ಐಪಿಎಲ್ ನಂತರ ಟೀಮ್ ಇಂಡಿಯಾಗೆ ಮೇಲಿಂದ ಮೇಲೆ ಪಂದ್ಯಗಳು; ಏಷ್ಯಾಕಪ್‌, ಇಂಗ್ಲೆಂಡ್-ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ನಂತರ ಟೀಮ್ ಇಂಡಿಯಾಗೆ ಮೇಲಿಂದ ಮೇಲೆ ಪಂದ್ಯಗಳು; ಏಷ್ಯಾಕಪ್‌, ಇಂಗ್ಲೆಂಡ್-ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ

ಐಪಿಎಲ್ ನಂತರ ಟೀಮ್ ಇಂಡಿಯಾಗೆ ಮೇಲಿಂದ ಮೇಲೆ ಪಂದ್ಯಗಳು; ಏಷ್ಯಾಕಪ್‌, ಇಂಗ್ಲೆಂಡ್-ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ

2025ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ಹಲವು ಮಹತ್ವದ ಟೂರ್ನಿ ಹಾಗೂ ಸರಣಿಗಳು ನಡೆಯಲಿವೆ. ಏಷ್ಯಾಕಪ್ ಜೊತೆಗೆ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಪ್ರವಾಸ ಮಹತ್ವ ಪಡೆದಿದೆ. ಟೀಮ್ ಇಂಡಿಯಾದ 2025ರ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್ ನಂತರ ಟೀಮ್ ಇಂಡಿಯಾಗೆ ಮೇಲಿಂದ ಮೇಲೆ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ
ಐಪಿಎಲ್ ನಂತರ ಟೀಮ್ ಇಂಡಿಯಾಗೆ ಮೇಲಿಂದ ಮೇಲೆ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಸದ್ಯ ಟೀಮ್‌ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ವಿವಿಧ ದೇಶಗಳ ಪ್ರಬಲ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ಐಪಿಎಲ್‌ನಂತೆಯೇ ಪಿಎಸ್‌ಎಲ್‌ ಟೂರ್ನಿ ನಡೆಯುತ್ತಿದೆ. ಇದು ಮುಗಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತೆ ಆರಂಭವಾಗಲಿದೆ. ಭಾರತ ಕ್ರಿಕೆಟ್‌ ತಂಡ ಕೂಡಾ ವಿವಿಧ ಸರಣಿ ಹಾಗೂ ಟೂರ್ನಿಯಲ್ಲಿ ಆಡಲಿದೆ. ಐಪಿಎಲ್‌ ಪಂದ್ಯಾವಳಿಯು ಮೇ 25ರಂದು ಮುಗಿಯಲಿದೆ. ಫೈನಲ್‌ ಪಂದ್ಯದ ನಂತರ ಆಟಗಾರರು ಕೆಲವು ದಿನಗಳ ವಿಶ್ರಾಂತಿ ಪಡೆದು, ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.

ಐಪಿಎಲ್‌ಗಿಂತ ಮುಂಚೆ ಭಾರತ ಕ್ರಿಕೆಟ್‌ ತಂಡವು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯ ಅಭಿಯಾನ ನಡೆಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಅದಾದ ಬಳಿಕ ಐಪಿಎಲ್‌ ಪಂದ್ಯಾವಳಿ ಆರಂಭವಾಯ್ತು. ಟೂರ್ನಿ ಮುಗಿದ ಬಳಿಕ 2025ರ ಕ್ರಿಕೆಟ್‌ ಪಂದ್ಯಗಳ ಉಳಿದ ವೇಳಾಪಟ್ಟಿಯ ಪ್ರಕಾರ ಆಡಲಿದೆ.

ಈ ಅವಧಿಯಲ್ಲಿ ಏಷ್ಯಾಕಪ್ ಟೂರ್ನಿ ಕೂಡಾ ನಡೆಯಲಿದೆ. ಇದರೊಂದಿಗೆ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಪ್ರವಾಸ ಮಹತ್ವ ಪಡೆದಿದೆ. 2025ರ ಉಳಿದ ಪಂದ್ಯಗಳಿಗೆ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಭಾರತದ ಇಂಗ್ಲೆಂಡ್ ಪ್ರವಾಸ (ಜೂನ್ ತಿಂಗಳಿಂದ ಆಗಸ್ಟ್‌ವರೆಗೆ): ಇಂಗ್ಲೆಂಡ್‌ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

  • ಜೂನ್ 20: 1 ನೇ ಟೆಸ್ಟ್ (ಹೆಡಿಂಗ್ಲಿ, ಲೀಡ್ಸ್)
  • ಜುಲೈ 2: 2 ನೇ ಟೆಸ್ಟ್ (ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್)
  • ಜುಲೈ 10: 3 ನೇ ಟೆಸ್ಟ್ (ಲಾರ್ಡ್ಸ್, ಲಂಡನ್)
  • ಜುಲೈ 23: 4 ನೇ ಟೆಸ್ಟ್ (ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್)
  • ಜುಲೈ 31: 5 ನೇ ಟೆಸ್ಟ್ (ದಿ ಓವಲ್, ಲಂಡನ್)

