Team India Jersey: 3 ಕನಸಿನೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ಜೆರ್ಸಿ ಅನಾವರಣ; ಏನೆಲ್ಲಾ ಬದಲಾವಣೆ?
ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ತೀನ್ ಕಾ ಡ್ರೀಮ್ (ಮೂರು ಕನಸು) ಘೋಷಣೆ ಮೂಲಕ ಅಡಿಡಾಸ್ ಜೆರ್ಸಿಯನ್ನು ಅನಾವರಣ ಮಾಡಿದೆ.
ಮುಂಬೈ: ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ (ICC ODI World Cup 2023) ಟೀಂ ಇಂಡಿಯಾದ ನೂತನ ಜೆರ್ಸಿಯನ್ನು (Team India Jersey) ಅನಾವರಣ ಮಾಡಲಾಗಿದೆ. ಖ್ಯಾತ ಗಾಯಕ ರಫ್ತಾರ್ ಹಾಡಿರುವ '3 ಕಾ ಡ್ರೀಮ್' (ಮೂರು ಕನಸು) ಹಾಡಿನ ಮೂಲಕ ಅಡಿಡಾಸ್ ಸಂಸ್ಥೆ ಬಹು ನಿರೀಕ್ಷಿತ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
3 ಕಾ ಡ್ರೀಮ್ ಎಂದರೆ 1983 ಮತ್ತು 2011ರಲ್ಲಿ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದುಕೊಂಡಿದೆ. ಇದೀಗ 2023ರಲ್ಲಿ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡರೆ ಭಾರತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದಂತಾಗುತ್ತದೆ. ಇದು ಭಾರತ ಕೋಟಿ ಕೋಟಿ ಅಭಿಮಾನಗಿಳು ಕನಸು ಕೂಡ ಆಗಿದೆ. ಹೀಗಾಗಿ 3 ಕಾ ಡ್ರೀಮ್ ಎಂಬ ಘೋಷಣೆ ಮೂಲಕ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆದಿರುವ ಅಡಿಡಾಸ್ ಸಂಸ್ಥೆ ಡಿಫರೆಂಟ್ ಆಗಿ ಜೆರ್ಸಿಯನ್ನು ಅನಾವರಣ ಮಾಡಿದೆ. ಅಡಿಡಾಸ್‌ನ ಲೋಗೋದಲ್ಲೂ ಮೂರು ಗೆರೆಗಳು ಇರುವುದು ವಿಶೇಷ.
ಜೆರ್ಸಿಯಲ್ಲಿ ತ್ರಿವರ್ಣ ಗೆರೆಗಳು, ಎರಡು ಸ್ಟಾರ್‌ಗಳು
ಮೆನ್ ಇನ್ ಬ್ಲೂ ಜೆರ್ಸಿಯಲ್ಲಿ ಅಡಿಡಾಸ್ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗಿರುವ ಜೆರ್ಸಿಯಲ್ಲಿ ಭುಜಗಳ ಮೇಲೆ ಮೂರು ಬಿಳಿ ಗೆರೆಗಳಿವೆ. ಆದರೆ ಐಸಿಸಿ ವಿಶ್ವಕಪ್‌ಗಾಗಿ ತಯಾರಿಸಿರುವ ಜೆರ್ಸಿಯಲ್ಲಿ ಭುಜಗಳ ಮೇಲಿರುವ ಬಿಳಿ ಗೆರೆಯಗಳನ್ನು ರೋಮಾಂಕ ತ್ರಿವರ್ಣದೊಂದಿಗೆ ಬದಲಾವಣೆ ಮಾಡಲಾಗಿದೆ.
ಎದೆಯ ಎಡಭಾಗದಲ್ಲಿರುವ ಬಿಸಿಸಿಐ ಲೋಗೋ ಮೇಲೆ ಎರಡು ನಕ್ಷತ್ರಗಳನ್ನು ಚಿತ್ರಿಸಲಾಗಿದೆ. ಇದು ಭಾರತದ ಐಸಿಸಿ ವಿಶ್ವಕಪ್ ( 1983 ಮತ್ತು 2011) ವಿಜಯದ ಸಂಕೇತವನ್ನು ಸೂಚಿಸುತ್ತದೆ. ಅಡಿಡಾಸ್ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಜೆರ್ಸಿ ಅನಾವರಣದ ವಿಡಿಯೊದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶುಭ್ಮನ್ ಗಿಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ.
ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ 2023ರ ಮೆಗಾ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 11 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು ಆಡಿದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14 ರಂದು ಜರುಗಳಿಲಿದೆ.
ಐಸಿಸಿ ವಿಶ್ವಕಪ್ 2023ರ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾದ ಪಂದ್ಯಗಳು
ಪಂದ್ಯ 5: ಅಕ್ಟೋಬರ್ 8 - ಭಾರತ vs ಆಸ್ಟ್ರೇಲಿಯಾ, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 9: ಅಕ್ಟೋಬರ್ 11 - ಭಾರತ vs ಅಫ್ಘಾನಿಸ್ತಾನ, ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 12: ಅಕ್ಟೋಬರ್ 14 - ಭಾರತ vs ಪಾಕಿಸ್ತಾನ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 17: ಅಕ್ಟೋಬರ್ 19 - ಭಾರತ vs ಬಾಂಗ್ಲಾದೇಶ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ, ಪುಣೆ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 21: ಅಕ್ಟೋಬರ್ 22 - ಭಾರತ vs ನ್ಯೂಜಿಲೆಂಡ್, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರ್ಮಶಾಲಾ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 29: ಅಕ್ಟೋಬರ್ 29 - ಭಾರತ vs ಇಂಗ್ಲೆಂಡ್, ಎಕಾನಾ ಕ್ರಿಕೆಟ್ ಸ್ಟೇಡಿಂಯ, ಲಕ್ನೋ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 33: ನವೆಂಬರ್ 2 - ಭಾರತ vs ಶ್ರೀಲಂಕಾ, ವಾಂಖೆಡೆ ಸ್ಟೇಡಿಯಂ, ಮುಂಬೈ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 37: ನವೆಂಬರ್ 5 - ಭಾರತ vs ದಕ್ಷಿಣ ಆಫ್ರಿಕಾ, ಈಡನ್ ಗಾರ್ಡನ್ಸ್, ಕೋಲ್ಕತ್ತ - ಮಧ್ಯಾಹ್ನ 2 ಗಂಟೆ (IST)
ಪಂದ್ಯ 45: ನವೆಂಬರ್ 12 - ಭಾರತ vs ನೆದರ್‌ಲ್ಯಾಂಡ್ಸ್, ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು - ಮಧ್ಯಾಹ್ನ 2 ಗಂಟೆ (IST)