ಕನ್ನಡ ಸುದ್ದಿ  /  ಕ್ರಿಕೆಟ್  /  ಗೋವಾದ ಈ ಆಟಗಾರನಿಗೆ ಚಾನ್ಸ್ ಕೊಟ್ಟರೆ ಆರ್​ಸಿಬಿ ಭವಿಷ್ಯವೇ ಬದಲಾಗುತ್ತಂತೆ; ಈತ ಆಡಿದರೆ ಮ್ಯಾಚ್​ವಿನ್ನರ್ ಆಗೋದು ಪಕ್ಕಾ!

ಗೋವಾದ ಈ ಆಟಗಾರನಿಗೆ ಚಾನ್ಸ್ ಕೊಟ್ಟರೆ ಆರ್​ಸಿಬಿ ಭವಿಷ್ಯವೇ ಬದಲಾಗುತ್ತಂತೆ; ಈತ ಆಡಿದರೆ ಮ್ಯಾಚ್​ವಿನ್ನರ್ ಆಗೋದು ಪಕ್ಕಾ!

Suyash Prabhudessai: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಸುಯೇಶ್ ಪ್ರಭುದೇಸಾಯಿ ಅವರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಪ್ರಭು ಅವರ ಸಾಧನೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಸುಯೇಶ್ ಪ್ರಭುದೇಸಾಯಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಸುಯೇಶ್ ಪ್ರಭುದೇಸಾಯಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಸನ್​ರೈಸರ್ಸ್ ಹೈದರಾಬಾದ್ ಸವಾಲಿಗೆ ಸಜ್ಜಾಗಿದೆ. ತವರಿನ ಮೈದಾನ ಚಿನ್ನಸ್ವಾಮಿಯಲ್ಲಿ ಗೆಲುವಿನ ಲಯಕ್ಕೆ ಮರಳಲು ಭಾರಿ ಕಸರತ್ತು ನಡೆಸುತ್ತಿರುವ ಆರ್​ಸಿಬಿ, ಪ್ಲೇಆಫ್​ ಹಾದಿಯಲ್ಲಿ ನಿಲ್ಲಲು ಯೋಜನೆ ರೂಪಿಸಿದೆ. ಆದರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ​ ಈ ಆಟಗಾರನಿಗೆ ಅವಕಾಶ ನೀಡಬೇಕೆಂದು ಒತ್ತಾಯ ಕೇಳಿ ಬರುತ್ತಿದೆ. ಈತನಿಗೆ ಚಾನ್ಸ್ ಕೊಟ್ಟರೆ ಆರ್​ಸಿಬಿ ಭವಿಷ್ಯವೇ ಬದಲಾಗುತ್ತಂತೆ!

ಟ್ರೆಂಡಿಂಗ್​ ಸುದ್ದಿ

ಹೌದು, ಬಲಗೈ ಬ್ಯಾಟರ್​ ಸುಯೇಶ್ ಪ್ರಭುದೇಸಾಯಿಗೆ ಅವಕಾಶ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಕೆಚ್ಚೆದೆಯ ಆಟಗಾರ ಸಯೇಶ್​​ಗೆ 11ರ ಬಳಗದಲ್ಲಿ ಸ್ಥಾನ ಪಡೆದರೆ ತಂಡದ ಅದೃಷ್ಟ ಬದಲಾಯಿಸಲಿದ್ದಾರೆ. ರೆಡ್​ ಆರ್ಮಿಯನ್ನು ಮೇಲಕ್ಕೆ ತರಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ತಜ್ಞರ ವಾದ. ಪ್ರಸ್ತುತ ಮೊದಲ 6 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿರುವ ಆರ್‌ಸಿಬಿ, 5ರಲ್ಲಿ ಸೋತಿದೆ. ಬೆಂಗಳೂರು ತಂಡ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಸಮಸ್ಯೆ ಅಗ್ರ ಕ್ರಮಾಂಕವಾಗಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಫಾರ್ಮ್‌ನಲ್ಲಿಲ್ಲ. ಇದರಿಂದ ತಂಡ ಸಂಕಷ್ಟದಲ್ಲಿದೆ. ಹಾಗಾಗಿ ಅಗ್ರ ಕ್ರಮಾಂಕದಲ್ಲಿ ಒಂದಿಷ್ಟು ರನ್ ಗಳಿಸುವ ಆಟಗಾರನ ಅಗತ್ಯ ಇದೆ. ಹಾಗಾಗಿ ದೇಶೀಯ ಕ್ರಿಕೆಟ್​​ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ ಸುಯೇಶ್​​ರನ್ನು ಆಡಿಸಿದರೆ ಟಾಪ್ ಆರ್ಡರ್​​ನಲ್ಲಿ ಟೀಮ್ ಮ್ಯಾನೇಜ್​ಮೆಂಟ್​ ನಂಬಿಕೆ ಉಳಿಸಿಕೊಳ್ಳಲಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ಪ್ರಭು ಬ್ಯಾಟ್ ಸಖತ್ ಸದ್ದು ಮಾಡಿದ್ದು, ಸಾಕಷ್ಟು ರನ್ ಗಳಿಸಿದ್ದರೂ ಅವರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅವಕಾಶ ಸಿಕ್ಕರೆ, ಮ್ಯಾಚ್ ವಿನ್ನರ್ ಆಗಬಹುದು ಎನ್ನುತ್ತಾರೆ ತಜ್ಞರು. ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸುಯೇಶ್ ಅವಕಾಶ ಪಡೆಯಲು ಅರ್ಹರಾಗಿದ್ದರು. ಆದರೆ ತನಗೆ ಅವಕಾಶ ಸಿಗದಿರುವುದಕ್ಕೆ ಕ್ರಿಕೆಟ್​ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಯಶ್ ಪ್ರಭುದೇಸಾಯಿ ಯಾರು?