ಬಾಂಗ್ಲಾದೇಶ ಪ್ರವಾಸ (ಆಗಸ್ಟ್ 2025): ಬಾಂಗ್ಲಾದೇಶ ಪ್ರವಾಸದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯಲಿವೆ. ಸರಣಿಯ ನಿಖರ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

ಏಷ್ಯಾ ಕಪ್: ಸೆಪ್ಟೆಂಬರ್ 2025. ಟೂರ್ನಿಯ ಸ್ಥಳ ಮತ್ತು ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಭಾರತ vs ವೆಸ್ಟ್ ಇಂಡೀಸ್: (2 ಟೆಸ್ಟ್‌ ಪಂದ್ಯಗಳು)

  • 1ನೇ ಟೆಸ್ಟ್ - ಅಕ್ಟೋಬರ್ 2ರಿಂದ ಅಕ್ಟೋಬರ್ 6, ಅಹಮದಾಬಾದ್
  • 2ನೇ ಟೆಸ್ಟ್ - ಅಕ್ಟೋಬರ್ 10ರಿಂದ ಅಕ್ಟೋಬರ್ 14, ಕೋಲ್ಕತ್ತಾ

ಭಾರತ ಆಸ್ಟ್ರೇಲಿಯಾ ಪ್ರವಾಸ (ಅಕ್ಟೋಬರ್-ನವೆಂಬರ್ 2025): ಆಸೀಸ್‌ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳು ಹಾಗೂ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಏಕದಿನ ಸರಣಿ

  • ಅಕ್ಟೋಬರ್ 19, ಭಾನುವಾರ: ಪರ್ತ್ ಕ್ರೀಡಾಂಗಣ, ಪರ್ತ್, (D/N)
  • ಅಕ್ಟೋಬರ್ 23, ಗುರುವಾರ: ಅಡಿಲೇಡ್ ಓವಲ್, ಅಡಿಲೇಡ್, (D/N)
  • ಅಕ್ಟೋಬರ್ 25, ಶನಿವಾರ: SCG, ಸಿಡ್ನಿ, (D/N)

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20 ಸರಣಿ ವೇಳಾಪಟ್ಟಿ

  • ಅಕ್ಟೋಬರ್ 29, ಬುಧವಾರ: ಮನುಕಾ ಓವಲ್, ಕ್ಯಾನ್‌ಬೆರಾ, (N)
  • ಅಕ್ಟೋಬರ್ 31, ಶುಕ್ರವಾರ: ಎಂಸಿಜಿ, ಮೆಲ್ಬೋರ್ನ್, (N)
  • ನವೆಂಬರ್ 2, ಭಾನುವಾರ: ಬೆಲ್ಲೆರಿವ್ ಓವಲ್, ಹೋಬಾರ್ಟ್, (N)
  • ನವೆಂಬರ್ 6, ಗುರುವಾರ: ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಗೋಲ್ಡ್ ಕೋಸ್ಟ್, (N)
  • ನವೆಂಬರ್ 8, ಶನಿವಾರ: ದಿ ಗಬ್ಬಾ, ಬ್ರಿಸ್ಬೇನ್, (N)

ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ (ನವೆಂಬರ್-ಡಿಸೆಂಬರ್ 2025): ಭಾರತಕ್ಕೆ ಬರಲಿರುವ ಹರಿಣಗಳು 2 ಟೆಸ್ಟ್‌, 3 ಏಕದಿನ ಮತ್ತು 5 ಟಿ20 ಪಂದ್ಯಗಳಲ್ಲಿ ಆಡಲಿದೆ.

  • 1ನೇ ಟೆಸ್ಟ್ - ನವೆಂಬರ್ 14ರಿಂದ ನವೆಂಬರ್ 18, ನವದೆಹಲಿ
  • 2ನೇ ಟೆಸ್ಟ್ - ನವೆಂಬರ್ 22ರಿಂದ ನವೆಂಬರ್ 26, ಗುವಾಹಟಿ
  • 1ನೇ ಏಕದಿನ - ನವೆಂಬರ್ 30, ರಾಂಚಿ
  • 2ನೇ ಏಕದಿನ - ಡಿಸೆಂಬರ್ 3, ರಾಯ್‌ಪುರ
  • 3ನೇ ಏಕದಿನ - ಡಿಸೆಂಬರ್ 6, ವಿಶಾಖಪಟ್ಟಣ
  • 1ನೇ ಟಿ20ಐ - ಡಿಸೆಂಬರ್ 9, ಕಟಕ್
  • 2ನೇ ಟಿ20ಐ - ಡಿಸೆಂಬರ್ 11, ಹೊಸ ಚಂಡೀಗಢ
  • 3ನೇ ಟಿ20ಐ - ಡಿಸೆಂಬರ್ 14, ಧರ್ಮಶಾಲಾ
  • 4ನೇ ಟಿ20ಐ - ಡಿಸೆಂಬರ್ 17, ಲಕ್ನೋ
  • 5ನೇ ಟಿ20ಐ - ಡಿಸೆಂಬರ್ 19, ಅಹಮದಾಬಾದ್

ಇದನ್ನೂ ಓದಿ | ಅಕ್ಟೋಬರ್‌ನಲ್ಲಿ ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.