ಮಾರ್ಕ್ರಮ್, ಮಾರ್ಕಂಡೆಗೆ ಅವಕಾಶ; ಆರ್​ಆರ್ ಎದುರಿನ ಕ್ವಾಲಿಫೈಯರ್-2​ ಪಂದ್ಯಕ್ಕೆ ಎಸ್​ಆರ್​ಹೆಚ್ ಸಂಭಾವ್ಯ ತಂಡ-sunrisers hyderabad probable playing 11 vs rajasthan royals ipl 2024 qualifier 2 srh vs rr playing xi cricket news prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾರ್ಕ್ರಮ್, ಮಾರ್ಕಂಡೆಗೆ ಅವಕಾಶ; ಆರ್​ಆರ್ ಎದುರಿನ ಕ್ವಾಲಿಫೈಯರ್-2​ ಪಂದ್ಯಕ್ಕೆ ಎಸ್​ಆರ್​ಹೆಚ್ ಸಂಭಾವ್ಯ ತಂಡ

ಮಾರ್ಕ್ರಮ್, ಮಾರ್ಕಂಡೆಗೆ ಅವಕಾಶ; ಆರ್​ಆರ್ ಎದುರಿನ ಕ್ವಾಲಿಫೈಯರ್-2​ ಪಂದ್ಯಕ್ಕೆ ಎಸ್​ಆರ್​ಹೆಚ್ ಸಂಭಾವ್ಯ ತಂಡ

SRH Playing 11 vs RR: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಎರಡನೇ ಕ್ವಾಲಿಫೈಯರ್​ ಪಂದ್ಯಕ್ಕೆ ಸನ್​ರೈಸರ್ಸ್​ ಹೈದರಾಬಾದ್ ರೆಡಿಯಾಗಿದ್ದು, ಪ್ಲೇಯಿಂಗ್​ XIನಲ್ಲಿ ಮಹತ್ವದ ಬದಲಾವಣೆ ತಂದಿದೆ.

ಮಾರ್ಕ್ರಮ್, ಮಾರ್ಕಂಡೆಗೆ ಅವಕಾಶ; ಆರ್​ಆರ್ ಎದುರಿನ ಕ್ವಾಲಿಫೈಯರ್-2​ ಪಂದ್ಯಕ್ಕೆ ಎಸ್​ಆರ್​ಹೆಚ್ ಸಂಭಾವ್ಯ ತಂಡ
ಮಾರ್ಕ್ರಮ್, ಮಾರ್ಕಂಡೆಗೆ ಅವಕಾಶ; ಆರ್​ಆರ್ ಎದುರಿನ ಕ್ವಾಲಿಫೈಯರ್-2​ ಪಂದ್ಯಕ್ಕೆ ಎಸ್​ಆರ್​ಹೆಚ್ ಸಂಭಾವ್ಯ ತಂಡ

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೇ 24ರ ಶುಕ್ರವಾರ ರಾಜಸ್ಥಾನ್ ರಾಯಲ್ಸ್ (Sunrisers Hyderabad vs Rajasthan Royals) ತಂಡವನ್ನು ಎದುರಿಸಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಹಣಾಹಣಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಗೆಲ್ಲುವ ತಂಡ ಫೈನಲ್‌ಗೆ ಟಿಕೆಟ್ ಪಡೆದರೆ, ಸೋತ ತಂಡದ ಪಯಣ ಕೊನೆಗೊಳ್ಳಲಿದೆ. ಕ್ವಾಲಿಫೈಯರ್ 1 ವಿಜೇತ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಈಗಾಗಲೇ ಫೈನಲ್‌ಗೆ ಲಗ್ಗೆ ಇಟ್ಟಿದೆ. 17ನೇ ಋತುವಿನ ನಿರ್ಣಾಯಕ ಪಂದ್ಯವು ಮೇ 26 ರಂದು ಚೆಪಾಕ್‌ನಲ್ಲಿ ನಡೆಯಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದುಕೊಂಡಿತು. ಹೀಗಾಗಿ ತಂಡವು ಅದೇ ಗೆಲುವಿನ ಸಂಯೋಜನೆಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ. ಸತತ 4 ಸೋಲುಗಳು ಮತ್ತು 1 ಪಂದ್ಯ ರದ್ದಾದ ನಂತರ ಆರ್​ಆರ್​​ ಮತ್ತೊಮ್ಮೆ ಗೆಲುವಿನ ಹಾದಿಗೆ ಮರಳಿದೆ. ಬ್ಯಾಟಿಂಗ್‌ನಿಂದ ಬೌಲಿಂಗ್‌ವರೆಗೆ ಎಲ್ಲ ವಿಭಾಗಗಳಲ್ಲೂ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್​​ಗೆ ಠಕ್ಕರ್ ಕೊಡಲು ಸಿದ್ಧಗೊಂಡಿದೆ.

ಏಡನ್ ಮಾರ್ಕ್ರಮ್​, ಮಯಾಂಕ್ ಮಾರ್ಕಂಡೆಗೆ ಅವಕಾಶ

ಋತುವಿನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಹೈದರಾಬಾದ್, ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತು. ಆದರೆ, ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದಿರುವ ಕಾರಣ ತಂಡಕ್ಕೆ ಫೈನಲ್‌ಗೆ ಪ್ರಯಾಣಿಸಲು ಮತ್ತೊಂದು ಅವಕಾಶ ಸಿಕ್ಕಿದೆ. ಆದರೆ ಆಡುವ 11ರ ಬಳಗದಲ್ಲಿ ಅವಕಾಶ ಕೆಲ ಬದಲಾವಣೆಗೆ ಸನ್ನದ್ಧಗೊಂಡಿದೆ. ಏಡನ್ ಮಾರ್ಕ್ರಮ್​ಗೆ ಪ್ಲೇಯಿಂಗ್​ 11ನಲ್ಲಿ ಅವಕಾಶ ನೀಡಲು ಮ್ಯಾನೇಜ್​ಮೆಂಟ್ ಚಿಂತಿಸಿದೆ. ಹಾಗೆಯೇ ತಂಡದಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್​​ಗೂ ಮಣೆ ಹಾಕುವ ನಿರೀಕ್ಷೆಯಿದೆ. ಮಯಾಂಕ್ ಮಾರ್ಕಂಡೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಅವಕಾಶ ಪಡೆಯಬಹುದು.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​/ನಾಯಕ), ರಿಯಾನ್ ಪರಾಗ್, ಧ್ರುವ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್.

ರಾಜಸ್ಥಾನ್ ರಾಯಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್​: ಶುಭಂ ದುಬೆ, ಡೊನೊವನ್ ಫೆರೇರಾ, ನಾಂಡ್ರೆ ಬರ್ಗರ್, ಶಿಮ್ರಾನ್ ಹೆಟ್ಮೆಯರ್, ತನುಷ್ ಕೋಟ್ಯಾನ್.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್.

ಸನ್‌ರೈಸರ್ಸ್ ಹೈದರಾಬಾದ್ ಇಂಪ್ಯಾಕ್ಟ್ ಪ್ಲೇಯರ್ಸ್: ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಂಡೆ, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಜಯದೇವ್ ಉನಾದ್ಕತ್.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point