1997ರ ಡಿಸೆಂಬರ್​​ 6ರಂದು ಜನಿಸಿದ ಸುಯಶ್, ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುವ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದಾರೆ. 19ನೇ ವಯಸ್ಸಿನಲ್ಲಿ ತಮ್ಮ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದರು. 2017ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ಡೆಬ್ಯು ಪಂದ್ಯವನ್ನಾಡಿದ್ದರು. ಅಂದು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 21 ಎಸೆತಗಳಲ್ಲಿ 27 ರನ್ ಗಳಿಸಿದ್ದರು. ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋವಾ ಪರ ಕ್ರಮವಾಗಿ ನವೆಂಬರ್ 2018 ಮತ್ತು ಫೆಬ್ರವರಿ 2019ರಲ್ಲಿ ಪದಾರ್ಪಣೆ ಮಾಡಿದ್ದರು. ಮೂರು ಸ್ವರೂಪಗಳಲ್ಲೂ 116 ಪಂದ್ಯಗಳನ್ನಾಡಿದ್ದಾರೆ.

ಪ್ರಭುದೇಸಾಯಿ ಪ್ರದರ್ಶನ

ಪ್ರಭು ತಮ್ಮ ವೃತ್ತಿಜೀವನದಲ್ಲಿ 5 ಮತ್ತು 6ನೇ ಕ್ರಮಾಂಕದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಆದರೆ, ಕ್ರಮೇಣ ಕ್ರಮಾಂಕದಲ್ಲಿ ಬಡ್ತಿ ಪಡೆದು ಒನ್ ಡೌನ್ ನಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 46.32, ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್​ನಲ್ಲಿ 25ರ ಸರಾಸರಿ ಹೊಂದಿದ್ದಾರೆ. ಆದಾಗ್ಯೂ, ಈ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಈವರೆಗೆ 56, 17, 30 ಮತ್ತು 132* ಸ್ಕೋರ್‌ ಗಳಿಸಿ ಸುಧಾರಿಸಿದ್ದಾರೆ.

ಇದುವರೆಗೆ 41 ಟಿ20 ಇನ್ನಿಂಗ್ಸ್‌ಗಳಲ್ಲಿ 134 ಸ್ಟ್ರೈಕ್ ರೇಟ್‌ನಲ್ಲಿ 873 ರನ್ ಗಳಿಸಿರುವ ಪ್ರಭು, ಅರೆಕಾಲಿಕ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. 45 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್‌ ಕೂಡ ಕಿತ್ತಿದ್ದಾರೆ. 2021ರ ಐಪಿಎಲ್ ಹರಾಜಿನಲ್ಲಿ ಪ್ರಭು ಅವರನ್ನು ಆರ್​ಸಿಬಿ 20 ಲಕ್ಷಕ್ಕೆ ಖರೀದಿಸಿತು. ಆದರೆ ಒಂದು ಪಂದ್ಯವನ್ನೂ ಆಡಲಿಲ್ಲ. 2022ರ ಹರಾಜಿಗೆ ಮುನ್ನ ಆತನನ್ನು ಬಿಡುಗಡೆ ಮಾಡಿದ ಆರ್​ಸಿಬಿ, ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಸಿತು.

ಪ್ರಭುದೇಸಾಯಿ ತನ್ನ ಚೊಚ್ಚಲ ಐಪಿಎಲ್​​​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸಿಎಸ್​ಕೆ ವಿರುದ್ಧ ಆರನೇ ಕ್ರಮಾಂಕದಲ್ಲಿ 18 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಆದರೆ, ತಂಡವು 23 ರನ್​​ಗಳ ಸೋಲನುಭವಿಸಬೇಕಾಯಿತು. ಆರ್‌ಸಿಬಿ ಪರ ಒಟ್ಟು 9 ಇನ್ನಿಂಗ್ಸ್ ಆಡಿದ್ದು 102 ರನ್ ಗಳಿಸಿದ್ದಾರೆ. ಸತತ ಅವಕಾಶಗಳು ಸಿಗದ ಕಾರಣ ತನ್ನ ಸಾಮರ್ಥ್ಯ ನಿರೂಪಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಸುಯೇಶ್ ಪ್ರಭುದೇಸಾಯಿಗೆ ಅವಕಾಶ ಸಿಗಲಿ, ತನ್ನ ಪ್ರತಿಭೆ ಅನಾವರಣಗೊಳ್ಳಲಿ ಎಂಬುದು ಎಲ್ಲರ ಆಶಯ.

IPL_Entry_Point