ಸಂಜು ಸ್ಯಾಮ್ಸನ್ vs ರಿಷಭ್ ಪಂತ್; ಐರ್ಲೆಂಡ್ ಪಂದ್ಯಕ್ಕೆ ಅತ್ಯುತ್ತಮ ವಿಕೆಟ್ ಕೀಪರ್ ಆರಿಸಿದ ಸುನಿಲ್ ಗವಾಸ್ಕರ್
Sunil Gavaskar: ಜೂನ್ 5ರಂದು ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಯಾರನ್ನು ಆಯ್ಕೆ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೂಚಿಸಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾರು ಕಣಕ್ಕಿಳಿಯಬೇಕೆಂದು ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar), ಟೀಮ್ ಮ್ಯಾನೇಜ್ಮೆಂಟ್ ಗೆ ಸೂಚಿಸಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ (Rishabh Pant vs Sanju Samson) ನಡುವೆ ಯಾರು ಉತ್ತಮರೆಂದು ಮಾಜಿ ನಾಯಕ ಆರಿಸಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ತಂಡದ ಆಯ್ಕೆಯ ಗೊಂದಲವನ್ನು ಸುಲಭಗೊಳಿಸಿದ್ದಾರೆ.
ಟೀಮ್ ಇಂಡಿಯಾ ತನ್ನ ಅಭಿಯಾನದ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ನಾಯಕ ಒತ್ತಾಯಿಸಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಪಡೆದಿದ್ದಾರೆ. ಆದರೆ, ಗವಾಸ್ಕರ್, ಪಂತ್ ಅವರನ್ನು ಬೆಂಬಲಿಸಿದ್ದಾರೆ. ಅಲ್ಲದೆ ರಿಷಭ್ ಪಂತ್ ಆಯ್ಕೆ ಮಾಡಲು ಕಾರಣ ಏನೆಂದು ಸಹ ತಿಳಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಕಾರಣ ಸಂಜು ಅವರನ್ನು ಆಯ್ಕೆ ಮಾಡಲಿಲ್ಲ.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್, ಸಿಕ್ಕ ಅವಕಾಶ ಸದುಪಯೋಗಿಸಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಪಂತ್, 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 53 ರನ್ ಸಿಡಿಸಿ ರಿಟೈರ್ಡ್ ಹರ್ಟ್ ಆದರು. ಆದರೆ ಐಪಿಎಲ್ನಲ್ಲಿ 500+ ರನ್ ಬಾರಿಸಿದ ಸಂಜು ಸ್ಯಾಮ್ಸನ್, 6 ಎಸೆತಗಳಲ್ಲಿ ಸಿಡಿಸಿದ್ದು ಒಂದೇ ರನ್. ಸಿಕ್ಕ ಅವಕಾಶ ಕೈ ಚೆಲ್ಲಿದ ಕೇರಳದ ಬ್ಯಾಟರ್ಗೆ ಪ್ಲೇಯಿಂಗ್ XIನಲ್ಲಿ ಸ್ಥಾನ ಸಿಗುವುದು ಅನುಮಾನ.
ಸ್ಟಾರ್ಸ್ಪೋರ್ಟ್ಸ್ ಜೊತೆ ಮಾತಾಡಿದ ಸುನಿಲ್ ಗವಾಸ್ಕರ್, ಈ ಇಬ್ಬರ ವಿಕೆಟ್ ಕೀಪರ್ ಸಾಮರ್ಥ್ಯ ಹೋಲಿಸುವುದಾದರೆ, ಸಂಜು ಸ್ಯಾಮ್ಸನ್ ಅವರಿಗಿಂತ ರಿಷಭ್ ಪಂತ್ ಸಾಮರ್ಥ್ಯ ಅತ್ಯುತ್ತಮವಾಗಿದೆ. ನಾವು ಬ್ಯಾಟಿಂಗ್ ಕುರಿತು ಮಾತನಾಡುತ್ತಿಲ್ಲ. ಬ್ಯಾಟಿಂಗ್ ಕೂಡ ಇಲ್ಲಿ ಮುಖ್ಯ ಎಂಬುದನ್ನು ಮರೆಯುವಂತೆಯೂ ಇಲ್ಲ. ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಪಂತ್ ಸಹ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಪ್ರಾಕ್ಟೀಸ್ ಮ್ಯಾಚ್ನಲ್ಲೂ ಸಂಜು ಆಡದಕ್ಕೆ ಗವಾಸ್ಕರ್ ಬೇಸರ
ಬಾಂಗ್ಲಾದೇಶ ವಿರುದ್ಧ ಆಡಿದ ಪ್ರಾಕ್ಟೀಸ್ ಮ್ಯಾಚ್ನಲ್ಲೂ ಸಂಜು ಸ್ಯಾಮ್ಸನ್ ಫೇಲ್ ಆಗಿದ್ದಕ್ಕೆ ಸುನಿಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ ಐರ್ಲೆಂಡ್ ವಿರುದ್ಧ ಸ್ಥಾನ ಗಟ್ಟಿ ಮಾಡಿಕೊಳ್ಳಬಹುದಿತ್ತು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಮೂರ್ನಾಲ್ಕು ಮ್ಯಾಚ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ರನ್ ಗಳಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಅರ್ಧಶತಕ ಸಿಡಿಸಿದ್ದರೆ, ಯಾರೂ ಕೂಡ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಇದೀಗ ಪಂತ್ಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ನಲ್ಲಿ ಸಂಜು ಮತ್ತು ಪಂತ್ ಪ್ರದರ್ಶನ
ರಿಷಭ್ ಪಂತ್: 13 ಇನಿಂಗ್ಸ್‌ಗಳಲ್ಲಿ 40.54ರ ಬ್ಯಾಟಿಂಗ್ ಸರಾಸರಿ ಹಾಗೂ 155.40ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನಲ್ಲಿ 446 ರನ್ ಗಳಿಸಿದ್ದರು.
ಸಂಜು ಸ್ಯಾಮ್ಸನ್: 15 ಇನಿಂಗ್ಸ್‌ಗಳಲ್ಲಿ 48.27ರ ಬ್ಯಾಟಿಂಗ್ ಸರಾಸರಿ ಮತ್ತು 153.46ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನಲ್ಲಿ 531 ರನ್ ಸಿಡಿಸಿದ್ದರು.
ಇನ್ನಷ್ಟು ಟಿ20 ವಿಶ್ವಕಪ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
