ವಿಶ್ವಕಪ್‌ನಲ್ಲಿ ಆಡಿರುವ ಪಾಕಿಸ್ತಾನ ತಂಡದ ದಿಗ್ಗಜ ಕ್ರಿಕೆಟಿಗ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಥವಾ 50-ಓವರ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

ಆಂಡ್ರೆ ಫ್ಲಿಂಟಾಫ್: ವೆಸ್ಟ್ ಇಂಡೀಸ್ ವಿರುದ್ಧ 2004ರ ಚಾಂಪಿಯನ್ಸ್ ಟ್ರೋಫಿಯನ್ನು ಇಂಗ್ಲೆಂಡ್ ಕಳೆದುಕೊಂಡಿತು. ಆಲ್​ರೌಂಡರ್​ ಫ್ಲಿಂಟಾಫ್ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಆಂಗ್ಲರ ತಂಡವು 2010ರಲ್ಲಿ ಮೊದಲ ಐಸಿಸಿ ಟ್ರೋಫಿ (ಟಿ20) ಗೆದ್ದಿತ್ತು. 2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದಿತ್ತು. ಆದಾಗ್ಯೂ, ಫ್ಲಿಂಟಾಫ್ ವೃತ್ತಿಜೀವನ ಐಸಿಸಿ ಟ್ರೋಫಿಯಿಲ್ಲದೆ ಕೊನೆಗೊಂಡಿತು.

ಶಾನ್ ಪೊಲಾಕ್: 1998ರ ಚಾಂಪಿಯನ್ಸ್ ಟ್ರೋಫಿಯನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಆದರೆ ಪೊಲಾಕ್ ಆ ತಂಡದ ಭಾಗವಾಗಿರಲಿಲ್ಲ. ಸಾರ್ವಕಾಲಿಕ ಶ್ರೇಷ್ಠ ಬೌಲರ್​ಗಳಲ್ಲಿ ಅವರು ಕೂಡ ಒಬ್ಬರು. ಆದರೂ ಐಸಿಸಿ ಟ್ರೋಫಿಯಿಲ್ಲದೆ ವೃತ್ತಿಜೀವನ ಕೊನೆಗೊಳಿಸಿದರು.

ವಕಾರ್​ ಯೂನಿಸ್: ವಿಶ್ವದ ಅತ್ಯಂತ ದೊಡ್ಡ ವೇಗದ ಬೌಲರ್​​ಗಳಲ್ಲಿ ವಕಾರ್​ ಯೂನಿಸ್ ಕೂಡ ಒಬ್ಬರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ ಪರ ವಿಕೆಟ್‌ಗಳ ರಾಶಿಯನ್ನು ಪಡೆದಿದ್ದಾರೆ. ಆದರೆ ಐಸಿಸಿ 50 ಓವರ್‌ಗಳ ವಿಶ್ವಕಪ್ ಗೆದ್ದ 1992ರ ಪಾಕ್​ ತಂಡದಿಂದ ವಕಾರ್ ಯೂನಿಸ್ ವಂಚಿತರಾಗಿದ್ದರು. 2003ರಲ್ಲಿ ನಿವೃತ್ತಿ ಘೋಷಿಸಿದರು.

ಡೇಲ್ ಸ್ಟೇನ್: ವಿಶ್ವದ ಅತ್ಯಂತ ಭಯಾನಕ ಬೌಲರ್‌ಗಳಲ್ಲಿ ಒಬ್ಬರಾದ ಸೌತ್ ಆಫ್ರಿಕಾದ ಡೇಲ್​ಸ್ಟೇನ್ ಒಂದು ಟ್ರೋಫಿ ಗೆಲ್ಲದೆ ಕ್ರಿಕೆಟ್ ಜೀವನ ಮುಗಿಸಿದ್ದಾರೆ.

ಸಕ್ಲೇನ್ ಮುಷ್ತಾಕ್: 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿರದ ಸಕ್ಲೇನ್ ಮುಷ್ತಾಕ್, ಐಸಿಸಿ ಟ್ರೋಫಿ ಇಲ್ಲದೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು.

ಡೇನಿಯಲ್ ವೆಟ್ಟೋರಿ: ನ್ಯೂಜಿಲೆಂಡ್ 2000ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಆದರೆ ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ತಂಡದ ಭಾಗವಾಗಿರಲಿಲ್ಲ. ಕೊನೆಯ ಬಾರಿಗೆ 2015ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದು, ಈ ಪಂದ್ಯದಲ್ಲಿ ಆಸೀಸ್ ಗೆದ್ದು ಚಾಂಪಿಯನ್ ಆಗಿತ್ತು.

ಐಸಿಸಿ ಟ್ರೋಫಿ ಗೆಲ್ಲದ ಆಟಗಾರರ ಪ್ಲೇಯಿಂಗ್​ XI

ಸೌರವ್ ಗಂಗೂಲಿ (ನಾಯಕ), ಬ್ರೆಂಡನ್ ಮೆಕಲಮ್, ರಾಹುಲ್ ದ್ರಾವಿಡ್, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಯೂಸುಫ್, ಆಂಡ್ರೆ ಫ್ಲಿಂಟಾಫ್, ಶಾನ್ ಪೊಲಾಕ್, ವಕಾರ್​ ಯೂನಿಸ್, ಡೇನಿಯಲ್ ವೆಟ್ಟೋರಿ, ಸಕ್ಲೇನ್ ಮುಷ್ತಾಕ್, ವಕಾರ್​ ಯೂನಿಸ್, ಡೇಲ್ ಸ್ಟೇನ್.

IPL_Entry_Point