ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಹತ್ವದ ಬದಲಾವಣೆ; ಶಿವಂ ದುಬೆ ಬದಲಿಗೆ ಈತನಿಗೆ ಅವಕಾಶ ಸಾಧ್ಯತೆ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಹತ್ವದ ಬದಲಾವಣೆ; ಶಿವಂ ದುಬೆ ಬದಲಿಗೆ ಈತನಿಗೆ ಅವಕಾಶ ಸಾಧ್ಯತೆ

Team India Playing XI: ಜೂನ್ 24ರಂದು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್​​-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಆಗುವುದು ನಿಶ್ಚಿತವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಹತ್ವದ ಬದಲಾವಣೆ; ಶಿವಂ ದುಬೆ ಬದಲಿಗೆ ಈತನಿಗೆ ಅವಕಾಶ ಸಾಧ್ಯತೆ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಹತ್ವದ ಬದಲಾವಣೆ; ಶಿವಂ ದುಬೆ ಬದಲಿಗೆ ಈತನಿಗೆ ಅವಕಾಶ ಸಾಧ್ಯತೆ

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (ICC T20 World Cup 2024) ಟೀಮ್ ಇಂಡಿಯಾ, ಗೆಲುವಿನ ನಾಗಾಲೋಟ ಮುಂದುವರೆಸಿದೆ. ಗುಂಪು ಹಂತ ಮತ್ತು ಸೂಪರ್​-8 ಹಂತದಲ್ಲೂ ಭಾರತ ತಂಡ, ಅಜೇಯ ಗೆಲುವಿನೊಂದಿಗೆ ಸೆಮಿಫೈನಲ್​​ನತ್ತ ಹೆಜ್ಜೆ ಹಾಕುತ್ತಿದೆ. ಈಗ ಸೂಪರ್​​-8 ಸುತ್ತಿನಲ್ಲೂ ಸತತ 2 ಗೆಲುವು ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಂದ್ಯವನ್ನು ಎದುರಿಸಲಿದೆ. ಈ ಪಂದ್ಯವು ಸೇಂಟ್ ಲೂಸಿಯಾದ ಡರೇನ್ ಸಾಮಿ ನ್ಯಾಷನಲ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ಜೂನ್ 24ರಂದು ನಡೆಯುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆ ಇದೆ. ಲೀಗ್​ ಹಂತದಲ್ಲಿ ಸತತ ಮೂರು ಪಂದ್ಯ, ಸೂಪರ್​​-8 ಸುತ್ತಿನಲ್ಲಿ ಸತತ 2 ಪಂದ್ಯ ಗೆದ್ದು ಅಜೇಯವಾಗಿದೆ. ಈಗ ಮತ್ತೊಂದು ಗೆಲುವು ಸಾಧಿಸಿದರೆ, ಅಧಿಕೃತವಾಗಿ ಸೆಮೀಸ್​ ಪ್ರವೇಶಿಸಲಿದೆ. ಕಳೆದ ಬಾರಿಯೂ ಸೆಮಿಫೈನಲ್ ಹಂತದಲ್ಲೇ ಮುಗ್ಗರಿಸಿದ್ದ ರೋಹಿತ್ ಪಡೆ, ಈ ಸಲ ಫೈನಲ್ ಪ್ರವೇಶಿಸಲು ಸಜ್ಜಾಗಿದೆ. ಇದರೊಂದಿಗೆ 2007ರ ನಂತರ ಟ್ರೋಫಿ ಗೆಲ್ಲಲು ಮುಂದಾಗಿದೆ.

