ಇಶಾನ್ ಕಿಶನ್, ಮೊಹಮ್ಮದ್ ಶಮಿ ಇನ್; ಐಪಿಎಲ್ 2025ಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಶಾನ್ ಕಿಶನ್, ಮೊಹಮ್ಮದ್ ಶಮಿ ಇನ್; ಐಪಿಎಲ್ 2025ಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ

ಇಶಾನ್ ಕಿಶನ್, ಮೊಹಮ್ಮದ್ ಶಮಿ ಇನ್; ಐಪಿಎಲ್ 2025ಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ

ಎಸ್‌ಆರ್‌ಎಚ್‌ ತಂಡಕ್ಕೆ ಈ ಬಾರಿ ಇಶಾನ್‌ ಕಿಶನ್, ಮೊಹಮ್ಮದ್‌ ಶಮಿ, ಆಡಂ ಜಂಪಾ, ಹರ್ಷಲ್‌ ಪಟೇಲ್ ಮೊದಲಾದ ಆಟಗಾರರು‌ ಸೇರ್ಪಡೆಗೊಂಡಿದ್ದಾರೆ. ಸ್ಫೋಟಕ ಆಟಗಾರರ ದೊಡ್ಡ ಪಡೆಯನ್ನೇ ಹೊಂದಿರುವ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಮತ್ತಷ್ಟು ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸಲು ಸಜ್ಜಾಗಿದೆ.

ಕಿಶನ್, ಶಮಿ ಇನ್; ಐಪಿಎಲ್ 2025ಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ (File photo)
ಕಿಶನ್, ಶಮಿ ಇನ್; ಐಪಿಎಲ್ 2025ಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ (File photo)

IPL 2025: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಎರಡನೇ ಪಂದ್ಯದಲ್ಲಿ 2024ರ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 23ರಂದು ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ಸ್ಫೋಟಕ ಬ್ಯಾಟರ್‌ಗಳ ದೊಡ್ಡ ಪಡೆಯನ್ನೇ ಹೊಂದಿರುವ ಸನ್‌ರೈಸರ್ಸ್‌ ತಂಡವು ಕಳೆದ ಬಾರಿಗಿಂತ ಈ ಬಾರಿ ತುಸು ಬದಲಾಗಿದೆ. ಪ್ಯಾಟ್‌ ಕಮಿನ್ಸ್‌ ಈ ಬಾರಿಯೂ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಕಾವ್ಯಾ ಮಾರನ್‌ ಮಾಲಕತ್ವದ ಎಸ್‌ಆರ್‌ಎಚ್‌, ಕಳೆದ ವರ್ಷ ಪ್ರಶಸ್ತಿ ಗೆಲ್ಲುವ ಸನಿಹ ಬಂದಿತ್ತು. ಆದರೆ, ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸೋತಿತು. ಮೆಗಾ ಹರಾಜಿಗೂ ಮುನ್ನ ಬಲಿಷ್ಠ ಆಟಗಾರರನ್ನು ಉಳಿಸಿಕೊಂಡ ತಂಡವು, ಹರಾಜಿನಲ್ಲಿ ಮತ್ತಷ್ಟು ಆಟಗಾರರನ್ನು ತಂಡ ಸೇರಿಸಿಕೊಂಡಿತು. ಇಶಾನ್‌ ಕಿಶನ್, ಮೊಹಮ್ಮದ್‌ ಶಮಿ, ಆಡಂ ಜಂಪಾ, ಹರ್ಷಲ್‌ ಪಟೇಲ್ ಮೊದಲಾದ ಆಟಗಾರರು‌ ಈ ಬಾರಿ ತಂಡದ ಬಲ ಹೆಚ್ಚಿಸಲಿದ್ದಾರೆ.

ಕಳೆದ ಋತುವಿನಲ್ಲಿ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ವಿಧಾನದಿಂದ ಮೂರು ಬಾರಿ 250 ರನ್‌ ಗಡಿ ದಾಟಿದ ತಂಡವು, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾದ 287 ರನ್‌ ಗಳಿಸಿ ಹೊಸ ದಾಖಲೆಯನ್ನು ನಿರ್ಮಿಸಿತು. ಈ ಬಾರಿಯೂ ಸ್ಫೋಟಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ತಂಡದಲ್ಲಿದ್ದಾರೆ. ಇಶಾನ್ ಕಿಶನ್ ಸೇರ್ಪಡೆ ಮತ್ತಷ್ಟು ಬಲ ಹೆಚ್ಚಿಸಿದೆ.

ಅನಿಕೇತ್ ವರ್ಮಾ ಪದಾರ್ಪಣೆಗೆ ಸಜ್ಜಾಗಿದ್ದು, ಅಭಿನವ್ ಮನೋಹರ್ ಮತ್ತು ಸಚಿನ್ ಬೇಬಿ ಈ ಹಿಂದೆಯೂ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕಮಿಂದು ಮೆಂಡಿಸ್ ಆಡುವ ಬಳಗಕ್ಕೆ ಬರಬಹುದು. ಈ ಬಾರಿ ವೇಗದ ದಾಳಿಗೆ ಕಮಿನ್ಸ್ ಜೊತೆಗೆ ಮೊಹಮ್ಮದ್ ಶಮಿ ಹಾಗೂ ಹರ್ಷಲ್ ಪಟೇಲ್ ಕೂಡಾ ಸೇರಿಕೊಂಡಿದ್ದಾರೆ. ವಿದೇಶಿ ಬೌಲರ್‌ಗಳ ಪೈಕಿ ಸ್ಪಿನ್ನರ್ ಆಡಮ್ ಜಂಪಾ ಮತ್ತು ಆಲ್‌ರೌಂಡರ್ ವಿಯಾನ್ ಮುಲ್ಡರ್ ಅವರನ್ನು ಆಯ್ಕೆ ಮಾಡಬಹುದು.

ಎಸ್‌ಆರ್‌ಎಚ್‌ ಸಂಭಾವ್ಯ ಆಡುವ ಬಳಗ

1 ಟ್ರಾವಿಸ್ ಹೆಡ್, 2 ಅಭಿಷೇಕ್ ಶರ್ಮಾ, 3 ಇಶಾನ್ ಕಿಶನ್ (ವಿಕೆಟ್‌ ಕೀಪರ್), 4 ನಿತೀಶ್ ಕುಮಾರ್ ರೆಡ್ಡಿ, 5 ಹೆನ್ರಿಚ್ ಕ್ಲಾಸೆನ್, 6 ಅನಿಕೇತ್ ವರ್ಮಾ, 7 ಅಭಿನವ್ ಮನೋಹರ್, 8 ಪ್ಯಾಟ್ ಕಮಿನ್ಸ್ (ನಾಯಕ), 9 ಹರ್ಷಲ್ ಪಟೇಲ್, 10 ರಾಹುಲ್ ಚಹಾರ್, 11 ಮೊಹಮ್ಮದ್ ಶಮಿ, 12 ಆಡಂ ಜಂಪಾ (ಇಂಪ್ಯಾಕ್ಟ್‌ ಪ್ಲೇಯರ್).

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner