ರನ್‌ ಗಳಿಸೋ ಬದಲು ಜೆರ್ಸಿ ನಂಬರ್ ಪ್ರಮೋಟ್‌ ಮಾಡ್ತಾರೆ; ಈಗಲೇ ಟಿ20ಗೆ ರಿಸೈನ್‌ ಮಾಡಿ; ರೋಹಿತ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಗರಂ
ಕನ್ನಡ ಸುದ್ದಿ  /  ಕ್ರಿಕೆಟ್  /  ರನ್‌ ಗಳಿಸೋ ಬದಲು ಜೆರ್ಸಿ ನಂಬರ್ ಪ್ರಮೋಟ್‌ ಮಾಡ್ತಾರೆ; ಈಗಲೇ ಟಿ20ಗೆ ರಿಸೈನ್‌ ಮಾಡಿ; ರೋಹಿತ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಗರಂ

ರನ್‌ ಗಳಿಸೋ ಬದಲು ಜೆರ್ಸಿ ನಂಬರ್ ಪ್ರಮೋಟ್‌ ಮಾಡ್ತಾರೆ; ಈಗಲೇ ಟಿ20ಗೆ ರಿಸೈನ್‌ ಮಾಡಿ; ರೋಹಿತ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಗರಂ

Rohit Sharma: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಔಟ್ ಆದರು. ಟೀಮ್‌ ಇಂಡಿಯಾ ನಾಯಕ ಆಡಿದ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 33 ರನ್ ಮಾತ್ರ ಗಳಿಸಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

 ಈಗಲೇ ಟಿ20ಗೆ ರಿಸೈನ್‌ ಮಾಡಿ; ರೋಹಿತ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಗರಂ
ಈಗಲೇ ಟಿ20ಗೆ ರಿಸೈನ್‌ ಮಾಡಿ; ರೋಹಿತ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಗರಂ (X)

ಐಪಿಎಲ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಮಹತ್ವದ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಭಾರತ ಕ್ರಿಕೆಟ್‌ ತಂಡವನ್ನು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ. ಆದರೆ, ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ ಅವರ ಕಳಪೆ ಫಾರ್ಮ್‌ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ರೋಹಿತ್ ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ಟೂರ್ನಿಯ ಆರಂಭದಲ್ಲಿ ಇತ್ತಮ ಪ್ರದರ್ಶನ ನೀಡುತ್ತಿದ್ದ ಅವರು, ಕಳೆದ ಕೆಲವು ಪಂದ್ಯಗಳಲ್ಲಿ ಒಂದಂಕಿ ಮೊತ್ತ ಮಾತ್ರವೇ ಗಳಿಸುತ್ತಿದ್ದಾರೆ. ಇದು ಭಾರತೀಯ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ.

ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಹಿಟ್‌ಮ್ಯಾನ್‌ ಗಳಿಕೆ ಕೇವಲ 33 ರನ್ ಮಾತ್ರ. ಏಪ್ರಿಲ್‌ 6ರ ಸೋಮವಾರ ನಡೆದ ಪಂದ್ಯದಲ್ಲಿ ಚೇಸಿಂಗ್‌ ವೇಳೆ ರೋಹಿತ್ ಶರ್ಮಾ ಕೇವಲ 4 ರನ್‌ಗಳಿಗೆ ಔಟಾದರು. ಹೈದರಬಾದ್‌ ನಾಯಕ ಪ್ಯಾಟ್ ಕಮಿನ್ಸ್ ಎದುರಾಳಿ ನಾಯಕನ ವಿಕೆಟ್‌ ಕಬಳಿಸಿದರು. ಅನುಭವಿ ನಾಯಕನ ಸತತ ಕಳಪೆ ಪ್ರದರ್ಶನವು ಇದೀಗ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ರೋಹಿತ್ ಫಾರ್ಮ್ ಸಹಜವಾಗಿಯೇ ಬಿಸಿಸಿಐ ಹಾಗೂ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನನಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರೋಹಿತ್‌, ಸತತ ಐದು ಪಂದ್ಯಗಳಲ್ಲಿ ಬ್ಯಾಟ್‌ ಬೀಸಲು ಪರದಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕನ ಫಾರ್ಮ್ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹಿಟ್‌ಮ್ಯಾನ್‌ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ | ಟಿ20 ಕ್ರಿಕೆಟ್‌ನಲ್ಲಿ 6ನೇ ಶತಕ ಸಿಡಿಸಿದ ಸೂರ್ಯಕುಮಾರ್‌ ಯಾದವ್‌; ವಿಶ್ವದ ನಂಬರ್‌ 1 ಬ್ಯಾಟರ್‌ ದಾಖಲೆ

ರೋಹಿತ್‌ ಕಳಪೆ ಪ್ರದರ್ಶನದ ಬಳಿಕ ಸೋಷಿಯಲ್‌ ಮೀಡಿಯಾ ಪ್ರತಿಕ್ರಿಯೆಗಳು ಹೀಗಿವೆ.

ರೋಹಿತ್‌ ಕಳಪೆ ಫಾರ್ಮ್‌ ಹೊರತಾಗಿಯೂ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಗೆದ್ದು ಬೀಗಿತು. ವಾಂಖೆಡೆ ಕ್ರೀಡಾಂಣದಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಶತಕ‌ ಸಿಡಿಸಿದರು. ಹೀಗಾಗಿ ತಂಡವು 7 ವಿಕೆಟ್‌ಗಳಿಂದ ಗೆದ್ದಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌, 8 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಕೇವಲ 17.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸುವ ಮೂಲಕ ಮುಂಬೈ ಗೆದ್ದು ಬೀಗಿತು. ಸೂರ್ಯಕುಮಾರ್‌ ಯಾದವ್ 51 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 102 ರನ್‌ ಗಳಿಸಿದರು.‌ 200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬIಸುವ ಮೂಲಕ ಚುಟುಕು ಸ್ವರೂಪದಲ್ಲಿ ಒಟ್ಟು ಆರನೇ ಹಾಗೂ ಐಪಿಎಲ್‌ನಲ್ಲಿ ಮುಂಬೈ ಪರ ಎರಡನೇ ಸೆಂಚುರಿ ಸಾಧನೆಗೈದರು.

Whats_app_banner