ಪಂಜಾಬ್ ಕಿಂಗ್ಸ್ ವಿರುದ್ಧ ಸಿಡಿದ ಸನ್‌ರೈಸರ್ಸ್ ಹೈದರಾಬಾದ್ ದಾಖಲೆಗಳು ಒಂದೆರಡಲ್ಲ; ಇಲ್ಲಿದೆ ಸಂಪೂರ್ಣ ಪಟ್ಟಿ
ಸನ್‌ರೈಸರ್ಸ್ ಹೈದರಾಬಾದ್ 246 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಗೆದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇನ್ನೂ 9 ಎಸೆತಗಳನ್ನು ಬಾಕಿ ಉಳಿಸಿ ಗುರಿ ತಲುಪಿದೆ. ಎಸ್‌ಆರ್‌ಎಚ್ vs ಪಿಬಿಕೆಎಸ್ ಪಂದ್ಯದಲ್ಲಾದ ವಿವಿಧ ದಾಖಲೆಗಳ ಪಟ್ಟಿ ಇಲ್ಲಿದೆ.

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಐಪಿಎಲ್ 2025ರ ಆವೃತ್ತಿಯಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸಿದೆ. ಯುವ ಅರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಆಟಕ್ಕೆ ಹಳೆಯ ಹಲವು ದಾಖಲೆಗಳೇ ನಿರ್ನಾಮವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಆರೇಂಜ್ ಆರ್ಮಿ, ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಆ ಮೂಲಕ, ಸತತ ನಾಲ್ಕು ಸೋಲುಗಳ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳಿತು. ಅಭಿಷೇಕ್ ದಾಖಲೆಯ ಶತಕ ಬಾರಿಸಿದರೆ, ತಂಡವು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ರನ್ ಚೇಸಿಂಗ್ ಮಾಡಿದ ದಾಖಲೆ ನಿರ್ಮಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, 6 ವಿಕೆಟ್ ಕಳೆದುಕೊಂಡು 245 ಗಳಿಸಿತು. ಬೃಹತ್ ಗುರಿ ಚೇಸ್ ಮಾಡಿದ ಹೈದರಾಬಾದ್, 9 ಎಸೆತಗಳನ್ನು ಬಾಕಿ ಉಳಿಸಿ ಗುರಿ ತಲುಪಿತು. ಪಂದ್ಯದಲ್ಲಾದ ವಿವಿಧ ದಾಖಲೆಗಳ ಪಟ್ಟಿ ಇಲ್ಲಿದೆ.
ಐಪಿಎಲ್‌ನಲ್ಲಿ ಅತ್ಯಧಿಕ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ತಂಡ
- 262 - ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್, ಕೋಲ್ಕತ್ತಾ, 2024
- 246 - ಎಸ್‌ಆರ್‌ಎಚ್ ವಿರುದ್ಧ ಪಂಜಾಬ್ ಕಿಂಗ್ಸ್, ಹೈದರಾಬಾದ್, 2025*
- 224 - ಆರ್‌ಆರ್ ವಿರುದ್ಧ ಪಂಜಾಬ್ ಕಿಂಗ್ಸ್, ಶಾರ್ಜಾ, 2020
- 224 - ಆರ್‌ಆರ್ ವಿರುದ್ಧ ಕೆಕೆಆರ್, ಕೋಲ್ಕತ್ತಾ, 2024
- 219 - ಎಂಐ ವಿರುದ್ಧ ಸಿಎಸ್‌ಕೆ, ದೆಹಲಿ, 2021
ಐಪಿಎಲ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್
- 175* - ಕ್ರಿಸ್ ಗೇಲ್ (ಆರ್‌ಸಿಬಿ), ಪುಣೆ ವಾರಿಯರ್ಸ್ ವಿರುದ್ಧ, 2013
- 158* - ಬ್ರೆಂಡನ್ ಮೆಕಲಮ್ (ಕೆಕೆಆರ್), ಆರ್‌ಸಿಬಿ ವಿರುದ್ಧ, 2008
- 141 - ಅಭಿಷೇಕ್ ಶರ್ಮಾ (ಎಸ್‌ಆರ್‌ಎಚ್), ಪಂಜಾಬ್ ಕಿಂಗ್ಸ್ ವಿರುದ್ಧ, 2025*
- 140* - ಕ್ವಿಂಟನ್ ಡಿ ಕಾಕ್ (ಎಲ್‌ಎಸ್‌ಜಿ), ಕೆಕೆಆರ್ ವಿರುದ್ಧ, 2022
- 133* - ಎಬಿ ಡಿವಿಲಿಯರ್ಸ್ (ಆರ್‌ಸಿಬಿ), ಎಂಐ ವಿರುದ್ಧ, 2015
ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ಆಟಗಾರರು
- 30 - ಕ್ರಿಸ್ ಗೇಲ್ (RCB) ಪುಣೆ ವಾರಿಯರ್ಸ್ ವಿರುದ್ಧ, ಬೆಂಗಳೂರು, 2013
- 37 - ಯೂಸುಫ್ ಪಠಾಣ್ (RR) ಮುಂಬೈ ಇಂಡಿಯನ್ಸ್ ವಿರುದ್ಧ, ಮುಂಬೈ BS, 2010