ಆಸೀಸ್​ ವಿರುದ್ಧದ ಪಂದ್ಯಕ್ಕೆ ಬದಲಾವಣೆ ಸಾಧ್ಯತೆ

ಆಸ್ಟ್ರೇಲಿಯಾ​ ವಿರುದ್ಧದ ಮಹತ್ವದ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲ ಬದಲಾವಣೆಯಾಗುವ ನಿರೀಕ್ಷೆಯಾಗುವ ಸಾಧ್ಯತೆ ಇದೆ. ಆರಂಭಿಕರಾಗಿ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ ಮತ್ತೆ ಲಯಕ್ಕೆ ಮರಳುತ್ತಿದ್ದು, ಆಸೀಸ್​ ವಿರುದ್ಧವೂ ಅಬ್ಬರಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಭರ್ಜರಿ ಫಾರ್ಮ್​​ನಲ್ಲಿದ್ದು, ಮತ್ತೊಮ್ಮೆ ಮಿಂಚುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಕಳಪೆ ಫಾರ್ಮ್​ನಲ್ಲಿರುವ ಶಿವಂ ದುಬೆ ಬದಲಿಗೆ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಆಲ್​ರೌಂಡರ್ ಆಗಿ ಹಾರ್ದಿಕ್​ ಪಾಂಡ್ಯ ಮುಂದುವರೆಯಲಿದ್ದಾರೆ. ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​ ಸ್ಪಿನ್​ ಆಲ್​ರೌಂಡರ್​ಗಳಾದರೆ, ಕುಲ್ದೀಪ್ ಯಾದವ್ ಸ್ಪೆಷಲ್ ಸ್ಪಿನ್ನರ್​ ಆಗಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೂ ಮೊಹಮ್ಮದ್ ಸಿರಾಜ್ ಅಲಭ್ಯರಾಗಲಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು

2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋಲಿಸಿದ್ದ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೇಡಿಗೆ ಸಜ್ಜಾಗಿದೆ. ಅಂದು ನವೆಂಬರ್ 19ರಂದು ನಡೆದ ಫೈನಲ್​ ಪಂದ್ಯದಲ್ಲಿ ರೋಹಿತ್ ಪಡೆಯನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಇದರೊಂದಿಗೆ 13 ವರ್ಷಗಳ ನಂತರ ಏಕದಿನ ವಿಶ್ವಕಪ್​ ಗೆಲ್ಲುವ ಕನಸು ಭಗ್ನಗೊಂಡಿತು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. 50 ಓವರ್​​​ಗಳಲ್ಲಿ 240 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆಸೀಸ್ 43 ಓವರ್​​​ಗಳಲ್ಲಿ 241 ರನ್ ಗಳಿಸಿ ಗೆದ್ದು ಬೀಗಿತು.

ಸಂಕಷ್ಟದಲ್ಲಿ ಆಸ್ಟ್ರೇಲಿಯಾ

ಈ ಪಂದ್ಯದಲ್ಲಿ ಭಾರತ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಆಸೀಸ್ ಸೋತರೆ, ಸೆಮಿಫೈನಲ್ ಹಾದಿ ದುರ್ಗಮವಾಗಲಿದೆ. ರನ್ ರೇಟ್ ಉತ್ತಮವಾಗಿದ್ದರೂ ಆತಂಕಕ್ಕೆ ಒಳಗಾಗಿದೆ. ಎರಡು ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದೆ. ಸೂಪರ್​​-8 ಹಂತದಲ್ಲಿ ಇನ್ನೊಂದು ಪಂದ್ಯ ಉಳಿದಿದ್ದು, ಅದರಲ್ಲಿ ಗೆಲುವು ಸಾಧಿಸಲಬೇಕು. ಮತ್ತೊಂದೆಡೆ ಅಫ್ಘಾನಿಸ್ತಾನ ಕೂಡ ಈ ರೇಸ್​​ನಲ್ಲಿದೆ. ಒಂದು ವೇಳೆ ಸೋತು, ಆಫ್ಘನ್ ಗೆದ್ದರೆ ಆಸೀಸ್​ ಮನೆ ಕಡೆ ಹೋಗಲಿದೆ.

ಆಸ್ಟ್ರೇಲಿಯಾ ಕದನಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.