ಕನ್ನಡ ಸುದ್ದಿ  /  Cricket  /  Sunil Gavaskar Says Ravichandran Ashwin Should Have Been Honored With India Captaincy 2 Years Back Ind Vs Eng Jra

ಆರ್‌ ಅಶ್ವಿನ್‌ಗೆ 2 ವರ್ಷಗಳ ಹಿಂದೆಯೇ ಭಾರತ ತಂಡದ ನಾಯಕತ್ವ ನೀಡಬೇಕಿತ್ತು; ಸುನಿಲ್ ಗವಾಸ್ಕರ್‌ ಅಭಿಮತ

R Ashwin: ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್, ಎರಡು ವರ್ಷಗಳ ಹಿಂದೆಯೇ ಭಾರತದ ಟೆಸ್ಟ್ ನಾಯಕ ಆಗಬೇಕಿತ್ತು. ಅದು ಅವರನ್ನು ಗೌರವಿಸಲು ಸೂಕ್ತ ಸಮಯ ಎಂದು ಸುನಿಲ್‌ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ ಅಶ್ವಿನ್‌ಗೆ 2 ವರ್ಷಗಳ ಹಿಂದೆಯೇ ಭಾರತ ತಂಡದ ನಾಯಕತ್ವ ನೀಡಬೇಕಿತ್ತು ಎಂದ ಸುನಿಲ್ ಗವಾಸ್ಕರ್‌
ಆರ್‌ ಅಶ್ವಿನ್‌ಗೆ 2 ವರ್ಷಗಳ ಹಿಂದೆಯೇ ಭಾರತ ತಂಡದ ನಾಯಕತ್ವ ನೀಡಬೇಕಿತ್ತು ಎಂದ ಸುನಿಲ್ ಗವಾಸ್ಕರ್‌ (AP)

ಭಾರತ ಕ್ರಿಕೆಟ್‌ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin), ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಅದರ ಬೆನ್ನಲ್ಲೇ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಅಶ್ವಿನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ನಡುವೆ, ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಎರಡು ವರ್ಷಗಳ ಹಿಂದೆಯೇ ಟೆಸ್ಟ್ ತಂಡದ ನಾಯಕತ್ವ ನೀಡಬೇಕಾಗಿತ್ತು ಎಂದು ಸನ್ನಿ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ, ಜಾಕ್ ಕ್ರಾಲೆ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಶುಕ್ರವಾರ 500 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎರಡು ವರ್ಷಗಳ ಹಿಂದೆಯೇ ನಾಯಕತ್ವ ನೀಡಬೇಕಿತ್ತು

ಅಶ್ವಿನ್ ಅವರಲ್ಲಿರುವ ಪ್ರತಿಭೆಯು, ಅವರನ್ನು ಯಾವಾಗಲೂ ಭಾರತಕ್ಕೆ ನಾಯಕತ್ವದ ವ್ಯಕ್ತಿಯನ್ನಾಗಿ ಮಾಡಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಅವರಿಗೆ ನಾಯಕತ್ವದ ಗೌರವ ನೀಡಲು ಸೂಕ್ತ ಸಮಯವಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಕಳೆದ ವರ್ಷ, ಭಾರತವು ಹಲವಾರು ವಿಭಿನ್ನ ತಂಡಗಳನ್ನು ಕಣಕ್ಕಿಳಿಸಿದೆ. 2021ರಲ್ಲಿ ಟೆಸ್ಟ್ ತಂಡದಲ್ಲಿ ಹಿರಿಯ ಆಟಗಾರರು ತುಂಬಿದ್ದರು ಎಂದು ಗವಾಸ್ಕರ್‌ ಹೇಳಿದ್ದಾರೆ.