- 38 - ಡೇವಿಡ್ ಮಿಲ್ಲರ್ (KXIP) ಆರ್‌ಸಿಬಿ ವಿರುದ್ಧ, ಮೊಹಾಲಿ, 2013
- 39 - ಟ್ರಾವಿಸ್ ಹೆಡ್ (SRH) ಆರ್‌ಸಿಬಿ ವಿರುದ್ಧ, ಬೆಂಗಳೂರು, 2024
- 39 - ಪ್ರಿಯಾಂಶ್ ಆರ್ಯ (PBKS) ಸಿಎಸ್‌ಕೆ ವಿರುದ್ಧ, ಮುಲ್ಲಾಪುರ, 2025
- 40 - ಅಭಿಷೇಕ್ ಶರ್ಮಾ (SRH) ಪಂಜಾಬ್ ಕಿಂಗ್ಸ್ ವಿರುದ್ಧ, ಹೈದರಾಬಾದ್, 2025*
ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ
- ಡಿ ಕಾಕ್, ಕೆಎಲ್ ರಾಹುಲ್ -210*
- ಸಾಯಿ ಸುದರ್ಶನ್, ಶುಭ್ಮನ್ ಗಿಲ್ -210
- ಜಾನಿ ಬೈರ್‌ಸ್ಟೋ, ಡೇವಿಡ್ ವಾರ್ನರ್ -185
- ಗೌತಮ್ ಗಂಭೀರ್, ಸಿಎ ಲಿನ್ -184*
- ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ -183
- ಡಿವೋನ್ ಕಾನ್ವೇ, ರುತುರಾಜ್ ಗಾಯಕ್ವಾಡ್ -182
- ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್ -181
- ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ -181*
- ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ -172
- ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ -171 (ನಿನ್ನೆಯ ಪಂದ್ಯ)
ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಪರ ಅತ್ಯಧಿಕ ಆರಂಭಿಕ ಜೊತೆಯಾಟ
- 185 - ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ವಾರ್ನರ್ (ಆರ್‌ಸಿಬಿ ವಿರುದ್ಧ), 2019
- 171 - ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ (ಪಂಜಾಬ್ ಕಿಂಗ್ಸ್ ವಿರುದ್ಧ), 2025
- 167 - ಅಭಿಷೇಕ್ ಶರ್ಮಾ ಮತ್ತು ಹೆಡ್ (ಎಲ್ಎಸ್‌ಜಿ ವಿರುದ್ಧ), 2024
- 160 - ಬೈರ್‌ಸ್ಟೋವ್ ಮತ್ತು ವಾರ್ನರ್ (ಪಂಜಾಬ್ ಕಿಂಗ್ಸ್ ವಿರುದ್ಧ), 2020
ಒಂದೇ ಮೈದಾನದಲ್ಲಿ ನಿರ್ದಿಷ್ಠ ಎದುರಾಳಿ ತಂಡ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ
- 10 - ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧ ಎಂಐ
- 9 - ಕೋಲ್ಕತ್ತಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್
- 9 - ಹೈದರಾಬಾದ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಸ್‌ಆರ್‌ಎಚ್
ಐಪಿಎಲ್‌ನಲ್ಲಿ ಮೊದಲ 10 ಓವರ್‌ಗಳ ನಂತರ ಅತ್ಯಧಿಕ ಮೊತ್ತ ಕಲೆ ಹಾಕಿದ ತಂಡಗಳು
- 167/0 (9.4) - ಎಸ್‌ಆರ್‌ಎಚ್ (ಎಲ್‌ಎಸ್‌ಜಿ ವಿರುದ್ಧ), ಹೈದರಾಬಾದ್, 2024
- 158/4 - ಎಸ್‌ಆರ್‌ಎಚ್ (ಡಿಸಿ ವಿರುದ್ಧ), ದೆಹಲಿ, 2024
- 148/2 - ಎಸ್‌ಆರ್‌ಎಚ್ (ಎಂಐ ವಿರುದ್ಧ), ಹೈದರಾಬಾದ್, 2024
- 143/0 - ಎಸ್‌ಆರ್‌ಎಚ್ (ಪಂಜಾಬ್ ಕಿಂಗ್ಸ್ ವಿರುದ್ಧ), ಹೈದರಾಬಾದ್, 2025*
- 141/2 - ಎಂಐ (ಎಸ್‌ಆರ್‌ಎಚ್ ವಿರುದ್ಧ), ಹೈದರಾಬಾದ್, 2024
ಇದನ್ನೂ ಓದಿ | ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಬೆಚ್ಚಿದ ಪಂಜಾಬ್; 141 ರನ್ ಸಿಡಿಸಿ ಹಲವು ದಾಖಲೆಗಳ ಅಳಿಸಿದ ಎಸ್‌ಆರ್‌ಎಚ್ ಆಟಗಾರ
