ಟಿ20 ವಿಶ್ವಕಪ್ ಸೂಪರ್ 8 ಗುಂಪು 2: ತಂಡಗಳು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಸೂಪರ್ 8 ಗುಂಪು 2: ತಂಡಗಳು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ

ಟಿ20 ವಿಶ್ವಕಪ್ ಸೂಪರ್ 8 ಗುಂಪು 2: ತಂಡಗಳು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ

T20 World Cup 2024: ಟಿ20 ವಿಶ್ವಕಪ್​ 2024 ಸೂಪರ್​ 8 ಗುಂಪು 2ರ ತಂಡಗಳು ಯಾವುವು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯಗಳು, ಲೈವ್​ ಸ್ಟ್ರೀಮಿಂಗ್​ ವಿವರ ಇಲ್ಲಿದೆ.

ಟಿ20 ವಿಶ್ವಕಪ್ ಸೂಪರ್ 8 ಗುಂಪು 2: ತಂಡಗಳು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ
ಟಿ20 ವಿಶ್ವಕಪ್ ಸೂಪರ್ 8 ಗುಂಪು 2: ತಂಡಗಳು, ವೇಳಾಪಟ್ಟಿ, ಸ್ಥಳಗಳು, ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ

ಜೂನ್ 16 ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್‌ನಲ್ಲಿರುವ ಡರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ (T20 World Cup 2024) 'ಬಿ' ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಸ್ಕಾಟ್ಲೆಂಡ್ ಸೋಲಿಸಿದ್ದರ ಬೆನ್ನಲ್ಲೇ ಇಂಗ್ಲೆಂಡ್ ಸೂಪರ್​-8ರಲ್ಲಿ ಸ್ಥಾನ ಖಚಿತಪಡಿಸಿದೆ. ಸೂಪರ್-8 ಸುತ್ತಿನಲ್ಲಿ ಗ್ರೂಪ್​​​​-2ರಲ್ಲಿ ಯಾವ ತಂಡಗಳು ಸ್ಥಾನ ಪಡೆದಿವೆ, ವೇಳಾಪಟ್ಟಿ, ಪಂದ್ಯದ ಸಮಯ, ಸ್ಥಳಗಳು ಯಾವುವು ಎಂಬುದರ ವಿವರ ಇಲ್ಲಿದೆ.

ಸೂಪರ್​​-8ರ ಗ್ರೂಪ್ 2ನಲ್ಲಿ ಇಂಗ್ಲೆಂಡ್, ಅಮೆರಿಕ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಸೂಪರ್ 8 ಪಂದ್ಯಗಳು ಜೂನ್ 19ರಂದು ಪ್ರಾರಂಭವಾಗಲಿದ್ದು, ಪ್ರತಿ ತಂಡ 3 ಪಂದ್ಯಗಳನ್ನು ಆಡಲಿವೆ. ಎರಡನೇ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೂಪರ್ 8 ಸುತ್ತಿನ ಆರಂಭದ ಮೊದಲು ಗುಂಪು 2ರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ಅರ್ಹ ತಂಡಗಳು (ಸೂಪರ್​-8 ಗ್ರೂಪ್ 2)

A2: ಅಮೆರಿಕ

B1: ಇಂಗ್ಲೆಂಡ್

C2: ವೆಸ್ಟ್ ಇಂಡೀಸ್

D1: ದಕ್ಷಿಣ ಆಫ್ರಿಕಾ

ವಿಶ್ವಕಪ್ ಸೂಪರ್-8 ಹಂತದಲ್ಲಿ ಗುಂಪು-2ರ ಪಂದ್ಯಗಳ ಸ್ಥಳಗಳು

  • ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ
  • ಡರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ
  • ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್

ಲೈವ್ ಸ್ಟ್ರೀಮಿಂಗ್ ಮತ್ತು ಟೆಲಿಕಾಸ್ಟ್ ವಿವರಗಳು

ಗ್ರೂಪ್ 2ರ ಸೂಪರ್ 8 ಪಂದ್ಯಗಳನ್ನು ಭಾರತದಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಸೂಪರ್-8 ಪಂದ್ಯಗಳ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ.

ಸೂಪರ್​​-8ನಲ್ಲಿ 2ನೇ ಗುಂಪು ಹಂತದ ಪಂದ್ಯಗಳು

ಯುಎಸ್ಎ: ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್), ಆರನ್ ಜೋನ್ಸ್, ಶಯಾನ್ ಜಹಾಂಗೀರ್, ಸ್ಟೀವನ್ ಟೇಲರ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಸೌರಭ್ ನೇತ್ರಾವಲ್ಕರ್, ಅಲಿ ಖಾನ್, ನೊಸ್ತುಶ್ ಕೆಂಜಿಗೆ, ನಿಸಾರ್ಗ್ ಮಿಲಿಂದ್ ಕುಮಾರ್.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್​), ಫಿಲಿಪ್ ಸಾಲ್ಟ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ, ವಿಲ್ ಜ್ಯಾಕ್ಸ್, ಮಾರ್ಕ್ ವುಡ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ.

ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಬ್ರೆಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್​), ರೋಸ್ಟನ್ ಚೇಸ್, ಶೆರ್ಫಾನೆ ರುದರ್‌ಫೋರ್ಡ್, ಆಂಡ್ರೆ ರಸ್ಸೆಲ್, ರೊಮಾರಿಯೊ ಶೆಫರ್ಡ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಓಬೇಡ್ ಮೆಕಾಯ್, ಶಮರ್ ಜೋಸೆಫ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ​ ಜೋಸೆಫ್, ಶಾಯ್ ಹೋಪ್.

ದಕ್ಷಿಣ ಆಫ್ರಿಕಾ: ಏಡೆನ್ ಮಾರ್ಕ್ರಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್​), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಆನ್ರಿಚ್ ನೋಕಿಯಾ, ಒಟ್ನೀಲ್ ಬಾರ್ಟ್‌ಮ್ಯಾನ್, ತಬ್ರೈಜ್ ಶಮ್ಸಿ, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ ರಿಕೆಲ್ಟನ್, ಜಾರ್ನ್ ಫಾರ್ಟುಯಿನ್.

ದಿನಾಂಕದಿನತಂಡ 1ತಂಡ 2ಸ್ಥಳಪ್ರಾರಂಭ ಸಮಯ
ಜೂನ್ 19ಬುಧವಾರಯುಎಸ್ಎದಕ್ಷಿಣ ಆಫ್ರಿಕಾಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ8:00 ಪಿಎಂ
ಜೂನ್ 20ಗುರುವಾರಇಂಗ್ಲೆಂಡ್ವೆಸ್ಟ್ ಇಂಡೀಸ್ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ6:00 ಎಎಂ
ಜೂನ್ 21ಶುಕ್ರವಾರಇಂಗ್ಲೆಂಡ್ದಕ್ಷಿಣ ಆಫ್ರಿಕಾಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ8:00 ಪಿಎಂ
ಜೂನ್ 22ಶನಿವಾರಯುಎಸ್ಎವೆಸ್ಟ್ ಇಂಡೀಸ್ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್6:00 ಎಂಐ
ಜೂನ್ 23ಭಾನುವಾರಯುಎಸ್ಎಇಂಗ್ಲೆಂಡ್ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್, ಬಾರ್ಬಡೋಸ್8:00 ಪಿಎಂ
ಜೂನ್ 24ಸೋಮವಾರವೆಸ್ಟ್ ಇಂಡೀಸ್ದಕ್ಷಿಣ ಆಫ್ರಿಕಾಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ6:00 ಎಂಐ
Whats_app_banner