“ಟೆಸ್ಟ್ ಕ್ರಿಕೆಟ್‌ನಲ್ಲಿ 500ನೇ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್‌ಗೆ ಅಭಿನಂದನೆಗಳು. ಅವರು ಎಂಥ ಅದ್ಭುತ ಕ್ರಿಕೆಟಿಗ. ಆಟದ ಅತ್ಯುತ್ತಮ ಚಿಂತಕರಲ್ಲಿ ಒಬ್ಬರು. ಎಸೆತಗಳು ಸೇರಿದಂತೆ ಹೊಸ ಮತ್ತು ವಿಭಿನ್ನ ತಂತ್ರಗಳನ್ನು ಪ್ರಯತ್ನಿಸಲು ಯಾವಾಗಲೂ ಸಿದ್ಧರಿದ್ದಾರೆ” ಎಂದು ಗವಾಸ್ಕರ್ ಮಿಡ್-ಡೇಗೆ ಬರೆದ ತಮ್ಮ ಅಂಕಣದಲ್ಲಿ ಹೇಳಿಕೊಂಡಿದ್ದಾರೆ.

“ಕೆಲವು ವರ್ಷಗಳ ಹಿಂದೆ ಏಕಕಾಲಕ್ಕೆ ಎರಡು ಭಾರತ ತಂಡಗಳು ಆಡುತ್ತಿದ್ದಾಗಲೇ ಅವರಿಗೆ ಭಾರತ ತಂಡದ ನಾಯಕತ್ವ ನೀಡಿ ಗೌರವಿಸಬೇಕಾಗಿತ್ತು. ಅಶ್ವಿನ್, ಭವಿಷ್ಯದಲ್ಲಿ ಇನ್ನೂ ಹಲವು ವಿಕೆಟ್‌ಗಳು ಸಿಗಲಿ. ಹೊಸ ಥರದ ಎಸೆತಗಳು ಮತ್ತು ವಿಭಿನ್ನ ಆಕ್ಷನ್‌ಗಳನ್ನು ಬಯಸುತ್ತೇನೆ” ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | ಜೂನಿಯರ್‌ ಕೊಹ್ಲಿ ಆಗಮನಕ್ಕೆ ತೆಂಡೂಲ್ಕರ್‌ ಸಂತಸ; ವಿರುಷ್ಕ ದಂಪತಿಗೆ ಕ್ರಿಕೆಟ್‌ ದೇವರ ಅಭಿನಂದನೆ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತು. 500 ವಿಕೆಟ್‌ ಪಡೆದ ಬೆನ್ನಲ್ಲೇ, ಅಶ್ವಿನ್ ರಾಜ್‌ಕೋಟ್ ತೊರೆದು, ಚೆನ್ನೈಗೆ ಹಾರಬೇಕಾಯಿತು. ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಅಶ್ವಿನ್ ಮನೆಗೆ ಮರಳಿದರು. 48 ಗಂಟೆಗಳ ಒಳಗೆ ಮತ್ತೆ ತಂಡ ಸೇರಿಕೊಂಡರು.

ಗವಾಸ್ಕರ್ ಪ್ರಕಾರ, ಅಶ್ವಿನ್ ಅವರ ಮೆದುಳು ಸಾಂದರ್ಭಿಕವಾಗಿ ಓವರ್ ಟೈಮ್ ಕೆಲಸ ಮಾಡುತ್ತದೆಯಂತೆ. ಇದು ಅವರ ಬಳಗದಲ್ಲಿ ಇತರರಿಗಿಂತ ಹೆಚ್ಚಾಗಿ ಅಶ್ವಿನ್‌ ಅವರನ್ನೇ ನಾಯಕತ್ವಕ್ಕೆ ಪರಿಗಣಿಸಲು ಆದ್ಯತೆ ನೀಡಿವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅಶ್ವಿನ್ ಅವರನ್ನು ವಿದೇಶಿ ಟೆಸ್ಟ್‌ಗಳಿಗೆ ಹೆಚ್ಚು ಪರಿಗಣಿಸಲಾಗಿಲ್ಲ. ಇದು ಅವರ ನಾಯಕತ್ವದ ಆಕಾಂಕ್ಷೆಗಳಿಗೆ ಅಡ್ಡಿಯಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point